ಜಗತ್ತಿನ ಕ್ರಿಯೇಟಿವ್‌ ಗ್ಯಾಜೆಟ್‌ಗಳು

Posted By:

ತಂತ್ರಜ್ಞಾನ ಲೋಕದ ಪ್ರತಿದಿನ ಸಂಶೋಧನೆ ನಡೆಯುತ್ತಲೇ ಇರುತ್ತದೆ. ಸಂಶೋಧಕರು ವಿವಿಧ ರೀತಿಯ ಸಂಶೋಧನೆಗಳನ್ನು ಆವಿಷ್ಕಾರಿಸುತ್ತಲೇ ಇರುತ್ತಾರೆ. ಆದರೆ ಈ ಸಂಶೋಧನೆಗಳಲ್ಲಿ ಕೆಲವೊಂದು ಸಂಶೋಧನೆಗಳು ಇಡೀ ವಿಶ್ವದಲ್ಲಿ ಹೊಸ ಅಲೆಯನ್ನು ಸೃಷ್ಟಿಸುತ್ತವೆ. ಈ ತಂತ್ರಜ್ಞಾನದ ಬಗ್ಗೆ ವಿಶ್ವದ ಜನ ಮಾತನಾಡಿಕೊಳ್ಳುತ್ತಾರೆ.

ಹೀಗಾಗಿ ಇಲ್ಲಿ ವಿಶ್ವದ ತಂತ್ರಜ್ಞಾನ ಲೋಕದ ಬದಲಾವಣೆಗೆ ಕಾರಣವಾದ ಕೆಲವು ಕ್ರಿಯೇಟಿವ್‌ ಸಂಶೋಧನೆಗಳಿವೆ. ಇವುಗಳಲ್ಲಿ ಕೆಲವು ಈಗಾಗಲೇ ಮಾರುಕಟ್ಟೆಯಕಲ್ಲಿ ಲಭ್ಯವಿದ್ದರೆ ಕೆಲವು ಇನ್ನಷ್ಟೇ ಮಾರುಕಟ್ಟೆಗೆ ಬರಬೇಕಿದೆ. ಹೀಗಾಗಿ ಇಲ್ಲಿ ಆ ಎಲ್ಲಾ ಕ್ರಿಯೇಟಿವ್‌ ಸಂಶೋಧನೆಗಳ ಮಾಹಿತಿಯಿದ್ದು, ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಕ್‌ಮನ್‌‌

ವಾಕ್‌ಮನ್‌‌

ಜಗತ್ತಿನ ಕ್ರಿಯೇಟಿವ್‌ ಗ್ಯಾಜೆಟ್‌ಗಳು


ಸಂಗೀತಾವನ್ನು ಕೇವಲ ಟೇಪ್‌ ರೆಕಾರ್ಡರ್‌ ಮತ್ತು ರೇಡಿಯೋದಲ್ಲಿ ಮಾತ್ರ ಆಲಿಸಬಹುದು ಎಂದು ತಿಳಿದಿದ್ದ ಜನರಲ್ಲಿ ಸಂಗೀತಾವನ್ನು ನಡೆದಾಡಿಕೊಂಡು ಆಲಿಸಬಹುದು ಎಂದು ತೋರಿಸಿಕೊಟ್ಟ ಸಾಧನ. ಮೊದಲು ಇದಕ್ಕೆ ವಾಕ್‌ಮನ್‌ ಎಂದು ಕರೆಯದೆ ಸ್ಟೀರಿಯೋ ಬೆಲ್ಟ್‌ ಎಂದು ಕರೆಯುತ್ತಿದ್ದರು. 1972ರಲ್ಲಿ ಜರ್ಮನಿ ಮೂಲದ ಆಂಡ್ರಿಯಾಸ್ ಪಾವೆಲ್ ಈ ಸ್ಟೀರಿಯೋ ಬೆಲ್ಟ್‌ನ್ನ ಕಂಡುಹಿಡಿದಿದ್ದರು. ನಂತರ ಸೋನಿ ಕಂಪೆನಿ ಸ್ಟೀರಿಯೋ ಬೆಲ್ಟ್‌ ಮತ್ತಷ್ಟು ಅಭಿವೃದ್ಧಿ ಪಡಿಸಿ ವಾಕ್‌ಮನ್‌ ತಯಾರಿಸಿತು.

 ಗೂಗಲ್‌ ಗ್ಲಾಸ್‌

ಗೂಗಲ್‌ ಗ್ಲಾಸ್‌

ಜಗತ್ತಿನ ಕ್ರಿಯೇಟಿವ್‌ ಗ್ಯಾಜೆಟ್‌ಗಳು


ಕನ್ನಡಕದಲ್ಲಿ ಮಿನಿ ಕಂಪ್ಯೂಟರ್‌ ಎಂದು ಕರೆಯಬಹುದಾದ ಗೂಗಲ್‌ ಗ್ಲಾಸ್‌ನ್ನು ಈ ವರ್ಷ್‌ದ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ಈ ಗ್ಲಾಸ್‌ ಧರಿಸಿಕೊಂಡು ಇಂಟರ್‌ನೆಟ್‌ ವೀಕ್ಷಿಸಬಹುದು, ಫಿಲ್ಮ್‌ ನೋಡ ಬಹುದು. ಈ ಗ್ಲಾಸ್‌ ಬಗ್ಗೆ ಸಂಪೂರ್ಣ‌ ಮಾಹಿತಿ ಓದಲು ಇಲ್ಲಿ ಕ್ಲಿಕ್‌ ಮಾಡಿ: ಗೂಗಲ್‌ ಗ್ಲಾಸ್‌

ಆಪಲ್‌ ಐಫೋನ್‌

ಆಪಲ್‌ ಐಫೋನ್‌

ಜಗತ್ತಿನ ಕ್ರಿಯೇಟಿವ್‌ ಗ್ಯಾಜೆಟ್‌ಗಳು


ಆಪಲ್‌ ಐಫೋನ್‌ ಬಂದ ಮೇಲೆ ಸ್ಮಾರ್ಟ್‌ಫೋನ್‌ಗಳ ವಿನ್ಯಾಸ ಬದಲಾಯಿತು. ಟಚ್‌ಸ್ಕ್ರೀನ್‌ ಕಲ್ಪನೆಯನ್ನು ಮತ್ತಷ್ಟು ಸುಧಾರಿಸಿ ಬಿಡುಗಡೆ ಮಾಡಿದ ಐಫೋನ್‌ನಿಂದಾಗಿ ‌ ವಿಶ್ವದ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಬದಲಾಯಿತು.

ಆಪಲ್‌ ಸಿರಿ

ಆಪಲ್‌ ಸಿರಿ

ಜಗತ್ತಿನ ಕ್ರಿಯೇಟಿವ್‌ ಗ್ಯಾಜೆಟ್‌ಗಳು


ಧ್ವನಿಯನ್ನು ಗ್ರಹಿಸಿ ಕೆಲಸ ಮಾಡುವ ಅಪ್ಲಿಕೇಶನ್‌ 'ಸಿರಿ' ಬಂದ ಮೇಲೆ ಆಪಲ್‌ ಉತ್ಪನ್ನಗಳು ಸೇರಿದಂತೆ ಬೇರೆ ಕಂಪೆನಿಗಳ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ನಲ್ಲಿ ಹೊಸ ಅಲೆ ಸೃಷ್ಟಿಯಾಯಿತು.

ಗೂಗಲ್‌ ಕಾರ್‌

ಗೂಗಲ್‌ ಕಾರ್‌

ಜಗತ್ತಿನ ಕ್ರಿಯೇಟಿವ್‌ ಗ್ಯಾಜೆಟ್‌ಗಳು


ಚಾಲಕ ರಹಿತ ಕಾರ್‌ನ್ನು ಟಯೊಟಾ ಸಹಯೋಗದೊಂದಿಗೆ ಗೂಗಲ್‌ ಕಳೆದ ವರ್ಷ‌ ಅಭಿವೃದ್ಧಿಪಡಿಸಿದೆ. ಅಮೆರಿಕದಲ್ಲಿ ಗೂಗಲ್‌ ಲೆಸ್ಸ್ ಕಾರನ್ನು ರಸ್ತೆಯಲ್ಲಿ ಚಲಾಯಿಸಲು ಪರವಾನಿಗೆ ದೊರಕಿದೆ. ಇಬ್ಬರು ಕಡ್ಡಾಯವಾಗಿ ಪ್ರಯಾಣಿಸಬೇಕು ಎಂದು ಪರವಾನಿಗೆ ನೀಡುವಾಗ ಸ್ಪಷ್ಟವಾಗಿ ತಿಳಿಸಲಾಗಿದೆ. ಯಾಕೆಂದರೆ ಎಲ್ಲಾದರೂ ಚಾಲಕ ರಹಿತವಾಹನದಲ್ಲಿ ಏನಾದರೂ ತೊಂದರೆ ಉಂಟಾದರೆ ಹಿಡಿತಕ್ಕೆ ತೆಗೆದುಕೊಳ್ಳಲು ಕಾರಿನೊಳಗೆ ಜನರಿರುವುದು ಕಡ್ಡಾಯ ಸರಕಾರ ಹೇಳಿದೆ.

ಫ್ಲೆಕ್ಸಿಬಲ್‌ ಸ್ಕ್ರೀನ್‌ ಸ್ಮಾರ್ಟ್‌‌ಫೋನ್‌:

ಫ್ಲೆಕ್ಸಿಬಲ್‌ ಸ್ಕ್ರೀನ್‌ ಸ್ಮಾರ್ಟ್‌‌ಫೋನ್‌:

ಜಗತ್ತಿನ ಕ್ರಿಯೇಟಿವ್‌ ಗ್ಯಾಜೆಟ್‌ಗಳು

ನಾವು ಈಗ ಬಳಸುತ್ತಿರುವ ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್ ಮುಂದಿನ ದಿನಗಳಲ್ಲಿ ಹಳೆಯದಾಗಲಿದೆ. ಮಂದೆ ಈ ಸ್ಮಾರ್ಟ್‌ಫೋನ್‌ ಮೀರಿಸುವ ಫ್ಲೆಕ್ಸಿಬಲ್‌ ಸ್ಕ್ರೀನ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರಲಿದೆ. ಕೋರಿಯದ ಎಲೆಕ್ಟ್ರಾನಿಕ್‌ ಕಂಪೆನಿ ಎಲ್‌ಜಿ ಹೊಸ ಫ್ಲೆಕ್ಸಿಬಲ್‌ ಸ್ಕ್ರೀನ್‌ ಹೊಂದಿರುವ ಸ್ಮಾರ್ಟ್‌ಫೋನ್‌ ತಯಾರಿಸಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot