2020ರ ವೇಳೆಗೆ 500 ಬಿಲಿಯನ್ ಡಿಜಿಟಲ್ ಪೈಮೆಂಟ್ ವ್ಯವಹಾರ ನಡೆಯಲಿದೆಯಂತೆ..!

Written By:

ಸದ್ಯ ದೇಶದಲ್ಲಿ ಡಿಜಿಟಲ್ ಕ್ರಾಂತಿ ಜೋರಾಗಿ ನಡೆಯುತ್ತಿದ್ದು, ನೋಟ್ ಬ್ಯಾನ್ ನಂತರದಲ್ಲಿ ಡಿಜಿಟಲ್ ಬ್ಯಾಕಿಂಗ್ ವೇಗವಾಗಿ ಬೆಳೆಯುತ್ತಿದೆ. ಈ ಹಿನ್ನಲೆಯಲ್ಲಿ ವರದಿಯೊಂದು ಹೊರ ಬಿದ್ದಿದ್ದು, ಇದರಲ್ಲಿ ಹೇಳಿರುವಂತೆ 2020ರ ವೇಳೆಗೆ ಭಾರತದಲ್ಲಿ 500 ಬಿಲಿಯನ್ ಮೊತ್ತದ ಡಿಜಿಟಲ್ ಪೈಮೆಂಟ್ ವ್ಯವಹಾರ ನಡೆಯಲಿದೆಯಂತೆ.

2020ರ ವೇಳೆಗೆ 500 ಬಿಲಿಯನ್ ಡಿಜಿಟಲ್ ಪೈಮೆಂಟ್ ವ್ಯವಹಾರ ನಡೆಯಲಿದೆಯಂತೆ..!

ಓದಿರಿ: ನೋಕಿಯಾ 3310 ರಿಬೋಟ್: ಹಳೇ ಪೋನಿನ 5 ಹೊಸ ಆಯ್ಕೆಗಳೇ..?

ದೇಶದಲ್ಲಿ ಇಂಟರ್ನೆಟ್ ಬಳವುಸುವ ಶೇ.50ಕ್ಕೂ ಹೆಚ್ಚು ಮಂದಿ ಡಿಜಿಟಲ್ ಮೂಲಕವೇ ತನ್ನ ವ್ಯವಹಾರಗಳಿಗೆ ಹಣವನ್ನು ಪಾವತಿ ಮಾಡಲಿದ್ದಾರೆ ಎನ್ನುವ ಅಂಶವನ್ನು ಈ ವರದಿ ತಿಳಿಸಿದ್ದು, ಈ ವರದಿಯನ್ನು GSM ಕನ್ಸಲೆಟಿಂಗ್ ಗ್ರೂಪ್ ತಯಾರಿಸಿದೆ ಎನ್ನಲಾಗಿದೆ.

ಈ ವರದಿಯನ್ನು ರಚಿಸುವ ಮುನ್ನ ಈ ಕಂಪನಿಯೂ ಬ್ರೆಜಿಲ್, ಚೈನಾ, ಜರ್ಮನಿ, ಸೌತ್‌ಕೋರಿಯಾ ಮತ್ತು ಅಮೇರಿಕಾ ದೇಶಗಳಲ್ಲಿ ಅಧ್ಯಯನವನ್ನು ನಡೆಸಿದ್ದು, ಅದರ ಅನ್ವಯ ಭಾರತದಲ್ಲಿ ಡಿಜಿಟಲ್ ಟೆಕ್ನಾಲಜಿಯೂ ಎಲ್ಲಾ ಕಡೆಯಲ್ಲಿಯೂ ಬಳಕೆಯಾಗಲಿದ್ದು, ಈ ಹಿನ್ನಲೆಯಲ್ಲ ಡಿಜಿಟಲ್ ರೆವಲ್ಯೂಷನ್ ನಡೆಯಲಿದ್ದು, ಇದಕ್ಕಾಗಿ ಹೊಸ ನೀತಿ ನಿಯಮಗಳನ್ನು ರೂಪಿಸುವಂತೆ ಎಚ್ಚರಿಸಿದೆ.

2020ರ ವೇಳೆಗೆ 500 ಬಿಲಿಯನ್ ಡಿಜಿಟಲ್ ಪೈಮೆಂಟ್ ವ್ಯವಹಾರ ನಡೆಯಲಿದೆಯಂತೆ..!

ಓದಿರಿ: ಕ್ಸಿಯೋಮಿ ಹೊಸ ಪೋನು Mi Max 2: 6GB RAM ಮತ್ತು ಸ್ನಾಪ್‌ಡ್ರಾಗನ್ 660 ಪ್ರೋಸೆಸರ್

ಡಿಜಿಟಲ್ ಪೈಮೆಂಟ್ ಏರುಗತಿಯಲ್ಲಿ ಸಾಗಲಿದ್ದು, ಇದರಿಂದಾಗಿ ಹೆಚ್ಚಿನ ತೊಂದರೆ ನಿರ್ಮಾಣವಾಗಲಿದೆ, ಇದನ್ನು ಸಮರ್ಥವಾಗಿ ಎದುರಿಸಲು ಸರಕಾರಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಅಲ್ಲದೇ ದೇಶದಲ್ಲಿ ಇಂಟರ್‌ನೆಟ್ ಬಳಕೆದಾರ ಸಂಖ್ಯೆಯೂ 550 ಮಿಲಿಯನ್ ಮುಟ್ಟಲಿದೆ ಈ ಹಿನ್ನಲೆಯಲ್ಲಿ ಅಗತ್ಯ ಸೌಲಭ್ಯಗಳು ಮತ್ತು ಸೇವೆಯನ್ನು ನೀಡಲು ಸರಕಾರಗಳು ಸಮರ್ಥವಾಗುವಂತೆ ಎಚ್ಚರಿಸಿದೆ.

ಅಲ್ಲದೇ ಪೇಮೆಂಟ್ ವಿಚಾರದಲ್ಲಿ ಆಧಾರ್‌ಕಾರ್ಡ್‌ ಹೆಚ್ಚಿನ ಪಾತ್ರವನ್ನು ವಹಿಸದಲಿದೆ ಎನ್ನುವ ಮಾತುಗಳು ಕೇಳಿಬಂದಿದೆ. ಇವುಗಳ ಬಳಕೆಯನ್ನು ಹೆಚ್ಚಿನ ಜನರಿಗೆ ತಿಳುವಳಿಕೆ ಮೂಡಿವಂತೆ ಈ ವರದಿ ಸಲಹೆ ನೀಡಿದೆ.

Read more about:
English summary
igital payments industry in India is expected to reach $500 billion by 2020, with over 50% of internet users in the country will be using it by then, a report today said. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot