ಮೈಕ್ರೋಸಾಫ್ಟ್‌ ಸಿಇಒ ಪಟ್ಟ: ಮುಂಚೂಣಿಯಲ್ಲಿ ಸತ್ಯ ನಾಡೆಲ್ಲಾ ಹೆಸರು

By Ashwath
|

ವಿಶ್ವದ ಎರಡನೇ ಬ್ರ್ಯಾಂಡ್‌ ಕಂಪೆನಿ ಮೈಕ್ರೋಸಾಫ್ಟ್‌ ಸಿಇಒ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಸತ್ಯ ನಾಡೆಲ್ಲಾ ಹೆಸರು ಮುಂಚೂಣಿಯಲ್ಲಿದೆ.ಮಣಿಪಾಲದಲ್ಲಿ ಇಂಜಿನಿಯರಿಂಗ್‌ ವ್ಯಾಸಂಗ ಮಾಡಿದ್ದ ಸತ್ಯ ನಾಡೆಲ್ಲಾ ಮತ್ತು ಫೋರ್ಡ್ ಮೋಟಾರ್ಸ್‌‌ನ ಅಲನ್‌ ಮುಲಲೆ(Alan Mulally)ಹೆಸರುಗಳನ್ನು ಮೈಕ್ರೋಸಾಫ್ಟ್‌‌ ಅಂತಿಮಗೊಳಿಸಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಲಾರಂಭಿಸಿದೆ.

ಮೈಕ್ರೋಸಾಫ್ಟ್‌‌ನ ಸಿಇಒ ಸ್ವೀವ್‌ ಬಾಲ್ಮರ್‌‌ ನಿವೃತ್ತಿ ಹಿನ್ನೆಲೆಯಲ್ಲಿ,ಈ ಹುದ್ದೆಗೆ ಮೈಕ್ರೋಸಾಫ್ಟ್‌‌ ಶೋಧ ನಡೆಸುತ್ತಿದ್ದು ಅಂತಿಮವಾಗಿ ಸತ್ಯ ನಾಡೆಲ್ಲಾ ಅಥವಾ ಅಲನ್‌ ಮುಲಲೆ ಇಬ್ಬರಲ್ಲಿ ಒಬ್ಬರು ಮೈಕ್ರೋಸಾಫ್ಟ್‌‌‌‌‌ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

ಆದರೆ ಈ ವರದಿಗೆ ಮೈಕ್ರೋಸಾಫ್ಟ್‌ ಮತ್ತು ನೋಕಿಯಾ ಕಂಪೆನಿಯ ವಕ್ತಾರರು ಯಾವುದೇ ಪ್ರತಿಕ್ರಿಯೇ ನೀಡಿಲ್ಲ.ಫೋರ್ಡ್‌ ಕಂಪೆನಿ ಸಹ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ಮೈಕ್ರೋಸಾಫ್ಟ್‌ ಸಿಇಒ ಪಟ್ಟ: ಮುಂಚೂಣಿಯಲ್ಲಿ ಸತ್ಯ ನಾಡೆಲ್ಲಾ ಹೆಸರು

ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ 2000ರ ಜನವರಿಯಲ್ಲಿ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯಿಂದ ಕೆಳಗಿಳಿದು, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಿಲ್‌ ಗೇಟ್ಸ್‌ ನಂತರ ಮೈಕ್ರೋಸಾಫ್ಟ್‌ ಕಾರ್ಯ‌ನಿರ್ವ‌ಹಣಾಧಿಕಾರಿ ಪಟ್ಟ ಸ್ಟೀವ್‌ ಬಾಲ್ಮರ್‌ಗೆ ಲಭಿಸಿತ್ತು. ಬಿಲ್‌ ಗೇಟ್ಸ್‌ ಹೊರನಡೆದಾಗ ಮೈಕ್ರೋಸಾಫ್ಟ್‌ ಕಂಪನಿ 38 ಲಕ್ಷ ಕೋಟಿ ರೂ.ನಷ್ಟು ಮಾರುಕಟ್ಟೆ ಮೌಲ್ಯ ಹೊಂದಿತ್ತು. ಆದರೆ ಕಳೆದ 13 ವರ್ಷಗಳಲ್ಲಿ ಕಂಪನಿಯ ಮೌಲ್ಯ 17 ಲಕ್ಷ ಕೋಟಿ ರೂ.ಗೆ ಇಳಿದಿತ್ತು.

ಕಂಪೆನಿಯ 38 ವರ್ಷದ ಇತಿಹಾಸದಲ್ಲಿ ಮೈಕ್ರೋಸಾಫ್ಟ್‌ನ್ನು ಇದುವರೆಗೆ ಎರಡು ಸಿಇಒಗಳು ಮುನ್ನಡೆಸಿದ್ದರು. ಈಗ ಎರಡನೇ ಸಿಇಒ ಸ್ಟೀವ್‌ ಬಾಲ್ಮರ್‌ ಅಗಸ್ಟ್‌‌ ತಿಂಗಳಿನಲ್ಲಿ ಹುದ್ದೆಗೆ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದರು. ಈಗ ಮೈಕ್ರೋಸಾಫ್ಟ್‌ ಆಡಳಿತ ಮಂಡಳಿ ಮೂರನೇ ಸಿಇಒ ನೇಮಕಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಈ ಪಟ್ಟವನ್ನು ಏರುವ ಪಟ್ಟಿಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಐವರು ಮೈಕ್ರೋಸಾಫ್ಟ್‌ ಉದ್ಯೋಗಿಗಳು ಮುಂಚೂಣಿಯಲ್ಲಿದ್ದರು.

ಸತ್ಯ ನಾಡೆಲ್ಲಾ:
ಹೈದರಾಬಾದ್‌‌ನವರಾದ ಸತ್ಯ, ಮಣಿಪಾಲ ಇನ್ಸ್‌ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ಪದವಿ ವ್ಯಾಸಂಗ ಮಾಡಿದ್ದಾರೆ. ಸನ್‌ ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗಿಯಾಗಿದ್ದ ಅವರು 1992ರಲ್ಲಿ ಮೈಕ್ರೋಸಾಫ್ಟ್ ಸೇರಿಕೊಂಡಿದ್ದರು. ಪ್ರಸ್ತುತ ಮೈಕ್ರೋಸಾಫ್ಟ್‌‌ ಕ್ಲೌಡ್‌ ಮತ್ತು ಎಂಟರ್‌ಪ್ರೈಸ್‌ ವಿಭಾಗದ ಮುಖ್ಯಸ್ಥರಾಗಿ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ.

ಇದನ್ನೂ ಓದಿ: ಟಾಪ್‌ ಐಟಿ ಕಂಪೆನಿಗಳ ಹಿಂದಿರುವ ಭಾರತೀಯರು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X