ಶೇ.80% ಯುವ ಜನತೆ ತಮ್ಮ ಸ್ಮಾರ್ಟ್‌ಪೋನಿನಲ್ಲಿ ಏನು ಮಾಡುತ್ತಾರೆ ಗೊತ್ತಾ..?!?!

|

ಇಂದಿನ ದಿನಗಳಲ್ಲ ಎಲ್ಲಾ ಯುವಕ-ಯುವತಿಯರ ಕೈಯಲ್ಲೂ ಸ್ಮಾರ್ಟ್‌ಪೋನ್ ಇದ್ದೇ ಇರುತ್ತದೆ. ಅದರಲ್ಲೂ ಕಾಲೇಜು ಮೆಟ್ಟಿಲು ಹತ್ತಿದ ಮೇಲೆ ಕೈನಲ್ಲಿ ಮೊಬೈಲ್ ಅತ್ಯವಶ್ಯಕ ಎನ್ನುವ ಮಟ್ಟಕ್ಕೆ ಬೆಳೆದಿದೆ. ಹೀಗೆ ದಿನೇ ದಿನೇ ಯುವಜನತೆ ಸ್ಮಾರ್ಟ್‌ಪೋನ್‌ ಬಳಕೆ ಹೆಚ್ಚು ಮಾಡುತ್ತಿರುವ ಹಿನ್ನಲೆಯಲ್ಲಿ ಸಮೀಕ್ಷೆಯೊಂದು ನಡೆದಿದ್ದು, ಇದರ ಪ್ರಕಾರ 10ರಲ್ಲಿ 8 ಮಂದಿ ಯುವಕರು ತಮ್ಮ ಸ್ಮಾರ್ಟ್‌ಪೋನಿನಲ್ಲಿಯೇ ಶಾಪಿಂಗ್ ಮಾಡುತ್ತಿದ್ದಾರಂತೆ.

ಶೇ.80% ಯುವ ಜನತೆ ತಮ್ಮ ಸ್ಮಾರ್ಟ್‌ಪೋನಿನಲ್ಲಿ ಏನು ಮಾಡುತ್ತಾರೆ ಗೊತ್ತಾ..?!?!

ಓದಿರಿ..: ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ: ಮಾರ್ಚ್ 31ರ ನಂತರವೂ ಜಿಯೋ ಉಚಿತ ಕೊಡುಗೆ ಮುಂದುವರೆಯಲಿದೆ..!

ತಮ್ಮ ಕೈನಲ್ಲೇ ಇರುವ ಸ್ಮಾರ್ಟ್‌ಪೋನಿನಲ್ಲಿ ಶಾಪಿಂಗ್ ಮಾಡುವದರಲ್ಲಿ ಯುವ ಜನತೆ ಮುಂಚುಣಿಯಲ್ಲಿದ್ದು, ಇದೇ ಸಂದರ್ಭದಲ್ಲಿ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಶಾಪಿಂಗ್ ಹೆಚ್ಚಾಗುತ್ತಿದೆ. ಆನ್‌ಲೈನ್ ಶಾಪಿಂಗ್ ಕ್ರೇಜ್ ಅಧಿಕವಾಗುತ್ತದೆ. ಹಾಗಾಗಿಯೇ ಜನರನ್ನು ಆರ್ಕಷಿಸುವ ಸಲುವಾಗಿ ಆನ್‌ಲೈನ್ ಶಾಪಿಂಗ್ ಸೈಟುಗಳು ಸ್ಮಾರ್ಟ್‌ಪೋನಿನಲ್ಲಿ ಬಳಸಲೂ ಸೂಕ್ತವಾದ ತಮ್ಮದೇ ಆಪ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಸ್ಮಾರ್ಟ್‌ಪೋನ್‌ಗಳಲ್ಲಿ ಈ ಆಪ್ ಗಳನ್ನು ಬಳಸಿ ಯುವ ಜನತೆ ಶಾಪಿಂಗ್ ಮಾಡಲು ಮುಂದಾಗಿದಾಗಿದ್ದಾರೆ ಎನ್ನಲಾಗಿದೆ.

ಆನ್‌ಲೈನ್ ಶಾಪಿಂಗ್ ತಾಣವಾದ ಮಿಂತ್ರ ಈ ಕುರಿತು ಸಮೀಕ್ಷೆಯೊಂದನ್ನು ನಡೆಸಿದ್ದು, ಇದರ ಪ್ರಕಾರ ಕಳೆದ ಒಂದು ವರ್ಷದಲ್ಲಿ ಯುವ ಜನತೆಯೂ ತಮ್ಮ ಸ್ಮಾರ್ಟ್‌ಪೋನಿನಲ್ಲಿಯೇ ಶಾಪಿಂಗ್ ಮಾಡಲು ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ. ತಮಗೆ ಅವಶ್ಯವಿರುವ ವಸ್ತುಗಳನ್ನುಕೊಳ್ಳಲು ಮಾರುಕಟ್ಟೆಗೆ ಹೋಗುವ ಬದಲು ತಮ್ಮ ಕೈನಲ್ಲೇ ಇರುವ ಸ್ಮಾರ್ಟ್‌ಪೋನಿನಲ್ಲೇ ಅವುಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ ಎಂಬ ಅಂಶ ಬಹಿರಂಗವಾಗಿದೆ.

ಶೇ.80% ಯುವ ಜನತೆ ತಮ್ಮ ಸ್ಮಾರ್ಟ್‌ಪೋನಿನಲ್ಲಿ ಏನು ಮಾಡುತ್ತಾರೆ ಗೊತ್ತಾ..?!?!

ಓದಿರಿ..: ರೂ.999 ಬೆಲೆಯ ರಿಲಯನ್ಸ್ ಜಿಯೋ 4G VoLTE ಪೋನು ಹೇಗಿದೆ..? ಇಲ್ಲಿದೆ ನೋಡಿ ಫಸ್ಟ್ ಪೋಟೋ..!

ಇದರಲ್ಲಿ ಶೇ.28ರಷ್ಟು ಸ್ಮಾರ್ಟ್‌ಪೋನ್ ಹೊಂದಿರುವ ಮಂದಿ ವಾರದಲ್ಲಿ ಒಮ್ಮೆಯಾದರು ತಮ್ಮ ಸ್ಮಾರ್ಟ್‌ಪೋನ್‌ ಮೂಲಕ ಶಾಪಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಶೇ.19 ಮಂದಿ ತಮ್ಮ ಸ್ಮಾರ್ಟ್‌ಪೋನಲ್ಲಿ ಬರುವ ಜಾಹೀರಾತನ್ನು ನೋಡಿ ನಂತರ ಶಾಪಿಂಗ್ ಮಾಡುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಸ್ಮಾರ್ಟ್‌ಪೋನಿನ ಮೂಲಕವೇ ಆದಾಯ ಕಂಡು ಕೊಳ್ಳುತ್ತಿರುವ ಆನ್‌ಲೈನ್ ಶಾಪಿಂಗ್ ತಾಣಗಳು ಆಪ್ ಬಳಸಿ ಖರೀದಿ ಮಾಡುವವರಿಗೆ ವಿಶೇಷ ರಿಯಾಯಿತಿಗಳನ್ನು ನೀಡಲು ಮುಂದಾಗುತ್ತಿವೆ ಎನ್ನಲಾಗಿದೆ.

Best Mobiles in India

Read more about:
English summary
More than eight in 10 young adults use their smartphones for shopping, a survey has showed. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X