4000mAh ಬ್ಯಾಟರಿಯ ಇಂಟೆಕ್ಸ್ ಕ್ಲೌಡ್ ಪವರ್ ಪ್ಲಸ್ ರೂ 8,599 ಕ್ಕೆ

Written By:

ಇಂಟೆಕ್ಸ್ ಹೊಸ ಬಜೆಟ್ ಕ್ಲೌಡ್ ಸಿರೀಸ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು, ಕ್ಲೌಡ್ ಪವರ್ ಪ್ಲಸ್, ಬೆಲೆ ರೂ 8,599 ಆಗಿದೆ. ಸ್ನ್ಯಾಪ್‌ಡೀಲ್‌ನಲ್ಲಿ ಈ ಫೋನ್ ವಿಶೇಷವಾಗಿ ಲಭ್ಯವಿದೆ. ಇಂಟೆಕ್ಸ್ ಕ್ಲೌಡ್ ಪವರ್ ಪ್ಲಸ್ ಉಚಿತ ಫ್ಲಿಪ್‌ ಕವರ್‌ನೊಂದಿಗೆ ಬಂದಿದ್ದು ಕವರ್ ಬೆಲೆ ರೂ 599 ಆಗಿದೆ.

4000mAh ಬ್ಯಾಟರಿಯ ಇಂಟೆಕ್ಸ್ ಕ್ಲೌಡ್ ಪವರ್ ಪ್ಲಸ್ ರೂ 8,599 ಕ್ಕೆ

ಇಂಟೆಕ್ಸ್ ಆಕ್ವಾ ಪವರ್ ಮತ್ತು ಆಕ್ವಾ ಪವರ್ ಪ್ಲಸ್ ನಂತೆಯೇ ಕ್ಲೌಡ್ ಪವರ್ ಪ್ಲಸ್‌ನಲ್ಲಿ ದೊಡ್ಡದಾದ 4000mAh ಬ್ಯಾಟರಿ ಇದ್ದು ಇದು 17 ಗಂಟೆಗಳ ಟಾಕ್ ಟೈಮ್ ಅನ್ನು ನೀಡುತ್ತಿದೆ ಮತ್ತು 1176 ಗಂಟೆಗಳ ಸ್ನ್ಯಾಂಡ್ ಬೈ ಸಮಯದಲ್ಲಿ ತೀರಲಿದೆ. ಇತರ ಹೆಚ್ಚು ಬ್ಯಾಟರಿ ಪವರ್ ಉಳ್ಳ ಆಂಡ್ರಾಯ್ಡ್ ಫೋನ್‌ಗಳಿಗೆ ಇಂಟೆಕ್ಸ್ ಕ್ಲೌಡ್ ಪವರ್ ಪ್ಲಸ್ ಸ್ಪರ್ಧಿಯಾಗಲಿದೆ.

ಓದಿರಿ: ಫೋನ್ ಖರೀದಿಯೇ ಈ ಫೋನ್‌ಗಳು ನಿಮ್ಮ ಪಟ್ಟಿಯಲ್ಲಿವೆಯೇ?

ಇನ್ನು ಫೋನ್‌ನಲ್ಲಿ 2 ಜಿಬಿ RAM ಅನ್ನು ಕಾಣಬಹುದಾಗಿದ್ದು, ಈ ಬೆಲೆಯಲ್ಲಿ ಉತ್ತಮ RAM ಹೊಂದಿರುವುದು ಫೋನ್‌ನ ಧನಾತ್ಮಕ ಅಂಶವಾಗಿದೆ. ಡ್ಯುಯಲ್ ಸಿಮ್ ಅನ್ನು ಹೊಂದಿರುವ ಸ್ಮಾರ್ಟ್‌ಫೋನ್‌ನಲ್ಲಿ ಆಂಡ್ರಾಯ್ಡ್ 5.0 ಲಾಲಿಪಪ್ ಚಾಲನೆಯಾಗುತ್ತಿದೆ.

ಓದಿರಿ: ಗ್ಯಾಲಕ್ಸಿ ನೋಟ್ 4 ಡಿವೈಸ್‌ ವೇಗಗೊಳಿಸಲು ಟಾಪ್ ಸಲಹೆಗಳು

ಫೋನ್ 5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಪೂರ್ಣ ಲ್ಯಾಮಿನೇಶನ್ ತಂತ್ರಾಂಶವನ್ನು ಇದು ಹೊಂದಿದೆ. ಫೋನ್‌ನಲ್ಲಿ 1.3GHz ಕ್ವಾಡ್ ಕೋರ್ ಮೀಡಿಯಾಟೆಕ್ (MT6582M) ಪ್ರೊಸೆಸರ್ ಇದ್ದು 2 ಜಿಬಿ RAM ಅನ್ನು ಫೋನ್ ಹೊಂದಿದೆ. ಕ್ಲೌಡ್ ಪವರ್ ಪ್ಲಸ್ ಸ್ಮಾರ್ಟ್‌ಫೋನ್ 16 ಜಿಬಿ ಆಂತರಿಕ ಸಂಗ್ರಹವನ್ನು ಹೊಂದಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು. 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಡಿವೈಸ್‌ನಲ್ಲಿದ್ದು 5 ಮೆಗಾಪಿಕ್ಸೆಲ್ ಮುಂಭಾಗದಲ್ಲಿದೆ. ಫೋನ್ 3ಜಿ ಸೌಲಭ್ಯವನ್ನು ಮಾತ್ರ ಪಡೆದುಕೊಂಡಿರುವುದಲ್ಲದೆ, GPRS/ EDGE, ವೈಫೈ, 802.11 b/g/n, GPS/ A-GPS, ಮೈಕ್ರೋ-ಯುಎಸ್‌ಬಿ, ಬ್ಲ್ಯೂಟೂತ್ ಸಂಪರ್ಕವನ್ನು ಡಿವೈಸ್ ಹೊಂದಿದೆ. ಫೋನ್ ಕಪ್ಪು ಬೆಳ್ಳಿ ಬಣ್ಣ, ಬಿಳಿ ಶಾಂಪೇನ್ ಬಣ್ಣದಲ್ಲಿ ಲಭ್ಯವಿದೆ.

English summary
Intex has launched a new budget Cloud-series smartphone, the Cloud Power+, priced at Rs. 8,599. The smartphone is available online exclusively via Snapdeal. The Intex Cloud Power+ comes with a free flip cover worth Rs. 599 in the box.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot