ಸೈಬರ್ ವಂಚಕರು ಈತನ ಹಣ ಹೇಗೆ ಕದ್ದರು?...ಪೊಲೀಸ್ ಠಾಣೆ ಮುಂದೆ ಅಳುತ್ತಿದ್ದ ಯುವಕನ ಕಥೆ ಕೇಳಿ!!

  |

  ಚೇ..ಚೇ..ಎನ್ನುತ್ತಾ, ತಲೆಮೇಲೆ ಕೈಹೊತ್ತುಕೊಂಡು ಕೋಪ ಮತ್ತು ಅಸಹಾಯಕತೆ ಎರಡನ್ನು ಒಟ್ಟಿಗೆ ತೋರಿಸುತ್ತಿದ್ದ ಯುವಕನೋರ್ವ ಪೊಲೀಸ್ ಠಾಣೆಯೊಂದರ ಮುಂದೆ ಕಣ್ಣೀರಿಡುತ್ತಿದ್ದನ್ನು ನಾನು ಆಕಸ್ಮಿಕವಾಗಿ ನೋಡಿದೆ. ಯಾವುದೋ ಒಂದು ವರದಿ ತಯಾರಿಸಲು ಪೊಲೀಸ್ ಠಾಣೆಗೆ ತೆರಳಿದ ನನಗೆ ಆತನ ಸಂಕಟಕ್ಕೆ ಕಾರಣವೇನಿರಬಹುದು ಎಂಬುದನ್ನು ಊಹಿಸಲು ಹೆಚ್ಚು ಸಮಯಬೇಕಾಗಲಿಲ್ಲ. ಏಕೆಂದರೆ, ಅದು ಸೈಬರ್ ಪೊಲೀಸ್ ಠಾಣೆ.!

  ಹೌದು, ನೀವೊಮ್ಮೆ ಸೈಬರ್ ಪೊಲೀಸ್ ಠಾಣೆಗೆ ಭೇಟಿ ಇತ್ತರೆ ಇಂತಹ ಘಟನೆಗಳನ್ನು ಪ್ರತಿದಿನವೂ ನೋಡುವ ಭಾಗ್ಯ ನಿಮ್ಮದಾಗುತ್ತದೆ. ತನ್ನ ಅರಿವಿಗೆ ಬಾರದಂತೆ ತನ್ನ ಬ್ಯಾಂಕ್ ಖಾತೆಯಲ್ಲಿನ ಹಣ ಕಳೆದುಕೊಂಡ ಹಲವರು ಠಾಣೆಯ ಮುಂದೆ ಸಾಲು ನಿಂತಿರುವುದನ್ನು ನೀವು ನೋಡಬಹುದು. ಪೊಲೀಸರಿಗೆ, ನನಗೂ ಇದು ಇಲ್ಲಿಮ ಪ್ರತಿದಿನ ವಿದ್ಯಮಾನ ಎನಿಸಿದರೂ ಸಹ, ನನಗೆ ಆ ಯುವಕನ ಸಂಕಟವನ್ನು ಕೇಳುವ ಹಂಬಲವಾಯಿತು. ತದನಂತರ ನಾನು ಅವನ ಬಳಿ ಹೋಗಿ ಪ್ರಶ್ನಿಸಿದೆ.

  ಸೈಬರ್ ವಂಚಕರು ಈತನ ಹಣ ಹೇಗೆ ಕದ್ದರು?.ಠಾಣೆ ಮುಂದೆ ಅಳುತ್ತಿದ್ದ ಯುವಕನ ಕಥೆ ಕೇಳಿ!

  ಅಂತಹ ಸಂಕಟದಲ್ಲಿಯೂ ಕೂಡ ಇಂಟರ್‌ನೆಟ್ ಅನ್ನು ಕಂಡುಹಿಡಿದವನಿಗೆ ಬೈದುಕೊಂಡೇ ನನ್ನ ಬಳಿ ಮಾತನಾಡಿದ ಆತನ ಹೆಸರು ಸುನೀಲ್. ಆತ ಹಣವನ್ನು ಕಳೆದುಕೊಂಡಿದ್ದ. ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸುತ್ತಾ, ನಾನು ಯಾವುದೇ ತಪ್ಪು ಮಾಡಿಲ್ಲ. ಆದರೂ, ನನ್ನ ಹಣವನ್ನು ಕದಿಯಲಾಗಿದೆ ಎಂದು ಆತ ನನ್ನ ಹೇಳಿದ. ಆದರೆ, ನಾನು ಅವನನ್ನು ಮತ್ತಷ್ಟು ಬಿಡಿಸಿ ಕೇಳಿದಾಗ ನನಗೆ ತಿಳಿದುಬಂದಿದ್ದು, ಆತ ಇನ್ನೂ ಈ ಆಧುನಿಕ ಪ್ರಪಂಚಕ್ಕೆ ಬಾರದೇ ಹಿಂದುಳಿದಿದ್ದ.!

  ಹೌದು, ಸುನೀಲ್ ಹಣಕಳೆದುಕೊಂಡಿದ್ದು ಆತನ ತಪ್ಪಿನಿಂದಲೇ. ಅಕೌಂಟ್‌ನಲ್ಲಿದ್ದ 80 ಸಾವಿರ ರೂಪಾಯಿಗಳನ್ನು ಎಷ್ಟು ಕಷ್ಟಪಟ್ಟು ದುಡಿದಿದ್ದನೋ, ಅಷ್ಟೇ ವೇಗದಲ್ಲಿ ತಾನೇ ಮಾಡಿದ ಒಂದು ತಪ್ಪಿನಿಂದ ಆತ ಎಲ್ಲ ಹಣವನ್ನು ಕಳೆದುಕೊಂಡಿದ್ದ. ಕ್ರಿಮಿನಲ್‌ಗೆ ಜಾಲಕ್ಕೆ ಸಿಲುಕಿದ್ದ ಆತನಿಗೆ ಈಗ ಹಣ ಸಿಗಬಹುದು ಅಥವಾ ಸಿಗದೇ ಇರಬಹುದು. ಆದರೆ, ಆತ ಮಾಡಿದ ತಪ್ಪು ಎಲ್ಲರಿಗೂ ಒಂದು ಪಾಠ. ಹಾಗಾಗಿ, ಇಂದಿನ ಲೇಖನದಲ್ಲಿ ಸುನೀಲನ ಕಥೆ ಮತ್ತು ಅಂತರ್ಜಾಲ ಮೋಸದ ಪ್ರಪಂಚದ ಬಗ್ಗೆ ತಿಳಿಸಿಕೊಡುವ ಹಂಬಲ ನನಗಿದೆ. ನಿಮಗೂ ಇದ್ದರೆ, ಮುಂದೆ ಓದಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸುನೀಲ ಹಿಂದುಳಿದಿದ್ದ.!

  ನಾನು ಇಷ್ಟು ಹೊತ್ತು ಹೇಳಿದ ಸುನೀಲ ನಿಜವಾಗಿಯೂ ನಮ್ಮೆಲ್ಲರಿಗಿಂತ ಹಿಂದುಳಿದಿದ್ದ. ಆತನಿಗೆ ಬ್ಯಾಂಕ್ ವ್ಯವಹಾರಗಳ ಬಗ್ಗೆ ಸರಿಯಾಗಿ ತಿಳಿದಿರಲಿಲ್ಲ(ನಮಗೂ ಸರಿಯಾಗಿ ತಿಳಿಯಲಾಗಿಲ್ಲ). ಇಂತಹ ಸಮಯದಲ್ಲಿ ಬ್ಯಾಂಕ್ ಅಧಿಕಾರಿ ಎಂದು ಹೇಳಿ ಕರೆ ಮಾಡಿ ಆತನಿಗೆ ವಂಚನೆ ಮಾಡಿರುವುದು ಆತನಿಗೆ ಸರಿಯಾಗಿ ತಿಳಿದಿಲ್ಲ. ಕರೆ ಮಾಡಿದಾಗ ನೀಡಿದ ಮಾಹಿತಿಯಿಂದ ಆತ ನನ್ನ ಹಣವನ್ನು ಕದಿದ್ದಾನೆ ಎಂದು ನಾನು ಹೇಳಿದರೂ ಆತ ನಂಬಲಿಲ್ಲ. ಕೊನೆಗೆ ನಾನು ಬಿಡಿಸಿ ಹೇಳಿದ ನಂತರ ಆತನಿಗೆ ಸ್ವಲ್ಪ ಅರ್ಥವಾಗಿತ್ತು ಎಂದುಕೊಂಡೆ.

