Subscribe to Gizbot

ಕಟ್ಟುಕಥೆಗಳನ್ನು ನಂಬಿ ಫೋನ್ ಖರೀದಿ ಮಾಡದಿರಿ

Written By:

ಪ್ರತಿಯೊಂದು ತಂತ್ರಜ್ಞಾನವು ಕಟ್ಟುಕಥೆ‌ಗಳನ್ನು ಹೊಂದಿಕೊಂಡಿದೆ. ಇನ್ನು ಸ್ಮಾರ್ಟ್‌ಫೋನ್‌ಗಳೂ ಇದಕ್ಕೆ ಹೊರತಲ್ಲ. ಸ್ಮಾರ್ಟ್‌ಫೋನ್‌ಗಳು ಕಾಲದಿಂದ ಕಾಲಕ್ಕೆ ಅಭಿವೃದ್ಧಿಯನ್ನು ಕಂಡುಕೊಳ್ಳುತ್ತಾ ಇಂದು ವಿಶೇಷ ರೀತಿಯಲ್ಲಿ ಪ್ರಾಬಲ್ಯವನ್ನು ಸಾಧಿಸಿದೆ.

ಓದಿರಿ: ಪವಿತ್ರ ರಂಜಾನ್‌ಗಾಗಿ ಟಾಪ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ಇನ್ನು ಸ್ಮಾರ್ಟ್‌ಫೋನ್‌ಗೂ ಆಧರಿಸಿ ಕಟ್ಟುಕಥೆ ಇದ್ದು ಅದು ಏನು ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ನೀವು ಓದಲೇಬೇಕು. ಇಂತಹ ಕಟ್ಟುಕಥೆಗಳಿಗೆ ಒಳಗಾಗಿ ಹೆಚ್ಚಿನವರು ಸ್ಮಾರ್ಟ್‌ಫೋನ್ ಖರೀದಿಯನ್ನು ಮಾಡುತ್ತಾರೆ. ಈ ರೀತಿಯ ಅಂಶಗಳಿದ್ದಲ್ಲಿ ಮಾತ್ರವೇ ಸ್ಮಾರ್ಟ್‌ಫೋನ್ ಖರೀದಿಗೆ ಬೆಲೆ ಎಂಬುದು ಖರೀದಿದಾರರ ವಿಶ್ವಾಸ.

ಓದಿರಿ: ಸೆಲ್ಫಿ ತೆಗೆದು ಯಮಪುರಿಗೆ ಪ್ರಯಾಣಿಸಿದರು ಏನಿದು ಘಟನೆ?

ಆದರೆ ಈ ಕೆಳಗಿನ ಸ್ಲೈಡರ್‌ಗಳಲ್ಲಿರುವ ಮಾಹಿತಿಗಳು ಸ್ಮಾರ್ಟ್‌ಫೋನ್ ಕುರಿತಾದ ನಿಮ್ಮ ಧಾರಣೆಯನ್ನು ಸಂಪೂರ್ಣವಾಗಿ ಬದಲಾಯಿಸಬಲ್ಲುದು ಅದು ಹೇಗೆ ಎಂಬುದನ್ನು ಇಲ್ಲಿ ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೆಚ್ಚು ಮೆಗಾಪಿಕ್ಸೆಲ್ ಅಂದರೆ ಉತ್ತಮ ಕ್ಯಾಮೆರಾ
  

ನಿಮ್ಮ ಫೋನ್ ಕ್ಯಾಮೆರಾ ಹೆಚ್ಚು ಮೆಗಾಪಿಕ್ಸೆಲ್ ಅನ್ನು ಹೊಂದಿದೆ ಎಂದಾದಲ್ಲಿ ಅದು ಉತ್ತಮ ಕ್ಯಾಮೆರಾ ಎಂದಲ್ಲ. ನೀವು ತೆಗೆದ ಚಿತ್ರಗಳನ್ನು ದೊಡ್ಡ ಗಾತ್ರದ ಶೀಟ್‌ಗಳಲ್ಲಿ ಪ್ರಿಂಟ್ ಮಾಡಲು ಮಾತ್ರ ಹೆಚ್ಚು ಮೆಗಾಪಿಕ್ಸೆಲ್ ಸಹಾಯ ಮಾಡುತ್ತದೆ. ಸೆನ್ಸಾರ್ ಮತ್ತು ಅಪಾರ್ಚರ್ ಗಾತ್ರವನ್ನು ನೋಡಿ ಫೋನ್‌ನ ಕ್ಯಾಮೆರಾದತ್ತ ಮುಖ ಮಾಡಿ.

