Home
ಸುದ್ದಿಜಾಲ

iQOO: ಬರಲಿವೆ 2 ರಗಡ್ ಫೋನ್; 7600mAh ಬ್ಯಾಟರಿ, 50MP ಕ್ಯಾಮೆರಾ.. ಲಾಂಚ್ ಯಾವಾಗ?

ಬಹುನಿರೀಕ್ಷಿತ ಐಕ್ಯೂ ನಿಯೋ 10R (iQOO Neo 10R) ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಇದನ್ನು 26,999 ರೂ.ಗಳ ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗಿದೆ. ಇದೀಗ, ಮತ್ತೆ ಎರಡು ಹೊಸ ಫೋನ್‌ಗಳನ್ನು ಲಾಂಚ್ ಮಾಡಲು ಸಜ್ಜಾಗಿದೆ. ಹೌದು, ಕಂಪನಿಯು ತನ್ನ ಹೊಸ ಸ್ಮಾರ್ಟ್‌ಫೋನ್‌ಗಳಾದ ಐಕ್ಯೂ Z10 (iQOO Z10) ಮತ್ತು ಐಕ್ಯೂ Z10 ಟರ್ಬೊ (iQOO Z10 Turbo) ಫೋನನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಬನ್ನಿ, ಈ ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ವಿಶೇಷತೆಗಳನ್ನು ತಿಳಿಯೋಣ.

ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ಈ ಟರ್ಬೊ ಫೋನಿನ ಪ್ರಮುಖ ವಿಶೇಷಣಗಳನ್ನು ಹಂಚಿಕೊಂಡಿದೆ. ಇದರಲ್ಲಿ ಡಿಸ್ಪ್ಲೇ, ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ ಮತ್ತು ಚಾರ್ಜಿಂಗ್‌ಗೆ ಸಂಬಂಧಿಸಿದ ಪ್ರಮುಖ ಮಾಹಿತಿ ಬಹಿರಂಗಪಡಿಸಿದೆ. ಅದರಂತೆ ಸ್ಟ್ಯಾಂಡರ್ಡ್ ಮಾದರಿಯು ಡೈಮೆನ್ಸಿಟಿ 8400 ಪ್ರೊಸೆಸರ್ ಹೊಂದಿರಲಿದೆ. ಹಾಗೆಯೇ ಟರ್ಬೊ ರೂಪಾಂತರವು ಶಕ್ತಿಯುತ ಸ್ನಾಪ್‌ಡ್ರಾಗನ್ 8s ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಈ ಮೊಬೈಲ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ.

iQOO: ಬರಲಿವೆ 2 ರಗಡ್ ಫೋನ್; 7600mAh ಬ್ಯಾಟರಿ, 50MP ಕ್ಯಾಮೆರಾ.. ಲಾಂಚ್ ಯಾವಾಗ

ಐಕ್ಯೂ Z10 ಟರ್ಬೊ ವೈಶಿಷ್ಟ್ಯಗಳು (ಸೋರಿಕೆ)

ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ಈ ಫೋನಿನ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ, ಬ್ಯಾಟರಿ ಮತ್ತು ಚಾರ್ಜಿಂಗ್ ವಿವರಗಳು ಐಕ್ಯೂ Z10 ಟರ್ಬೊ ಆಗಿರಬಹುದು ಎಂದು ಹೇಳಲಾಗುತ್ತಿದೆ. ವರದಿಯ ಪ್ರಕಾರ, ಐಕ್ಯೂ Z10 ಟರ್ಬೊ ಮೊಬೈಲ್ ಇನ್ ಸ್ಕ್ರೀನ್ ಶಾರ್ಟ್ ಫೋಕಸ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಒಳಗೊಂಡಿರಲಿದೆ. ಇದು ಸುರಕ್ಷತೆ ಮತ್ತು ಅನುಕೂಲತೆ ಎರಡನ್ನೂ ಹೆಚ್ಚಿಸುತ್ತದೆ. ಇದಲ್ಲದೆ, ಈ ಫೋನನ ಚೌಕಟ್ಟನ್ನು ಪ್ಲಾಸ್ಟಿಕ್‌ನಿಂದ ಮಾಡಲಾಗುತ್ತದೆ. ಹಾಗೆಯೇ ಈ ಮೊಬೈಲ್ ಹಗುರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ಸುದ್ದಿ ಓದಿದ್ದೀರಾ?: ವಾವ್..! ಇನ್ಮುಂದೆ ನಂಬರ್ ಸೇವ್ ಮಾಡಂಗಿಲ್ಲ.. ನೇರವಾಗಿ Whatsapp Call ಮಾಡಬಹುದು.. ಈ ಟ್ರಿಕ್ ಗೊತ್ತಾ?

ಡಿಸ್ಪ್ಲೇ ವಿವರ

ಐಕ್ಯೂ Z10 ಟರ್ಬೊ ಸ್ಮಾರ್ಟ್‌ಫೋನ್ 6.78 ಇಂಚಿನ ಡಿಸ್ಪ್ಲೇ ಹೊಂದಿರುತ್ತದೆ. ಇದು ಫ್ಲಾಟ್ OLED LTPS ಪ್ಯಾನೆಲ್‌ನಲ್ಲಿ ಮಾಡಿರುವ ಡಿಸ್ಪ್ಲೇ ಆಗಿದೆ. ಇದು 1.5K ರೆಸಲ್ಯೂಶನ್ ಬೆಂಬಲ ಪಡೆದಿದೆ. ಈ ಹೆಚ್ಚಿನ ರೆಸಲ್ಯೂಶನ್ ಡಿಸ್ಪ್ಲೇಯು ಉತ್ತಮ ದೃಶ್ಯ ಅನುಭವ ಮತ್ತು ಉತ್ತಮ ಬ್ರೈಟ್‌ನೆಸ್ ಒದಗಿಸುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಐಕ್ಯೂ Z10 ಟರ್ಬೊ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 8400 ಪ್ರೊಸೆಸರ್ ಹೊಂದಿರುವ ಸಾಧ್ಯತೆಯಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಸುಗಮ ಬಹುಕಾರ್ಯಕ ಅನುಭವವನ್ನು ನಿಡುತ್ತದೆ. ಈ ಪ್ರೊಸೆಸರ್ ಅನ್ನು ಗೇಮಿಂಗ್ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಇದು ಆಂಡ್ರಾಯ್ಡ್‌ 15 ಓಎಸ್ ಹೊಂದಿರುತ್ತದೆ.

ಕ್ಯಾಮೆರಾ ಸೆಟಪ್

ಐಕ್ಯೂ Z10 ಟರ್ಬೊ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿರುತ್ತದೆ ಎಂದು ತಿಳಿದುಬಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಒಳಗೊಂಡಿದೆ. ನೀವು, ಈ ಫೋನಿನಲ್ಲಿ ಉತ್ತಮ ಫೋಟೋಗಳು ಮತ್ತು ವಿಡಿಯೋ ರೆಕಾರ್ಡಿಂಗ್ ಮಾಡಬಹುದು.

ಬ್ಯಾಟರಿ ಮತ್ತು ಚಾರ್ಜಿಂಗ್

ಐಕ್ಯೂ Z10 ಟರ್ಬೊ ಸ್ಮಾರ್ಟ್‌ಫೋನ್ 7,600mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬರಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಇದು 90W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿರುತ್ತದೆ. ಈ ಬ್ಯಾಟರಿಯು ದೀರ್ಘಾವಧಿ ಬ್ಯಾಕಪ್ ಹಾಗೂ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಒದಗಿಸುತ್ತದೆ.

Best Mobiles in India

English summary
iQOO Z10 Turbo Features and key specifications leaked: what to expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+