ಹಾಲಿವುಡ್ ಸಿನಿಮಾಗಳ ಮೂಲಕ ಟೆಕ್ ಲೋಕಕ್ಕೊಂದು ಪ್ರಯಾಣ

Written By:

ಇಂದಿನ ಹಾಲಿವುಡ್ ಧಮಾಕಾ ಸಿನಿಮಾಗಳು ತಂತ್ರಜ್ಞಾನದ ಹೊಚ್ಚ ಹೊಸ ಆವಿಷ್ಕಾರಗಳನ್ನು ಪೂರ್ತಿಯಾಗಿ ಪಡೆದುಕೊಂಡೇ ಬರುತ್ತಿವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಸಿನಿಮಾಗಳು ಮಾಡುವ ಮೋಡಿ ನಿಜಕ್ಕೂ ವರ್ಣನಾತೀತ.

ಓದಿರಿ: ಆಧುನಿಕ ಭವಿಷ್ಯದ ನೋಟ ಈ ಟಾಪ್ ಮ್ಯೂಸಿಯಮ್‌ಗಳಲ್ಲಿ

ಈ ಚಿತ್ರಗಳಲ್ಲಿ ಬಳಸುವ ತಂತ್ರಜ್ಞಾನ ಆವಿಷ್ಕಾರಗಳು ನಮಗೆ ಹೊಸ ಲೋಕದ ಪರಿಚಯವನ್ನೇ ಮಾಡುತ್ತವೆ. ಆ ಲೋಕದ ಸುತ್ತ ಗಿರಕಿ ಹೊಡೆಯುವುದೇ ಕತೂಹಲವನ್ನು ಇಮ್ಮಡಿಸುವ ಮೂಲ ಸಾಧನವಾಗಿದೆ. ಸಂಶೋಧನೆಗಳನ್ನು ನಡೆಸುತ್ತಾ ಪ್ರೇಕ್ಷಕ ಹೃದಯಕ್ಕೆ ನೇರಲಗ್ಗೆಯನ್ನಿಡುವ ಈ ಚಿತ್ರಗಳ ಲೋಕ ಒಂದು ಅನೂಹ್ಯ ವಿಜ್ಞಾನ ಲೋಕ.

ಓದಿರಿ: ನಿಮ್ಮ ಮನಗೆಲ್ಲಲಿರುವ ಹೊಚ್ಚಹೊಸ ಡಿವೈಸ್‌ಗಳು

ಇಂದಿನ ಲೇಖನದಲ್ಲಿ ನಾವು ನಿಮ್ಮನ್ನು ಇಂತಹುದೇ ಒಂದು ಟೆಕ್ ಲೋಕದ ಪ್ರಯಾಣವನ್ನು ಮಾಡಿಸುತ್ತಿದ್ದೇವೆ. ಹಾಗಿದ್ದರೆ ಆ ಲೋಕದ ಪ್ರಾಯಾಣವನ್ನು ಮಾಡಬನ್ನಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಂಪ್ಯೂಟರ್ ಮತ್ತು ತಂತ್ರಜ್ಞಾನದ ಬಳಕೆ

ಟ್ರೋನ್: ಲೆಗಸಿ

ಈ ಚಿತ್ರದ ತಯಾರಿಯಲ್ಲಿ ಕಂಪ್ಯೂಟರ್ ಮತ್ತು ತಂತ್ರಜ್ಞಾನದ ಬಳಕೆಯನ್ನು ಮಾಡಲಾಗಿದೆ. ಈ ಚಿತ್ರ ನಿಜಕ್ಕೂ ಅತ್ಯದ್ಭುತವಾಗಿದ್ದು, ಇದರಲ್ಲಿರುವ ವಿನ್ಯಾಸ ವಿಭಿನ್ನವಾಗಿದೆ.

ಫೇಸ್‌ಬುಕ್ ಮೂವಿ

ಸೋಶಿಯಲ್ ನೆಟ್‌ವರ್ಕ್

ಫೇಸ್‌ಬುಕ್ ಮೂವಿ ಎಂಬ ಹೆಸರಿನಿಂದಲೇ ಪ್ರಚಲಿತದಲ್ಲಿರುವ ಈ ಸಿನಿಮಾ ಪ್ರತಿಯೊಬ್ಬರನ್ನೂ ಹೌಹಾರುವಂತೆ ಮಾಡಿತ್ತು. ಹ್ಯಾಕಿಂಗ್ ಕೋಡ್‌ ಕುರಿತು ಈ ಚಿತ್ರ ಆಧರಿತವಾಗಿದೆ. ಆನ್‌ಲೈನ್ ಅನುಭವವನ್ನು ದೊಡ್ಡ ಪರದೆಗೆ ತರುವ ಪ್ರಯತ್ನವನ್ನು ಈ ಚಿತ್ರ ಮಾಡಿದೆ.

ಕಾಮಿಕ್ ಬುಕ್ ಚಿತ್ರ

ಐರನ್ ಮ್ಯಾನ್/ಐರನ್ ಮ್ಯಾನ್ 2

ಕಾಮಿಕ್ ಬುಕ್ ಚಿತ್ರವಾಗಿರುವ ಐರನ್ ಮ್ಯಾನ್ ಟೆಕ್ ಗೀಕ್ ಚಿತ್ರವಾಗಿದೆ. ಇದರಲ್ಲಿ ಬಳಸಿರುವ ಗ್ಯಾಜೆಟ್‌ಗಳೇ ತಂತ್ರಜ್ಞಾನ ಲೋಕವನ್ನು ಸಿನಿಮಾದಲ್ಲಿ ಬಳಸಲಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ.