ದೊಡ್ಡ ಬ್ಯಾಟರಿ ಎಂದರೆ ದೀರ್ಘ ಬ್ಯಾಟರಿ ಬಾಳ್ವಿಕೆ
  

ನೀವು ಬರಿದೆ ಬ್ಯಾಟರಿಯತ್ತ ಮಾತ್ರ ಗಮನ ಹರಿಸದೇ ಪ್ರೊಸೆಸರ್, ಆರ್ಕಿಟೆಕ್ಚರ್, ಮಲ್ಟಿರೀಡಿಂಗ್ ಬೆಂಬಲ ಮುಂತಾದ ಅಂಶಗಳತ್ತ ಕೂಡ ಗಮನ ಹರಿಸಬೇಕು. ಓಕ್ಟಾ ಕೋರ್ ಮೀಡಿಯಾಟೆಕ್ ಸ್ಮಾರ್ಟ್‌ಫೋನ್‌ಗಿಂತಲೂ ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ಮಾರ್ಟ್‌ಫೋನ್ ಹೆಚ್ಚು ಕಾರ್ಯನಿರ್ವಹಿಸುತ್ತದೆ.

ಹೆಚ್ಚು ಕೋರ್ಸ್ ಅಂದರೆ ಉತ್ತಮ ಕಾರ್ಯಕ್ಷಮತೆ
  

ದೊಡ್ಡ ಬ್ಯಾಟರಿ ಸಾಮರ್ಥ್ಯ ಎಂದರೆ ಉತ್ತಮ ಬ್ಯಾಟರಿ ದೀರ್ಘತೆ ಎಂದಾಗಿದೆ. ಆದರೆ ಇದು ಎಲ್ಲಾ ಸಮಯಕ್ಕೂ ಅನ್ವಯವಾಗುವುದಿಲ್ಲ. ಆಗಾಗ್ಗೆ ರೀಸ್ಟಾರ್ಟ್ ಆಗುವುದು, ಹಿನ್ನಲೆ ಪ್ರೊಸೆಸಿಂಗ್, ಎಲ್ಲಾ ಸಮಯವೂ ವೈಫೈ ಆನ್ ಮಾಡುವುದು ಮೊದಲಾದವು ಫೋನ್‌ನಲ್ಲಿರುವ ದೊಡ್ಡ ಬ್ಯಾಟರಿಗಳು ಉತ್ತಮ ಬ್ಯಾಟರಿ ಬ್ಯಾಕಪ್ ಅನ್ನು ನೀಡುವುದಿಲ್ಲ ಎಂಬುದಕ್ಕೆ ಕೆಲವೊಂದು ಕಾರಣಗಳಾಗಿವೆ.

ಸ್ವಯಂಚಾಲಿತ ಬ್ರೈಟ್‌ನೆಸ್, ಲೈವ್ ವಾಲ್‌ಪೇಪರ್‌ಗಳು, ಬ್ಲ್ಯೂಟೂತ್ ಬ್ಯಾಟರಿಯನ್ನು ಕೊಲ್ಲುತ್ತದೆ
  

ಸ್ವಯಂಚಾಲಿತ ಬ್ರೈಟ್‌ನೆಸ್, ಬ್ಲ್ಯೂಟೂತ್ ಮತ್ತು ಲೈವ್ ವಾಲ್‌ಪೇಪರ್‌ಗಳು ಬ್ಯಾಟರಿಯನ್ನು ಹೀರಿಕೊಳ್ಳುತ್ತವೆ, ಆದರೆ ಇವುಗಳು ಬ್ಯಾಟರಿ ನಷ್ಟ ಮಾಡುವುದಿಲ್ಲ.

ಫೋನ್‌ನ ಬಳಿ ಅಯಸ್ಕಾಂತ ಇದ್ದಲ್ಲಿ ಎಲ್ಲಾ ಮಾಹಿತಿ ಅಳಿಸಿ ಹೋಗುತ್ತದೆ
  

ಎಸ್‌ಎಸ್‌ಡಿ (ಸಾಲಿಡ್ ಸ್ಟೇಟ್ ಡ್ರೈವ್) ವಿಧವಾಗಿದ್ದು, ಅಯಸ್ಕಾಂತೀಯ ಹಾರ್ಡ್ ಡ್ರೈವ್‌ಗಳಾಗಿರುವುದಿಲ್ಲ. ಆದ್ದರಿಂದ ಅಯಸ್ಕಾಂತದ ಪರಿಣಾಮದಿಂದಾಗಿ ಸ್ಮಾರ್ಟ್‌ಫೋನ್ ಸಂಗ್ರಹಣೆ ಸಂಪೂರ್ಣವಾಗಿ ನಿರೋಧಕವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Every technology has myths attached to it. And its no different with smartphones. Here's the truth behind the five biggest smartphone myths.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot