ಸಿಮ್ ಕಾರ್ಡ್ ರಿಚಾರ್ಜ್ ಮಾಡುವಾಗ ಈ 6 ತಪ್ಪುಗಳನ್ನು ಮಾಡಬೇಡಿ

By Prateeksha
|

ಸ್ಮಾರ್ಟ್‍ಫೋನ್ ಗಳು ಈಗ ಕೇವಲ ಸಂಪರ್ಕಿಸುವ ಮಾಧ್ಯಮವಾಗಿ ಉಳಿದಿಲ್ಲಾ. ಇವುಗಳೆಲ್ಲಾ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು ನಮಗೆ ಹಲವು ರೀತಿಯಲ್ಲಿ ಸಹಾಯಕವಾಗಿವೆ.

ಸಿಮ್ ಕಾರ್ಡ್ ರಿಚಾರ್ಜ್ ಮಾಡುವಾಗ ಈ 6 ತಪ್ಪುಗಳನ್ನು ಮಾಡಬೇಡಿ

ನಿಮಗೆ ಹೊಸ ಸ್ಥಳದ ದಾರಿ ಹುಡುಕಬೇಕಾದರೆ, ಊಟಕ್ಕೆ ಅಥವಾ ಸಾಮಾನಿನ ಒರ್ಡರ್ ಕೊಡಲು ಅಥವಾ ನಿಮ್ಮ ರಜೆಯ ಚಿತ್ರಗಳನ್ನು ಅಪ್‍ಲೋಡ್ ಮಾಡಲು, ನಿಮ್ಮ ಸ್ಮಾರ್ಟ್‍ಫೋನನ್ನು ಮತ್ತು ಅಂತರ್ಜಾಲವನ್ನು ಬಳಸಿ ಬಹಳಷ್ಟನ್ನು ಮಾಡಬಹುದು. ಇವುಗಳನ್ನೆಲ್ಲಾ ಮಾಡಬಹುದು ನಿಮ್ಮ ಬಳಿ ಚಾಲ್ತಿಯಲ್ಲಿರುವ ಡಾಟಾ ಕನೆಕ್ಷನ್ ಇದ್ದರೆ ಮತ್ತು ಡಾಟಾ ಬ್ಯಾಲೆನ್ಸ್ ಇಲ್ಲದ ಎರರ್ ಮೆಸೆಜ್ ಈಗಿನ ಕಾಲದ ಯುವಕರಿಗೆ ದುಸ್ವಪ್ನ ವಿದ್ದಂತೆ.

ಓದಿರಿ: ಭಾರತದಲ್ಲಿ ಲಭ್ಯವಿರುವ ಟಾಪ್ 10 ಏಸಸ್ ಝೆನ್ ಫೋನ್ ಸ್ಮಾರ್ಟ್ ಫೋನುಗಳು.

ನಿಮಗೆ ಬಹಳಷ್ಟು ಇಂಟರ್ನೆಟ್ ಪ್ಯಾಕೆಜಸ್ ಮತ್ತು ವಾಯಸ್ ಪ್ಯಾಕೆಜಸ್ ಲಭ್ಯವಿದೆ ಆಯ್ಕೆ ಮಾಡಲು. ಅಷ್ಟಲ್ಲದೆ, ನೀವು ಪ್ರೀಪೇಡ್ ಮತ್ತು ಪೋಸ್ಟ್‍ಪೇಡ್ ಪ್ಲಾನ್ಸ್ ಗಳ ಮಧ್ಯೆ ಕೂಡ ನೀವು ಆಯ್ಕೆ ಮಾಡಬಹುದು. ನೀವು ಯಾವುದಾದರೊಂದು ಆಯ್ಕೆ ಮಾಡಿದ ಮೇಲೆ ನೀವು ನಿಮಗೆ ಸರಿಹೊಂದುವ ಎಲ್ಲಕ್ಕಿಂತ ಉತ್ತಮ ಪ್ಯಾಕೆಜ್ ಯಾವುದೆಂದು ನೋಡಬೇಕಾಗುತ್ತದೆ. ಕೊನೆಯದಾಗಿ, ನೀವು ಆಯ್ಕೆ ಮಾಡಿದ ಪ್ಯಾಕೆಜ್ ಮೇಲೆ ಹಣ ಖರ್ಚು ಮಾಡುವ ಬಗ್ಗೆ ಬುದ್ದಿವಂತರಾಗಿರಬೇಕು.

ಓದಿರಿ: ಫೇಸ್‌ಬುಕ್‌ ಖಾತೆಯನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ?

ನೀವು ನಿಮ್ಮ ಫೋನಿಗಾಗಿ ರಿಚಾರ್ಜ್ ಪ್ಯಾಕ್ ಆಯ್ಕೆ ಮಾಡುವಾಗ ಕೆಳಗಿನ ಕೆಲ ತಪ್ಪುಗಳನ್ನು ಮಾಡದಿರುವಂತೆ ನೋಡಿಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ಗಿಜ್‍ಬೊಟ್ ನೊಂದಿಗೆ ಸಂಪರ್ಕದಲ್ಲಿರಿ.

ನೀವು ತುಂಬಾ ಮಾತಾಡುತ್ತಿದ್ದರೆ ಮಾತ್ರ ಬಲ್ಕ್ ಪ್ಲಾನ್ಸ್ ಉಪಯುಕ್ತ.

ನೀವು ತುಂಬಾ ಮಾತಾಡುತ್ತಿದ್ದರೆ ಮಾತ್ರ ಬಲ್ಕ್ ಪ್ಲಾನ್ಸ್ ಉಪಯುಕ್ತ.

ಇತ್ತೀಚಿನ ದಿನಗಳಲ್ಲಿ, ಬಹಳಷ್ಟು ಅನ್‍ಲಿಮಿಟೆಡ್ ಪ್ಲಾನ್ಸ್ ಗಳು ಲಭ್ಯವಿವೆ ಬಹಳಷ್ಟು ಸರ್ವಿಸ್ ಪ್ರೊವೈಡರ್ಸ್ ಗಳಿಂದ. ಅದು ವಾಯಸ್ ಅಥವಾ ಡಾಟಾ ಪ್ಯಾಕೆಜ್ ಆಗಿರಬಹುದು ಆದರೆ ನೀವು ಉಪಯೋಗಿಸುತ್ತಿದ್ದರೆ ಮಾತ್ರ ಅನ್‍ಲಿಮಿಟೆಡ್ ಪ್ಲಾನ್ಸ್ ಆಯ್ಕೆ ಮಾಡಿ. ಪ್ಲಾನ್ ಗಾಗಿ ಖರ್ಚು ಮಾಡಿ ವಾಯಸ್ ಅಥವಾ ಡಾಟಾ ದ ನಿಮಿಷಗಳನ್ನು ಉಪಯೋಗಿಸದೆ ಹೋದರೆ ಕೊನೆಯಲ್ಲಿ ನೀವು ನಿಮ್ಮ ಹಣವನ್ನು ವಿನಾಕಾರಣ ಹಾಳುಮಾಡಿದಂತಾಗುತ್ತದೆ.

ಚಿಕ್ಕ ರಿಚಾರ್ಜ್ ಪ್ಯಾಕ್ಸ್ ಗಳು ಹೆಚ್ಚು ಖರ್ಚಿಗೆ ನಾಂದಿ ಹಾಡುತ್ತದೆ

ಚಿಕ್ಕ ರಿಚಾರ್ಜ್ ಪ್ಯಾಕ್ಸ್ ಗಳು ಹೆಚ್ಚು ಖರ್ಚಿಗೆ ನಾಂದಿ ಹಾಡುತ್ತದೆ

ನಿಮ್ಮ ಬಜೆಟ್ ಟೈಟ್ ಇದ್ದರೆ, ನೀವು ಕಡಿಮೆ ಮೌಲ್ಯದ ಡಾಟಾ ಅಥವಾ ವಾಯಸ್ ಇರುವ ಚಿಕ್ಕ ರಿಚಾರ್ಜ್ ಪ್ಯಾಕ್ ಆಯ್ಕೆ ಮಾಡುವಲ್ಲಿ ಆಸಕ್ತಿ ತೋರಬಹುದು. ಆದರೆ ನೀವು ಅರ್ಥ ಮಾಡಿಕೊಳ್ಳಬೇಕು ಈ ಚಿಕ್ಕ ಪ್ಯಾಕ್‍ಗಳು ನಿಮ್ಮ ಖರ್ಚನ್ನು ಜಾಸ್ತಿ ಮಾಡಲು ದಾರಿ ಮಾಡಿಕೊಡಬಹುದು ನಿಮಗೆ ಗೊತ್ತಿಲ್ಲದೆ.

ನೀವು ತುಂಬಾ ಮಾತಾಡುತ್ತಿದ್ದರೆ ಮಾತ್ರ ಪೋಸ್ಟ್‍ಪೇಡ್ ಆಯ್ಕೆ ಮಾಡಿ.

ನೀವು ತುಂಬಾ ಮಾತಾಡುತ್ತಿದ್ದರೆ ಮಾತ್ರ ಪೋಸ್ಟ್‍ಪೇಡ್ ಆಯ್ಕೆ ಮಾಡಿ.

ನಿಮಗೆ ಬ್ಯಾಲನ್ಸ್ ಮತ್ತು ಡಾಟಾ ಕಡಿಮೆ ಬೀಳುವ ಚಿಂತೆ ಪೋಸ್ಟ್ ಪೇಡ್ ಪ್ಯಾಕ್ ನಲ್ಲಿ ಇರುವುದಿಲ್ಲಾ. ಆದರೆ, ನಿಮಗೆ ನಿಮ್ಮ ಮಾತನಾಡುವ ಅಭ್ಯಾಸವನ್ನು ಗಮನಿಸಬೇಕಾಗಿತ್ತದೆ ಪ್ರಿಪೇಡ್ ಮತ್ತು ಪೋಸ್ಟ್ ಪೇಡ್ ಆಯ್ಕೆ ಮಾಡುವ ಮುಂಚೆ. ನಿಮ್ಮ ಬಳಕೆಯನ್ನು ನೋಡಿ ಮತ್ತು ಅದು ಜಾಸ್ತಿ ಇಲ್ಲದಿದ್ದಲ್ಲಿ ನೀವು ಪೋಸ್ಟ್ ಪೇಡ್ ಮೇಲೆ ದುಡ್ಡು ಹಾಕಬೇಕೆಂದಿಲ್ಲಾ.

ಪೋಸ್ಟ್ ಪೇಡ್ ಬಹಳಷ್ಟು ಫೀಸ್ ಅನ್ನು ಒಳಗೊಂಡಿರುತ್ತದೆ

ಪೋಸ್ಟ್ ಪೇಡ್ ಬಹಳಷ್ಟು ಫೀಸ್ ಅನ್ನು ಒಳಗೊಂಡಿರುತ್ತದೆ

ಪೋಸ್ಟ್‍ಪೇಡ್ ಪ್ಲಾನ್ಸ್ ತುಂಬಾ ಅನುಕೂಲಕರವಾದದ್ದು ಆದರೆ ದುಬಾರಿ. ನಿಮಗೆ ಬಹಳಷ್ಟು ಫೀಸ್ ಕಟ್ಟಬೇಕಾಗುತ್ತದೆ ಆಕ್ಟಿವೇಷನ್ ಫೀಸ್, ಮಂತ್ಲಿ ರೇಟ್ ಫೀಸ್ ಮತ್ತು ಮಂತ್ಲಿ ಆಕ್ಸೆಸ್ ಫೀಸ್ ನಂತಹುದು. ಈ ಎಲ್ಲಾ ಫೀಸ್‍ಗಳು ಪ್ಲಾನ್ಸ್ ನೊಳಗೆ ಒಳಗೊಂಡಿರುತ್ತದೆ. ಪ್ಲಾನ್‍ಗಳನ್ನು ಆಯ್ಕೆ ಮಾಡುವ ಮುಂಚೆ ಇದರ ಬಗ್ಗೆ ಮೊದಲೇ ಸ್ಪಷ್ಟವಾಗಿ ತಿಳಿದುಕೊಳ್ಳಿ.

ನೀವು ಉಪಯೋಗಿಸುತ್ತಿದ್ದರೆ ಮಾತ್ರ ನೈಟ್ ಡಾಟಾ ಪ್ಯಾಕ್ಸ್ ಆಯ್ಕೆ ಮಾಡಿ

ನೀವು ಉಪಯೋಗಿಸುತ್ತಿದ್ದರೆ ಮಾತ್ರ ನೈಟ್ ಡಾಟಾ ಪ್ಯಾಕ್ಸ್ ಆಯ್ಕೆ ಮಾಡಿ

ಸರ್ವಿಸ್ ಪ್ರೊವೈಡರ್ಸ್ ತೆಗೆದುಕೊಂಡು ಬರುವ ಕೊಡುಗೆಗಳು ತುಂಬಾ ಆಸೆ ತರಿಸುತ್ತವೆ. ವಿಶೇಷವಾಗಿ, ಕಂಪನಿಗಳು ಆಕರ್ಷಕ ಡಾಟಾ ಪ್ಯಾಕ್ಸ್ ರಾತ್ರಿಗಾಗಿ ವಿಶೇಷ ಕೊಡುಗೆಗಳೊಂದಿಗೆ ಬರುತ್ತವೆ. ನಿಮಗೆ ಇಂತಹ ಪ್ಯಾಕ್ ಕೊಂಡುಕೊಳ್ಳಬೇಕೆಂಬ ಆಸೆಯಾಗಬಹುದು, ಆದರೆ ನೆನಪಿಡಿ ನೀವು ಡಾಟಾ ಕನೆಕ್ಷನ್ ರಾತ್ರಿ ಚಾಟಿಂಗ್, ವೀಡಿಯೊ ನೋಡಲು, ಬ್ರೌಸಿಂಗ್ ಇತ್ಯಾದಿಗಾಗಿ ಉಪಯೋಗಿಸುವ ಅಭ್ಯಾಸ ವಿದ್ದರೆ ಮಾತ್ರ ನೈಟ್ ಡಾಟಾ ಪ್ಯಾಕ್ ಆಯ್ಕೆ ಮಾಡಿ.

ಪ್ಯಾಕ್ಸ್ ಗಳ ವ್ಯಾಲಿಡಿಟಿ ಮೇಲೆ ಗಮನವಿರಲಿ.

ಪ್ಯಾಕ್ಸ್ ಗಳ ವ್ಯಾಲಿಡಿಟಿ ಮೇಲೆ ಗಮನವಿರಲಿ.

ಪ್ರಿಪೇಡ್ ನಲ್ಲಿ, ನಿಮಗೆ ಫುಲ್ ಟಾಕ್ ಟೈಮ್ ರಿಚಾರ್ಜ್ ಪ್ಯಾಕ್ಸ್ ಸಿಗುತ್ತದೆ ಅದು ನಿಮಗೆ ನೀವು ರಿಚಾರ್ಜ್ ಮಾಡಿದ್ದಷ್ಟೆ ಬೆಲೆಯ ಟಾಕ್ ಟೈಮ್ ನಿಮಗೆ ದೊರಕುತ್ತದೆ ಯಾವುದೇ ರೀತಿಯ ಟ್ಯಾಕ್ಸ್ ಗಾಗಿ ಹಣ ತೆಗೆಯಲಾಗುವುದಿಲ್ಲಾ. ಅಂತಹ ಸ್ಥಿತಿಯಲ್ಲಿ, ನೀವು ಮೊದಲು ಪ್ಯಾಕ್ ನ ವ್ಯಾಲಿಡಿಟಿ ಪರೀಕ್ಷಿಸಿ. ಕೆಲವೊಮ್ಮೆ ಪ್ಯಾಕ್ ಸ್ವಲ್ಪವೇ ಸಮಯಕ್ಕಾಗಿ ಇರುತ್ತದೆ ಮತ್ತು ನೀವು ಸಂಪೂರ್ಣ ಮೊತ್ತವನ್ನು ಉಪಯೋಗಿಸಲಾಗಲಿಕ್ಕಿಲ್ಲಾ.

Most Read Articles
Best Mobiles in India

Read more about:
English summary
It is possible to recharge your phone with any pack that you wish to have. But, you need to spend time on finding out which pack will actually be useful for your mobile usage. Take a look at some mistakes you need to avoid.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more