ವರ್ಷದ ಉತ್ತಮ ಚಿತ್ರ

ಇನ್‌ಸೆಪ್ಶನ್

ವರ್ಷದ ಉತ್ತಮ ಚಿತ್ರ ಎಂಬ ಹೆಗ್ಗಳಿಕೆ ಇನ್‌ಸೆಪ್ಶನ್‌ನದಾಗಿದೆ. ತಾಂತ್ರಿಕ ಅಂಶಗಳನ್ನು ಚಿತ್ರವು ಒಳಗೊಂಡಿದೆ. ಬ್ಲ್ಯುರೆ ಮತ್ತು ಡಿವಿಡಿಯಲ್ಲಿ ಇನ್‌ಸೆಪ್ಶನ್ ಇದೀಗ ಲಭ್ಯವಿದೆ.

ತಂತ್ರಜ್ಞಾನದ ಪ್ರೇರಿತ ಚಿತ್ರ

ಅವತಾರ್

ತಂತ್ರಜ್ಞಾನದ ಪ್ರೇರಿತ ಚಿತ್ರವಾಗಿ ಅವತಾರ್ ಪರಿಗಣಿತವಾಗಿದೆ. ಜೇಮ್ಸ್ ಕ್ಯಾಮರೂನ್ ಚಿತ್ರದಲ್ಲಿ 3ಡಿ ಕ್ಯಾಮೆರಾವನ್ನು ಬಳಸಿಕೊಂಡಿದ್ದು ಅನಿಮೇಶನ್ ಮತ್ತು ಲೈವ್ ಆಕ್ಶನ್ ನಡುವಿನ ಜುಗಲ್ ಬಂಧಿಯನ್ನು ಚಿತ್ರದಲ್ಲಿ ಅವರು ನೀಡಿದ್ದಾರೆ.

ಇಂಟರ್ನೆಟ್ ಪಯೋನಿಯರ್

ವಿ ಲಿವ್ ಇನ್ ಪಬ್ಲಿಕ್

ಪ್ರಶಸ್ತಿ ಗಳಿಸಿದ ಈ ಚಿತ್ರವು, ಇಂಟರ್ನೆಟ್ ಪಯೋನಿಯರ್ ಎಂಬ ಮೆಚ್ಚುಗೆಗೆ ಪಾತ್ರವಾಗಿದೆ. ಇಂಟರ್ನೆಟ್‌ನ ಹೆಚ್ಚು ಬಳಕೆಯನ್ನು ಚಿತ್ರದಲ್ಲಿ ಮಾಡಲಾಗಿದೆ.

ರೊಬೋಟ್ ಕುರಿತ ಕಥೆ

ವಾಲ್ಲೆ - ಇ

ಏಕಾಂಗಿ ಮರೆತುಹೋಗಿರುವ ರೊಬೋಟ್ ಕುರಿತ ಕಥೆಯಾಗಿದೆ ವಾಲ್ಲೆ - ಇ. ತಂತ್ರಜ್ಞಾನವು ವಿಷಯಗಳನ್ನು ಎಷ್ಟು ಸರಳಗೊಳಿಸಬಲ್ಲುದು ಎಂಬ ತತ್ವವನ್ನು ಚಿತ್ರವು ಒಳಗೊಂಡಿದೆ.

ಹೆಚ್ಚು ಆಸಕ್ತಿಕರ ಚಿತ್ರ

ಕೊಲಾಪ್ಸಸ್

ಇದು ಕೂಡ ಹೆಚ್ಚು ಆಸಕ್ತಿಕರ ಚಿತ್ರ ಎಂಬ ಮೆಚ್ಚುಗೆಗೆ ಪಾತ್ರವಾಗಿದೆ. ಅನಿಮೇಶನ್ ಚಿತ್ರದಲ್ಲಿ ಪರಿಣಾಮಕಾರಿ ಪ್ರಭಾವವನ್ನು ಉಂಟುಮಾಡಿದ್ದು ಆಸಕ್ತಿಕರ ಟೆಕ್ನಾಲಜಿ ಪ್ರೇರಿತ ಕಥೆಯನ್ನಾಗಿಸಿದೆ.

ತಂತ್ರಜ್ಞಾನ ಆಧಾರಿತ ಕಥೆ

ಮೈನೊರಿಟಿ ರಿಪೋರ್ಟ್

2054 ರಲ್ಲಿ ಜಗತ್ತು ಹೇಗೆ ಕಾಣುತ್ತದೆ ಎಂಬುದನ್ನು ಈ ಚಿತ್ರ ತೋರಿಸುತ್ತದೆ. ತಂತ್ರಜ್ಞಾನ ಆಧಾರಿತ ಕಥೆಯಾಗಿ ಸಿನಿಮಾ ಮೂಡಿಬಂದಿದೆ.

ವಿಜ್ಞಾನ ಆಧಾರಿತ ಕಥಾ ಹಂದರ

2001: ಎ ಸ್ಪೇಸ್ ಒಡಿಸಿ

ವಿಜ್ಞಾನ ಆಧಾರಿತ ಕಥಾ ಹಂದರವನ್ನು 2001: ಎ ಸ್ಪೇಸ್ ಒಡಿಸಿ ಒಳಗೊಂಡಿದೆ. 2001: ಎ ಸ್ಪೇಸ್ ಒಡಿಸಿ ಆಧುನಿಕ ಇತಿಹಾಸದಲ್ಲಿ ಹೆಚ್ಚು ಪ್ರಭಾವಿ ಮತ್ತು ಪ್ರಮುಖ ಚಿತ್ರವನ್ನಾಗಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are 10 of the best movies for modern tech enthusiasts.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot