ಬಿಲ್ ಗೇಟ್ಸ್ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದು ಹೇಗೆ?

By Shwetha
|

1999 ರಲ್ಲಿ ಬಿಲ್ ಗೇಟ್ಸ್ "Business @ the Speed of Thought" ಎಂಬ ಪುಸ್ತಕವನ್ನು ಬರೆದಿದ್ದರು. ಈ ಪುಸ್ತಕದಲ್ಲಿ ಗೇಟ್ಸ್ 15 ಟೆಕ್ ಸಂಬಂಧಿ ಭವಿಷ್ಯವಾಣಿಗಳನ್ನು ನುಡಿದಿದ್ದರು. ಅವರ ಈ ಮುನ್ನೋಟಗಳು ಇಂದಿನ ಟೆಕ್ ಯುಗದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಆ ಕಾಲದಲ್ಲಿಯೇ ಇಂದಿನ ಪ್ರಚಲಿತ ಟೆಕ್ ವಿದ್ಯಮಾನವನ್ನು ಅವರು ಅರಿತಿದ್ದರು ಎಂಬುದು ನಮ್ಮನ್ನು ವಿಸ್ಮುಗೊಳಿಸುತ್ತದೆ.

ಓದಿರಿ: ಮೈಕ್ರೋಸಾಫ್ಟ್ ಪ್ರಥಮ ಸೆಲ್ಫೀ ಫೋನ್ ಕಮಾಲ್

ಇಂದಿನ ಲೇಖನದಲ್ಲಿ ಆ ಮುನ್ನೋಟಗಳು ಯಾವುವು ಎಂಬುದನ್ನು ಸರಳ ವಿಧಾನಗಳಲ್ಲಿ ನಾವು ಅರಿತುಕೊಳ್ಳಲಿರುವೆವು.

ಸೈಟ್‌ಗಳಲ್ಲಿ ಬೆಲೆ ಹೋಲಿಕೆ

ಸೈಟ್‌ಗಳಲ್ಲಿ ಬೆಲೆ ಹೋಲಿಕೆ

ನಾವು ಸುಲಭವಾಗಿ ಗೂಗಲ್ ಅಥವಾ ಅಮೆಜಾನ್‌ಗಳಲ್ಲಿ ಒಂದೇ ಉತ್ಪನ್ನಕ್ಕೆ ನಿಗದಿಪಡಿಸಿರುವ ಬೆಲೆಗಳಲ್ಲಿ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಈ ಮುನ್ನೋಟ ಬಿಲ್‌ಗೇಟ್ಸ್‌ ಕಂಡಿದ್ದರು.

ಮೊಬೈಲ್ ಡಿವೈಸ್‌ಗಳು

ಮೊಬೈಲ್ ಡಿವೈಸ್‌ಗಳು

ಮೊಬೈಲ್ ಡಿವೈಸ್‌ಗಳು ಇಂದು ಸಂಪರ್ಕ ಮತ್ತು ಸಂವಹನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಫ್ಲೈಟ್ ಬುಕ್ ಮಾಡುವುದು, ಆರ್ಥಿಕ ಮಾರುಕಟ್ಟೆಗಳಿಂದ ಮಾಹಿತಿ ಪಡೆಯುವುದು ಮುಂತಾದುವು.

ತ್ವರಿತ ಪಾವತಿಗಳು

ತ್ವರಿತ ಪಾವತಿಗಳು

ಜಾಕ್‌ಡಾಕ್‌ನಂತಹ ಸೈಟ್‌ಗಳು ಡಾಕ್ಟರ್‌ಗಳನ್ನು ಹುಡುಕಲು ನೆರವನ್ನು ನೀಡುತ್ತವೆ ಮತ್ತು ವೆಬ್‌ಸೈಟ್‌ಗಳ ಮೂಲಕ ಪಾವತಿಯನ್ನು ಮಾಡುತ್ತವೆ.

ಗೂಗಲ್ ನೌ

ಗೂಗಲ್ ನೌ

ಮೊಬೈಲ್ ಡಿವೈಸ್‌ಗಳಲ್ಲಿ ಈಗ ಚಾಲನೆಯಲ್ಲಿರುವ ಸಹಾಯಕ ಅಪ್ಲಿಕೇಶನ್ ಗೂಗಲ್ ನೌ, ನೆಸ್ಟ್ ನಿಮ್ಮ ದೈನಂದಿನ ದಿನಚರಿಗಳನ್ನು ಅಭ್ಯಸಿಸಿ ಮನೆಯ ವಾತಾವರಣವನ್ನು ಸ್ವಯಂಚಾಲಿತವಾಗಿ ಹೊಂದಿಸುತ್ತದೆ.

ಆನ್‌ಲೈನ್ ಹೋಮ್ ಮಾನಿಟರಿಂಗ್

ಆನ್‌ಲೈನ್ ಹೋಮ್ ಮಾನಿಟರಿಂಗ್

ಡ್ರಾಪ್‌ಕ್ಯಾಮ್ ಸೆಲ್ಸ್ ಕ್ಯಾಮೆರಾಗಳು ಮನೆಯ ಅವಲೋಕನಕ್ಕೆ ಹೇಳಿಮಾಡಿಸಿರುವಂತಹ ಡಿವೈಸ್‌ಗಳಾಗಿವೆ.

ಸಾಮಾಜಿಕ ಮಾಧ್ಯಮ

ಸಾಮಾಜಿಕ ಮಾಧ್ಯಮ

ಚಾಟ್ ಮಾಡುವುದು ಮತ್ತು ಈವೆಂಟ್‌ಗಳನ್ನು ಯೋಜಿಸುವುದು ಮೊದಲಾದ ಕೆಲಸಗಳನ್ನು ಇದೀಗ ಸಾಮಾಜಿಕ ಮಾಧ್ಯಮಗಳು ಮಾಡುತ್ತಿವೆ. ಈ ಚಿಂತನೆಯನ್ನು ಗೇಟ್ಸ್ ಮೊದಲೇ ಕಂಡಿದ್ದರು.

ಸ್ವಂಚಾಲಿತ ಪ್ರಮೋಶನಲ್ ಕೊಡುಗೆಗಳು

ಸ್ವಂಚಾಲಿತ ಪ್ರಮೋಶನಲ್ ಕೊಡುಗೆಗಳು

ಗೂಗಲ್ ಫೇಸ್‌ಬುಕ್‌ಗಳು ಬಳಕೆದಾರರ ಸ್ಥಾನ ಹಾಗೂ ಆಸಕ್ತಿಗಳನ್ನು ಆಧರಿಸಿ ಜಾಹೀರಾತುಗಳನ್ನು ನೀಡುತ್ತಿವೆ. ಇಂತಹ ಸಾಫ್ಟ್‌ವೇರ್‌ಗಳನ್ನು ಯೋಜಿಸಬೇಕೆಂಬುದು ಗೇಟ್ಸ್ ಕನಸಾಗಿತ್ತು.

ಲೈವ್ ಸ್ಪೋರ್ಟ್ಸ್

ಲೈವ್ ಸ್ಪೋರ್ಟ್ಸ್

ಕ್ರೀಡೆಗಳ ನೇರಪ್ರಸಾರ ಅಂತೆಯೇ ಮೆಚ್ಚಿನ ಕ್ರೀಡಾಭಿಮಾನಿಗಳಿಗೆ ಕ್ರೀಡೆಗಳಿಗೆ ಮತ ಚಲಾಯಿಸುವುದು ಗೇಟ್ಸ್ ಮುನ್ನೋಟಗಳಲ್ಲಿ ಒಂದಾಗಿದೆ. ಇಂದು ಸಾಮಾಜಿಕ ಮಾಧ್ಯಮಗಳು ಈ ಕೆಲಸನ್ನು ನಿರ್ವಹಿಸುತ್ತಿವೆ.

ಸಣ್ಣ ಜಾಹೀರಾತು

ಸಣ್ಣ ಜಾಹೀರಾತು

ಸಣ್ಣ ಜಾಹೀರಾತುಗಳಲ್ಲಿ ವೆಬ್‌ಸೈಟ್‌ಗಳು ಬಳಕೆದಾರರ ಆಸಕ್ತಿಗೆ ಅನುಗುಣವಾಗಿ ಉತ್ಪನ್ನಗಳ ಮಾರಾಟ ಮತ್ತು ಜಾಹೀರಾತನ್ನು ಮಾಡುತ್ತಿವೆ.

 ಲೈವ್ ಟಿವಿಗಳಲ್ಲಿ ಸೈಟ್‌ಗಳ ಲಿಂಕ್

ಲೈವ್ ಟಿವಿಗಳಲ್ಲಿ ಸೈಟ್‌ಗಳ ಲಿಂಕ್

ಹೆಚ್ಚಿನ ಎಲ್ಲಾ ಸ್ಪೋರ್ಟ್ಸ್ ಗೇಮ್ ನಿರ್ದಿಷ್ಟ ಸೈಟ್‌ಗೆ ಸಂಪರ್ಕಪಡಿಸುವ ಜಾಹೀರಾತುಗಳನ್ನು ನೀಡುತ್ತಿವೆ.

ಆನ್‌ಲೈನ್ ವಿಚಾರಸಂಕೀರ್ಣ

ಆನ್‌ಲೈನ್ ವಿಚಾರಸಂಕೀರ್ಣ

ಹೆಚ್ಚಿನ ಸುದ್ದಿ ಸೈಟ್‌ಗಳು ಆನ್‌ಲೈನ್ ವಿಚಾರ ಸಂಕೀರ್ಣವನ್ನು ನಡೆಸುತ್ತಿದ್ದು ಜನರ ಮನದಾಳವನ್ನು ಅರಿಯುವ ಪ್ರಯತ್ನವನ್ನು ಮಾಡುತ್ತಿವೆ.

ಆಸಕ್ತಿ ಆಧಾರಿತ ಆನ್‌ಲೈನ್ ಸೈಟ್‌ಗಳು

ಆಸಕ್ತಿ ಆಧಾರಿತ ಆನ್‌ಲೈನ್ ಸೈಟ್‌ಗಳು

ಒಂದೇ ವಿಷಯವನ್ನು ಕೇಂದ್ರೀಕರಿಸಿ ಸುದ್ದಿ ಸೈಟ್‌ಗಳು ಮತ್ತು ಆನ್‌ಲೈನ್ ಸಮುದಾಯಗಳು ಸುದ್ದಿಯನ್ನು ಬಿತ್ತರಿಸುತ್ತಿವೆ.

ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್

ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್

ಉತ್ತಮವಾಗಿ ಅಂತೆಯೇ ವೇಗವಾಗಿ ಕಾರ್ಯವನ್ನು ಸಾಧಿಸಲು ಸಹಾಯಕವಾಗಿರುವ ಸಾಫ್ಟ್‌ವೇರ್‌ಗಳು ಇಂದು ಪ್ರಚಲಿತದಲ್ಲಿದ್ದು ಉದ್ಯೋಗ ನೇಮಕಾತಿ, ತಂಡಗಳ ರಚನೆ, ಕಾರ್ಯ ನಿರ್ವಹಣೆ ಮೊದಲಾದವುಗಳನ್ನು ಈ ಸಾಫ್ಟ್‌ವೇರ್‌ಗಳು ನಿರ್ವಹಿಸುತ್ತಿವೆ.

ಆನ್‌ಲೈನ್ ನೇಮಕಾತಿ

ಆನ್‌ಲೈನ್ ನೇಮಕಾತಿ

ಲಿಂಕ್‌ಡ್‌ಇನ್ ಸೈಟ್‌ಗಳು ಬಳಕೆದಾರರಿಗೆ ತಮ್ಮ ರೆಸ್ಯೂಮ್‌ಗಳನ್ನು ಅಪ್‌ಲೋಡ್ ಮಾಡಲು ಅನುಮತಿಸಿದ್ದು ಅವರ ಆಸಕ್ತಿಗೆ ಅನುಗುಣವಾದ ಉದ್ಯೋಗವನ್ನು ದೊರಕಿಸಿಕೊಡುವಲ್ಲಿ ನೆರವಾಗುತ್ತಿವೆ.

ವ್ಯವಹಾರ ಸಮುದಾಯ ಸಾಫ್ಟ್‌ವೇರ್

ವ್ಯವಹಾರ ಸಮುದಾಯ ಸಾಫ್ಟ್‌ವೇರ್

ಹೆಚ್ಚಿನ ಸಾಫ್ಟ್‌ವೇರ್ ಸಂಸ್ಥೆಗಳು ಸಾಮಾಜಿಕವಾಗಿಯೂ ಮುನ್ನಡೆಯುವತ್ತ ದೃಷ್ಟಿಕೋನವನ್ನು ಬೀರಿದ್ದು, ಇದರಿಂದ ಬಳಕೆದಾರರು ತಮ್ಮ ವ್ಯವಹಾರ ಲಕ್ಷ್ಯವನ್ನು ಸಾಧಿಸುವುದರ ಜೊತೆಗೆ ತಮ್ಮ ಅಪ್ಲಿಕೇಶನ್ ಅನ್ನು ತಲುಪುವ ದೊಡ್ಡ ಪ್ರಾಜೆಕ್ಟ್‌ಗಳತ್ತ ದೃಷ್ಟಿ ಹರಿಸಬಹುದಾಗಿದೆ.

Best Mobiles in India

English summary
In 1999, Bill Gates wrote a book titled Business @ the Speed of Thought. In the book, Gates makes 15 bold predictions that at the time might have sounded outrageous. But as business student Marcus Kirjonen pointed out on his blog, his forecasts turned out to be eerily prescient.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X