ಮಂಗಳ ಗ್ರಹದಲ್ಲಿ ಸಿಕ್ಕಿತು ನೀರು!

By Ashwath

ಮಂಗಳ ಗ್ರಹದಲ್ಲಿ ನೀರು ಸಿಕ್ಕಿದೆ. ಮಂಗಳ ಗ್ರಹದ ಬಗ್ಗೆ ಅಧ್ಯಯನಕ್ಕೆ ಕಳುಹಿಸಿದ ಕ್ಯೂರಿಯಾಸಿಟಿ ರೋವರ್‌ ನೌಕೆ ಕಳುಹಿಸಿರುವ ಚಿತ್ರದಲ್ಲಿ ನೀರಿನ ಅಂಶವಿದೆಯೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಯಾರ್ಕ್‌ನಲ್ಲಿರುವ ರೆನ್‌ಸೆಲ್ಲರ್‌ ಪಾಲಿಟೆಕ್ನಿಕ್ ಇನ್ಸಟ್ಯೂಟ್‌ನ(Rensselaer Polytechnic Institute) ಸಂಶೋಧಕಿ ಲಾರೀ ಲೆಶಿನ್‌( Laurie Leshin) ಅಧ್ಯಯನ ನಡೆಸಿದ್ದು ಕ್ಯೂರಿಯಾಸಿಟಿ ರೋವರ್‌ ನೌಕೆ ಕಳುಹಿಸಿರುವ ಚಿತ್ರದಲ್ಲಿ ನೀರಿನ ಅಂಶವಿರುವ ಸ್ಪಷ್ಟ ಸಾಕ್ಷ್ಯಗಳು ದೊರೆತಿವೆ ಎಂದು ಹೇಳಿದ್ದಾರೆ. ಇವರ ಅಧ್ಯಯನದ ವರದಿಯನ್ನು Rensselaer Polytechnic Institute ಮಾದ್ಯಮಗಳಿಗೆ ಬಿಡುಗಡೆ ಮಾಡಿದ್ದು,ಮಂಗಳನ ಮೇಲ್ಮೈನಲ್ಲಿರುವ ಶೇ.2 ರಷ್ಟು ಮಣ್ಣಿನಲ್ಲಿ ನೀರಿನ ಅಂಶವಿದೆ.ಜೊತೆಗೆ ಇಲ್ಲಿ ನೈಸರ್ಗಿ‌ಕ ಸಂಪನ್ಮೂಲ ಹೇರಳವಾಗಿದೆ ಎಂದು ಲಾರೀ ಲೆಶಿನ್‌ ಅಭಿಪ್ರಾಯ ಪಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ಮಂಗಳ ಗ್ರಹದಲ್ಲಿ ಮಿಥೇನ್‌ ಗ್ಯಾಸ್‌‌ ಇಲ್ಲ. ಅದ್ದರಿಂದ ಮಂಗಳನಲ್ಲಿ ಜೀವಿಸಲು ಸಾಧ್ಯವಿಲ್ಲ ಎನ್ನುವ ವರದಿ ಪ್ರಕಟಗೊಂಡಿತ್ತು. ಈಗ ಈ ವರದಿ ಪ್ರಕಟಗೊಂಡಿದ್ದು, ಮಂಗಳ ಗ್ರಹದ ಅಧ್ಯಯನ ನಡೆಸುವ ವಿಜ್ಞಾನಿಗಳಲ್ಲಿ ಮತ್ತೊಂದು ಚರ್ಚೆ‌ ಆರಂಭವಾಗಿದೆ.

ಮಂಗಳ ಗ್ರಹದಲ್ಲಿ ಸಿಕ್ಕಿತು ನೀರು!

ಈ ಹಿಂದೆ ಕ್ಯೂರಿಯಾಸಿಟಿ ರೋವರ್‌ ನೌಕೆ ತನ್ನ ಕ್ಯಾಮೆರದಲ್ಲಿ ತೆಗೆದಿರುವ ಫೋಟೋವೊಂದು ವಿಜ್ಞಾನಿಗಳ ಮಧ್ಯೆ ಭಾರೀ ಚರ್ಚೆಗೆ ಕಾರಣವಾಗಿತ್ತು. 2012ರ ಸೆ.28ರಂದು ರಾಕ್‌ನೆಸ್ಟ್‌ ಎಂಬ ಸ್ಥಳದಿಂದ ಬಂಡೆಕಲ್ಲುಗಳ ಮಧ್ಯೆ ಕಿತ್ತಳೆ ಬಣ್ಣದ ಇಲಿಯನ್ನೇ ಹೋಲುವ ಆಕೃತಿಯನ್ನು ಕ್ಯೂರಿಯಾಸಿ ಸೆರೆಹಿಡಿದಿತ್ತು. ಇಲಿಯನ್ನೇ ಹೋಲುವ ಆಕೃತಿ ಮಂಗಳ ಗ್ರಹದಲ್ಲಿರುವ ಇಲಿಯೇ ಅಗಿದೆ ಎಂದು ufosightingsdaily ಸಂಪಾದಕ ಸ್ಕಾಟ್‌ವೇರಿಂಗ್‌ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರು.

ಈ ಚರ್ಚೆ‌ಗಳ ಮಧ್ಯೆ ಯುರೋಪಿಯನ್‌ ಸ್ಪೇಸ್‌ ಎಜೆನ್ಸಿ(ESA) ಸಂಶೋಧಕರು ಈಗ ಮಂಗಳ ಗ್ರಹದ ಹೆಚ್ಚಿನ ಅಧ್ಯಯನ ನಡೆಸಲು ಸ್ನೇಕ್‌ ರೊಬೊಟ್‌‌ನ್ನು ಅಭಿವೃದ್ಧಿಪಡಿಸಿದ್ದಾರೆ. ನಾಸಾ ಈಗಾಗಲೇ ಕ್ಯೂರಿಯಾಸಿಟಿ ರೋವರ್‌‌ನ್ನು ಮಂಗಳ ಗ್ರಹಕ್ಕೆ ಕಳುಹಿಸಿದೆ.ಆದರೆ ಈ ವಾಹನದಲ್ಲಿ ಚಕ್ರಗಳಿದ್ದು,ಇದರ ಮೂಲಕ ರೋವರ್‌‌ ಚಲಿಸುತ್ತಿದೆ. ರೋವರ್‌ ಮಂಗಳ ಗ್ರಹದ ದೂರದ ಪ್ರದೇಶಗಳ ಮಾಹಿತಿ,ಫೋಟೋವನ್ನು ಕಳುಹಿಸುತ್ತಿದ್ದರೂ,ಮಂಗಳ ಗ್ರಹದ ನೆಲದ ಬಗ್ಗೆ ಅಧ್ಯಯನ ಮಾಡಲು ಈ ಕ್ಯೂರಿಯಸಿಟಿ ರೋವರ್‌‌ ಅಷ್ಟೇನು ಸಾಮರ್ಥ್ಯ ಹೊಂದಿಲ್ಲವಂತೆ ಹೀಗಾಗಿ ಈ ಹೊಸ ಸ್ನೇಕ್‌ ರೊಬೊಟ್‌‌ನ್ನು ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.ಈ ಯೋಜನೆಗೆ ExoMars ಎನ್ನುವ ಹೆಸರನ್ನಿಟ್ಟಿದ್ದು ಈ ಸಂಶೋಧನೆ ಯಶಸ್ವಿಯಾದಲ್ಲಿ 2018ರಲ್ಲಿ ಸ್ನೇಕ್ ರೊಬೊಟ್‌ ಮಂಗಳ ಗ್ರಹಕ್ಕೆ ಹಾರಲಿದೆ.

Our @MarsCuriosity papers in @sciencemagazine came out today-First analyses of #MarsDirt w/our lab on the Red Planet! http://t.co/O6WIBiS4ox
— Laurie Leshin (@RPISciDean) September 26, 2013

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X