ಎಚ್‌ಟಿಸಿ ಒನ್ (M8) ಖರೀದಿಗಾಗಿ ಟಾಪ್ ಆನ್‌ಲೈನ್ ತಾಣಗಳು

Posted By:

ಎಚ್‌ಟಿಸಿ ಕಳೆದ ವಾರವಷ್ಟೇ ಭಾರತದಲ್ಲಿ ಹೊಸ ಫೋನ್‌ಗಳ ಲಾಂಚಿಂಗ್ ಅನ್ನು ಮಾಡಿದೆ. ಡಿಸೈರ್ ಐ ಸ್ಮಾರ್ಟ್‌ಪೋನ್ ಮೂಲಕ ಜಾದೂವನ್ನೇ ಮಾಡಹೊರಟಿರುವ ಎಚ್‌ಟಿಸಿ ಹೆಚ್ಚು ಮಹತ್ವಾಕಾಂಕ್ಷೆಯನ್ನು ಈ ಫೋನ್ ಮೇಲಿರಿಸಿದೆ ಎಂದೇ ಹೇಳಬಹುದು. ಇದರಲ್ಲಿರುವ ಕ್ಯಾಮೆರಾ ವೈಶಿಷ್ಟ್ಯತೆ ಮನಮುಟ್ಟುವಂತಿದ್ದು ನಿಜಕ್ಕೂ ಮೋಹಕ ಜಾಲವನ್ನೇ ಈ ಡಿವೈಸ್ ಉಂಟುಮಾಡಲಿದೆ ಎಂಬುದು ಸುಳ್ಳಲ್ಲ.

ಇದನ್ನೂ ಓದಿ: ವಾಟ್ಸಾಪ್ ಬಳಕೆಗೆ ಪರಿಣಾಮಕಾರಿ ಸಲಹೆಗಳು

13 ಎಮ್‌ಪಿ ಮುಂಭಾಗ ಕ್ಯಾಮೆರಾದೊಂದಿಗೆ ಎಚ್‌ಟಿಸಿ ಬಂದಿದ್ದು ನಿಜಕ್ಕೂ ಅದ್ಭುತ ಎಂಬ ಕಲ್ಪನೆಯನ್ನು ಮನದಲ್ಲಿ ಹುಟ್ಟುಹಾಕಲು ಈ ಡಿವೈಸ್ ಕಾರಣವಾಗಿದೆ. ಇನ್ನು ಡಿಸೈರ್ ಐ ಭಾರತದಲ್ಲಿ ಮಾರಾಟವಾಗಲು ಕೆಲವೇ ಸಮಯಗಳು ಬಾಕಿ ಇದ್ದು ಎಚ್‌ಟಿಸಿಯ ಉತ್ತಮ ಫೋನ್ ಆಗಿ ಇದು ಹೊರಹೊಮ್ಮಲಿದೆ. ಸದ್ಯ ತನ್ನ ಆಟವನ್ನು ಎಚ್‌ಟಿಸಿ ಎಚ್‌ಟಿಸಿ ಒನ್ M8 ಮೂಲಕ ಆಡುತ್ತಿದ್ದು ಈ ಡಿವೈಸ್ ಅನ್ನು ಮಾರಾಟ ಮಾಡಲಿರುವ ಟಾಪ್ ಆನ್‌ಲೈನ್ ತಾಣಗಳ ಮಾಹಿತಿಯೊಂದಿಗೆ ಇಂದಿನ ಗಿಜ್‌ಬಾಟ್ ಲೇಖನದಲ್ಲಿ ನಾವು ಬಂದಿದ್ದು ನಿಜಕ್ಕೂ ಇದು ನಿಮಗೆ ಸಹಕಾರಿಯಾಗಲಿದೆ. ಇನ್ನು ಆನ್‌ಲೈನ್ ತಾಣಗಳ ಮಾಹಿತಿಯನ್ನು ಅರಿಯುವ ಮುನ್ನ ಹೊಸ ಡಿವೈಸ್‌ನ ಅಂಶಗಳತ್ತ ಗಮನ ಹರಿಸೋಣ.

ಇದನ್ನೂ ಓದಿ: ಈ ದೀಪಾವಳಿ ಆಚರಣೆ ಕ್ವಾಡ್ ಕೋರ್ ಫೋನ್ಸ್‌ನೊಂದಿಗೆ

ಎಚ್‌ಟಿಸಿ ಒನ್ (M8), 5.0 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಪೂರ್ಣ ಎಚ್‌ಡಿ ರೆಸಲ್ಯೂಶನ್ ಆದ 1920 x 1080 ಪಿಕ್ಸೆಲ್‌ಗಳನ್ನು ಈ ಫೋನ್‌ನಲ್ಲಿ ನಮಗೆ ಗಮನಿಸಬಹುದಾಗಿದೆ. ಗೋರಿಲ್ಲಾ ಗ್ಲಾಸ್ 3 ಸುರಕ್ಷತೆಯನ್ನು ಫೋನ್ ಹೊಂದಿದ್ದು ಕ್ವಾಡ್ ಕೋರ್ ಪ್ರೊಸೆಸರ್ ಸ್ನ್ಯಾಪ್‌ ಡ್ರಾಗನ್ 801 ಇದರಲ್ಲಿದ್ದು, 2 ಜಿಬಿ RAM ಅನ್ನು ಫೋನ್ ಒಳಗೊಂಡಿದೆ. ಡಿವೈಸ್‌ನಲ್ಲಿ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್ ಚಾಲನೆಯಾಗುತ್ತಿದ್ದು ಫೋನ್‌ನಲ್ಲಿ ಎರಡು ರಿಯರ್ ಕ್ಯಾಮೆರಾಗಳನ್ನು ನಿಮಗೆ ವಿಶೇಷವಾಗಿ ಗಮನಿಸಬಹುದಾಗಿದೆ.

ಇದನ್ನೂ ಓದಿ: ಎಚ್‌ಟಿಸಿ ಡಿಸೈರ್ 816ಜಿ ಯ ಖರೀದಿ ನಡೆಯಲಿ ಈ ತಾಣಗಳಲ್ಲಿ

ಇನ್ನು ಫೋನ್ ಮುಂಭಾಗದಲ್ಲಿ 5 ಎಮ್‌ಪಿ ಕ್ಯಾಮೆರಾವನ್ನು ಹೊಂದಿದ್ದು ಸೆಲ್ಫೀ ಫೋಟೋ ತೆಗೆಯಲು ಡಿವೈಸ್ ಹೇಳಿ ಮಾಡಿಸಿದಂತಿದೆ. ಇನ್ನು ಡಿವೈಸ್‌ನ ಆಂತರಿಕ ಸಂಗ್ರಹಣಾ ಸಾಮರ್ಥ್ಯ 16 ಜಿಬಿಯಾಗಿದ್ದು ಇದನ್ನು 128 ಜಿಬಿಗೆ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ. ಇನ್ನು ಈ ಫೋನ್ ದೊರೆಯುವ ಟಾಪ್ ತಾಣಗಳತ್ತ ನೋಟ ಹರಿಸೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about HTC One M8 Offers 10 Best Online Deals of the Android 4.4 KitKat, Dual Lens Camera Phone in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot