ಮೋಟಾರ್ ಕ್ಷೇತ್ರದಲ್ಲಿ ಲೀಕೊದ ಹೊಸ ಪ್ರಯತ್ನ

Written By:

ಲೀಕೊ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಹೆಸರನ್ನು ಸೃಷ್ಟಿಸಿರುವುದು ನಮಗೆಲ್ಲಾ ತಿಳಿದೇ ಇದೆ. ಈಗ ತನ್ನ ಪಾಲುದಾರ ಕಂಪೆನಿ ಫೆರಾಡಿ ಪ್ಯೂಚರ್‌ನೊಂದಿಗೆ ಜತೆಗೂಡಿ ಹೆಚ್ಚು ನಿರೀಕ್ಷೆಯ ಅಕ್ಟೋಬರ್ 9 ರಂದು ನಡೆಯಲಿರುವ ಫಾರ್ಮುಲಾ ಇ ಹಾಂಕ್ ಕಾಂಗ್ ಇಪಿಕ್ಸ್ ಸೀಸನ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ಓದಿರಿ: ಲೀಕೊ ಲಿ ಮಿಲಿಯನ್ ಜಾಯ್ ಆಫರ್ಸ್ ವಿಶೇಷತೆ ಏನು?

ಕಾರು ರೇಸಿಂಗ್ ತಂಡವಾಗಿರುವ ಫೆರಾಡಿ ಫ್ಯೂಚರ್ ಡ್ರ್ಯಾಗನ್ ರೇಸಿಂಗ್ ಮಹೀಂದ್ರಾ ರೇಸಿಂಗ್‌ನೊಂದಿಗೆ ಸ್ಪರ್ಧೆಯನ್ನು ಹೊಂದಲಿದ್ದು, ಭಾರತದಿಂದ ಸ್ಪರ್ಧಿಸಲಿರುವ ತಂಡಗಳು ಚಾಂಪಿಯನ್‌ಶಿಪ್‌ನಲ್ಲಿ ತೊಡಗಿಸಿಕೊಳ್ಳಲಿವೆ.

ಓದಿರಿ: ಲೀಕೊ ಫ್ಲ್ಯಾಶ್‌ಸೇಲ್ ವೋಡಾಫೋನ್ ವಿಶೇಷ ಆಫರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೆರಾಡಿ ಫ್ಯೂಚರ್ ಡ್ರ್ಯಾಗನ್ ರೇಸಿಂಗ್

ಫೆರಾಡಿ ಫ್ಯೂಚರ್ ಡ್ರ್ಯಾಗನ್ ರೇಸಿಂಗ್

ರೇಸಿಂಗ್ ಸ್ಪರ್ಧಾತ್ಮಕವಾಗಿ ಆರಂಭವಾಗುವುದು ಫಾರ್ಮುಲಾ ಇ ಹಾಂಕ್ ಕಾಂಗ್ ಇಪ್ರಿಕ್ಸ್ ಆರಂಭದಲ್ಲಾಗಿದೆ. ಫಾರಾಡಿ ಫ್ಯೂಚರ್ ಟೆಕ್ನಿಕಲ್ ಪಾರ್ಟನರ್ ಆಗಿರುವ ಯುಎಸ್ ರೇಸಿಂಗ್ ಟೀಮ್ ಡ್ರ್ಯಾಗನ್ ರೇಸಿಂಗ್ ಅನ್ನು ಕಂಪೆನಿಯು ಫೆರಾಡಿ ಫ್ಯೂಚರ್ ಡ್ರ್ಯಾಗನ್ ರೇಸಿಂಗ್ ಎಂಬುದಾಗಿ ಬದಲಾಯಿಸಲಿದೆ.

ಇಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟಪ್

ಇಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟಪ್

ಕ್ಯಾಲಿಫೋರ್ನಿಯಾ ಮೂಲದ ಇಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟಪ್ ಆಗಿರುವ ಫೆರಾಡಿ ಫ್ಯೂಚರ್ ಲೀಕೊದೊಂದಿಗೆ ಸ್ಟ್ರಾಟಜಿಕ್ ಪಾಲುದಾರಿಕೆಯನ್ನು ಪಡೆದುಕೊಂಡಿದ್ದು ತನ್ನ ಪ್ರೊಟೊಟೈಪ್ FFZER01 ಕಾನ್ಸೆಪ್ಟ್ ಅನ್ನು 2016 ರಲ್ಲಿ ಅನಾವರಣಗೊಳಿಸಲಿದೆ. ಏಪ್ರಿಲ್‌ನಲ್ಲಿ ಫೆರಾಡಿ ಫ್ಯೂಚರ್ ತನ್ನ ಪ್ರಥಮ ಇಂಟರ್ನೆಟ್ ಸಂಪರ್ಕಿತ ಇಂಟಲಿಜೆಂಟ್‌ಗೆ ಬುನಾದಿಯನ್ನು ಹಾಕಿಕೊಡಲಿದ್ದು ಯುಎಸ್‌ನಲ್ಲಿ ಸ್ನೇಹಿ ಫ್ಯಾಕ್ಟ್ರಿಯನ್ನು ಆರಂಭಿಸಲಿದೆ.

ಸಂಪೂರ್ಣ ಕಾರ್ಯಕ್ಷಮತೆ

ಸಂಪೂರ್ಣ ಕಾರ್ಯಕ್ಷಮತೆ

ಫಾರ್ಮುಲಾ ಇ ನ ಸೀಸನ್ 3 ಆರಂಭದಿಂದ ಎರಡೂ ಜೊತೆಯಾಗಿ ಕಾರ್ಯನಿರ್ವಹಿಸಿ ವಾಹನದ ಸಂಪೂರ್ಣ ಕಾರ್ಯಕ್ಷಮತೆಯನ್ನು ಅಭಿವೃದ್ಧಿಗೊಳಿಸಲಿದೆ. ವಾಹನದ ಸಂಪೂರ್ಣ ಅಭಿವೃದ್ಧಿಯಲ್ಲಿ ಪ್ರಮುಖ ಕಾರ್ಯವನ್ನು ವಹಿಸಲಿದೆ. ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚುವರಿಯಾಗಿ ಫೆರಾಡೆ ಫ್ಯೂಚರ್ ತಂತ್ರಜ್ಞಾನದಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿದ್ದು, ಸಾಫ್ಟ್‌ವೇರ್, ಫರ್ಮ್‌ವೇರ್, ಮೋಟರ್ಸ್, ಗೇರ್ ಬಾಕ್ಸ್ ಮತ್ತು ಎಫ್ ಎಫ್ ಇಕಾಲನ್ ಇನ್‌ವರ್ಟರ್ ಅನ್ನು ರೇಸಿಂಗ್ ವೆಹಿಕಲ್‌ಗಳಿಗೆ ಅಭಿವೃದ್ಧಿಪಡಿಸಲಿದೆ.

ಫೆರಾಡೆ ಫ್ಯೂಚರ್ ಕುರಿತು ಒಂದೆರಡು ಮಾತು

ಫೆರಾಡೆ ಫ್ಯೂಚರ್ ಕುರಿತು ಒಂದೆರಡು ಮಾತು

ಕ್ಯಾಲಿಫೋರ್ನಿಯಾದಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿರುವ ಫೆರಾಡೆ, ಜಾಗತಿಕವಾಗಿ 10,000 ಉದ್ಯೋಗಿಗಳನ್ನು ಒಳಗೊಂಡಿದೆ ಇದರ ಉದ್ಯೋಗಿಗಳು ಸಾಕಷ್ಟು ಬುದ್ಧಿವಂತಿಕೆಯನ್ನು ಬೇರೆ ಬೇರೆ ವರ್ಗಗಳಲ್ಲಿ ಪಡೆದುಕೊಂಡಿದ್ದು ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ.

ಪಾಲುದಾರಿಕೆ

ಪಾಲುದಾರಿಕೆ

ಲೀಕೊದೊಂದಿಗೆ ಪ್ರಸ್ತುತ ಕಂಪೆನಿ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಹೆಚ್ಚು ಸ್ವಚ್ಛವಾಗಿರುವ ಇಲೆಕ್ಟ್ರಿಕ್ ವಾಹನಗಳನ್ನು ಫೆರಾಡೆ ಅಭಿವೃದ್ಧಿಗೊಳಿಸುತ್ತಿದ್ದು ಇದು ಸುಧಾರಿತ ಮೊಬಿಲಿಟಿ ಪರಿಹಾರಗಳನ್ನು ಸಮಾಜಕ್ಕೆ ಒದಗಿಸುವ ನಿಟ್ಟಿನಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Excitement is mounting and the air is electric as LeEco's strategic partner, Faraday Future moves ahead at full speed to make a majestic entry into the much-awaited, Season 3 of Formula E Hong Kong ePrix on October 9.
Please Wait while comments are loading...
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot