ಮಿಷನ್ ಮಾರ್ಸ್ ಉಡಾವಣೆ ಯಶಸ್ವಿ

By Ashwath
|

ಭಾರತದ ಮಂಗಳಯಾನ ಶ್ರೀಹರಿಕೋಟಾದ ಸತೀಶ್‌ ಧವನ್‌ ಅಂತರಿಕ್ಷ ಕೇಂದ್ರದಿಂದ ಯಶಸ್ವಿಯಾಗಿ ಆರಂಭಗೊಂಡಿದೆ. ವಿಶ್ವದ ದೊಡ್ಡ ದೊಡ್ಡ ದೇಶಗಳ ಉಪಗ್ರಹಗಳು ಅಧ್ಯಯನ ನಡೆಸುತ್ತಿರುವಾಗಲೇ ಭಾರತ ಈ ಉಪಗ್ರಹವನ್ನು ಹಾರಿಸುವ ಮೂಲಕ ಮಂಗಳನ ಅಧ್ಯಯನಕ್ಕೆ ವಿಶ್ವ ಮಟ್ಟದಲ್ಲಿ ಸಮರ್ಥ ದೇಶ ಎಂದು ತೋರಿಸಿದೆ.

ಇಸ್ರೋದ ವಿಜ್ಞಾನಿಗಳು ಯೋಜನೆಗೆ ಅನುಮತಿ ದೊರೆತ ಒಂದೇ ವರ್ಷದಲ್ಲಿ ಉಪಗ್ರಹವನ್ನು ತಯಾರಿಸಿ ಮಂಗಳ ಗ್ರಹಕ್ಕೆ ಕಳುಹಿಸಿದ್ದಾರೆ.ನಿಗದಿಯಾದಂತೆ ಇಸ್ರೋ ಅಕ್ಟೋಬರ್‌ 28 ರಂದು ಉಪಗ್ರಹವನ್ನು ಉಡಾವಣೆ ಮಾಡಬೇಕಿತ್ತು. ಆದರೆ ಪೆಸಿಫಿಕ್‌ ಮಹಾಸಾಗರದಲ್ಲಿನ ಪ್ರತಿಕೂಲ ವಾತಾವರಣದಿಂದಾಗಿ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಒಂದು ವಾರ ಮುಂದೂಡಲ್ಪಟ್ಟಿತ್ತು. ಇಂದು ಪಿಎಸ್‌ಎಲ್‌ವಿ ನೌಕೆ ಯಶಸ್ವಿಯಾಗಿ ಉಪಗ್ರಹವನ್ನು ಭೂಮಿಯ ಕಕ್ಷೆಗೆ ಸೇರಿಸುವ ಮೂಲಕ, ಇಸ್ರೋ ವಿಶ್ವದ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದು, ವಿಶ್ವದೆಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರ ಇಸ್ರೋಗೆ ಹರಿದು ಬಂದಿದೆ. ಪ್ರಧಾನಿ ಮನಮೋಹನ್‌ ಸಿಂಗ್‌,ರಾಷ್ಟ್ರಪತಿ ಪ್ರಣಬ್‌‌ ಮುಖರ್ಜಿ‌, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇಸ್ರೋದ ಸಾಧನೆಯನ್ನು ಕೊಂಡಾಡಿದ್ದಾರೆ.

<blockquote class="twitter-tweet blockquote"><p>PM talks to ISRO chairman Dr K Radhakrishnan - "I congratulate you and your team for this historic achievement." <a href="http://t.co/AbatrnWmS7">pic.twitter.com/AbatrnWmS7</a></p>— Dr Manmohan Singh (@PMOIndia) <a href="https://twitter.com/PMOIndia/statuses/397678666601074688">November 5, 2013</a></blockquote> <script async src="//platform.twitter.com/widgets.js" charset="utf-8"></script>

ಮಂಗಳಯಾನ ಯಶಸ್ವಿ ಉಡಾವಣೆ

ಮಂಗಳಯಾನ ಯಶಸ್ವಿ ಉಡಾವಣೆ


ಕಳೆದ ಎರಡು ದಿನಗಳಿಂದ ಕೌಂಟ್‌ಡೌನ್‌ ಆರಂಭಗೊಂಡಿದ್ದ ಇಸ್ರೋದ ಈ ಯೋಜನೆ ಸಂಪೂರ್ಣವಾಗಿ ಯಶಸ್ವಿಯಾಗಬೇಕಾದರೆ ಇನ್ನೂ ಹೆಚ್ಚು ಕಡಿಮೆ10 ತಿಂಗಳು ಕಾಯಬೇಕಿದೆ. ಮಧ್ಯಾಹ್ನ ಉಡಾವಣೆಯಾದ ಉಪಗ್ರಹವನ್ನು ಭೂಕಕ್ಷೆಗೆ ಸೇರಿಸಲು ಪಿಎಸ್‌ಎಲ್‌ವಿ ನೌಕೆ ಸರಿಸುಮಾರು 40 ನಿಮಿಷಗಳನ್ನು ತೆಗೆದುಕೊಂಡಿದ್ದು ಉಪಗ್ರಹ 20ರಿಂದ 25 ದಿನಗಳ ಕಾಲ ಭೂಕಕ್ಷೆಯಲ್ಲೇ ಸುತ್ತಾಡಲಿದೆ.ಉಪಗ್ರಹ 9 ತಿಂಗಳ ಮಂಗಳ ಯಾನವನ್ನು ಡಿ.1ರಿಂದ ಕೈಗೊಳ್ಳಲಿದ್ದು,2014ರ ಸೆ.24ರಂದು ಮಂಗಳನ ಕಕ್ಷೆ ತಲುಪಲಿದೆ.

 ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಇಸ್ರೋದ ಮಂಗಳಯಾನಕ್ಕೆ ಕೇಂದ್ರ ಸರ್ಕಾರ 2012 ಅಗಸ್ಟ್‌ 3ರಂದು ಅನುಮತಿ ನೀಡಿತ್ತು. ಅನುಮತಿ ದೊರಕಿದ ಒಂದೇ ವರ್ಷ‌ದಲ್ಲಿ ಇಸ್ರೋ ಈ ಉಪಗ್ರಹಕ್ಕೆ ಸಂಬಂಧಿಸಿದ ಎಲ್ಲಾ ಉಪಕರಣಗಳನ್ನು ಅಭಿವೃದ್ಧಿಪಡಿಸಿದೆ.

ಯೋಜನೆಗೆ 450 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ಹಣದಲ್ಲಿ150 ಕೋಟಿ ರೂ. ಬಾಹ್ಯಾಕಾಶ ನೌಕೆ ನಿರ್ಮಾಣಕ್ಕೆ, 110 ಕೋಟಿ ರೂ. ಉಡಾವಣೆಗೆ ವೆಚ್ಚವಾಗಿದೆ. ಈ ಮೂಲಕ ವಿಶ್ವದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ಮಂಗಳಯಾನಕ್ಕೆ ಸಂಬಂಧಿಸಿದ ಯೋಜನೆ ರೂಪಿಸಿದ ಕೀರ್ತಿಗೆ ಇಸ್ರೋ ಪಾತ್ರವಾಗಿದೆ.

 ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ


ಅಧ್ಯಯನಕ್ಕಾಗಿ 15 ಕೆ.ಜಿ. ಭಾರದ ಐದು ಉಪಕರಣಗಳು ಉಪಗ್ರಹದಲ್ಲಿದ್ದು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಉಪಕರಣಗಳನ್ನು ಬೆಂಗಳೂರಿನ ಐಸಾಕ್‌ ಕೇಂದ್ರದ ಕ್ಲೀನ್‌ ರೂಮ್‌‌ನಲ್ಲಿ ತಪಾಸಣೆ ಮಾಡಲಾಗಿದೆ.ಉಪಗ್ರಹದ ತೂಕ 1,340 ಕೆ.ಜಿ. ಇದು ಮಂಗಳನ ಕಕ್ಷೆಗೆ ಸೇರಿದಾಗ 582 ಕೆ.ಜಿ.ಗೆ ಕುಗ್ಗಲಿದೆ.

 ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ


ಡ್ಯೂಟೇರಿಯಂ ಮತ್ತು ಹೈಡ್ರೋಜನ್ ಬಗ್ಗೆ ಅಧ್ಯಯನ ನಡೆಸಲು ಎಲ್‌ಎಪಿ(Lyman-Alpha Photometer ) ಉಪಕರಣ ಉಪಗ್ರಹದಲ್ಲಿದೆ.

 ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ


ಮೀಥೇನ್ ಇರುವಿಕೆ ಪತ್ತೆಗೆ ಎಂಎಸ್‌ಎಂ(Methane Sensor For Mars) ಹೆಸರಿನ ವೈಜ್ಞಾನಿಕ ಉಪಕರಣ ಉಪಗ್ರಹದಲ್ಲಿದೆ.

 ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಮಂಗಳ ಗ್ರಹದ ಪರಿಸರ ಅಧ್ಯಯನಕ್ಕಾಗಿ ಎಂಇಎನ್‌ಸಿಎ(Mars Exospheric Neutral Composition Analyzer) ಉಪಕರಣವಿದೆ.

 ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಮಂಗಳದ ಮೇಲ್ಮೈ ರಚನೆ ಸೆರೆ ಹಿಡಿಯಲು ಎಂಸಿಸಿ (Mars Colour Camera)ಕ್ಯಾಮೆರಾವಿದೆ

 ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ


ಮಂಗಳ ಗ್ರಹದಲ್ಲಿರುವ ತಾಪಮಾನ ಮತ್ತು ಅಲ್ಲಿನ ಭೂಮಿಯನ್ನು ಅಧ್ಯಯನ ಮಾಡಲು ಟಿಐಎಸ್‌(Thermal Infrared Imaging Spectrometer) ಉಪಕರಣವಿದೆ.

 ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ


ಉಪಗ್ರಹ ಹಾರಿಸಿದ ಬಳಿಕ ಮಂಗಳ ಗ್ರಹ ತಲುಪಲು ಸುಮಾರು 10 ತಿಂಗಳು ಬೇಕಾಗುತ್ತದೆ.ಉಪಗ್ರಹದ ಕನಿಷ್ಠ ಅವಧಿ 6 ತಿಂಗಳು. ಗರಿಷ್ಟ ಅವಧಿ10 ತಿಂಗಳು.ಉಪಗ್ರಹ ಮೊದಲ ಪೂರ್ಣ ಪ್ರಮಾಣದ ಚಿತ್ರವನ್ನು 9 ತಿಂಗಳ ಬಳಿಕ(ಸೆ.21, 2014) ಭೂಮಿಗೆ ಕಳುಹಿಸುವಂತೆ ಇಸ್ರೋ ಯೋಜನೆ ರೂಪಿಸಿದೆ.

 ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ


ಉಪಗ್ರಹದದಿಂದ ಕಳುಹಿಸಿದ ಚಿತ್ರ/ಮಾಹಿತಿಗಳು ಭೂಮಿಗೆ ತಲುಪಲು 20 ನಿಮಿಷದ ಬೇಕು. ಇಸ್ರೋ ಚಂದ್ರಯಾನದಲ್ಲಿ ಮೂರು ಸೆಕೆಂಡ್‌‌ನಲ್ಲಿ ಸಂಕೇತಗಳು ಭೂಮಿಗೆ ತಲುಪುತಿತ್ತು.ಉಪಗ್ರಹ ಪ್ರತಿ ಮೂರು ದಿನಕ್ಕೊಮ್ಮೆ ಮಂಗಳನ ಸುತ್ತ ಪರಿಭ್ರಮಿಸಲಿದೆ.

 ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ


ಇಸ್ರೋ ತನ್ನದೇ ಆದ ದಿಕ್ಸೂಚಿ ಮತ್ತು ಸಂವಹನ ವ್ಯವಸ್ಥೆಯನ್ನು ಹೊಂದಿದ್ದರೂ ಇದಕ್ಕೆ ಕೆಲವು ಇತಿಮಿತಿಗಳಿವೆ. ಹೀಗಾಗಿ ಈ ಇತಿಮಿತಿಯ ಹೊರಗೆ ವ್ಯೋಮನೌಕೆ ಸಂಚರಿಸಿದಾಗ ಅದಕ್ಕೆ ನಾಸಾದ ಸಂವಹನ ಮತ್ತು ದಿಕ್ಸೂಚಿ ವ್ಯವಸ್ಥೆಯ ಬೆಂಬಲ ಅನಿವಾರ್ಯವಾಗಿದೆ. ಹೀಗಾಗಿ ನಾಸಾದ Deep Space Network ಸಹಾಯವನ್ನು ಪಡೆಯುವುದರಿಂದ ಇಸ್ರೋ ನಾಸಾಗೆ 70 ಕೋಟಿ ರೂ.ಗಳನ್ನು ನೀಡಲಿದೆ.ಕೆಲ ದಿನಗಳ ಹಿಂದೆ ಅಮೆರಿಕ ಧನವಿನಿಯೋಗ ಮಸೂದೆ ಪಾಸಾಗದೇ ಇದ್ದರಿಂದ ನಾಸಾ ಸಿಬ್ಬಂದಿಗೆ ಸಂಬಳ ಸಿಗದ ಕಾರಣ ಇಸ್ರೋದ ಈ ಯೋಜನೆಗೆ ಹಿನ್ನೆಡೆಯಾಗಿತ್ತು.

 ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಪೂರ್ವ ನಿಗದಿಯಂತೆ ನ.5 ಮಧ್ಯಾಹ್ನ 2.38 ವ್ಯೋಮನೌಕೆಯ ಉಡಾವಣೆ ಯಶಸ್ವಿಯಾಗಿ ನಡೆದಿದೆ. ಒಂದು ವೇಳೆ ಇಂದು ಉಡಾವಣೆ ನಡೆಯದಿದ್ದರೂ ನ.19ರೊಳಗೆ ಯೋಜನೆ ಕೈಗೊಳ್ಳಲೇಬೇಕಾದ ಅನಿವಾರ್ಯತೆ ಇಸ್ರೋಗೆ ಇತ್ತು. ಒಂದು ವೇಳೆ ನ.19ರ ದಿನಾಂಕದ ಗಡಿ ದಾಟಿದ್ದಲ್ಲಿ ಇನ್ನು 2 ವರ್ಷ ಕಾಲ ಇಸ್ರೋಗೆ ಮಂಗಳಯಾನ ಯೋಜನೆ ಕೈ ಗೊಳ್ಳಲು ಸಾಧ್ಯವಿರಲಿಲ್ಲ.

 ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ


ಇಸ್ರೋದ ಈ ಮಂಗಳಯಾನ ಯೋಜನೆ ಸಂಪೂರ್ಣವಾಗಿ ಯಶಸ್ವಿಯಾದಲ್ಲಿ ಮಂಗಳನ ಅಧ್ಯಯನಕ್ಕೆ ಉಪಗ್ರಹವನ್ನು ಕಳುಹಿಸಿದ ನಾಲ್ಕನೇಯ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಈಗಾಗಲೇ ಮಂಗಳಯಾನಕ್ಕೆ ರಷ್ಯಾ, ಅಮೆರಿಕ,ಯುರೋಪಿಯನ್ ಸ್ಪೇಸ್ ಏಜೆನ್ಸಿಗಳು ಉಪಗ್ರಹವನ್ನು ಕಳುಹಿಸಿ ಅಧ್ಯಯನ ನಡೆಸುತ್ತಿದೆ.

 ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ


ಇಸ್ರೋ ಮಂಗಳ ಯಾನ ಯಶಸ್ವಿಯಾದಲ್ಲಿ ಈ ಸಾಧನೆ ಮಾಡಿದ ಏಷ್ಯಾದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಮಂಗಳ ಯಾನಕ್ಕೆ ವಿವಿಧ ಕೈಗೊಂಡ 51 ಯೋಜನೆಗಳಲ್ಲಿ 21 ಸಫಲವಾಗಿದೆ. 1999ರಲ್ಲಿ ಜಪಾನ್, 2011ರಲ್ಲಿ ಚೀನಾದ ಯೋಜನೆ ವಿಫಲಗೊಂಡಿದೆ.

 ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಇಸ್ರೊ ಕಳುಹಿಸಿದ್ದ ‘ಚಂದ್ರಯಾನ-1 ಉಪಗ್ರಹ ಚಂದ್ರನ ಅಂಗಳದಲ್ಲಿ ನೀರಿನ ಕುರುಹನ್ನು ಮೊದಲ ಸಲ ಪತ್ತೆ­ಹಚ್ಚಿತ್ತು.ಅದುವರೆಗೆ ಬೇರೆ ಯಾವ ದೇಶಕ್ಕೂ ಚಂದ್ರ­ನಲ್ಲಿ ನೀರಿನ ಕುರುಹನ್ನು ದೃಢಪಡಿಸಲು ಸಾಧ್ಯವಾಗಿರಲಿಲ್ಲ.ಹೀಗಾಗಿ ಇಸ್ರೋದ ಮಂಗಳ ಯಾನ ಸಹ ಇದೇ ರೀತಿಯ ಅಚ್ಚರಿಯ ಫಲಿತಾಂಶ ನೀಡಬಹುದು ಎಂಬ ನಿರೀಕ್ಷೆಯನ್ನು ಇಸ್ರೋ ವಿಜ್ಞಾನಿಗಳು ಹೊಂದಿದ್ದಾರೆ.

 ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ

ಇಸ್ರೋ ಮಂಗಳಯಾನ ಯಶಸ್ವಿ ಉಡಾವಣೆ


ತನ್ನ ಮಂಗಳಯಾನ ಯೋಜನೆಗೆ ಸಂಬಂಧಿಸಿದಂತೆ ಜನರಿಗೆ ಪ್ರತಿ ಮಾಹಿತಿ ನೀಡಲು ಇಸ್ರೋ ಫೇಸ್‌ಬುಕ್‌ ಫ್ಯಾನ್‌ ಪೇಜ್‌ ಆರಂಭಿಸಿದ್ದು, ಆಸಕ್ತರು ಫೇಸ್‌ಬುಕ್‌ ಫ್ಯಾನ್‌ಪೇಜ್‌ನ್ನು ಲೈಕ್‌ ಮಾಡುವ ಮೂಲಕ ಪ್ರತಿದಿನ ಮಾಹಿತಿಯನ್ನು ಪಡೆಯಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X