ನೀವು ನೋಡಿರುತ್ತೀರಿ ಕಮೋಡ್‌ನಲ್ಲಿ ಶೌಚ ಆದ ನಂತರ ನೀರು ಬಿಡಲು ನಾವು ಫ್ಲಶ್‌ನ್ನು ಪ್ರೆಸ್ ಮಾಡುತ್ತೇವೆ. ಪ್ರೆಸ್ ಆದ ಕೂಡಲೇ ನೀರು ಕಮೋಡ್ ಒಳಗಡೆ ಬರುತ್ತದೆ. ಆದೇ ಕೆಲಸವನ್ನು ಈ ಬ್ಲೂಟೂತ್ ಆಧಾರಿತ ಕಮೋಡ್ ಮಾಡುತ್ತದೆ. ಶೌಚ ಮಾಡಿದ ಮೇಲೆ ಬ್ಲೂಟೂತ್ ಸಂಪರ್ಕದಿಂದ ನೀವು ಈ ಫ್ಲಶ್ ಕುಳಿತಲಿಂದಲೇ ಆನ್ ಮಾಡಬಹುದು. ಅಲ್ಲದೇ ಅನಗತ್ಯ ಪ್ರಮಾಣಕ್ಕಿಂತ ಹೆಚ್ಚು ನೀರು ಪೋಲಾಗುತ್ತಿದ್ದರೆ ಅದನ್ನು ಸಹ ನೀವು ಕಂಟ್ರೋಲ್ ಮಾಡಬಹುದಂತೆ.ಅಷ್ಟೇ ಅಲ್ಲದೆ ಈಗ ನೀವು ಒಂದೇ ರೀತಿ ಫಿಕ್ಸ್ ಆಗಿರುವ ಕಮೋಡನ್ನು ನೋಡಿರುತ್ತೀರಿ, ಅದ್ರೆ ಈ ಕಮೋಡ್‌ನಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಇದನ್ನು ಮಾರ್ಪಾಟು ಮಾಡಬಹುದಂತೆ. ಇನ್ನು ನಿಮಗೆ ಶೌಚಾಲಯದಲ್ಲೂ ಸಂಗೀತ ಕೇಳಬೇಕು ಅಂತ ಅನಿಸಿದ್ರೆ ಅದಕ್ಕೂ ವ್ಯವಸ್ಥೆ ಇದೆ. ಈ ಕಮೋಡ್‌ನಲ್ಲಿ ಸ್ಪೀಕರ್ ಸೌಲಭ್ಯವನ್ನು ನೀಡಿದ್ದು ಮೊಬೈಲ್‌ನಲ್ಲಿರುವ ಹಾಡನ್ನು ಶೌಚದೊಂದಿಗೆ ಕೇಳಿ ಆನಂದಿಸಬಹುದು.