ಫೋನ್ ಚಾರ್ಜಿಂಗ್ ಸಮಸ್ಯೆಯೇ? ಇಲ್ಲಿದೆ ಪರಿಹಾರ

By Shwetha
|

"ಚಾರ್ಜ್‌ನಲ್ಲಿರುವಾಗ ನಿಮ್ಮ ಫೋನ್ ಅನ್ನು ಬಳಸದಿರಿ" "ರಾತ್ರಿ ಪೂರ್ತಿ ಚಾರ್ಜ್ ಮಾಡದಿರಿ" ಮತ್ತು "ಸಂಪೂರ್ಣವಾಗಿ ಚಾರ್ಜ್ ಮುಗಿದ ನಂತರವೇ ಚಾರ್ಜ್ ಮಾಡಿ" ಹೀಗೆ ಸ್ಮಾರ್ಟ್‌ಫೋನ್ ಬ್ಯಾಟರಿಯ ಸುತ್ತ ಹೆಚ್ಚಿನ ಮಾತುಗಳು ನಡೆಯುತ್ತಲೇ ಇರುತ್ತವೆ.

ಇದನ್ನೂ ಓದಿ: ಜಿಒಎಸ್‌ಎಫ್: ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ದರಕಡಿತ

ನಿಮ್ಮ ಫೋನ್‌ನ ಬ್ಯಾಟರಿ ವಿಷಯಕ್ಕೆ ಬಂದಾಗ ನೀವು ಕೆಲವೊಂದು ನಿಯಮಗಳನ್ನು ಪಾಲಿಸುವುದು ಅತೀ ಅಗತ್ಯವಾಗಿದೆ. ಕೆಲವೊಂದು ನಿಯಮಗಳನ್ನು ನೀವು ಅಷ್ಟೇನೂ ಗಂಭೀರವಾಗಿ ತೆಗೆದುಕೊಳ್ಳದೇ ಇದ್ದರೂ ಕೆಲವು ನಿಮಯಗಳಿಗೆ ನೀವು ಪ್ರಾಶಸ್ತ್ಯವನ್ನು ನೀಡಬೇಕಾಗುತ್ತದೆ. ಹೆಚ್ಚಿನ ಸ್ಯಾಮ್‌ಸಂಗ್ ಮತ್ತು ಆಪಲ್ ಫೋನ್‌ಗಳು ಲಿಥಿಯಮ್ ಬ್ಯಾಟರಿಗಳನ್ನು ಬಳಸುತ್ತವೆ. ನೀವು ಇವುಗಳನ್ನು ಚೆನ್ನಾಗಿ ಗಮನಿಸಿದರೆ 3 ರಿಂದ 5 ವರ್ಷಗಳ ಕಾಲ ಬ್ಯಾಟರಿಯ ದೀರ್ಘತೆಯನ್ನು ಕಾಪಾಡಬಹುದು.

#1

#1

ನೀವು ಕಡಿಮೆ ಗುಣಮಟ್ಟದ ಚಾರ್ಜರ್‌ಗಳನ್ನು ನಿಮ್ಮ ಫೋನ್‌ಗೆ ಬಳಸುತ್ತಿದ್ದೀರಿ ಎಂದಾದಲ್ಲಿ ಅದನ್ನು ಈಗಲೇ ನಿಲ್ಲಿಸಿ. ಕಡಿಮೆ ಗುಣಮಟ್ಟದ ಚಾರ್ಜರ್‌ಗಳು ನಿಮ್ಮ ಫೋನ್‌ ಅನ್ನು ಹಾಳುಗೆಡವಬಹುದು.

#2

#2

ಚಾರ್ಜ್‌ನಲ್ಲಿರುವಾಗ ಫೋನ್ ಅನ್ನು ಬಳಸುವುದು ಫೋನ್ ಹಾಳಾಗಲು ಕಾರಣವಾಗುತ್ತದೆ. ನೀವು ಕಂಪೆನಿಯ ಚಾರ್ಜರ್ ಅನ್ನೇ ಬಳಸುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಫೋನ್‌ಗೆ ಯಾವುದೇ ಹಾನಿ ಸಂಭವಿಸುವುದಿಲ್ಲ.

#3

#3

ನಿಮ್ಮ ಫೋನ್ ಪೂರ್ತಿ ಚಾರ್ಜ್‌ ಆದ ನಂತರವೂ ಅದನ್ನು ಸಾಕೆಟ್‌ನಿಂದ ನೀವು ಬೇರ್ಪಡಿಸದೇ ಇದ್ದು ರಾತ್ರಿ ಪೂರ್ತಿ ಅದನ್ನು ಚಾರ್ಜ್ ಮಾಡುವುದು ಫೋನ್‌ಗೆ ಹಾನಿಯನ್ನುಂಟು ಮಾಡುತ್ತದೆ.

#4

#4

ನಿಮ್ಮ ಫೋನ್ ಮಿಶನ್ ಆಗಿರಬಹುದು ಆದರೆ ಅದು ಕೆಲವು ಬ್ರೇಕ್‌ಗಳನ್ನು ಬಯಸುತ್ತದೆ. ಬ್ಯಾಟರಿ ಲೈಫ್ ಅನ್ನು ಗರಿಷ್ಟಗೊಳಿಸಲು ನಿಮ್ಮ ಫೋನ್ ಅನ್ನು ರಾತ್ರಿ ಮಲಗುವ ವೇಳೆಯಲ್ಲಿ ಆಫ್ ಮಾಡಿ.

#5

#5

ಫೋನ್‌ನ ಚಾರ್ಜ್ ಪೂರ್ತಿ ಮುಗಿಯದ ಹೊರತು ಫೋನ್ ಅನ್ನು ಚಾರ್ಜ್ ಮಾಡದಿರಿ.

#6

#6

ಫೇಸ್‌ಬುಕ್‌ನಲ್ಲಿ ಆಗಾಗ್ಗೆ ನಿಮ್ಮನ್ನು ಎಚ್ಚರಿಸುವ ಬ್ರೇಕಿಂಗ್ ಸುದ್ದಿಗಳು ಖಂಡಿತ ಉತ್ತಮವೇ. ಅದಾಗ್ಯೂ ಇದು ನಿಮ್ಮ ಬ್ಯಾಟರಿಯ ಬಹುಪಾಲು ಭಾಗವನ್ನು ನುಂಗಿಹಾಕಬಹುದು. ಆದ್ದರಿಂದ ಇಂತಹ ಅಧಿಸೂಚನೆಗಳನ್ನು ಆಫ್ ಮಾಡಿ.

#7

#7

ನಿಮ್ಮ ಡಿವೈಸ್ ಅನ್ನು ಆಗಾಗ್ಗೆ ಹೊಸದಕ್ಕೆ ಅಪ್‌ಗ್ರೇಡ್ ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ದೀರ್ಘ ಬ್ಯಾಟರಿ ಬಾಳಿಕೆ ಉಳ್ಳ ಫೋನ್‌ಗಳು ನಿಜಕ್ಕೂ ನಿಮಗೆ ಸಹಕಾರಿಯಾಗಿರುತ್ತದೆ.

#8

#8

ನಿಮ್ಮ ಫೋನ್‌ನ ಡಿಸ್‌ಪ್ಲೇ ಸೆಟ್ಟಿಂಗ್‌ಗಳನ್ನು ಬದಲಾಯಿಸಿ. ಇದರಿಂದ ನಿಮ್ಮ ಸ್ಕ್ರೀನ್ ಟೈಮ್ ಔಟ್ ಲೋವರ್ ಸೆಟ್ಟಿಂಗ್‌ನಲ್ಲಿ ಇರುತ್ತದೆ.

#9

#9

ಆಗಾಗ್ಗೆ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡದಿರಿ. ನಿಮ್ಮ ಫೋನ್ ಬ್ಯಾಟರಿ 10% ಕ್ಕೆ ಬರುವವರೆಗೆ ಕಾಯಿರಿ ನಂತರ 100% ಚಾರ್ಜ್ ಅನ್ನು ಮಾಡಿ.

#10

#10

ಬಳಕೆಯಲ್ಲಿ ಇಲ್ಲದಿರುವಾಗ ವೈಫೈ ಅನ್ನು ಆಫ್ ಮಾಡಿ. ವೈಫೈ ನಿಮ್ಮ ಡಿವೈಸ್‌ನಲ್ಲಿ ಹೆಚ್ಚು ಪವರ್ ಅನ್ನು ಬಳಸಬಹುದು. ಹಾಗೂ ಕಡಿಮೆ ಸಿಗ್ನಲ್ ಸಾಮರ್ಥ್ಯ ಇರುವಲ್ಲಿ 4ಜಿಯನ್ನು ಆಫ್ ಮಾಡಿ. ಫೋನ್ ಸ್ಕ್ರೀನ್ ಅನ್ನು ಡಿಮ್ ಮಾಡಿ.

Best Mobiles in India

English summary
This article tells about You know smartphone battery life doesn’t last forever. Sure, the smart thing to do is to always have your charger handy. But life doesn’t always go according to plan. So if your charger’s at home and you’re not, how can you stall that powerless feeling for as long as possible?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X