ಅಂತರ್ಜಾಲದ ಅಪರಿಚಿತ ವ್ಯಕ್ತಿಯ ಇತಿಹಾಸ ಕೆದಕಬೇಕೇ?

By Shwetha

  ನೀವು ಅತ್ಯಾಕರ್ಷಕ ಬಹುಮಾನಗಳನ್ನು ಗೆದ್ದಿರುವಿರಿ ಎಂದು ಸೂಚಿಸುವ ಇಮೇಲ್ ಅನ್ನು ನೀವು ಸ್ವೀಕರಿಸುತ್ತಿರುವಿರಾ? ಅತ್ಯಾಕರ್ಷಕವಾಗಿರುವ ಇಮೇಲ್ ಸಂದೇಶಗಳು ನಿಮ್ಮ ಬೆನ್ನಟ್ಟುತ್ತಿವೆಯೇ? ಈ ಸಂದೇಶಗಳನ್ನು ನೀವು ನಂಬಿ ಇದಕ್ಕೆ ಉತ್ತರವನ್ನು ಕಳುಹಿಸುವ ಮುನ್ನ ಈ ಇಮೇಲ್‌ನೊಂದಿಗೆ ಸಂಬಂಧವನ್ನು ಹೊಂದಿರುವ ಅಥವಾ ಇದನ್ನು ಕಳುಹಿಸುತ್ತಿರುವ ವ್ಯಕ್ತಿಯ ಕುರಿತ ಮಾಹಿತಿಗಳನ್ನು ಕಲೆ ಹಾಕುವುದು ಒಳ್ಳೆಯದು ತಾನೇ?

  ಇದನ್ನೂ ಓದಿ: ಎಚ್‌ಟಿಸಿ ಒನ್ (M8) ಖರೀದಿಗಾಗಿ ಟಾಪ್ ಆನ್‌ಲೈನ್ ತಾಣಗಳು

  ಈ ಮೇಲ್ ಅನ್ನು ಕಳುಹಿಸುತ್ತಿರುವ ವ್ಯಕ್ತಿಯನ್ನು ಎರಡು ವಿಧಾನದಲ್ಲಿ ನಿಮಗೆ ಗುರುತಿಸಬಹುದು. ನೀವು ಕಳುಹಿಸುವವರ ಇಮೇಲ್ ವಿಳಾಸವನ್ನು ಬಳಸಿಕೊಂಡು ಅಥವಾ ಇಮೇಲ್‌ನ ಐಪಿ ವಿಳಾಸವನ್ನು ಬಳಸಿ ಇಮೇಲ್ ಕಳುಹಿಸುತ್ತಿರುವ ಸ್ಥಳವನ್ನು ಪತ್ತೆಹಚ್ಚಬಹುದು. ಹಾಗಿದ್ದರೆ ನಿಮಗೆ ಇಮೇಲ್ ಕಳುಹಿಸುತ್ತಿರು ವ್ಯಕ್ತಿಯ ಪರಿಚಯವನ್ನು ಮಾಹಿತಿಯನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುತ್ತಿದೆ ನಮ್ಮ ಈ ಲೇಖನ. ಇವರನ್ನು ಪತ್ತೆಹಚ್ಚುವುದು ಹೇಗೆ? ಮತ್ತು ಇದರಲ್ಲಿ ನಂಬಿಕೆಯನ್ನಿರಿಸಬಹುದೇ ಎಂಬುದನ್ನು ಈ ಸಲಹೆಗಳ ಮೂಲಕ ತಿಳಿದುಕೊಳ್ಳಿ.

   

  ಇದನ್ನೂ ಓದಿ: ವಾಟ್ಸಾಪ್ ಬಳಕೆಗೆ ಪರಿಣಾಮಕಾರಿ ಸಲಹೆಗಳು

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ
  ಗೂಗಲ್ ಐಟಿ
    

  ನೀವು ಬಹುಮಾನವನ್ನು ಗೆದ್ದಿದ್ದೀರಿ ಎಂದು ಸೂಚಿಸುವ ಇಮೇಲ್ ನಿಮಗೆ ಬಂದಿದೆ ಎಂದಾದಲ್ಲಿ ಮೊದಲಿಗೆ ಗೂಗಲ್‌ನಲ್ಲಿ ತಡಕಾಡಿ. ಸೆಂಡರ್‌ನ ಇಮೇಲ್ ವಿಳಾಸವನ್ನು ಕಾಪಿ ಮಾಡಿ ಮತ್ತು ಗೂಗಲ್ ಸರ್ಚ್ ಬಾರ್‌ನಲ್ಲಿ ಅವರಿಗಾಗಿ ಹುಡುಕಿ. ಇದು ಸ್ಕ್ಯಾಮ್ ಎಂದಾದಲ್ಲಿ ಎಚ್ಚರಿಕೆಯನ್ನು ಪಡೆದುಕೊಳ್ಳಿ.

  ಇದು ನಿಜವೇ ಸುಳ್ಳೇ ಎಂಬುದನ್ನು ಪತ್ತೆಹಚ್ಚಿ
    

  • ನಿಮಗೆ ಮೇಲ್ ಕಳುಹಿಸಿದವರ ಇಮೇಲ್ ವಿಳಾಸ ಯಾವುದೇ ಸಂಸ್ಥೆಯೊಂದಿಗೆ ಹೊಂದಿಕೆಯಾಗದಿದ್ದಲ್ಲಿ
  • ಉಚಿತ ವೆಬ್ ಮೇಲ್ ವಿಳಾಸ ಮೂಲಕ ಇ ಮೇಲ್ ನಿಮಗೆ ಬಂದಲ್ಲಿ
  • ಇಮೇಲ್‌ನಲ್ಲಿ ನಿಮ್ಮ ಹೆಸರನ್ನು ಸರಿಯಾಗಿ ಬಳಸಿರದಿದ್ದಲ್ಲಿ
  • ನಿಮ್ಮ ಉತ್ತರಕ್ಕಾಗಿ ಅವಸರ ಮಾಡಿದ್ದಲ್ಲಿ
  • ನಿಮಗೆ ಬಂದ ಮೇಲ್‌ನಲ್ಲಿ ವೆಬ್‌ಸೈಟ್ ಲಿಂಕ್ ಇದ್ದಲ್ಲಿ ಮತ್ತು ಅದನ್ನು ಕ್ಲಿಕ್ ಮಾಡಲು ನಿಮ್ಮನ್ನು ಕೇಳಿದ್ದಲ್ಲಿ

  ಫೇಸ್‌ಬುಕ್ ಬಳಕೆ
    
   

  ನಿಮಗೆ ಮೇಲ್ ಕಳುಹಿಸಿದ ವ್ಯಕ್ತಿಯ ಗುರುತನ್ನು ಪತ್ತೆಹಚ್ಚಲು ಫೇಸ್‌ಬುಕ್‌ನ ಬಳಕೆಯನ್ನು ಮಾಡಬಹುದು. ಈ ಕೆಲಸವನ್ನು ಫೇಸ್‌ಬುಕ್ ನಿಮಗೆ ತುಂಬಾ ಸುಲಭ ಮಾಡಿಕೊಡುತ್ತದೆ. ಫೇಸ್‌ಬುಕ್ ಸರ್ಚ್ ಬಾರ್‌ನಲ್ಲಿ ವ್ಯಕ್ತಿಯ ಹೆಸರನ್ನು ಹಾಕಿ ಮತ್ತು ಹುಡುಕಿ.

  ಇಮೇಲ್ ಐಪಿ ವಿಳಾಸ
    

  ನಿಮಗೆ ವ್ಯಕ್ತಿಯು ಕಳುಹಿಸಿದ ಮೇಲ್ ನಿಜವೇ ಸುಳ್ಳೇ ಎಂಬುದನ್ನು ಪತ್ತೆಹಚ್ಚಲು ಇಮೇಲ್‌ನ ಐಪಿ ವಿಳಾಸವನ್ನು ಬಳಸಿಕೊಂಡು ವ್ಯಕ್ತಿಯ ಸ್ಥಳವನ್ನು ಕಂಡುಹಿಡಿಯಬಹುದು. ವ್ಯಕ್ತಿ ಯಾವುದೇ ಸಂಸ್ಥೆಗಾಗಿ ಕಾರ್ಯನಿರ್ವಹಿಸುತ್ತಿದ್ದಾನೆಯೇ ಇಲ್ಲವೇ ಎಂಬುದನ್ನು ಇದರ ಮೂಲಕ ಕಂಡುಹಿಡಿಯಬಹುದು.

  ಎಲ್ಲಾ ಸೈಟ್‌ಗಳಲ್ಲಿ ಹುಡುಕಿ
    

  ಎಲ್ಲಾ ಜನಪ್ರಿಯ ಜಾಲತಾಣಗಳಲ್ಲಿ ಈ ವ್ಯಕ್ತಿಗಾಗಿ ಅಥವಾ ಸಂಸ್ಥೆಗಾಗಿ ನಿಮಗೆ ಹುಡುಕಾಡಬಹುದು.

  ಫೋಟೋ ಬಳಸಿ ಹುಡುಕಾಡುವುದು
    

  ನಿಮಗೆ ಎಲ್ಲಿಯಾದರೂ ವ್ಯಕ್ತಿಯ ಫೋಟೋ ದೊರಕಿತು ಎಂದಾದಲ್ಲಿ ಫೋಟೋವನ್ನು ಹುಡುಕುವ ಮೂಲಕ ವ್ಯಕ್ತಿಯ ಇತಿಹಾಸವನ್ನು ಕೆದಕಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  This article tells about How To Find Out Who’s Behind That Email Address.
  Please Wait while comments are loading...
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more