Subscribe to Gizbot

ಮೈಕ್ರೋಮ್ಯಾಕ್ಸ್‌ ಖರೀದಿಸಲಿದೆ ಕೊರಿಯನ್‌ ಕಂಪೆನಿ!

Posted By:

ರಷ್ಯಾದಲ್ಲಿ ಸ್ಮಾರ್ಟ್‌‌‌ಫೋನ್‌ ಬಿಡುಗಡೆ ಮಾಡಿದ ದೇಶೀಯ ನಂಬರ್‌ ಒನ್‌ ಸ್ಮಾರ್ಟ್‌‌ಫೋನ್‌ ತಯಾರಕ ಕಂಪೆನಿ ಮೈಕ್ರೋಮ್ಯಾಕ್ಸ್‌ ಈಗ ಕೊರಿಯನ್‌ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿಯನ್ನು ಖರೀದಿಸಲು ಮುಂದಾಗಿದೆ.

ದಕ್ಷಿಣ ಕೊರಿಯದ ಮಾರುಕಟ್ಟೆಯಲ್ಲಿ ಮೂರನೇ ಸ್ಥಾನದಲ್ಲಿರುವ ಪ್ಯಾಂಟೆಕ್(Pantech) ಕಂಪೆನಿಯನ್ನು ಮೈಕ್ರೋಮ್ಯಾಕ್ಸ್‌‌ ಖರೀದಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಎಷ್ಟು ಪ್ರಮಾಣದ ಪಾಲನ್ನು ಮೈಕ್ರೋಮ್ಯಾಕ್ಸ್‌ ಖರೀದಿಸಲಿದೆ ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇನ್ನು ಹೊರ ಬಿದ್ದಿಲ್ಲ.

ದೇಶೀಯ ಟೆಕ್‌ ಮಾಧ್ಯಮಗಳು ಈ ಸುದ್ದಿಯನ್ನು ಬಹಿರಂಗಪಡಿಸಿದ್ದರೂ ಮೈಕ್ರೋಮ್ಯಾಕ್ಸ್‌ ಪ್ಯಾಂಟೆಕ್ ಖರೀದಿ ವಿಚಾರಗಳ ಬಗ್ಗೆ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.

 ಮೈಕ್ರೋಮ್ಯಾಕ್ಸ್‌ ಖರೀದಿಸಲಿದೆ ಕೊರಿಯನ್‌ ಕಂಪೆನಿ!

ಖರೀದಿ ಯಾಕೆ?

ಕೊರಿಯದಲ್ಲಿ ಸ್ಯಾಮ್‌ಸಂಗ್ ಮತ್ತು ಎಲ್‌ಜಿ ಕಂಪೆನಿಗಳು ಅನುಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದೆ. ಈ ಕಂಪೆನಿಗಳ ಸ್ಮಾರ್ಟ್‌‌‌ಫೋನ್‌ ಅಬ್ಬರದ ನಡುವೆ ಮಾರುಕಟ್ಟೆಯಲ್ಲಿ ಗ್ರಾಹರನ್ನು ತನ್ನತ್ತ ಸೆಳೆಯಲು ಪ್ಯಾಂಟೆಕ್ ಕಂಪೆನಿ ಹೆಣಗಾಡುತ್ತಿದೆ. ಹೀಗಾಗಿ ಈ ಕಂಪೆನಿಯಲ್ಲಿ ಪಾಲನ್ನು ಖರೀದಿಸುವ ಮೂಲಕ ಕೊರಿಯದ ಸ್ಮಾರ್ಟ್‌‌ಫೋನ್‌ ಮಾರುಕಟ್ಟೆ ಪ್ರವೇಶ ಮಾಡಲು ಮೈಕ್ರೋಮ್ಯಾಕ್ಸ್‌ ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಅಮೆರಿಕ,ಜಪಾನ್‌ನಲ್ಲೂ ಮಾರುಕಟ್ಟೆಯನ್ನು ಹೊಂದಿರುವ ಪ್ಯಾಂಟೆಕ್  ಕಂಪೆನಿಯಲ್ಲಿ ಕ್ವಾಲಕಂ ಶೇ.12,ಸ್ಯಾಮ್‌ಸಂಗ್‌ ಶೇ.10 ಮತ್ತು ಒಂಭತ್ತು ಬ್ಯಾಂಕ್‌ಗಳು ಸೇರಿ ಶೇ.37 ಪಾಲನ್ನು ಹೊಂದಿದೆ.

ದೇಶೀಯ ಕಂಪೆನಿಗಳ ಉತ್ಪನ್ನಗಳ ಪ್ರಚಾರಕ್ಕೆ ಹಾಲಿವುಡ್‌ ಸೆಲೆಬ್ರಿಟಿಗಳ್ಯಾರು ಇದುವರೆಗೂ ರಾಯಭಾರಿಗಳಾಗಿರಲಿಲ್ಲ.ಆದರೆ ಮೈಕ್ರೋಮ್ಯಾಕ್ಸ್‌ ತನ್ನ ಮೊದಲ ಫುಲ್‌ ಎಚ್‌ಡಿ ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಫೋನ್‌ ಕ್ಯಾನ್‌ವಾಸ್‌ ಟರ್ಬೋ‌ಗೆ ಆಸ್ಟ್ರೇಲಿಯಾದ ಹಾಲಿವುಡ್‌ ಸೆಲೆಬ್ರಿಟಿ ಹ್ಯೂ ಜ್ಯಾಕ್‌ಮನ್‌ರನ್ನು ನೇಮಿಸಿತ್ತು. ಈ ಮೂಲಕ ಪ್ರಪ್ರಥಮ ಬಾರಿಗೆ ಹಾಲಿವುಡ್‌‌ ಸೆಲೆಬ್ರಿಟಿಯನ್ನು ಜಾಹೀರಾತಿಗೆ ನೇಮಿಸಿದ ಕಂಪೆನಿ ಎಂಬ ಹಿರಿಮೆಗೆ ಮೈಕ್ರೋಮ್ಯಾಕ್ಸ್ ಈ ಹಿಂದೆ ಪಾತ್ರವಾಗಿತ್ತು.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot