Subscribe to Gizbot

ಸಂಪೂರ್ಣ ಸರಕಾರಿ ಸೇವೆ ಇನ್ನು ಒಂದೇ ಮೊಬೈಲ್ ಅಪ್ಲಿಕೇಶನ್‌ನಲ್ಲಿ

Posted By:

ಇ ಮಂದಿ ಕಾನ್ಸೆಪ್ಟ್ ಅನ್ನು ಹೊಂದಿಸಿದ ಬೆನ್ನಲ್ಲೇ, ಕರ್ನಾಟಕದ ದಕ್ಷಿಣ ಭಾರತ ರಾಜ್ಯವು ಇನ್ನೊಂದು ಹೆಜ್ಜೆಯನ್ನು ಇಟ್ಟಿದೆ. ಸರಕಾರಿ ಮತ್ತು ಖಾಸಗಿ ಸೇರಿದಂತೆ 4,187 ಸೇವೆಗಳನ್ನು ಸಂಯೋಜಿಸುವ ರಾಜ್ಯದ ಮೊಬೈಲ್ ಗವರ್ನೆನ್ಸಿ ಪ್ಲಾಟ್‌ಫಾರ್ಮ್‌ನ ವಿವರಗಳನ್ನು ಒಂದೇ ಅಪ್ಲಿಕೇಶನ್ ಆದ ಮೊಬೈಲ್ - ಒನ್‌ನಲ್ಲಿ ಹಂಚಿಕೊಳ್ಳಲು ಕೇಂದ್ರ ಸರಕಾರವು ಕರ್ನಾಟಕವನ್ನು ಕೇಳಿಕೊಂಡಿದೆ.

ಸಂಪೂರ್ಣ ಸರಕಾರಿ ಸೇವೆ ಇನ್ನು ಒಂದೇ ಮೊಬೈಲ್ ಅಪ್ಲಿಕೇಶನ್‌ನಲ್ಲಿ

ಇದುವೇ ತಂತ್ರಜ್ಞಾನದೊಂದಿಗೆ ಇತರ ರಾಜ್ಯಗಳಿಗೆ ಅನುಕೂಲವನ್ನೊದಗಿಸುವ ನಿಟ್ಟಿನಲ್ಲಿರುವ ನರೇಂದ್ರ ಮೋದಿ ಸರಕಾರವು, ರಾಷ್ಟ್ರೀಯ ಮಟ್ಟದಲ್ಲೂ ಗುರುತರವಾಗಿಸುವ ನಿಟ್ಟಿನಲ್ಲಿದೆ.

ಓದಿರಿ: ಬೆಂಕಿಯೂ ಸೋಕದ ಬಿದ್ದರೂ ಒಡೆಯದ ಸುಭದ್ರ ಫೋನ್‌ಗಳು

ಮೊಬೈಲ್ ಅಪ್ಲಿಕೇಶನ್ ಪ್ರತೀ ತಿಂಗಳು 10% ದಷ್ಟು ಪ್ರಗತಿಯನ್ನು ಕಂಡುಕೊಳ್ಳುತ್ತಿದ್ದು 5 ಕೋಟಿಯ ವ್ಯವಹಾರವನ್ನು ಮಾಡಿದೆ, ಇದು ಏಳು ವರ್ಷ ಹಳತಾಗಿದ್ದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಂದ ಆರಂಭಗೊಂಡಿತು. ಕರ್ನಾಟಕದಲ್ಲಿ ಈ ಅಪ್ಲಿಕೇಶನ್ 1.25 ಕೋಟಿ ಹಿಟ್‌ಗಳನ್ನು ಮತ್ತು 1.5 ಲಕ್ಷ ಡೌನ್‌ಲೋಡ್‌ಗಳನ್ನು ಕಂಡುಕೊಂಡಿದೆ.

ಸಂಪೂರ್ಣ ಸರಕಾರಿ ಸೇವೆ ಇನ್ನು ಒಂದೇ ಮೊಬೈಲ್ ಅಪ್ಲಿಕೇಶನ್‌ನಲ್ಲಿ

ಓದಿರಿ: ಕಟ್ಟುಕಥೆಗಳನ್ನು ನಂಬಿ ಫೋನ್ ಖರೀದಿ ಮಾಡದಿರಿ

ಡಿಜಿಟಲ್ ಇಂಡಿಯಾ ಅಡಿಯಲ್ಲಿ ಬರುವ ಮೊಬೈಲ್ ಅಪ್ಲಿಕೇಶನ್ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾಗಿದೆ. ದೇಶದ ಜನತೆಗೆ ಸರಕಾರವು ತರುತ್ತಿರುವ ಹೊಸ ಸೇವೆಗಳ ಪ್ರಯೋಜನಗಳನ್ನು ಮೊಬೈಲ್ ಮೂಲಕ ಅರಿತುಕೊಂಡು ಅವುಗಳ ಪ್ರಯೋಜನವನ್ನು ಜನತೆ ಪಡೆದುಕೊಳ್ಳಬೇಕು ಎಂಬುದು ಮೋದಿಯವರ ಬಯಕೆಯಾಗಿದೆ.

English summary
After setting an example with its e-mandi concept, now the south Indian state of Karnataka will be setting another landmark. The central government has now asked Karnataka to share details of state's mobile-governance platform which integrates 4,187 services, both government and private, into one app, Mobile.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot