25 ರ ಹರೆಯದ ಯುವಕನ ಪ್ರಾಣಕ್ಕೆ ಸಂಚಕಾರವಾದ ಎಟಿಎಮ್
ಇಂದಿನ ಆಧುನಿಕ ಜಗತ್ತು ಹಲವಾರು ಮಾರ್ಪಾಡುಗಳ ಮೂಲಕ ನಮ್ಮನ್ನು ಬದಲಾಯಿಸುತ್ತಿದೆ. ಆಧುನಿಕ ಲೋಕಕ್ಕೆ ಇಷ್ಟವಿದ್ದೋ ಇಲ್ಲದೆಯೋ ನಾವು ಒಗ್ಗಿಕೊಳ್ಳುತ್ತಿದ್ದು ಈ ಲೋಕ ಒದಗಿಸುತ್ತಿರುವ ಎಲ್ಲಾ ಸೌಲಭ್ಯಗಳನ್ನು ನಾವು ಬಳಸುತ್ತಿದ್ದೇವೆ. ಆದರೆ ವಿಪರ್ಯಾಸವೆಂದರೆ ಇಂತಹ ಉತ್ಪನ್ನಗಳೇ ನಮ್ಮ ಪ್ರಾಣಕ್ಕೆ ಮುಳುವಾಗುತ್ತಿರುವುದು.
ಓದಿರಿ: ಹಾಲಿವುಡ್ ಸಿನಿಮಾಗಳ ಮೂಲಕ ಟೆಕ್ ಲೋಕಕ್ಕೊಂದು ಪ್ರಯಾಣ

ಹೌದು ಇಂದಿನ ಲೇಖನದಲ್ಲಿ ಎಸ್‌ಬಿಐ ಎಟಿಎಮ್ ಒಂದು ಯುವ ತರುಣನ ಬಾಳಿಗೆ ಮುಳ್ಳಾಗಿ ಪರಿಣಮಿಸಿದೆ. ತನ್ನ ಪಾಲಿನ ಯಮ ಎಟಿಎಮ್ ರೂಪದಲ್ಲಿ ಕಾಯುತ್ತಿದೆ ಎಂಬುದು ಈ 25 ರ ಹರೆಯದ ತರುಣನಿಗೆ ತಿಳಿದಿರಲಿಲ್ಲ.
ಅಲಹಾಬಾದ್‌ನ ಜಾಂಗೈಯಲ್ಲಿರುವ ಎಸ್‌ಬಿಐ ಎಟಿಎಮ್‌ಗೆ ಹಣ ಡ್ರಾ ಮಾಡಲೆಂದು ಹೋಗಿದ್ದ ಬ್ರಿಜೇಶ್ ಕುಮಾರ್ ಇಲೆಕ್ಟ್ರಿಕ್ ಶಾಕ್ ತಗುಲಿ ಮೃತರಾಗಿದ್ದಾರೆ. ಅವರು ಎಟಿಎಮ್ ಸ್ಲಾಟ್‌ಗೆ ಕಾರ್ಡ್ ತುರುಕಿಸುತ್ತಿದ್ದಂತೆ ಇದರಲ್ಲಿ ಶಾಕ್ ಉಂಟಾಗಿ ಬ್ರಿಜೇಟ್ ಮೃತರಾಗಿದ್ದಾರೆ.
ಓದಿರಿ: ವೈಫೈ ವೇಗಗೊಳಿಸಲು ಇಲ್ಲಿದೆ 10 ಸೂತ್ರಗಳು

ಈ ಸ್ಥಳದಲ್ಲಿ ವಾಸಿಸುತ್ತಿರುವ ಜನರಲ್ಲಿ ಈ ಘಟನೆ ಕ್ರೋಧವನ್ನುಂಟು ಮಾಡಿದ್ದು ಸಾವಿನ ಸೂಕ್ತ ತನಿಖೆಯಾಗದಿದ್ದಲ್ಲಿ ಕಟ್ಟದೊಳಗೆ ಬ್ಯಾಂಕ್ ಉದ್ಯೋಗಿಗಳನ್ನು ಬಂಧಿಸಿ ಮೃತ ಯುವಕನಿಗೆ ನ್ಯಾಯಯನ್ನೊದಗಿಸಲು ಜನತೆ ಸಜ್ಜಾಗಿದ್ದರು.
ಎಟಿಎಮ್ ಕೇಂದ್ರವು ಹಳೆಯ ಕಟ್ಟದಲ್ಲಿದೆ ಮತ್ತು ದೋಷಯುಕ್ತ ವೈರಿಂಗ್ ಮತ್ತು ಇತರ ಅಸಮರ್ಪಕತೆಯಿಂದ ಈ ಮರಣ ಸಂಭವಿಸಿದೆ. ಮತ್ತು ಮೃತ ವ್ಯಕ್ತಿ ಮಳೆಯಲ್ಲಿ ಸಂಪೂರ್ಣವಾಗಿ ಒದ್ದೆಯಾಗಿದ್ದರಿಂದ ಶಾಕ್ ತಗಲಿದೆ ಎಂದು ಘಟನೆಯನ್ನು ತನಿಖೆ ಮಾಡುತ್ತಿರುವ ಪೋಲೀಸ್ ಅಧಿಕಾರಿ ಎಸ್‌ಪಿ ದಿಗಂಬರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.


Click it and Unblock the Notifications