ಸ್ಮಾರ್ಟ್‌ಫೋನ್ ಬಳಕೆಯಲ್ಲಿ ಭಾರತೀಯರದೇ ಮೇಲುಗೈ
57% ದಷ್ಟು ಭಾರತೀಯರು ಸ್ಮಾರ್ಟ್‌ಫೋನ್‌ಗಳನ್ನು ಬಿಟ್ಟು ಇರಲಾರರು ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಅಧ್ಯಯನಗಳು ಹೇಳುವಂತೆ ಇವರುಗಳು ಫೋನ್‌ನ ಬಳಕೆಯನ್ನು ಹೆಚ್ಚು ಮಾಡುತ್ತಿದ್ದು ಫೋನ್ ಅನ್ನು ಅಷ್ಟೊಂದು ಆಶ್ರಯಿಸಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: ಫೋನ್ ಚಾರ್ಜಿಂಗ್ ಸಮಸ್ಯೆಯೇ? ಇಲ್ಲಿದೆ ಪರಿಹಾರ
ಯುಎಸ್, ಜರ್ಮನಿ, ಬ್ರೆಜಿಲ್, ಭಾರತ ಮತ್ತು ಚೀನಾ ಸೇರಿದಂತೆ 2,500 ಕ್ಕಿಂತಲೂ ಹೆಚ್ಚಿನ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಬಳಕೆದಾರರ ಅಭಿಪ್ರಾಯವನ್ನು ಸಂಗ್ರಹಿಸಿತ್ತು. ವೈಯಕ್ತಿಕವಾಗಿ ತಮ್ಮ ಡಿವೈಸ್‌ಗಳನ್ನು ಹೊಂದಿರುವ 16 ರಿಂದ 65 ವರ್ಷದ ಬಳಕೆದಾರರ ಸಾಮಾನ್ಯ ನಮೂನೆಯನ್ನು ಅಧ್ಯಯನವು ಒಳಗೊಂಡಿತ್ತು.

ಯುಎಸ್‌ನಿಂದ 518 ಪ್ರತಿಕ್ರಿಯೆದಾರರು, ಜರ್ಮನಿಯಿಂದ 535 ಪ್ರತಿಕ್ರಿಯೆದಾರರು, ಭಾರತದಿಂದ 507 ಪ್ರತಿಕ್ರಿಯೆದಾರರು, ಚೀನಾದಿಂದ 515 ಪ್ರತಿಕ್ರಿಯೆದಾರರು ಮತ್ತು ಬ್ರೆಜಿಲ್‌ನಿಂದ 503 ಪ್ರತಿಕ್ರಿಯೆದಾರರನ್ನು ಪಟ್ಟಿ ಒಳಗೊಂಡಿದೆ.
ಇದನ್ನೂ ಓದಿ: ಮೈಕ್ರೋಮ್ಯಾಕ್ಸ್ ಫೋನ್ ಮೇಲೆ ಭರ್ಜರಿ ದರಕಡಿತ
ಅಮೇರಿಕಾ ಮತ್ತು ಚೀನಾದಲ್ಲಿ ಸ್ಮಾರ್ಟ್‌ಫೋನ್ ರಿಪೇರಿಯಾಗಿ ದೊರೆಯುವುದಕ್ಕೆ 24 ಗಂಟೆಗಳು ಹಿಡಿಯುತ್ತವೆ ಆದರೆ ಬ್ರೆಜಿಲ್, ಭಾರತ ಮತ್ತು ಜರ್ಮನಿಯಲ್ಲಿ ಇದೇ ರಿಪೇರಿಯು ಎಂಟು ದಿನಗಳನ್ನು ತೆಗೆದುಕೊಳ್ಳುತ್ತದೆ ಎಂಬುದಾಗಿ ಸಮೀಕ್ಷೆಯು ಕಂಡುಕೊಂಡಿದೆ.
ಯುಎಸ್‌ನಲ್ಲಿ 16-29 ವಯಸ್ಸಿನ 98%ದಷ್ಟು ಜನರು ತಮ್ಮ ಸ್ಮಾರ್ಟ್‌ಫೋನ್‌ಗಳೊಂದಿಗೆ ನಿದ್ರಿಸಿದರೆ 13% ದಷ್ಟು ಜನರು ವಾರಗಳವರೆಗೆ ತಮ್ಮ ಸ್ಮಾರ್ಟ್‌ಫೋನ್ ಅನ್ನು ಬಿಟ್ಟುಕೊಡುವುದಿಲ್ಲ ಎಂದು ಸಮೀಕ್ಷೆ ವರದಿ ಮಾಡಿದೆ.
ಇನ್ನು ಭಾರತದಲ್ಲಿ 57% ದಷ್ಟು ಭಾರತೀಯ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಬಿಟ್ಟು ಇರಲಾರರು ಎಂಬ ಮಾಹಿತಿ ದೊರೆತಿದೆ. ಫೋನ್‌ನೊಂದಿಗೆ ಇವರು ಹೆಚ್ಚು ಆಪ್ತತೆಯನ್ನು ಹೊಂದಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ.


Click it and Unblock the Notifications