  ಆತ ಮೋಸ ಹೊಗಿದ್ದು ಹೀಗೆ?

  ಒಂದು ದಿನ ಸುನೀಲನಿಗೆ ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ವಂಚಕನೋರ್ವ ಕರೆ ಮಾಡಿದ್ದಾನೆ. ನಿಮ್ಮ ಡೆಬಿಟ್ ಕಾರ್ಡ್ ಕೆಲವು "ತಾಂತ್ರಿಕ ಸಮಸ್ಯೆಗಳ" ಕಾರಣದಿಂದ ನಿರ್ಬಂಧಿಸಲ್ಪಟ್ಟಿದೆ ಹಾಗಾಗಿ, ನಿಮ್ಮ ಕಾರ್ಡ್ ವಿವರಗಳನ್ನು ನಮಗೆ ನೀಡಿ ಎಂದು ಕೇಳಿದ್ದಾನೆ. ರಹಸ್ಯವಾಗಿ ಇಟ್ಟುಕೊಳ್ಳಬೇಕಾಗಿದ್ದ ತನ್ನ 16-ಅಂಕಿಯ ಡೆಬಿಟ್ ಕಾರ್ಡ್ ಸಂಖ್ಯೆ, ಕಾರ್ಡಿನ ಪೂರ್ಣ ಹೆಸರು, ಮತ್ತು ಆ ಕಾರ್ಡಿನ 3-ಅಂಕಿಯ ಸಿ.ವಿ.ವಿ.ಅನ್ನು ನೀಡಿದ್ದಾರೆ. ಇದೆಲ್ಲಾ ಹೋಗಲಿ, ನಿಮ್ಮ ಕಾರ್ಡ್ ಸರಿಪಡಿಸಲು ಒಟಿಪಿ ನೀಡಿ ಎಂದು ಹೇಳಿದ ತಕ್ಷಣ ಅದನ್ನು ಸಹ ನೀಡಿದ್ದಾನೆ. ಇಷ್ಟಾದ ಮೇಲೆ ಇನ್ನೇನಿದೆ?.ಸುನೀಲನ ಖಾತೆಯಲ್ಲಿದ್ದ ಹಣಕ್ಕೆ ಪಂಗನಾಮ.

  ದಿನಕ್ಕೆ ನೂರಾರು ಪ್ರಕರಣಗಳು.!

  ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಹೆಚ್ಚಾದ ನಂತರ ಇಂತಹ ಪ್ರಕರಣಗಳು ನೂರಾರು ಬರುತ್ತಿವೆ ಎಂಬುದನ್ನು ಅದೆ ಠಾಣೆಯ ಸೈಬರ್ ಪೊಲೀಸರು ತಿಳಿಸಿದರು. ಬರುವ ನೂರು ಪ್ರಕರಣಗಳಲ್ಲಿ 99 ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ತಂತ್ರಜ್ಞಾನ ಬಗ್ಗೆ ಸರಿಯಾದ ತಿಳಿವಳಿಕೆ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿರುವುದೇ ಕಾರಣ ಎಂದು ಅವರು ಹೇಳಿದರು. ಇಲ್ಲಿಯವರೆಗೂ ಶೇ.30 ರಷ್ಟು ವಂಚಕರನ್ನು ಸಹ ಸೆರೆಹಿಡಿಯಲು ಸಾಧ್ಯವಾಗಿಲ್ಲ ಎಂಬ ಸೀಕ್ರೇಟ್ ಮಾಹಿತಿಯನ್ನು ಸಹ ನಮಗೆ ನೀಡಿದರು.!

  ವಂಚಕರನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ!

  ಹೌದು, ಆನ್‌ಲೈನಿನಲ್ಲಿ ಹಣ ಕಳೆದುಕೊಂಡವರನ್ನು ಹಿಡಿಯಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ವಂಚನೆ ಮಾಡಿದವರು ಇಂತವರೇ ಎಂದು ತಿಳಿಯುವ ಸಾಮರ್ಥ್ಯ ಪೊಲೀಸರಗಿದ್ದರೂ ಆವರನ್ನು ಹಿಡಿಯುವುದು ಪೊಲೀಸರಿಗೆ ಕಷ್ಟವಾಗಿದೆ. ದಿನಕ್ಕೆ ಹತ್ತಾರು ಪ್ರಕರಣಗಳು ದಾಖಲಾಗುತ್ತಿವೆ. ಆ ವಂಚನೆಯನ್ನು ಭೇದಿಸಲು ಹೊರಟರೆ ನಾವು ಉತ್ತರ ಭಾರತದ ರಾಜ್ಯಗಳಿಗೆ ತೆರಳಬೇಕಾಗುತ್ತದೆ. ಏಕೆಂದರೆ, ಸೈಬರ್ ಕ್ರಿಮಿನಲ್‌ಗಳು ಅಲ್ಲಿ ಕುಳಿತು ನಮ್ಮವರನ್ನು ವಂಚಿಸಿರುತ್ತಾರೆ. ಜಾಸ್ತಿ ಮೊತ್ತದ ಹಣ ವಂಚನೆಯಾದರೆ ಅವರನ್ನು ಭೇದಿಸಲು ಮುಂದಾಗಬಹುದು. ಆದರೆ, 10 ಅಥವಾ 20 ಸಾವಿರ ವಂಚನೆ ಪ್ರಕರಣ ಭೇದಿಸಲು 50 ಸಾವಿರ ಖರ್ಚಾಗುತ್ತದೆ ಎಂದು ಅಸಹಾಯಕ ಪರಿಸ್ಥಿತಿಯನ್ನು ಪೊಲೀಸರು ಹೇಳುತ್ತಾರೆ.

  ಎಲ್ಲರೂ ಬುದ್ದಿವಂತರಾಗಬೇಕು!

  ಎಷ್ಟೇ ಸುರಕ್ಷತೆ ವಹಿಸಿದರೂ ನಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಖಾಲಿಯಾಗಿದ್ದು ಹೇಗೆ? ಎಟಿಎಂ ಕಾರ್ಡ್ ನಮ್ಮಲ್ಲೇ ಇದ್ದರೂ ಹಣ ಹೋಯಿತು ಎಂದು ಎಲ್ಲರೂ ಅಚ್ಚರಿ ನಿಮಗೆ ಎದುರಾಗುವ ಮುನ್ನವೇ ಎಲ್ಲರೂ ಬುದ್ದಿವಂತರಾಗಬೇಕಿದೆ. ಬ್ಯಾಂಕ್ ವಿಷಯಗಳ ಬಗ್ಗೆ ಇತರರನ್ನು ಕೇಳಿ ತಿಳಿದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಬ್ಯಾಂಕ್ ವ್ಯವಹಾರಗಳು ಯಾವುವು ಕರೆಯ ಮೂಲಕ ನಡೆಯುವುದಿಲ್ಲ ಎಂದು ಸಾಮಾನ್ಯ ವಿಷಯಗಳು ಸಹ ಹಲವರಿಗೆ ತಿಳಿದಿಲ್ಲ. ಹಾಗಾಗಿ, ನಾವು ಈ ಕೆಳಗೆ ಕೆಲವು ಬ್ಯಾಂಕಿಂಗ್ ಸಲಹೆಗಳನ್ನು ನಿಮಗೆ ನೀಡುತ್ತಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಓದಿರಿ: ನಿಮ್ಮ ಮೊಬೈಲ್ 'ಸಿಮ್' ಜೋಪಾನ!..ಈ ಒಂದು ತಪ್ಪಿನಿಂದ ನೀವು ಮನೆ ಮಠ ಕಳೆದುಕೊಳ್ಳಬಹುದು!!

  ಓದಿರಿ: ಭಾರತಿಯರಿಗೆ ಮತ್ತೆ ಶಾಕ್ ನೀಡಿದ ಚೀನಾ..ಎಚ್ಚರ ತಪ್ಪಿದರೆ ಕಾದಿದೆ ಅಪಾಯ!

  ಓದಿರಿ: ಹತ್ತೇ ತಿಂಗಳಲ್ಲಿ ರಾಜ್ಯದಲ್ಲಿ ದಾಖಲಾದ ಸೈಬರ್ ಪ್ರಕರಣಗಳೆಷ್ಟು ಗೊತ್ತಾ?..ನೀವು ಹುಷಾರು!!

  English summary
  A survey by FIS, a financial services technology provider, showed that 18% of Indians suffered from an online banking fraud in the past year.to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more