Subscribe to Gizbot

ಮೋಟೋರೋಲಾದ ಎರಡು ಫೋನ್‌ಗಳು ಮಾರುಕಟ್ಟೆಗೆ

Written By:

ಮೋಟೋರೋಲಾ 2015 ರ ಫ್ಲ್ಯಾಗ್‌ಶಿಪ್ ಹ್ಯಾಂಡ್‌ಸೆಟ್‌ಗಾಗಿ ಕಾರ್ಯನಿರ್ವಹಿಸುತ್ತಿದ್ದು ಈ ವರ್ಷದ ಕೊನೆಗೆ ಈ ಫೋನ್‌ಗಳು ಬಿಡುಗಡೆಯಾಗುವ ಸಂಭವ ಇದೆ. ಈ ಬಾರಿ ಎರಡು ಮೋಟೋರೋಲಾ ಹ್ಯಾಂಡ್‌ಸೆಟ್‌ಗಳನ್ನು ಕಂಪೆನಿ ಬಿಡುಗಡೆಗೊಳಿಸುವ ನಿಟ್ಟಿನಲ್ಲಿದೆ. ಕ್ಲಾರ್ಕ್, ಕಿಂಜಿ ಎಂಬ ಕೋಡ್ ಹೆಸರನ್ನು ಪಡೆದುಕೊಂಡಿರುವ ಮೋಟೋರೋಲಾ ಫೋನ್‌ಗಳು ಬಳಕೆದಾರರಿಗೆ ಅತ್ಯದ್ಭುತ ಕೊಡುಗೆ ಎಂದೆನಿಸಲಿದೆ.

ಮೋಟೋರೋಲಾದ ಎರಡು ಫೋನ್‌ಗಳು ಮಾರುಕಟ್ಟೆಗೆ

ಕ್ವಾರ್ಕ್ ಫೋನ್ (1440x2560 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು, 560dpi; ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 808 ಪ್ರೊಸೆಸರ್ ಇದರಲ್ಲಿದೆ. ಆಂಡ್ರಾಯ್ಡ್ 5.1.1 ಲಾಲಿಪಪ್ ಡಿವೈಸ್‌ನಲ್ಲಿದ್ದು ಮೋಟೋರೋಲಾ ಕ್ಲಾರ್ಕ್ XT1578 or XT1097 ಮಾಡೆಲ್ ಹೆಸರಿನೊಂದಿಗೆ ಬಂದಿದ್ದು ವರಿಜೋನ್ ವೈಯರ್‌ಲೆಸ್ ಮೂಲಕ ಲಭ್ಯವಿದೆ.

ಓದಿರಿ: ಹುವಾಯಿ ಹೋನರ್ 4ಸಿ ಉತ್ತಮ ಫೋನ್ ಎಂಬುದಕ್ಕೆ 10 ಕಾರಣಗಳು

ಮೋಟೋರೋಲಾ ಕಿಂಜೆ ಕ್ಯುಎಚ್‌ಡಿ (1440x2560 ಪಿಕ್ಸೆಲ್‌ಗಳು) ಡಿಸ್‌ಪ್ಲೇ; ಓಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್; 640dpi, ಮತ್ತು ಆಂಡ್ರಾಯ್ಡ್ 5.1.1 ಲಾಲಿಪಪ್ ಅನ್ನು ಇದರಲ್ಲಿ ಚಾಲನೆ ಮಾಡಬಹುದಾಗಿದೆ. ವರಿಜೋನ್ ವೈರ್‌ಲೆಸ್ ಮೂಲಕ ಇದು ಲಭ್ಯವಿದೆ.

ಓದಿರಿ: ಬ್ಯಾಂಕಾಕ್‌ನಲ್ಲಿ ಹುವಾಯಿ ಮೋಡಿ: ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಲಾಂಚ್

ಇನ್ನು ಇನ್ನೊಂದು ವದಂತಿಯ ಪ್ರಕಾರ ಕಿಂಜೆ 5.43 ಇಂಚಿನ ಕ್ಯುಎಚ್‌ಡಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ತುಂಡಾಗದ ಸ್ಕ್ರೀನ್ ಅನ್ನು ಪಡೆದುಕೊಂಡಿದೆ. ಪ್ಲಾಸ್ಟಿಕ್ ಲೆನ್ಸ್‌ಗಳ ಪೂರ್ಣ ಆವೃತ್ತಿಯನ್ನು ಹ್ಯಾಂಡ್‌ಸೆಟ್‌ನಲ್ಲಿ ಬಳಸಲಾಗಿದೆ ಎಂಬ ಮಾಹಿತಿ ಕೂಡ ಇದೆ.

ಲೆನೊವೊ ಮಾಲೀಕತ್ವದ ಮೋಟೋರೋಲಾ ಮೊಬಿಲಿಟಿ ತನ್ನ ಸಕ್ಸೆಸರ್ ಮೋಟೋ ಎಕ್ಸ್ (ಜರೇಶನ್ 2) ಅನ್ನು ಸಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

English summary
Motorola has been rumoured to be working on its 2015 flagship handset that will see light of the day later this year. Following on such reports, a new report has surfaced with the purported specifications of two well-endowed Motorola handsets.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot