ಮೆಶಿನ್‌,ಇಂಟರ್‌ನೆಟ್‌ ಬೆಳವಣಿಗೆಯಿಂದ ಹೊಡೆತ ಬಿದ್ದ ಕ್ಷೇತ್ರಗಳು

Posted By:

ತಂತ್ರಜ್ಞಾನ ಬದಲಾಗುತ್ತಿರುತ್ತದೆ. ಹಿಂದಿನ ಸಂಶೋಧನೆಯಿಂದ ಅಭಿವೃದ್ಧಿ ಪಡಿಸಲಾದ ತಂತ್ರಜ್ಞಾನ ಇಂದು ಹಳೆಯದಾಗುತ್ತಿದೆ.ಈ ಹೊಸ ಸಂಶೋಧನೆಯಿಂದಾಗಿ ಬಹಳಷ್ಟು ಲಾಭಗಳಾದರೂ ಕೆಲವೊಂದು ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದೆ.ಕೆಲವೊಂದು ದೇಶಗಳಲ್ಲಿ ತಂತ್ರಜ್ಞಾನದ ಅವಿಷ್ಕಾರದಿಂದ ಹೊಡೆತ ಬಿದ್ದರೂ ನಮ್ಮ ದೇಶದಲ್ಲಿ ಅಷ್ಟೇನು ಹೊಡೆತ ಬಿದ್ದಿಲ್ಲ. ಮುಂದಿನ ದಿನಗಳಲ್ಲಿ ಬೀಳುವ ಸಾಧ್ಯತೆ ಇಲ್ಲದಿಲ್ಲ. ಹೀಗಾಗಿ ಇಲ್ಲಿ ಮೆಶಿನ್‌,ಇಂಟರ್‌ನೆಟ್‌ ಕ್ರಾಂತಿಯಿಂದಾಗಿ ಹೊಡೆತ ಬಿದ್ದ ಕೆಲವು ಉದ್ಯೋಗ,ಉದ್ಯಮಗಳ ಮಾಹಿತಿ ಇದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಕ್ಯಾಶಿಯರ್‌:

ಕ್ಯಾಶಿಯರ್‌:

1


ಇಂಟರ್‌ನೆಟ್‌ ಬಳಕೆ ಹೆಚ್ಚಾದಂತೆ ಗ್ರಾಹಕರು ಬ್ಯಾಂಕ್‌ಗೆ ಹೋಗುವುದನ್ನೇ ಕಡಿಮೆ ಮಾಡಿದ್ದಾರೆ. ಹಣವನ್ನು ತೆಗೆಯಲು ಮತ್ತು ಪಡೆಯಲು ಕ್ಯಾಶಿಯರ್‌ ಮುಂದೆ ಸಾಲುಗಟ್ಟಿ ನಿಲ್ಲಬೇಕಾಗಿಲ್ಲ.ಆನ್‌ಲೈನ್‌ಲ್ಲೇ ಹಣವನ್ನು ವರ್ಗಾವಣೆ ಮಾಡಬಹುದು. ದೇಶದ ಯಾವುದೇ ಮೂಲೆಯಲ್ಲಿದ್ದರೂ ಎಟಿಎಂ ಮೂಲಕ ಹಣವನ್ನು ಕ್ಷಣದಲ್ಲಿ ಪಡೆಯಬಹುದು.

 ಸ್ವಾಗತಕಾರಿಣಿ:

ಸ್ವಾಗತಕಾರಿಣಿ:

2


ಸದ್ಯಕ್ಕೆ ಈ ಹುದ್ದೆ ಅಂಥ ಹೊಡೆತವೇನೂ ಬಿದ್ದಿಲ್ಲ. ಮುಂದಿನ ದಿನಗಳಲ್ಲಿ ಕಂಪೆನಿಗಳು ಸ್ವಾಗತಕಾರಿಣಿ ಜಾಗದಲ್ಲಿ ರೊಬೊಟ್‌ಗಳನ್ನು ನಿಯೋಜಿಸಲು ಮುಂದಾಗಿವೆ.ಜಪಾನಿನಲ್ಲಿ ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತಿವೆ.

 ಪೋಸ್ಟ್‌ ಆಫೀಸ್‌‌:

ಪೋಸ್ಟ್‌ ಆಫೀಸ್‌‌:

3


ಇಮೇಲ್‌, ಅಪ್ಲಿಕೇಶನ್‌,ಸೋಶಿಯನ್‌ ನೆಟ್‌ವರ್ಕ್‌ ಬಳಕೆ ಹೆಚ್ಚಾದಂತೆ ಪೋಸ್ಟ್‌ ಮಾಡುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಪೋಸ್ಟ್‌ ಆಫೀಸ್‌ನಲ್ಲಿ ಆಕೌಂಟ್‌ ಓಪನ್‌ ಮಾಡದೇ ಬ್ಯಾಂಕ್‌ನಲ್ಲೇ ಅಕೌಂಟ್‌ ಓಪನ್‌ ಮಾಡುವ ಪ್ರಮಾಣ ಹೆಚ್ಚಾಗುತ್ತಿದೆ.

 ಟೈಪಿಸ್ಟ್‌:

ಟೈಪಿಸ್ಟ್‌:

4


ಕಂಪ್ಯೂಟರ್‌ ಬಂದ ಮೇಲೆ ಟೈಪ್‌ ಮಾಡಿ ವೃತ್ತಿ ಸಾಗಿಸುತ್ತಿದ್ದ ಟೈಪ್‌ರೈಟರ್‌ಗಳಿಗೆ ಉದ್ಯೋಗ ಇಲ್ಲದಾಗಿದೆ. ಟೈಪ್‌ರೈಟರ್‌ ಕ್ಲಾಸ್‌ಗಳು ವಿದ್ಯಾರ್ಥಿ‌‌ಗಳಿಲ್ಲದೇ ಮುಚ್ಚುತ್ತಿವೆ.

 ನ್ಯೂಸ್‌ ಪೇಪರ್‌:

ನ್ಯೂಸ್‌ ಪೇಪರ್‌:

5


ಆನ್‌ಲೈನ್‌ ನ್ಯೂಸ್‌,ಬ್ಲಾಗ್‌ ಬಳಕೆ ಹೆಚ್ಚಾದಂತೆ ನ್ಯೂಸ್‌ ಪೇಪರ್‌ಗಳನ್ನು ಓದುವ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿದೆ.ಪ್ರಸಿದ್ದ ಪತ್ರಿಕೆಗಳು ನಷ್ಟದಲ್ಲಿವೆ. ಕೆಲವೊಂದು ಪತ್ರಿಕೆಗಳು ಮುಚ್ಚಿದೆ.ವಿದೇಶದಲ್ಲಿ ಆದಂತೆ ನಮ್ಮ ದೇಶದಲ್ಲಿ ಅಷ್ಟೇನು ವೆಬ್‌ಸೈಟ್‌ಗಳು ಆರಂಭಗೊಂಡಿಲ್ಲ.ಹಾಗಾಗಿ ಪತ್ರಿಕೆಗಳಿಗೆ ಇನ್ನೂ ಬೇಡಿಕೆಯಿದೆ.

 ಟೆಲಿಮಾರ್ಕೆಟರ್‌:

ಟೆಲಿಮಾರ್ಕೆಟರ್‌:

6


ಬಹಳಷ್ಟು ಕಂಪೆನಿಗಳು ಈಗಾಗಲೇ ಸಾಫ್ಟ್‌ವೇರ್‌ ಮೂಲಕ ನಿಯಂತ್ರಣ ಮಾಡಬಹುದಾದ ಕಾಲಿಂಗ್‌ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಗ್ರಾಹಕರ ಸಮಸ್ಯೆ,ಸಂದೇಹಗಳನ್ನು ಈ ಕಂಪ್ಯೂಟರ್‌ಗಳೇ ಪರಿಹರಿಸುತ್ತಿವೆ.

 ರಿಟೇಲ್‌ ಉದ್ಯಮ:

ರಿಟೇಲ್‌ ಉದ್ಯಮ:

7


ಆನ್‌ಲೈನ್‌ ಶಾಪಿಂಗ್‌ ಉದ್ಯಮದ ಬೆಳವಣಿಗೆ ಕಳೆದ ಮೂರು ವರ್ಷ‌ಗಳಿಂದ ದೇಶದಲ್ಲಿ ಹೆಚ್ಚಾಗಿದೆ. ಆನ್‌ಲೈನ್‌ಲ್ಲಿ ಖರೀದಿಸಿದ ವಸ್ತುಗಳು ನೇರವಾಗಿ ನಮ್ಮ ಮನೆಗೆ ಬರುವುದರಿಂದ ರಿಟೇಲ್‌ ವಹಿವಾಟು ಪ್ರಮಾಣ ಕಡಿಮೆಯಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot