ನವಜಾತ ಶಿಶು ಮರಣ ತಡೆಗೆ ಬುಲ್ಲೆಟ್ ಪ್ರೂಫ್ ಇನ್ಕ್ಯುಬೇಟರ್
ನೀವು ಗ್ರಾಮೀಣ ಭಾರತದಲ್ಲಿದ್ದೀರಾ ಎಂದಾದಲ್ಲಿ ಅಕಾಲಿಕ ಶಿಶುವಿನ ಜೀವನ ಅನಿಶ್ಚಿತ ಎಂಬುದು ನಿಖರವಾಗಿದೆ. ಭಾರತದಲ್ಲಿ ಪ್ರತೀ ವರ್ಷ 750,000 ನವಜಾತ ಶಿಶುಗಳ ಮರಣವುಂಟಾಗುತ್ತಿದ್ದು ಇದು ವಿಶ್ವದಲ್ಲೇ ಅತ್ಯಧಿಕ ಶಿಶು ಮರಣ ದರಗಳು ಎಂದು ದಾಖಲೆಯಾಗಿದೆ.

ಓದಿರಿ: ರಕ್ಷಾ ಬಂಧನ ವಿಶೇಷ: ಬಜೆಟ್ ಫೋನ್ಸ್ ರೂ 700 ಕ್ಕೆ ಆರಂಭ
ನಗರಗಳ ಹೊರಗೆ ಮಾತ್ರವೇ ಇನ್ಕ್ಯುಬೇಟರ್‌ಗಳಿಗೆ ಪ್ರವೇಶವಿದ್ದು, ಸ್ಥಳೀಯ ವೈದ್ಯಕೀಯ ಸೌಲಭ್ಯಗಳಿಗೆ ನವಜಾತ ತಂತ್ರಜ್ಞಾನ ದುಬಾರಿಯಾಗಿದೆ. ಆದರೆ ಈ ಸಮಸ್ಯೆಗೆ ಪರಿಹಾರವನ್ನೊದಗಿಸುವ ಸಲುವಾಗಿ ವಿಪ್ರೊ ಮತ್ತು ಜನರಲ್ ಇಲೆಕ್ಟ್ರಿಕ್ ತಮ್ಮ ನಡುವೆ ಒಪ್ಪಂದವನ್ನು ಮಾಡಿಕೊಂಡಿದ್ದು, ಭಾರತದ ಮಾರುಕಟ್ಟೆಗಾಗಿ ಇದು ಅತಿ ಬಲಿಷ್ಟವಾದ, ಸುರಕ್ಷತೆಯುಳ್ಳ ಇನ್ಕ್ಯುಬೇಟರ್ ಅನ್ನು ಹೊರತಂದಿದೆ. ಮತ್ತು ಇವುಗಳ ವಿಶೇಷತೆ ಎಂದರೆ ಇದು ಬುಲೆಟ್ ಪ್ರೂಫ್ ತಂತ್ರಜ್ಞಾನದಿಂದ ಕೂಡಿದ್ದಾಗಿದೆ.
ಓದಿರಿ: ವಿವಾಹೇತರ ಸಂಬಂಧ ಸೈಟ್ ಬಳಕೆಯಲ್ಲಿ ಬೆಂಗಳೂರು 4 ನೆಯದ್ದು
ಈ ಹೈಟೆಕ್ ಮಿಶನ್ ಬುಲೆಟ್ ಪ್ರೂಫ್ ಸಾಮಾಗ್ರಿಯನ್ನು ಒಳಗೊಂಡಿದ್ದು ಅನಿರೀಕ್ಷಿತ ವಿದ್ಯುತ್ ಅಪಘಾತಗಳನ್ನು ತಡೆಯುವ ಸೌಲಭ್ಯವನ್ನು ಹೊಂದಿದೆ. ಲುಲ್ಲಬಿ ವಾರ್ಮರ್ ಪ್ರೈಮ್ ಎಂಬ ಹೆಸರನ್ನು ಹೊಂದಿರುವ ಇನ್ಕ್ಯುಬೇಟರ್‌ಗಳನ್ನು ಕಡಿಮೆ ಮೂಲಸೌಕರ್ಯವಿರುವ ಪ್ರದೇಶಗಳಿಗಾಗಿ ವಿಶೇಷವಾಗಿ ವಿನ್ಯಾಸಪಡಿಸಲಾಗಿದೆ.


Click it and Unblock the Notifications