Subscribe to Gizbot

ಹತ್ತೇ ತಿಂಗಳಲ್ಲಿ ರಾಜ್ಯದಲ್ಲಿ ದಾಖಲಾದ ಸೈಬರ್ ಪ್ರಕರಣಗಳೆಷ್ಟು ಗೊತ್ತಾ?..ನೀವು ಹುಷಾರು!!

Written By:

ಐಟಿಬಿಟಿ ರಾಜ್ಯ ಎಂದೇ ಹೆಸರಾಗುತ್ತಿರುವ ಕರ್ನಾಟಕದಲ್ಲಿ ಸೈಬರ್ ಕಳ್ಳರ ಕರಾಮತ್ತು ಮಿತಿಮೀರಿದೆ.! 2017 ನೇ ವರ್ಷದಲ್ಲಿ ಕೇವಲ ಹತ್ತೇ ತಿಂಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬರೋಬ್ಬರಿ 4 ಸಾವಿರಕ್ಕೂ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿರುವ ವಿಷಯ ಬೆಳಕಿಗೆ ಬಂದಿದೆ.!!

ಸೈಬರ್ ಕಳ್ಳರನ್ನು ಹೆಡೆಮುರಿ ಕಟ್ಟಲು ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಕೂಡ ದಿನದಿಂದ ದಿನಕ್ಕೆ ಸೈಬರ್ ಕ್ರಿಮಿನಲ್‌ಗಳು ಹೊಸ ಹೊಸ ಶೈಲಿಯಲ್ಲಿ ಕೃತ್ಯ ಎಸಗುತ್ತಿರುವುದು ಪೊಲೀಸರಿಗೆ ಸವಾಲಾಗಿದೆ.! ಹೆಚ್ಚಿನ ಹಣದ ಆಮಿಷಕ್ಕೆ ಬಿದ್ದು ಜನರು ಇರುವ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ರಾಜ್ಯದ ಸೈಬರ್ ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.!!

ಹತ್ತೇ ತಿಂಗಳಲ್ಲಿ ರಾಜ್ಯದಲ್ಲಿ ದಾಖಲಾದ ಸೈಬರ್ ಪ್ರಕರಣಗಳೆಷ್ಟು ಗೊತ್ತಾ?

ಪ್ರತಿ ಕೇಸಿನಲ್ಲಿ ಕನಿಷ್ಠ 10 ಸಾವಿರ ರೂ.ನಿಂದ 80 ಲಕ್ಷ ರೂ.ವರೆಗೆ ವಂಚನೆ ನಡೆದಿದ್ದು, ನೂರಾರು ಕೋಟಿಗೂ ಹೆಚ್ಚು ಹಣ ವಂಚನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.!! ಹಾಗೆಯೇ, ಜನರು ಸೈಬರ್ ಕ್ರಿಮಿನಲ್‌ಗಳ ಬಗ್ಗೆ ಹೇಗೆ ಎಚ್ಚರಿಕೆ ಹೊಂದಿರಬೇಕು?ಎಂಬ ಮಾಹಿತಿಯನ್ನು ಸಹ ನೀಡಿದ್ದು, ಅವುಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೇಗೆಲ್ಲಾ ಮೋಸ ಮಾಡಿದ್ದಾರೆ.?

ಹೇಗೆಲ್ಲಾ ಮೋಸ ಮಾಡಿದ್ದಾರೆ.?

ಮೋಸದ ಎಸ್​ಎಂಎಸ್, ಮೋಸದ ಕರೆಗಳು, ಆಮಿಷಗಳು, ಯುವತಿ ಯುವಕರಹಾಗೆ, ಬ್ಯಸಿನೆಸ್ ಪಾರ್ಟ್‌ನರ್, ಆನ್​ಲೈನ್ ಶಾಪಿಂಗ್ ಬಹುಮಾನ ಹೀಗೆ ಹಲವು ರೀತಿಯಲ್ಲಿ ಜನರನ್ನು ವಂಚಿಸಿರುವ ಪ್ರಕರಣಗಳು ಸೈಬರ್ ಠಾಣೆಯಲ್ಲಿ ದಾಖಲಾಗಿವೆ. ಮೋಸ ಮಾಡಲು ಇಷ್ಟೊಮದು ದಾರಿಗಳಿವೆಯೇ ಎಂದು ಪೊಲೀಸರೆ ಶಾಕ್ ಆಗುತ್ತಾರೆ.!!

ದುಬಾರಿ ಗಿಫ್ಟ್​ ಒಂದರ ಉದಾಹರಣೆ!!

ದುಬಾರಿ ಗಿಫ್ಟ್​ ಒಂದರ ಉದಾಹರಣೆ!!

ಫೇಸ್​ಬುಕ್‌ನಲ್ಲಿ ಸ್ನೇಹ ಬೆಳೆಸುವ ಯುವಕ ಯುವತಿಯರು ದುಬಾರಿ ಗಿಫ್ಟ್ ಕಳುಹಿಸಿರುವುದಾಗಿ ಹೇಳಿಕೊಳ್ಳುತ್ತಾರೆ. ನಂತರ ಆತನ ಸಹ ಚರನೇ ಕರೆ ಕಸ್ಟಮ್ ಅಧಿಕಾರಿ ಸೋಗಿನಲ್ಲಿ ಮಾತನಾಡಿ ವಿಮಾನ ನಿಲ್ದಾಣದಲ್ಲಿ ಕೊರಿಯರ್ ವಶಕ್ಕೆ ಪಡೆದಿದ್ದು, ಕಸ್ಟಮ್ ಶುಲ್ಕ ಎಂದೆಲ್ಲಾ ಹೇಳಿ ನಕಲಿ ರಸೀದಿ, ಪ್ರಮಾಣ ಪತ್ರ ನೀಡಿ ಹಣವನ್ನು ಪಡೆದಿದ್ದಾರೆ.!!

ವಂಚಕರ ಹೊಸ ಮಾರ್ಗ ಆಧಾರ್!!

ವಂಚಕರ ಹೊಸ ಮಾರ್ಗ ಆಧಾರ್!!

ಸರ್ಕಾರದ ಯೋಜನೆಗಳ ಜೊತೆಗೆ ಫೇಸ್​ಬುಕ್ ಖಾತೆಗೂ ಆಧಾರ್ ಕಡ್ಡಾಯ ಎಂಬ ವದಂತಿಗಳನ್ನೇ ಸೈಬರ್ ಕಳ್ಳರು ಬಂಡವಾಳ ಮಾಡಿಕೊಂಡಿದ್ದಾರೆ.!! ಫೇಸ್‌ಬುಕ್ ಅಥವಾ ಇತರೆ ಅಧಿಕಾರಿಗಳ ರೀತಿಯಲ್ಲಿ ಜನರಿಗೆ ಕರೆ ಮಾಡಿ ಸಿಮ್ ನಂಬರ್ ಮತ್ತು ಇತರೆ ಬ್ಯಾಂಕ್ ವಿವರ ಪಡೆದು ಕನ್ನ ಹಾಕುತ್ತಿದ್ದಾರೆ.!!

ಮಾಹಿತಿ ಹಂಚಿಕೊಳ್ಳಬೇಡಿ!!

ಮಾಹಿತಿ ಹಂಚಿಕೊಳ್ಳಬೇಡಿ!!

ಸೈಬರ್‌ ಕ್ರಿಮಿನಲ್‌ಗಳ ಮಾತಿಗೆ ಮರುಳಾಗದಂತೆ ಅಪರಿಚಿತರ ಮೊಬೈಲ್ ಕರೆ, ಇ-ಮೇಲ್​ನಲ್ಲಿ ಬ್ಯಾಂಕಿನ ವಿವರ ಹಂಚಿಕೊಳ್ಳುವ ಸಾಹಸಬೇಡ.!! ಬ್ಯಾಂಕ್ ಖಾತೆ, ಮೊಬೈಲ್ ನಂಬರ್, ಪಾಸ್​ವರ್ಡ್ ರವಾನಿಸಿದರೆ ಕೆಲವೇ ಕ್ಷಣಗಳಲ್ಲಿ ನಿಮ್ಮ ಹಣ ಸೈಬರ್ ಕ್ರಿಮಿನಲ್‌ಗಳ ಜೇಬಿನಲ್ಲಿರುತ್ತದೆ.!!

ಇಂಟರ್​ನೆಟ್ ಬಳಕೆಯಲ್ಲಿ ಹುಷಾರು.!!

ಇಂಟರ್​ನೆಟ್ ಬಳಕೆಯಲ್ಲಿ ಹುಷಾರು.!!

ಇಂಟರ್​ನೆಟ್ ಬಳಕೆಯಲ್ಲಿ ಸುರಕ್ಷಿತ ವೆಬ್​ಸೈಟ್ ಎಂಬುದನ್ನು ಪರೀಕ್ಷಿಸಿ ವ್ಯವಹರಿಸಿ.!! 2 ತಿಂಗಳಿಗೊಮ್ಮೆ ಎಲ್ಲಾ ಪಾಸ್​ವರ್ಡ್‌ಗಳನ್ನು ಬದಲಾವಣೆ ಮಾಡುತ್ತಿದ್ದರೆ ಇನ್ನೂ ಒಳಿತು.!! ಅಪರಿಚಿತರ ಕಂಪ್ಯೂಟರ್ ಬಳಕೆ ಬೇಡ, ಸಿಮ್ ಕಳೆದರೆ ಮೊಬೈಲ್ ಬ್ಯಾಂಕಿಂಗ್ ಬ್ಲಾಕ್ ಮಾಡಿ.!!

ಓದಿರಿ:ನಂ.1 ಬಜೆಟ್ ಸ್ಮಾರ್ಟ್‌ಫೋನ್‌ 'ವಿಷನ್ 3' ಜೊತೆಗೆ 'ಏರ್‌ಟೆಲ್' ಬಂಪರ್ ಆಫರ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Cyber crime has seen a sudden rise with over 25 victims filing a complaint with the cyber cell of the city police in the last two days. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot