ಜಿಯೋ, ಏರ್‌ಟೆಲ್, ವೋಡೋಪೋನ್‌ಗಳ ಉಚಿತ ಡೇಟಾ ಪ್ಲಾನ್‌ಗಳ ಹಿಂದಿನ ಮರ್ಮ.?!

ಜಿಯೋ ಆರಂಭದಲ್ಲೇ 4G ಡೇಟಾವನ್ನು ಉಚಿತವಾಗಿ ನೀಡಲು ಶುರು ಮಾಡಿದ ಮೇಲೆ ದೇಶದಲ್ಲಿ ಡೇಟಾ ಬಳಕೆ ಒಂದೇ ಸಮನೇ ಹೆಚ್ಚಾಗಿದೆ.

|

ಸದ್ಯ ಭಾರತದಲ್ಲಿ ಮೊಬೈಲ್ ಡೇಟಾ ಕ್ರಾಂತಿ ನಡೆಯುತ್ತಿದೆ ಎಂದರೆ ತಪ್ಪಾಗುವುದಿಲ್ಲ ಎಂದು ಕಾಣುತ್ತಿದೆ. ಇದೇ ಕೇವಲ ಮೂರು ತಿಂಗಳ ಹಿಂದೆ 3G ಡೇಟಾ ಬಳಕೆಗೆ ಹೆಚ್ಚಿನ ಶುಲ್ಕವನ್ನ ಪಾವತಿ ಮಾಡಬೇಕು ಎನ್ನುವ ಕಾರಣಕ್ಕೆ 3G ಬಳಕೆದಾರರ ಸಂಖ್ಯೆಯೇ ಹೆಚ್ಚಾಗಿರಲಿಲ್ಲ, ಆದರೆ ರಿಲಯನ್ಸ್ ಮಾಲೀಕತ್ವದ ಜಿಯೋ ಆರಂಭದಲ್ಲೇ 4G ಡೇಟಾವನ್ನು ಉಚಿತವಾಗಿ ನೀಡಲು ಶುರು ಮಾಡಿದ ಮೇಲೆ ದೇಶದಲ್ಲಿ ಡೇಟಾ ಬಳಕೆ ಒಂದೇ ಸಮ ಹೆಚ್ಚಾಗಿದೆ.

ಜಿಯೋ, ಏರ್‌ಟೆಲ್, ವೋಡೋಪೋನ್‌ಗಳ ಉಚಿತ ಡೇಟಾ ಪ್ಲಾನ್‌ಗಳ ಹಿಂದಿನ ಮರ್ಮ.?!

ಓದಿರಿ: ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನ ಫಾಂಟ್ ಚೇಂಜ್ ಮಾಡುವುದು ಹೇಗೆ..!!! ಇಲ್ಲದೇ ನೋಡಿ ಸಿಂಪಲ್ ಸ್ಟೇಪ್ಸ್

ಇದಲ್ಲದೇ ಜಿಯೋ ತನ್ನ ಸೇವೆಗೆ ಶುಲ್ಕ ವಿಧಿಸಲು ಮುಂದಾಗುತ್ತಿದ್ದಂತೆ ಇತರೇ ಕಂಪನಿಗಳು ತಮ್ಮ ಗ್ರಾಹಕರಿಗೆ ಹೊಸ ಹೊಸ ಆಫರ್‌ಗಳನ್ನು ನೀಡಲು ಮುಂದಾಗಿದ್ದು, ಈ ಹಿನ್ನಲೆಯಲ್ಲಿ ಮೊಬೈಲ್ ಬಳಕೆದಾರರು ಅತ್ಯಂತ ಕಡಿಮೆ ಬೆಲೆಗೆ ಅತೀ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಯನ್ನು ಅನುಭವಿಸುತ್ತಿದ್ದಾರೆ, ಈ ಹಿನ್ನಲೆಯಲ್ಲಿ ದೇಶದಲ್ಲಿ ಅನ್‌ಲಿಮಿಟೆಡ್ ಡೇಟಾ ಬಳಕೆಯೂ ಉಚಿತವಾಗಲಿದಯೇ ಎಂಬ ಸಂಶಯವೊಂದು ಮನೆ ಮಾಡಿದೆ.

ಈ ಹಿಂದೆ ಎಸ್‌ಎಂಎಸ್ ಕಾಲದಲ್ಲಿಯೂ ದಿನಕ್ಕೆ 100 ಮೇಸೆಜ್ ಗಳನ್ನು ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಹೊಸದೊಂದು ರುಚಿಯನ್ನು ಹತ್ತಿಸಿದರು. ಮೊದ ಮೊದಲು ಈ ಸೇವೆಯನ್ನು ಉಚಿತವಾಗಿ ನೀಡಿ ನಂತರದ ದಿನಗಳಲ್ಲಿ ಶುಲ್ಕವಿಧಿಸಲು ಮುಂದಾದರು. ಈ ಮೇಸೆಂಜಿಗ್ ಆಪ್‌ಗಳು ಇಲ್ಲವಾಗಿದ್ದರೇ ಜನರನ್ನು ದೋಚುತ್ತಿದ್ದವು.

ಜಿಯೋ, ಏರ್‌ಟೆಲ್, ವೋಡೋಪೋನ್‌ಗಳ ಉಚಿತ ಡೇಟಾ ಪ್ಲಾನ್‌ಗಳ ಹಿಂದಿನ ಮರ್ಮ.?!

ಓದಿರಿ: ವಾಟ್ಸ್ಆಪ್ ಹಳೇ ಸ್ಟೆಟಸ್ ಮತ್ತೇ ಬಂತು..!!

ಸದ್ಯ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರತಿ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಫೇರ್‌ಯುಸೆಜ್ ಪಾಲಿಸಿ ಅನ್ವಯ ಅನ್‌ಲಿಮಿಟೆಡ್ ಡೇಟಾ ನೀಡುತ್ತಿದ್ದು, ಇದರಿಂದ ಕಂಪನಿಗಳಿಗೆ ಯಾವ ರೀತಿಯಲ್ಲಿ ಲಾಭವಾಗಲಿದೆ ಎಂಬುದು ತಿಳಿಯುತ್ತಿಲ್ಲ, ಜನರಿಗೆ ಡೇಟಾ ರುಚಿ ಹತ್ತಿಸಿ ನಂತರ ಹೆಚ್ಚಿನ ಹಣವನ್ನು ಪಡೆಯುವ ಹುನ್ನರವು ಇದರ ಹಿಂದೆ ಇರಬಹುದು ಎನ್ನಲಾಗಿದೆ.

ಒಟ್ಟಿನಲ್ಲಿ ಈ ಉಚಿತ ಡೇಟಾ ಆಫರ್‌ಗಳು ಟೆಲಿಕಾಂ ಇಂಡಸ್ಟ್ರಿಯಲ್ಲಿ ಯಾವ ರೀತಿಯ ಪರಿಣಾಮವನ್ನು ಬೀರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಸ್ಪರ್ಧೆಯಲ್ಲಿ ಯಾರು ಉಳಿದುಕೊಳ್ಳಲಿದ್ದಾರೆ. ಯಾರು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದ್ದಾರೆ. ಕೊನೆಗೆ ಉಳಿಯುವವರು ಹೇಗೆ ಗ್ರಾಹಕರೊಂದಿಗೆ ನಡೆದುಕೊಳ್ಳಿದ್ದಾರೆ ಎಂಬುದನ್ನು ಎದುರು ನೋಡಬೇಕಾಗಿದೆ.

Best Mobiles in India

Read more about:
English summary
Airtel, Reliance Jio, Vodafone, and Idea are offering 'unlimited' data plans at reasonable prices. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X