Home
ಸುದ್ದಿಜಾಲ

ಬಿಡುಗಡೆಗೂ ಮೊದಲೇ.. Motorola Edge 50 ಫೀಚರ್ಸ್‌ ಲೀಕ್! ಹೇಗಿದೆ.. ಯಾವಾಗ ಲಾಂಚ್​?

ಭಾರತದ ಮಾರುಕಟ್ಟೆಯಲ್ಲಿ ಮೊಟೊರೊಲಾ ಮೊಬೈಲ್‌ ಫೋನ್‌ಗಳ ಹಾವಳಿ ಜೋರಾಗಿದೆ. ಈ ನಡುವೆಯೇ, ಮೊಟೊರೊಲಾ ಕಂಪನಿಯು ಶೀಘ್ರದಲ್ಲೇ ಎಡ್ಜ್ ಸರಣಿಯ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಈಗಾಗಲೇ ಮೊಟೊರೊಲಾ ಎಡ್ಜ್ 50 ಪ್ರೊ, ಎಡ್ಜ್ 50 ಫ್ಯೂಷನ್ ಮತ್ತು ಎಡ್ಜ್ 50 ಅಲ್ಟ್ರಾವನ್ನು ಜಾಗತಿಕ ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ಲಾಂಚ್‌ ಮಾಡಿದೆ. ಇದೀಗ, ಕಂಪನಿಯು ಮುಂಬರುವ ದಿನಗಳಲ್ಲಿ Motorola Edge 50 ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಮೊಟೊರೊಲಾ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಫೋನ್ ಅನೇಕ ಪ್ರಮಾಣೀಕರಣಗಳನ್ನು ಪಡೆದಿದೆ ಮತ್ತು ಹಲವು ಸೈಟ್‌ಗಳಲ್ಲಿ ಗುರುತಿಸಲಾಗಿದೆ. ಈ ಮೂಲಕ ಶೀಘ್ರದಲ್ಲೇ ಬಿಡುಗಡೆಯಾಗುವ ಸೂಚನೆ ನೀಡಿದೆ. ಮುಂಬರುವ Motorola Edge 50 ಫೋನ್‌ನಿಂದ ಮೊಬೈಲ್ ಪ್ರಿಯರು ಏನನ್ನು ನಿರೀಕ್ಷೆ ಮಾಡಬಹುದು ಅನ್ನೋದನ್ನು ತಿಳಿಯೋಣ ಬನ್ನಿ.

ಬಿಡುಗಡೆಗೂ ಮೊದಲೇ.. Motorola Edge 50 ಫೀಚರ್ಸ್‌ ಲೀಕ್! ಯಾವಾಗ ಲಾಂಚ್?

ಮೊಟೊರೊಲಾ ಎಡ್ಜ್ 50 ಬಿಡುಗಡೆ ಯಾವಾಗ?

ಮೊಟೊರೊಲಾ ಎಡ್ಜ್ 50 ಅನ್ನು TDRA, FCC, ಮತ್ತು EEC ಸೇರಿದಂತೆ ಹಲವಾರು ಪ್ರಮಾಣೀಕರಣ ಸೈಟ್‌ಗಳಲ್ಲಿ ಗುರುತಿಸಲಾಗಿದೆ. UAE ಯ TDRA ಪ್ರಮಾಣೀಕರಣ ಸೈಟ್ ಮಾನಿಕರ್ ಮತ್ತು ಮಾದರಿ ಸಂಖ್ಯೆ "XT2407-1" ಅನ್ನು ಬಹಿರಂಗಪಡಿಸುತ್ತದೆ. ಇದೇ ಮಾದರಿ ಸಂಖ್ಯೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಎಫ್‌ಸಿಸಿ ಮತ್ತು ಇಇಸಿ ಪ್ರಮಾಣೀಕರಣಗಳಲ್ಲಿ ಗುರುತಿಸಲಾಗಿದೆ.

5000mAh ಬ್ಯಾಟರಿ, 68W ಫಾಸ್ಟ್ ಚಾರ್ಜಿಂಗ್‌

FCC ಪಟ್ಟಿಯು ಈ ಮೊಬೈಲ್‌ನ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ಬಹಿರಂಗಪಡಿಸಿದೆ. ಅದರಂತೆ, Motorola Edge 50ನಲ್ಲಿ 5000mAh ಸಾಮರ್ಥ್ಯದ ಬ್ಯಾಟರಿಯನ್ನು ನಿರೀಕ್ಷಿಸಬಹುದು. ಇದು 68W ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಬ್ಯಾಟರಿಯನ್ನು ಪ್ಯಾಕ್ ಮಾಡಬಹುದು. ಸಾಫ್ಟ್‌ವೇರ್ ಮುಂಭಾಗದಲ್ಲಿ, ಇದು ಮೊಟೊರೊಲಾದ ಹಲೋ UI ಜೊತೆಗೆ ಆಂಡ್ರಾಯ್ಡ್ 14 ಅನ್ನು ರನ್‌ ಮಾಡುವ ನಿರೀಕ್ಷೆಯಿದೆ. ಮೊಟೊರೊಲಾ ಎಡ್ಜ್ 40 ಡ್ಯುಯಲ್-ಸಿಮ್ ಸ್ಲಾಟ್‌ಗಳೊಂದಿಗೆ ಬರುತ್ತದೆ.

ಫೋನ್‌ನ ಇತರ ವಿಶೇಷತೆಗಳು ಮತ್ತು ಡಿಸೈನ್‌ನ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ತಿಳಿದಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರಗಳನ್ನು ನಾವು ನಿರೀಕ್ಷಿಸಬಹುದು. ಈ ಹಿಂದೆ ಮೊಟೊರೊಲಾ ಎಡ್ಜ್ 40 ಅನ್ನು ಕಳೆದ ವರ್ಷ 29,999 ರೂ. ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿತ್ತು.

ಈ ಸುದ್ದಿ ಓದಿದ್ದೀರಾ?: Moto G04s ಮೊಬೈಲ್ ಸೇಲ್ ಆರಂಭ: ಬೆಲೆ, ಫೀಚರ್ಸ್‌ ಬಗ್ಗೆ ಇಲ್ಲಿದೆ ಮಾಹಿತಿ

ಈ ಫೋನ್‌ನ ಪ್ರೊಸೆಸರ್‌ ಏನು?

ಫೀಚರ್ಸ್‌ಗಳ ಬಗ್ಗೆ ಹೇಳುವುದಾದರೆ, ಎಡ್ಜ್ 40 6.55-ಇಂಚಿನ FHD+ 3D ಕರ್ವ್ಡ್ pOLED ಡಿಸ್ಪ್ಲೇಯನ್ನು ಹೊಂದಿರಲಿದೆ. ಜೊತೆಗೆ, 144Hz ರಿಫ್ರೆಶ್ ರೇಟ್ ಮತ್ತು 1,200nits ಗರಿಷ್ಠ ಬ್ರೈಟ್‌ನೆಸ್‌ ಒಳಗೊಂಡಿರಲಿದೆ. ಈ ಮೊಬೈಲ್ MediaTek ಡೈಮೆನ್ಸಿಟಿ 8020 SoC ಪ್ರೊಸೆಸರ್‌ ಪಡೆದಿದೆ. 8GB LPDDR4X RAM ಮತ್ತು 256GB UFS 3.1 ಸ್ಟೋರೇಜ್‌ನೊಂದಿಗೆ ಬರಲಿದೆ. ಈ ಸ್ಮಾರ್ಟ್‌ಫೋನ್‌ 68W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4,400 mAh ಬ್ಯಾಟರಿಯನ್ನು ಸಹ ಪ್ಯಾಕ್ ಮಾಡುತ್ತದೆ.

50MP ಮುಖ್ಯ ಕ್ಯಾಮೆರಾ, 32MP ಸೆಲ್ಫಿ ಶೂಟರ್

ಇದರ ಇಂಟರ್ನಲ್ ಸ್ಟೋರೇಜ್ 256GB ಮತ್ತು RAM 8GB ಆಗಿದೆ. ಈ ಫೋನ್ ಅತ್ಯಾಕರ್ಷಕ ಕ್ಯಾಮೆರಾ ಸೆಪ್‌ ಅನ್ನು ಹೊಂದಿರಲಿದೆ. OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಹೊಂದಿದೆ. ಇದಲ್ಲದೆ, 13 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಇದೆ. ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಮೊಬೈಲ್ ಮೊಟೊರೊಲಾ ಎಡ್ಜ್ 40ರ ಉತ್ತರಾಧಿಕಾರಿಯಾಗಲಿದೆ.

Motorola Edge 50 Ultra ನಿರೀಕ್ಷಿತ ಫೀಚರ್ಸ್‌

  • ಪ್ರೊಸೆಸರ್: Qualcomm Snapdragon 8s Gen 3 | 12 ಜಿಬಿ
  • ಡಿಸ್ಪ್ಲೇ: 6.7 ಇಂಚುಗಳು (17.02 cm)
  • ರೆಸಲ್ಯೂಶನ್: 1220x2712 px (FHD+)
  • ಮುಖ್ಯ ಕ್ಯಾಮೆರಾ: 50 MP + 50 MP + 64 MP
  • ಸೆಲ್ಫಿ ಕ್ಯಾಮರಾ: 50 MP
  • ಬ್ಯಾಟರಿ: 4500 mAh
  • ವೈರ್‌ಲೆಸ್ ಚಾರ್ಜಿಂಗ್: 50W
  • ರಿಫ್ರೆಶ್ ರೇಟ್: 144 Hz ರಿಫ್ರೆಶ್ ದರ
  • ಎತ್ತರ: 161.09 ಮಿಮೀ
  • ಅಗಲ: 72.38 ಮಿಮೀ
  • ತೂಕ: 197 ಗ್ರಾಂ
  • ಇಂಟರ್ನಲ್ ಮೆಮೊರಿ: 512 GB

ಗಿಜ್‌ಬಾಟ್‌ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್‌ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Best Mobiles in India

English summary
Motorola Edge 50 specifications hinted by different certification sites:Launch Likely Soon, what to expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+