ಭಾರತದಿಂದಲೇ ಅಂತರಿಕ್ಷಕ್ಕೆ ಮಾನವರು:ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ

By Ashwath
|

ಮಂಗಳಯಾನದ ಬಳಿಕ ಇಸ್ರೋ ಈಗ ಅಂತರಿಕ್ಷಕ್ಕೆ ಮಾನವರನ್ನು ಕಳುಹಿಸುವ ಯೋಜನೆಗೆ ಮುಂದಾಗುತ್ತಿದೆ.ಗಗನಯಾತ್ರಿಗಳನ್ನು ಹೊತ್ತೊಯ್ಯುವ 'ಸ್ಪೇಸ್‌ ಕ್ಯಾಪ್ಸೂಲ್‌' ಮಾದರಿಯನ್ನು ಇಸ್ರೋ ಅಭಿವೃದ್ಧಿ ಪಡಿಸುವಲ್ಲಿ ಸಫಲವಾಗಿದೆ.

ಅಮೆರಿಕ,ಚೀನಾ,ರಷ್ಯಾ ಈಗಾಗಲೇ ತನ್ನ ದೇಶದಿಂದಲೇ ರಾಕೆಟ್‌ನ್ನು ಉಡಾವಣೆ ಮಾಡಿ ಅಂತರಿಕ್ಷಕ್ಕೆ ಮಾನವರನ್ನು ಕಳುಹಿಸುವಲ್ಲಿ ಯಶಸ್ವಿಯಾಗಿದೆ.ಈ ಮೂರು ದೇಶಗಳನ್ನು ಬಿಟ್ಟರೆ ಬೇರೆ ಯಾವುದೇ ದೇಶ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಮಾನವರನ್ನು ಕಳುಹಿಸಿಲ್ಲ.ಈ ನಿಟ್ಟಿನಲ್ಲಿ ಇಸ್ರೋ ಅಂತರಿಕ್ಷಕ್ಕೆ ಮಾನವರನ್ನು ಕಳುಹಿಸುವುದಕ್ಕೆ ಮುಂದಾಗುತ್ತಿದೆ. ಈ ವರ್ಷವೇ ಪ್ರಯೋಗಾರ್ಥ‌ವಾಗಿ ಉಪಗ್ರಹವನ್ನು ಹಾರಿಸಿ ಪರೀಕ್ಷಿಸಲು ಇಸ್ರೋ ಸಿದ್ದತೆ ನಡೆಸುತ್ತಿದೆ. ಬೆಂಗಳೂರಿನಲ್ಲಿರುವ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಸ್ಪೇಸ್‌ ಕ್ಯಾಪ್ಸೂಲ್‌'ತಯಾರಿಸಿದೆ.

ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ

ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ


ಬಾಹ್ಯಾಕಾಶಕ್ಕೆ ಕಳುಹಿಸುವ ಮೊದಲ ಪ್ರಯತ್ನವಾಗಿ 'ಜಿಎಸ್‌ಎಲ್‌ವಿ- ಮಾರ್ಕ್‌ 3 ರಾಕೆಟ್‌ನ್ನು ಮೇ ಅಥವಾ ಜೂನ್‌ನಲ್ಲಿ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುತ್ತದೆ.ರಾಕೆಟ್‌‌ ಉಡಾವಣೆ ಸಂದರ್ಭದಲ್ಲಿ ಮಾನವರನ್ನು ಕಳುಹಿಸುವ 'ಸ್ಪೇಸ್‌ ಕ್ಯಾಪ್ಸೂಲ್‌' ಪರೀಕ್ಷಿಸಲಾಗುತ್ತದೆ.

ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ

ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ

ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ ಉಡವಾಣೆ ಮಾಡಲಾದ ಈ ರಾಕೆಟ್‌ 16 ನಿಮಿಷದಲ್ಲಿ 300ರಿಂದ 400 ಕಿ.ಮೀ. ಎತ್ತರದಲ್ಲಿರುವ ಭೂ ಕಕ್ಷೆಗೆ ತಲುಪುವಂತೆ ಇಸ್ರೋ ಯೋಜನೆ ರೂಪಿಸಿದೆ.
ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ

ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ


ಪ್ರಯೋಗಾರ್ಥವಾಗಿ ಅಂತರಿಕ್ಷಕ್ಕೆ ಕಳುಹಿಸುವ ಸ್ಪೇಸ್‌ ಕ್ಯಾಪ್ಸೂಲ್‌ನಲ್ಲಿ ಇಸ್ರೋದ ಯಾವುದೇ ಸಿಬ್ಬಂದಿ ಅಥವಾ ಪ್ರಾಣಿಯಾಗಲಿ ಪ್ರಯಾಣಿಸುವುದಿಲ್ಲ.ಈ ವ್ಯೋಮ ನೌಕೆ ಏಳು ದಿನಗಳ ಕಾಲ ಅಂತರಿಕ್ಷದಲ್ಲಿ ತಂಗಲಿದ್ದು ಬಳಿಕ ಬಂಗಾಳ ಕೊಲ್ಲಿಯಲ್ಲಿರುವ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್ ಸಮೀಪ ಇಳಿಸುವಂತೆ ಇಸ್ರೋ ಚಿಂತನೆ ನಡೆಸಿದೆ.

ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ

ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ


ಇಸ್ರೋ ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವ ಯೋಜನೆಗಾಗಿ 12,500 ಕೋಟಿ ಅನುದಾನ ನೀಡುವಂತೆ ಕೇಂದ್ರ ಸರ್ಕಾರದಲ್ಲಿ ಕೇಳಿದೆ. ಕೇಂದ್ರ ಸರ್ಕಾರ ಇಸ್ರೋಗೆ ಅನುದಾನ ನೀಡಿದ್ದಲ್ಲಿ ಮುಂದಿನ ಏಳು ವರ್ಷದೊಳಗೆ ಇಸ್ರೋ ಅಂತರಿಕ್ಷಕ್ಕೆ ಮಾನವರನ್ನು ಕಳುಹಿಸಲಿದೆ.

ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ

ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ

ಅನ್ಯ ಗ್ರಹಗಳ ಅನ್ವೇಷಣೆ ಮತ್ತು ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವಲ್ಲಿ ಕ್ರಯೋಜನಿಕ್‌ ಇಂಧನ ಅತ್ಯಗತ್ಯವಾಗಿದ್ದು,ಇದನ್ನು ಇಸ್ರೋ ಅಭಿವೃದ್ಧಿ ಪಡಿಸದ ಕಾರಣ ನಮ್ಮ ಬಾಹ್ಯಾಕಾಶ ಯೋಜನೆಗೆ ತೀವೃ ಹಿನ್ನಡೆಯಾಗುತ್ತಿತ್ತು. ಆದರೆ ಇದೇ ಜನವರಿಯಲ್ಲಿ ಇಸ್ರೋ ಸ್ವದೇಶಿ ನಿರ್ಮಿ‌ತ ಕ್ರಯೋಜೆನಿಕ್‌ ಇಂಧನದಿಂದ ಚಾಲೂಗೊಳ್ಳುವ ಪಿಎಸ್‌ಎಲ್‌‌ವಿ ಡಿ-5 ರಾಕೆಟ್‌ನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು.

ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ

ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ

ಇಸ್ರೋ ಕಳೆದ ನವೆಂಬರ್‌ನಲ್ಲಿ ಮಂಗಳಯಾನ ನೌಕೆಯನ್ನು ಉಡಾವಣೆ ಮಾಡಿತ್ತು.ಈ ನೌಕೆ ಬಾಹ್ಯಾಕಾಶದಲ್ಲಿ ಫೆ.12ರಂದು ಯಶಸ್ವಿಯಾಗಿ ನೂರನೇ ದಿನದ ಪ್ರಯಾಣವನ್ನು ಮುಗಿಸಿದ್ದು ನಿಗದಿತ ಪಥದಲ್ಲಿ ಚಲಿಸುತ್ತಿದೆ.

ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ

ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ


ಇಸ್ರೊ ಕಳುಹಿಸಿದ್ದ ‘ಚಂದ್ರಯಾನ-1 ಉಪಗ್ರಹ ಚಂದ್ರನ ಅಂಗಳದಲ್ಲಿ ನೀರಿನ ಕುರುಹನ್ನು ಮೊದಲ ಸಲ ಪತ್ತೆ­ಹಚ್ಚಿತ್ತು.

ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ

ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ


ಇಸ್ರೋ ಈ ವ್ಯೋಮನೌಕೆಯ ಹೆಸರನ್ನು ಪ್ರಕಟಿಸಿಲ್ಲ. ಆದರೆ ಕೆಲವೊಂದು ಮಾಧ್ಯಮಗಳಲ್ಲಿ ಪ್ರಕಟಗೊಂಡಂತೆ ಮಾನವ್‌(MANAV = Manned Autonomous NAvigation Vehicle) ಹೆಸರನ್ನು ಇಡಲಿದೆ ಎಂದು ಹೇಳಲಾಗುತ್ತಿದೆ.

ಮಾಹಿತಿ:antariksh-space.blogspot

ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X