Home
ಸುದ್ದಿಜಾಲ

ಪ್ರತಿಯೊಬ್ಬರನ್ನು ನಿಬ್ಬೆರಗಾಗಿಸುವ 'ಬಿಲ್‌ ಗೇಟ್ಸ್‌' ಮನೆ ಹೇಗಿದೆ ಗೊತ್ತಾ?

By Suneel

ಬಹುಸಂಖ್ಯಾತ ಜನರು ಜಗತ್ತಿನಲ್ಲಿಯೇ ಶ್ರೀಮಂತ ವ್ಯಕ್ತಿ ಅವರು, ಅಮೇರಿಕದ ಉದ್ಯಮ ದಿಗ್ಗಜ, ಉದ್ಯಮಿ, ಲೋಕೋಪಚಾರಿ, ಕಂಪ್ಯೂಟರ್‌ ಪ್ರೋಗ್ರಾಮರ್‌ ಅವರು ಅಂತೆಲ್ಲಾ ಕರೆಯುತ್ತಾರೆ. ಅವರು ಯಾರು ಗೊತ್ತಾ? ಅವರು ಬೇರೆ ಯಾರು ಅಲ್ಲಾ. 1975 ರಲ್ಲಿ ಸ್ಥಾಪಿಸಿದ ಮೈಕ್ರೋಸಾಫ್ಟ್‌ ಕಂಪನಿಯ ಸಂಸ್ಥಾಪಕ "ಬಿಲ್ಸ್‌ ಗೇಟ್ಸ್‌". ಆದ್ರೆ ಅವರು ವಾಸಿಸುತ್ತಿರುವ ಮನೆ ಮಾತ್ರ ರಟ್ಟಿನ ಪೆಟ್ಟಿಗೆ ರೀತಿಯಲ್ಲಿ ಕಾಣುತ್ತದೆ ಎಂದು ಕರೆಯುತ್ತಾರೆ. ಆದ್ರೆ ನಾವು ಅಂತಹ ಊಹಾಪೋಹಗಳನ್ನು ಖಚಿತಪಡಿಸದೆ ಹಾಗೆ ಇರುವುದಿಲ್ಲಾ.

ಅಬ್ಬಬ್ಬಾ ಅಂದ್ರೆ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌'ರವರ ಮನೆಯಲ್ಲಿ ಏನಿರಬಹುದು. ಅವರು ಸ್ಫೂರ್ತಿಗೊಂಡ ಗ್ಯಾಜೆಟ್‌ಗಳು, ವೈಜ್ಞಾನಿಕ ವಸ್ತುಗಳು, ಹಾಗೆ ಅಲ್ಪ ಸ್ವಲ್ಪ ಸ್ಟಾರ್ ಟ್ರೆಕ್‌ ವಸ್ತುಗಳು ಇರಬಹದಾ... ಬಹುಶಃ ಯಾರಿಗೂ ಊಹಿಸಲಾಗದಂತಹ ಅತ್ಯುತ್ತಮ ವಾತಾವರಣ ಇರಬಹುದು. ಅಚ್ಚರಿ ಪಡುವಂತಹ ಕುತೂಹಲಾತ್ಮಕ ಕಲಾತ್ಮಕ ವಿನ್ಯಾಸದಲ್ಲಿ ಅವರ ಮನೆ ಇರಬಹುದಾ ಅಥವಾ ಟೆಕ್‌ ಉದ್ಯಮಿಯಂತೆ ತಂತ್ರಜ್ಞಾನಾಧಾರಿತ ಸ್ಮಾರ್ಟ್‌ ಲುಕ್‌ ಅನ್ನು ಮನೆ ಹೊಂದಿದೆಯಾ... ಪ್ರಖ್ಯಾತ ಟೆಕ್‌ ಉದ್ಯಮಿಗಳ ಯಾವುದೇ ವಿಷಯ ಆದ್ರು ಸಹ ಆ ವಿಷಯ ತಿಳಿಯುವವರೆಗೆ ಕುತೂಹಲ ಹಾಗೆ ನಿಲ್ಲಲಾರದು ಅಲ್ವಾ. ಗಿಜ್‌ಬಾಟ್‌ನ ಇಂದಿನ ಲೇಖನ ಓದಿ ಬಿಲ್‌ ಗೇಟ್ಸ್‌'ರವರ ಮನೆ ಇರುವ ಸ್ಥಳ, ಮನೆಯ ವಿನ್ಯಾಸ, ಮನೆಯೊಳಗಿನ ಸೌಂದರ್ಯ ಎಂತಹವರನ್ನು ಬೆರಗುಗೊಳಿಸುವ ವಿನ್ಯಾಸ ತಿಳಿಯಿರಿ.

1

1

ಅಂದಹಾಗೆ ನೀವು ಮೊದಲಿಗೆ ನೋಡುತ್ತಿರುವ ಈ ಪ್ರಸಿದ್ಧ ಫೋಟೋ ಬಿಲ್‌ಗೇಟ್ಸ್‌'ರವರ ಮನೆಯೊಳಗಿನ ಮನಿಬ್ಯಾಗ್ಸ್ ಪ್ರದೇಶ. ಆದ್ರೆ ಮುಂದಿನ ಸ್ಲೈಡರ್‌ಗಳನ್ನು ಓದಿ ಅವರ ಮನೆ ಬಗ್ಗೆ ವಿಶೇಷ ಮಾಹಿತಿ ತಿಳಿಯಿರಿ.
ಚಿತ್ರ ಕೃಪೆ: http://www.propertyinvestmentproject.co.uk/blog/bill-gates-house/

2

2

ಬಿಲ್‌ ಗೇಟ್ಸ್‌'ರವರ ಮನೆ ವಾಷಿಂಗ್ಟನ್‌'ನ ಮೆಡಿನಾ ಬೆಟ್ಟದ ಮೇಲೆ ನಿಂತು ನೋಡಿದರೆ ಕಾಣುವ ಸರೋವರದ ಪಕ್ಕದಲ್ಲಿ ವಿಶಾಲ ಭೂಮಿಯಲ್ಲಿ ಇದೆ. ಅಂದಹಾಗೆ ಯಾರಾದರೂ ಅಪ್ಪಣೆ ಇಲ್ಲದೇ ಭೇಟಿ ನೀಡಲು ಪ್ರಯತ್ನಿಸಿದರೆ ರೋಬೋಟ್‌ಗಳಿಂದಲೇ ದಾಳಿಗೆ ಒಳಗಾಗುತ್ತಾರೆ. ಕಾರಣ ಬಿಲ್‌ ಗೇಟ್ಸ್‌ರವರ ಮನಿಬ್ಯಾಗ್ಸ್‌ ಸ್ಥಳದಲ್ಲಿ ಲೇಸರ್‌ ಗನ್‌ ಹೊಂದಿರುವ ರೋಬೋಟ್‌ಗಳು ಇವೆ.

3

3

ಜೇಮ್ಸ್‌ ಕಟ್ಲರ್‌ ಎಂಬ ವ್ಯಕ್ತಿಯೊಬ್ಬರು ಬಿಲ್‌ ಗೇಟ್ಸ್‌ರವರ ಮನೆಯನ್ನು ವಿನ್ಯಾಸಗೊಳಿಸಿದ್ದಾರೆ. ಇದು ಉತ್ತರವೆಸ್ಟ್‌'ನ 'ಪೆಸಿಫಿಕ್‌ ಲಾಡ್ಜ್‌" ಶೈಲಿಯಲ್ಲಿ ವಿನ್ಯಾಸಗೊಂಡಿದೆ.

4

4

ವಿಶೇಷ ಅಂದ್ರೆ ಬಿಲ್‌ ಗೇಟ್ಸ್‌'ರವರ ಮನೆಯನ್ನು ಕೇವಲ ಬೃಹತ್‌ ಮರಗಳ ಪ್ಯಾನೆಲ್‌ನಿಂದ ನಿರ್ಮಿಸಿದ್ದು, 'ಕ್ಯಾಬಿನ್‌ ಲಾಡ್ಜ್‌" ಸಹ ಇದೆ. ವಿನ್ಯಾಸಕ್ಕೆ ಕಂಪ್ಯೂಟರ್‌ ಬಳಸಿಕೊಳ್ಳಲಾಗಿದೆ.

5

5

ಬಿಲ್‌ ಗೇಟ್ಸ್‌'ರವರು ಪ್ರಸ್ತುತದಲ್ಲಿರುವ ಮನೆಯ ವಿಶಾಲ ಭೂಮಿಯನ್ನು 1988 ರ ಹಿಂದೆ $2 ಮಿಲಿಯನ್‌ ಬೆಲೆಗೆ ಖರೀದಿಸಿದ್ದರು. ಆದರೆ ಇದರ ಬೆಲೆ 2005 ಕ್ಕೆ $200 ಮಿಲಿಯನ್‌ ಆಗಿತ್ತು. ಇದರ ವಾರ್ಷಿಕ ಆಸ್ತಿ ತೆರಿಗೆ $991,000.

6

6

ಬಿಲ್‌ ಗೇಟ್ಸ್‌'ರವರ ಮನೆಯ ವಿಸ್ತೀರ್ಣ 50,000 ಚದರ ಅಡಿಯಲ್ಲಿ 5.15 ಎಕರೆ ಜಮೀನಿನಿಂದ ಆವೃತ್ತವಾಗಿದೆ. ಅಲ್ಲದೇ ಗ್ಯಾರೇಜ್‌ ಸ್ಪೇಸ್‌ 16,000 ಚದರ ಅಡಿ ಸ್ಥಳವನ್ನು ಆವರಿಸಿದೆ.

7

7

ಬಿಲ್‌ ಗೇಟ್ಸ್'ರವರ ಮನೆಯ ಈಜುಕೊಳ 17 × 60 ವಿಸ್ತೀರ್ಣವಿದ್ದು, ಅಂಡರ್‌ವಾಟರ್‌ ಸಂಗೀತ ವ್ಯವಸ್ಥೆಗೊಳಿಸಲಾಗಿದೆ. ವಿಶೇಷ ನೆಲದಡಿ ವಿನ್ಯಾಸ ನೀಡಲಾಗಿದೆ.

8

8

ಬಿಲ್ ಗೇಟ್ಸ್‌ ಮನೆಯಲ್ಲಿ ಬೆಂಕಿ ಹಾಕುವ ಸ್ಥಳವಿದು.

9

9

ಬಿಲ್‌ ಗೇಟ್ಸ್‌ ಮನೆಯ ವರ್ಚುವಲ್ ವೀಕ್ಷಣೆ ಡಿಜಿಟಲ್‌ ವಿನ್ಯಾಸದಲ್ಲಿ ನೋಡುವುದಾದರೆ ಹೇಗಿದೆ ನೋಡಿ.

10

10

ಬಿಲ್‌ ಗೇಟ್ಸ್‌'ರವರ ಮನೆಯೊಳಗಿರುವ ವ್ಯಾಯಾಮಕ್ಕಾಗಿ ಬಳಸುವ ಟ್ರಂಪೊಲೈನ್ ಹಾಲ್ ಇದು. 200 ಚದರ ಮೀಟರ್‌ ವಿಸ್ತೀರ್ಣವಿದೆ.

11

11

ಬಿಲ್‌ ಗೇಟ್ಸ್‌'ರವರ ಮನೆಯೊಳಗಿರುವ ಸುಂದರವಾದ ಭೋಜನ ಹಜಾರವಿದು.

12

12

ಬಿಲ್‌ ಗೇಟ್ಸ್‌'ರವರ ಮನೆಯ ಒಳಗಿನ ವಿನ್ಯಾಸವನ್ನು ಸಹ ಬೃಹತ್‌ ಮರ ಬಳಸಿ ನಿರ್ಮಿಸಿರುವುದಕ್ಕೆ ಈ ಚಿತ್ರ ಸಾಕ್ಷಿ. ಆದರೆ ಇವರ ಮನೆಗೆ ಬಳಸಲಾಗಿರುವ ಮರ ಪ್ರಪಂಚದಾದ್ಯಂತದ ಅಪರೂಪದ ಮರಗಳು. ಇವರ ಮನೆಗೆ ಮಾತ್ರ ಈ ರೀತಿಯ ಮರಗಳನ್ನು ಬಳಸಲಾಗಿರುವುದು.

ಗಿಜ್‌ಬಾಟ್‌

ಗಿಜ್‌ಬಾಟ್‌

Best Mobiles in India

English summary
Mind Blowing Bill Gates House & Inside Pictures. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+