ಇಸ್ರೋ ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿ

By Ashwath
|

ಕಳೆದ ನವೆಂಬರ್‌ನಲ್ಲಿ ಕಡಿಮೆ ವೆಚ್ಚದಲ್ಲಿ ಮಂಗಳಯಾನ ಕೈಗೊಂಡು ವಿಶ್ವದ ಬಲಿಷ್ಟ ರಾಷ್ಟ್ರಗಳ ವಿಜ್ಞಾನಿಗಳನ್ನು ಚಕಿತಗೊಳಿಸಿದ್ದ ಭಾರತದ ಇಸ್ರೋ ವಿಜ್ಞಾನಿಗಳು ಈಗ ದೇಶೀಯ ನಿರ್ಮಿ‌ತ ಕ್ರಯೋಜೆನಿಕ್‌‌ ಇಂಧನದಿಂದ ಚಾಲೂಗೊಳ್ಳುವ ಪಿಎಸ್‌ಎಲ್‌‌ವಿ ಡಿ-5 ರಾಕೆಟ್‌ನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಮತ್ತೊಮ್ಮೆ ಚಕಿತಗೊಳಿಸಿದ್ದಾರೆ.

49.13 ಮೀಟರ್ ಉದ್ದ,1,982 ಕೆ.ಜಿ. ಜಿಸ್ಯಾಟ್ 14 ಸಂವಹನ ಉಪಗ್ರಹ ಹೊತ್ತ ಜಿಎಸ್ ಎಲ್‌‌ವಿ ಡಿ5 ರಾಕೆಟ್ ಜನವರಿ 5 ಸಂಜೆ 4:18ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ.

ಕಳೆದ ಮೂರು ವರ್ಷಗಳಲ್ಲಿ ಎರಡು ಸಲ ಭಾರೀ ತೂಕದ ರಾಕೆಟ್ ಉಡಾವಣೆ ವಿಫಲವಾಗಿತ್ತು. ಆದರೆ,ಈ ಬಾರಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಗಳು ಉಪಗ್ರಹವನ್ನು ಉಡಾವಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರೀ ತೂಕದ ಉಪಗ್ರಹಗಳನ್ನು ಉಡಾವಣೆ ಮಾಡಲು ಜಿಎಸ್‌ಎಲ್‌ವಿ ರಾಕೆಟ್‌‌ಗಳನ್ನು ಬಳಸಲಾಗುತ್ತಿದ್ದು,ಈ ರಾಕೆಟ್‌ ಉಡಾವಣೆ ಮಾಡಲು ಅತಿಯಾಗಿ ತಂಪಾಗಿಸಿದ ಕ್ರಯೋಜೆನಿಕ್‌ ದ್ರವ ಇಂಧನ ಬಳಸಲಾಗುತ್ತದೆ. ಈ ಕ್ರಯೋಜೆನಿಕ್‌ ತಂತ್ರಜ್ಞಾನವನ್ನು ಭಾರತ ಅಭಿವೃದ್ಧಿ ಪಡಿಸದ ಕಾರಣದೈತ್ಯ ಗಾತ್ರದ ಉಪಗ್ರಹಗಳನ್ನು ಉಡಾವಣೆಗೊಳಿಸಲು ಇಸ್ರೋ ಇಲ್ಲಿವರೆಗೆ ವಿದೇಶಿ ಬಾಹ್ಯಕಾಶ ಸಂಸ್ಥೆಗಳನ್ನು ನೆಚ್ಚಿಕೊಂಡಿತ್ತು.ಈಗ ಜಿಎಸ್‌ಎಲ್‌ವಿ ಡಿ5 ಉಡಾವಣೆ ಮಾಡುವ ಮೂಲಕ 1.5 ಟನ್‌ ತೂಕದ ಉಪಗ್ರಹವನ್ನು ಹಾರಿಸುವ ಸ್ವಾವಲಂಬನೆ ಪಡೆದಿದೆ. ಜೊತೆಗೆ ಬೇರೆ ದೇಶಗಳ ಉಪಗ್ರಹಗಳನ್ನು ಮುಂದಿನ ದಿನಗಳಲ್ಲಿ ಉಡಾವಣೆ ಮಾಡುವ ಮೂಲಕ ವಾಣಿಜ್ಯ ಲಾಭವನ್ನು ಇಸ್ರೋ ಪಡೆದುಕೊಳ್ಳಲಿದೆ.

ಇದನ್ನೂ ಓದಿ: ಉಡಾವಣೆಯಾದ ಕೆಲವೇ ಕ್ಷಣದಲ್ಲಿ ರಷ್ಯಾ ರಾಕೆಟ್‌ ಸ್ಪೋಟ

ಇಸ್ರೋ ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿ

ಇಸ್ರೋ ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿ

1.5 ಟನ್‌ ತೂಕದ ಉಪಗ್ರಹವನ್ನು ಕಕ್ಷೆಗೆ ಸೇರಿಸಲು ಬಳಸುತ್ತಿದ್ದ ಜಿಎಸ್‌ಎಲ್‌ವಿ ರಾಕೆಟ್‌ನ್ನು ವಿದೇಶಿ ಬಾಹ್ಯಕಾಶ ಸಂಸ್ಥೆ ಉಡಾವಣೆ ಮಾಡಿದ್ದರೆ,500 ಕೋಟಿ ಹೊರೆ ಇಸ್ರೋಗೆ ಬೀಳುತಿತ್ತು.ಆದರೆ ಇಸ್ರೋ ಈಗ 1,980 ಸಾವಿರ ತೂಕದ ಉಪಗ್ರಹವನ್ನು 350 ಕೋಟಿ ರೂಪಾಯಿ ವೆಚ್ಚದಲ್ಲಿ ಉಡಾವಣೆ ಮಾಡಿದೆ. ನೂರಾರು ಕೋಟಿ ರೂಪಾಯಿ ಉಳಿಸುವ ಜೊತೆಗೆ ಜೊತೆಗೆ ಇನ್ನು ಮುಂದೆ ಬೇರೆ ದೇಶಗಳ ದೊಡ್ಡ ಗಾತ್ರದ ಉಪಗ್ರಹಗಳನ್ನು ಉಡಾವಣೆ ಮಾಡಿ ವಾಣಿಜ್ಯ ಲಾಭವನ್ನು ಇಸ್ರೋ ಪಡೆದುಕೊಳ್ಳಲಿದೆ.

ಇಸ್ರೋ ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿ

ಇಸ್ರೋ ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿ


2010ರ ಏಪ್ರಿಲ್‌ನಲ್ಲಿ ಸ್ವದೇಶಿ ಕ್ರಯೋಜೆನಿಕ್ ಎಂಜಿನ್‌ನ ಪ್ರಥಮ ಪರೀಕ್ಷೆಯಲ್ಲಿ ಇಸ್ರೋ ವಿಫಲವಾಗಿತ್ತು. ಬಳಿಕ 2013ರ ಆಗಸ್ಟ್‌ನಲ್ಲಿ ಇಸ್ರೋ ಮತ್ತೊಮ್ಮೆ ಪರೀಕ್ಷಿಸಿತ್ತು. ಈ ಸಂದರ್ಭಲ್ಲಿ ಜಿಎಸ್‌ಎಲ್‌ವಿ-ಡಿ5 ರಾಕೆಟ್ ಉಡ್ಡಯನ ಇಂಧನ ಸೋರಿಕೆಯಿಂದ ಸ್ಥಗಿತಗೊಂಡಿತ್ತು.ಆದರೆ ಮೂರನೇ ಬಾರಿ ದೇಶೀಯ ನಿರ್ಮಿ‌ತ ಕ್ರಯೋಜೆನಿಕ್‌‌ ಇಂಧನದಿಂದ ಚಾಲೂಗೊಳ್ಳುವ ಪಿಎಸ್‌ಎಲ್‌‌ವಿ ಡಿ-5 ರಾಕೆಟ್‌ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಇಸ್ರೋ ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿ

ಇಸ್ರೋ ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿ


ಕ್ರಯೋಜೆನಿಕ್ ಎಂಜಿನ್ ಬಳಕೆಯಲ್ಲಿ ಅಮೆರಿಕ, ರಷ್ಯಾ, ಜಪಾನ್, ಚೀನಾ, ಫ್ರಾನ್ಸ್ ದೇಶಗಳು ಈಗಾಗಲೇ ಯಶಸ್ಸು ಸಾಧಿಸಿದೆ. ಭಾರತ ಆರನೇ ರಾಷ್ಟ್ರವಾಗಿ ಈ ಸಾಲಿಗೆ ಸೇರ್ಪಡೆಯಾಗಿದೆ.

ಇಸ್ರೋ ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿ

ಇಸ್ರೋ ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿ


ಅಮೆರಿಕದ ಕಿರಿಕ್ಕೆ ಕ್ರಯೋಜೆನಿಕ್‌ ಎಂಜಿನ್‌ ಅಭಿವೃದ್ಧಿಗೆ ಮುಖ್ಯ ಪ್ರೇರಣೆ. ಹೌದು ಭಾರತ ಕ್ರಯೋಜೆನಿಕ್‌ ಎಂಜಿನ್‌ ಅಭಿವೃದ್ಧಿ ಪಡಿಸದ ಕಾರಣ 1980ರಲ್ಲಿಈ ತಂತ್ರಜ್ಞಾನಕ್ಕಾಗಿ ಹುಡುಕಾಟ ನಡೆಸುತ್ತಿತ್ತು.ಈ ಸಂದರ್ಭದಲ್ಲಿ ಅಮರಿಕ ಈ ತಂತ್ರಜ್ಞಾನವನ್ನು ನೀಡುವುದಾಗಿ ಹೇಳಿತ್ತು.ಆದರೆ ಬೆಲೆ ದುಬಾರಿಯಾದ ಕಾರಣ ಭಾರತದ ಖರೀದಿಸಲು ಹಿಂದೇಟು ಹಾಕಿತ್ತು.ನಂತರ ರಷ್ಯಾ ಕಡಿಮೆ ಬೆಲೆಯಲ್ಲಿ ನೀಡುವುದಾಗಿ ಹೇಳಿ ಏಳು ಎಂಜಿನ್‌ಗಳನ್ನು ಭಾರತಕ್ಕೆ ನೀಡಿತ್ತು.ನಂತರ 1993ರಲ್ಲಿ ಅಮೆರಿಕದ ಒತ್ತಡಕ್ಕೆ ಮಣಿದು ರಷ್ಯಾ ಸಹ ಕ್ರಯೋಜನಿಕ್‌‌ ಎಂಜಿನ್‌‌ ತಂತ್ರಜ್ಞಾನದ ವರ್ಗಾವಣೆ ಒಪ್ಪಂದದಿಂದ ಹಿಂದೆ ಸರಿಯಿತು.

ಇಸ್ರೋ ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿ

ಇಸ್ರೋ ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿ


ಭಾರತದ ಬಾಹ್ಯಾಕಾಶ ಕೇತ್ರದ ಅಭಿವೃದ್ಧಿಗೆ ಅಮೆರಿಕ ಅಡ್ಡಗಾಲು ಹಾಕುವುದು ತಿಳಿಯುತ್ತಿದ್ದಂತೆ ಭಾರತದ ಕ್ರಯೋಜೆನಿಕ್‌ ಎಂಜಿನ್‌ ಅಭಿವೃದ್ಧಿ ತಯಾರಿಸಲು ಸಂಶೋಧನೆ ನಡೆಸಲು ಆರಂಭಿಸಿತ್ತು.1991ರಲ್ಲಿ ನಂಬಿ ನಾರಾಯಣನ್‌ ನೇತೃತ್ವದಲ್ಲಿ ಇಸ್ರೋ ಕ್ರಯೋಜೆನಿಕ್‌ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ಮುಂದಾಯಿತು. ನಂಬಿ ನರಾಯಣನ್‌ ಸಂಶೋಧನೆ ನಡೆಸುತ್ತಿರುವಾಗಲೇ 1994ರಲ್ಲಿ ಭಾರತದ ಬಾಹ್ಯಾಕಾಶ ಯೋಜನೆಗಳ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾದರು. 1996ರಲ್ಲಿ ಸುಪ್ರೀಂಕೋರ್ಟ್‌ ಈ ಪ್ರಕರಣವನ್ನು ವಜಾ ಮಾಡಿತು.

ಇಸ್ರೋ ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿ

ಇಸ್ರೋ ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿ


ಪಿಎಸ್‌ಎಲ್‌ವಿ ಸಾವಿರ ಕೆಜಿವರೆಗೆನ ಉಪಗ್ರಹವನ್ನು ಮಾತ್ರ ಹೊತ್ತೊಯ್ಯಬಲ್ಲುದು.ಜೊತೆಗೆ ಇದರ ವೆಚ್ಚವು ದುಬಾರಿ. ಆದರೆ ಜಿಎಎಸ್‌ಎಲ್‌ವಿ ಐದು ಸಾವಿರ ಕೆಜಿವರೆಗಿನ ದವರೆಗಿನ ಉಪಗ್ರಹವನ್ನು ಹೊತ್ತೊಯ್ಯುವ ಸಾಮರ್ಥ್ಯ ಪಡೆದಿದೆ. ವೆಚ್ಚವು ಕಡಿಮೆ,ಜೊತೆಗೆ ಮುಂದಿನ ದಿನಗಳಲ್ಲಿ ಭಾರತದ ಅನ್ಯ ಗ್ರಹಗಳ ಅನ್ವೇಷಣೆ ಮತ್ತು ಮಂಗಳಯಾನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಎತ್ತರದ ಕಕ್ಷೆಯಲ್ಲಿ ಉಪಗ್ರಹ ಕೂರಿಸಬೇಕಾದರೆ ಜಿಎಸ್‌ಎಲ್‌ವಿ ತುಂಬಾ ಸಹಕಾರಿಯಾಗಲಿದೆ.

PSLV :Polar Satellite Launch Vehicle
GSLV:Geosynchronous Satellite Launch Vehicle

ಇಸ್ರೋ ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿ

ಇಸ್ರೋ ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿ


ಅನ್ಯ ಗ್ರಹಗಳ ಅನ್ವೇಷಣೆ ಮತ್ತು ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದು ಸೇರಿದಂತೆ ಭಾರತದ ಮಹತ್ವಾಕಾಂಕ್ಷೆಯ ಯೋಜನೆಗಳು ಜಿಎಸ್ಎಲ್‌ವಿ ಯೋಜನೆಯ ಯಶಸ್ಸನ್ನು ನೆಚ್ಚಿಕೊಂಡಿತ್ತು. ಜಿಎಸ್‌ಎಲ್‌ವಿ ಉಡಾವಣೆಯಿಂದ ಯಶಸ್ವಿಯಾದ ಹಿನ್ನೆಲೆಯಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಹತ್ವದ ಮತ್ತೊಂದು ಮೈಲಿಗಲ್ಲನ್ನು ಬರೆದಿದೆ.

 ಬಾಹ್ಯಕಾಶದಲ್ಲಿ ಇಸ್ರೋ ಸಾಧನೆ:ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿ

ಬಾಹ್ಯಕಾಶದಲ್ಲಿ ಇಸ್ರೋ ಸಾಧನೆ:ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿ


ಜಿಸ್ಯಾಟ್‌- 14 ಉಪಗ್ರಹ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X