ಮೊಬೈಲ್‌ನಲ್ಲಿ ಆಕಾಶವಾಣಿ ವಾರ್ತೆಗಳನ್ನು ಓದಿ
ಆಲ್ ಇಂಡಿಯಾ ನ್ಯೂಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್.ಇನ್ನು ಮುಂದೆ ನೀವು ಮೊಬೈಲ್‌ನಲ್ಲಿ ಆಕಾಶವಾಣಿ ವಾರ್ತೆಗಳನ್ನು ಓದಬಹುದು. ಆಲ್ ಇಂಡಿಯಾ ರೇಡಿಯೋ ಜನರಿಗೆ ಇಂಗ್ಲಿಷ್ ಭಾಷೆಯಲ್ಲಿರುವ ಎಸ್‌ಎಂಎಸ್ ಮೂಲಕ ಸುದ್ದಿ ನೀಡಲು ಮುಂದಾಗಿದೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಮನೀಶ್ ತಿವಾರಿ ಈ ಎಸ್‌ಎಂಎಸ್ ಆಧಾರಿತ ರೇಡಿಯೋ ಸುದ್ದಿಗೆ ಚಾಲನೆ ನೀಡಿದ್ದಾರೆ. ಆಲ್ ಇಂಡಿಯಾ ರೇಡಿಯೋ ಎಸ್‌ಎಂಎಸ್ ಸೇವೆಯನ್ನು ಸದ್ಯದಲ್ಲೇ ಆರಂಭಿಸಲಿದೆ ಎಂದು ಗಿಝ್‌ಬಾಟ್ ಈ ಹಿಂದೆ ತಿಳಿಸಿತ್ತು.ಮನೀಷ್ ತಿವಾರಿ ಎಸ್‌ಎಂಎಸ್ ಆಧಾರಿತ ರೇಡಿಯೋ ಸುದ್ದಿಗೆ ಚಾಲನೆ ನೀಡುವುದರ ಜೊತೆಗೆ ಭಾರತ್ ನಿರ್ಮಾಣ್ ವೆಬ್ ಪೋರ್ಟಲ್‌ಗೆ ಚಾಲನೆ ನೀಡಿದ್ದಾರೆ.

ಆಲ್ ಇಂಡಿಯಾ ರೇಡಿಯೋದ ಎಸ್‌ಎಂಎಸ್ ಸುದ್ದಿ ಪಡೆದುಕೊಳ್ಳಲು ನೀವು ಮಾಡಬೇಕಾದ್ದು ಇಷ್ಟೇ.
ಮೊಬೈಲ್‌ನಿಂದ AIRNWS ಎಂದು ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ನಿಮ್ಮ ಹೆಸರನ್ನು ಟೈಪ್ ಮಾಡಿ 08082080820 ನಂಬರ್‌ಗೆ ಮೆಸೇಜ್ ಮಾಡಿ. ಅಥವಾ 08082080820 ನಂಬರ್‌ಗೆ ಮಿಸ್‌ಕಾಲ್ ಕೊಡುವ ಮೂಲಕ ಎಸ್‌ಎಂಎಸ್ ಸುದ್ದಿಯನ್ನು ಪಡೆದುಕೊಳ್ಳಬಹುದು.
ಟ್ವೀಟರ್ ಮತ್ತು ಫೇಸ್‌ಬುಕ್‌ನಲ್ಲಿ ಸಕ್ರೀಯವಾಗಿರುವ ಆಲ್ ಇಂಡಿಯಾ ರೇಡಿಯೋ ಇದೇ ಮಾರ್ಚ್‌ನಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗ್ರಾಹಕರಿಗಾಗಿ ಅಪ್ಲಿಕೇಶನ್ ಸಿದ್ದಪಡಿಸಿ ಸುದ್ದಿ ನೀಡಲು ಆರಂಭಿಸಿತ್ತು. ಈಗ ಜನರ ಮೊಬೈಲ್‌ಗೆ ನೇರವಾಗಿ ಮೆಸೇಜ್ ಕಳುಹಿಸಿ ಸುದ್ದಿ ನೀಡಲು ಮುಂದಾಗಿದೆ.
ಇದನ್ನೂ ಓದಿ: ಮತದಾನದ ಬಗ್ಗೆ ಫೇಸ್‌ಬುಕ್‌ನಿಂದ ಯುವಜನತೆಗೆ ಜಾಗೃತಿ


Click it and Unblock the Notifications