ಗೂಗಲ್ ಗ್ಲಾಸ್ ಬಳಕೆಯಲ್ಲಿ ಭಾರತಕ್ಕೆ 2 ನೇ ಸ್ಥಾನ

Written By:

ಟೆಕ್ ಸಾವಿ ಇಂಡಿಯನ್ಸ್ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ 95 ರಷ್ಟು ಜನರು ತಮ್ಮ ಸ್ಮಾರ್ಟ್‌ಫೋನ್‌ಗೆ ಹೆಚ್ಚಿನ ಮಹತ್ವತೆಯನ್ನು ನೀಡುತ್ತಿದ್ದಾರೆ ಹಾಗೂ 75 ರಷ್ಟು ಜನರು ಹೋಟೆಲ್‌ಗಳನ್ನು ಕಾಯ್ದಿರಿಸಲು ತಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಬಳಸುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಅಂತರ್ಜಾಲದ ಅಪರಿಚಿತ ವ್ಯಕ್ತಿಯ ಇತಿಹಾಸ ಕೆದಕಬೇಕೇ?

ಇದು ಬಳಕೆದಾರರು ಮೊಬೈಲ್ ಫೋನ್‌ಗಳ ಮೇಲೆ ಎಷ್ಟು ಅವಲಂಬಿತರಾಗಿದ್ದಾರೆ ಎಂಬುದನ್ನು ತೋರಿಸುತ್ತಿದ್ದು 95 ಶೇಕಡದಷ್ಟು ಜನರು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಸ್ಮಾರ್ಟ್‌ಫೋನ್ ಅನ್ನು ಬಳಸುತ್ತಿದ್ದಾರೆ ಇನ್ನು ಅಪ್ಲಿಕೇಶನ್ ಬುಕ್ಕಿಂಗ್ ಮತ್ತು ಡೇಟಾ ರೋಮಿಂಗ್ ಯೋಜನೆಗಳನ್ನು ಕೂಡ ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದು ಮೊಬೈಲ್ ಸೇವೆಯ ಬೇಡಿಕೆಯನ್ನು ಹೆಚ್ಚಿಸಿದೆ. ಇನ್ನು ಹೋಟೆಲ್ ಬುಕ್ಕಿಂಗ್, ಪ್ರಯಾಣ ಮೊದಲಾದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಕೂಡ ಫೋನ್ ಬಳಕೆದಾರರು ಅಪ್ಲಿಕೇಶನ್‌ಗಳನ್ನು ಬಳಸಿಕೊಳ್ಳುತ್ತಿದ್ದು ತಾಂತ್ರಿಕ ಜ್ಞಾನ ಹೆಚ್ಚಾಗುವಲ್ಲಿ ಈ ಅಂಶಗಳು ಪರಿಣಾಮ ಬೀರಿವೆ.

ಇನ್ನು ಟೆಕ್ನಾಲಜಿಯ ಹರಿಕಾರ ಭಾರತ ದೇಶ

ಇದನ್ನೂ ಓದಿ: ಎಚ್‌ಟಿಸಿ ಒನ್ (M8) ಖರೀದಿಗಾಗಿ ಟಾಪ್ ಆನ್‌ಲೈನ್ ತಾಣಗಳು

ಇನ್ನು ಟೆಕ್ನಾಲಜಿಯ ವಿಷಯಕ್ಕೆ ಬಂದಾಗ ಭಾರತ ಕೂಡ ಪ್ರಗತಿಯಲ್ಲಿರುವ ಸ್ಥಾನವನ್ನು ಪಡೆದುಕೊಂಡಿದ್ದು ಗೂಗಲ್ ಗ್ಲಾಸ್ ಬಳಕೆಯಲ್ಲಿ ದೇಶವು ಎರಡನೆಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಇನ್ನು ಸ್ಮಾರ್ಟ್‌ವಾಚ್ ಬಳಕೆಯಲ್ಲಿ ಕೂಡ ದೇಶದ ಬಹುಪಾಲು ಜನರು ಮುಂದಿದ್ದು ಆಧುನಿಕ ವಿಚಾರಗಳತ್ತ ತಮ್ಮನ್ನು ತೆರೆದುಕೊಳ್ಳುತ್ತಿದ್ದಾರೆ ಎಂಬ ಅಂಶವನ್ನು ಈ ಮೂಲಕ ಪ್ರತಿಬಿಂಬಿಸುತ್ತಿದ್ದಾರೆ.

ಇನ್ನು ಡೆನ್ಮಾರ್ಕ್, ಆಸ್ಟ್ರಿಯಾ ಮತ್ತು ನಾರ್ವೆಗೆ ಹೋಲಿಸಿದಾಗ ಕೂಡ ಲ್ಯಾಪ್‌ಟಾಪ್ ಬಳಕೆಯಲ್ಲಿ ದೇಶವು ಸಮಾನ ಸ್ಥಾನಮಾನವನ್ನು ಗಳಿಸಿದೆ. ಅಂತೂ ಈ ಎಲ್ಲಾ ಅಂಶಗಳು ದೇಶದ ಟೆಕ್ನಾಲಜಿ ಬೇಡಿಕೆಯ ಸ್ಥಿತಿಯನ್ನು ಹೆಚ್ಚಿಸಿದ್ದು ಪ್ರಗತಿಯ ಪಥದತ್ತ ನಾವು ಮುಂದುವರಿಯುತ್ತಿದ್ದೇವೆ ಎಂಬ ಅಂಶವನ್ನು ಸಾಬೀತುಪಡಿಸಿದೆ.

English summary
This article tells about India Has Second Highest Number of Google Glass Owners.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot