ವಿವಾಹೇತರ ಸಂಬಂಧ ಸೈಟ್‌ ಬಳಕೆಯಲ್ಲಿ ಬೆಂಗಳೂರು 4 ನೆಯದ್ದು

  By Shwetha
  |

  ವಿವಾಹೇತರ ಸಂಬಂಧಗಳ ವೆಬ್‌ಸೈಟ್‌ಗಳು ಇಂದು ಹೆಚ್ಚು ಪ್ರಚಲಿತದಲ್ಲಿದ್ದು ಆಶ್ಲೇ ಮೆಡಿಸನ್ ಹೆಸರಿನ ಇಂತಹುದೇ ವೆಬ್‌ಸೈಟ್‌ನ ಬಳಕೆದಾರರಲ್ಲಿ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ.

  ಓದಿರಿ: ಮನೆಯ ವೈಫೈ ಸೌಲಭ್ಯದ ಪ್ರಬಲತೆಗಾಗಿ ಟಿಪ್ಸ್

  ತಂತ್ರಜ್ಞಾನ ಕಂಪೆನಿಯಾದ ಟೆಕ್ನಿಲೋಜಿಕಾ ಹೆಚ್ಚಿನ ಅಧ್ಯಯನವನ್ನು ನಡೆಸಿದಾಗ ವಿಶ್ವದ ಬೇರೆ ಬೇರೆ ನಗರಗಳಿಂದ ಈ ವೆಬ್‌ಸೈಟ್‌ಗೆ ರಿಜಿಸ್ಟ್ರೇಶನ್ ನಡೆದಿರುವುದು ತಿಳಿದು ಬಂದಿದೆ. ಇನ್ನು ದಕ್ಷಿಣ ಭಾರತದಲ್ಲಿ ಚೆನ್ನೈ ಕೂಡ ಈ ವೆಬ್‌ಸೈಟ್‌ನ ಬಳಕೆಯಲ್ಲಿ ಮುಂದಿದೆ. ದೆಹಲಿ 38,620 ಬಳಕೆದಾರರೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ ಮುಂಬೈ 32,888 ಬಳಕೆದಾರರನ್ನು ಹೊಂದಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಆಶ್ಲೇ ಮೆಡಿಸನ್‌

  ಹ್ಯಾಕರ್‌ಗಳ ಗುಂಪು ಆಶ್ಲೇ ಮೆಡಿಸನ್‌ನಂತಹ ವೆಬ್‌ಸೈಟ್‌ನಿಂದ ಈಗಾಗಲೇ ನೋಂದಾವಣೆ ಮಾಡಿಕೊಂಡಿರುವ ಬಳಕೆದಾರರ ಮಾಹಿತಿಗಳನ್ನು ಕದ್ದು ಬೆಂಗಳೂರಿಗರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ.

  ಮಿಲಿಯಗಟ್ಟಲೆ ಜನರು

  ಹ್ಯಾಕರ್‌ಗಳು ವಿಶ್ವದಲ್ಲಿ ಈ ಸೈಟ್‌ ಅನ್ನು ಬಳಸುತ್ತಿರುವ ಮಿಲಿಯಗಟ್ಟಲೆ ಜನರ ಹೆಸರನ್ನು ಕಳೆದ ವಾರ ಬಯಲು ಮಾಡಿದೆ.

  ನೋಂದಾವಣೆ

  ಈ ಡೇಟಾವನ್ನು ಬಳಸಿಕೊಂಡು ಟೆಕ್ನಾಲಜಿ ಕಂಪೆನಿ ಟೆಕ್ನಿಲೋಜಿಕಾ ಆಶ್ಲೇ ಮೆಡಿಸನ್‌ಗೆ ವಿಶ್ವದ ಯಾವ ಯಾವ ಭಾಗದವರು ದೇಶದವರು ನೋಂದಾವಣೆ ಮಾಡಿಕೊಂಡಿದ್ದಾರೆ ಎಂಬುದರ ಮಾಹಿತಿ ಸಂಗ್ರಹಿಸಿದೆ.

  ನಾಲ್ಕನೇಯದು

  ಆಶ್ಲೇ ಮೆಡಿಸನ್ ಬಳಕೆದಾರರಲ್ಲಿ ಬೆಂಗಳೂರು ನಾಲ್ಕನೇಯದು ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿದೆ.

  ಚೆನ್ನೈ 16,355

  ಚೆನ್ನೈ 16,355 ಬಳಕೆದಾರರೊಂದಿಗೆ ಬೆಂಗಳೂರನ್ನು ಸೋಲಿಸಿದೆ.

  ವೈವಾಹಿಕ ಪುರುಷರು ಮತ್ತು ಮಹಿಳೆಯರ ಹೆಸರು

  ಹೈದ್ರಾಬಾದ್ 12,548 ವೈವಾಹಿಕ ಪುರುಷರು ಮತ್ತು ಮಹಿಳೆಯರ ಹೆಸರುಗಳನ್ನು ಈ ಸೈಟ್‌ನಲ್ಲಿ ಹೊಂದಿದೆ.

  ಕೋಲ್ಕತ್ತಾ 11,751 ಬಳಕೆದಾರರು

  ಕೋಲ್ಕತ್ತಾ 11,751 ಬಳಕೆದಾರರು ಮತ್ತು ಪುಣೆ 9,738 ಬಳಕೆದಾರರನ್ನು ಈ ವೆಬ್‌ಸೈಟ್‌ನಲ್ಲಿ ಹೊಂದಿದೆ.

  ಬಳಕೆದಾರರು 16,267

  ಬೆಂಗಳೂರಿನ ಬಳಕೆದಾರರು 16,267 ಆಗಿದ್ದಾರೆ.

  ಮುಗ್ಧ

  ಈ ಅನೈತಿಕ ವ್ಯಭಿಚಾರ ಸೈಟ್‌ನಲ್ಲಿ ನೋಂದಾಯಿತರಾದ ಹೆಚ್ಚಿನವರು ಮುಗ್ಧರಾಗಿದ್ದು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರುಗಳು ಈ ವೆಬ್‌ಸೈಟ್ ಅನ್ನು ಇತರ ಬೇರೆ ಕಾರಣಗಳಿಗಾಗಿ ಬಳಸಿದ್ದರು ಎನ್ನಲಾಗಿದೆ.

  ವಯಸ್ಕರಿಗಾಗಿ ಜೋಡಿ ಹುಡುಕಿ ಕೊಡುವ ವೆಬ್‌ಸೈಟ್

  ವಯಸ್ಕರಿಗಾಗಿ ಜೋಡಿ ಹುಡುಕಿ ಕೊಡುವ ವೆಬ್‌ಸೈಟ್ ಆಗಿರುವ ಆಶ್ಲೇ ಮೆಡಿಸನ್ ಮೋಸ ಮಾಡುವ ಸೈಟ್ ಆಗಿದೆ ಎಂಬುದು ಇದನ್ನು ಬಳಸುವವರಿಂದ ತಿಳಿದು ಬಂದಿದೆ. ಇದರಲ್ಲಿರುವ ಹೆಚ್ಚಿನ ಮಹಿಳೆಯರಿಂದ ಪುರುಷರಿಗೆ ಬರುವ ಕರೆಗಳು ಮೋಸದ್ದಾಗಿದ್ದು ಹೆಚ್ಚಿನವರು ಹೆಸರಿನಲ್ಲಿ ದುಡ್ಡು ಕಳೆದುಕೊಂಡಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The tech capital loses to Delhi, Mumbai and Chennai as online dating service numbers emerge; but for consolation, beats tech-rival Hyderabad.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more