ಬ್ಯಾಂಕಾಕ್‌ನಲ್ಲಿ ಹುವಾಯಿ ಮೋಡಿ: ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಲಾಂಚ್

By Shwetha
|

ಚೀನಾದ ಸ್ಮಾರ್ಟ್‌ಫೋನ್ ತಯಾರ ಕಂಪೆನಿ ಹುವಾಯಿ ತನ್ನ ಅತ್ಯಾಧುನಿಕ ಪಿ8 ಸಿರೀಸ್ ಅನ್ನು ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಪ್ರೀಮಿಯಮ್ ಎಸ್‌ಇಎ ಈವೆಂಟ್‌ನಲ್ಲಿ ಲಾಂಚ್ ಮಾಡಿದೆ. ಅಸೆಂಡ್ ಪಿ8 ಮತ್ತು ಪಿ8 ಮ್ಯಾಕ್ಸ್ ಅನ್ನು ಲಾಂಚ್ ಮಾಡಿದ್ದು, ಇದರೊಂದಿಗೆ ಹುವಾಯಿ ಪಿ8 ಲೈಟ್ ಸ್ಮಾರ್ಟ್‌ಫೋನ್ ಜೊತೆಗೆ ಹುವಾಯಿ ಬಿ2 ಟಾಕ್ ಬ್ಯಾಂಡ್ ಹುವಾಯಿ ಎಕ್ಸ್2 ಟ್ಯಾಬ್ಲೆಟ್‌ನೊಂದಿಗೆ ಪವರ್ ಬ್ಯಾಂಕ್ ಅನ್ನು ಲಾಂಚ್ ಮಾಡಿದೆ. ಇಂದಿನ ಲೇಖನದಲ್ಲಿ ಈ ಎಲ್ಲಾ ಡಿವೈಸ್‌ಗಳ ಸಂಪೂರ್ಣ ಮಾಹಿತಿಯನ್ನು ನಾವು ಕೆಳಗಿನ ಸ್ಲೈಡರ್‌ಗಳಲ್ಲಿ ನೀಡುತ್ತಿದ್ದೇವೆ.

ಹುವಾಯಿ ಅಸೆಂಡ್ ಪಿ8

ಹುವಾಯಿ ಅಸೆಂಡ್ ಪಿ8

5.2 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ ಇದರೊಂದಿಗೆ 1920x1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. 64 ಬಿಟ್ ಓಕ್ಟಾ ಕೋರ್ ಕೋರ್ಟೆಕ್ಸ್ A53 ಹೈಸಿಲಿಕಾನ್ ಕಿರಿನ್ 935 ಸಾಕ್ ಇದರಲ್ಲಿದ್ದು, 3 ಜಿಬಿ RAM ಅನ್ನು ಪೋನ್ ಪಡೆದುಕೊಂಡಿದೆ. ಆಂಡ್ರಾಯ್ಡ್ ಲಾಲಿಪಪ್ 5.0 ಫೋನ್‌ನಲ್ಲಿದೆ. 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, ಮತ್ತು 8 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಹೊಂದಿದೆ. ಫೋನ್ ಡ್ಯುಯಲ್ ಸಿಮ್, ಬ್ಲ್ಯೂಟೂತ್, ವೈಫೈಯನ್ನೊಳಗೊಂಡಿದೆ. ಫೋನ್ 2680mAh ಬ್ಯಾಟರಿಯನ್ನು ಡಿವೈಸ್ ಪಡೆದುಕೊಂಡಿದ್ದು ಇದು 3 ದಿನಗಳ ಬ್ಯಾಟರಿ ಬಾಳ್ವಿಕೆಯನ್ನು ನೀಡಲಿದೆ.

ಹುವಾಯಿ ಪಿ8 ಮ್ಯಾಕ್ಸ್

ಹುವಾಯಿ ಪಿ8 ಮ್ಯಾಕ್ಸ್

ಹುವಾಯಿ ಪಿ8 ಮ್ಯಾಕ್ಸ್, 6.8 ಇಂಚಿನ ಎಫ್‌ಎಚ್‌ಡಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು 1080 x 1920 ಪಿಕ್ಸೆಲ್‌ಗಳು ಇದರಲ್ಲಿವೆ. ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್ ಇದರಲ್ಲಿದೆ. ಹೈಸಿಲಿಕಾನ್ ಕಿರಿನ್ 935 ಓಕ್ಟಾ ಕೋರ್ ಕ್ವಾಡ್ ಕೋರ್ 1.5 GHz ಚಿಪ್‌ಸೆಟ್ ಡಿವೈಸ್‌ನಲ್ಲಿದೆ. 3 ಜಿಬಿ RAM ಅನ್ನು ಫೋನ್ ಒಳಗೊಂಡಿದ್ದು 64 ಜಿಬಿ ಆಂತರಿಕ ಮೆಮೊರಿಯನ್ನು ಫೋನ್ ಪಡೆದುಕೊಂಡಿದೆ. ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ಇದನ್ನು ವಿಸ್ತರಿಸಬಹುದು. ಆಂಡ್ರಾಯ್ಡ್ ಆವೃತ್ತಿ 5.0.2 ಲಾಲಿಪಪ್ ಇದರಲ್ಲಿದೆ.

ಹುವಾಯಿ ಪಿ8 ಲೈಟ್

ಹುವಾಯಿ ಪಿ8 ಲೈಟ್

ಅಸೆಂಡ್ ಪಿ8 ಮತ್ತು ಪಿ8 ಮ್ಯಾಕ್ಸ್ ಜೊತೆಗೆ ಹುವಾಯಿ ಇನ್ನೊಂದು ಡಿವೈಸ್ ಅನ್ನು ಲಾಂಚ್ ಮಾಡಿದ್ದು ಹುವಾಯಿ ಪಿ8 ಲೈಟ್ ಎಂಬ ಹೆಸರನ್ನು ಇದು ಪಡೆದುಕೊಂಡಿದೆ. ಫೋನ್ 5.0 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು, 720 x 1280 ಪಿಕ್ಸೆಲ್‌ಗಳು ಇದರಲ್ಲಿದೆ. 1.2 GHz ಓಕ್ಟಾ ಕೋರ್ ಹೈಸಿಲಿಕಾನ್ ಕಿರಿನ್ 620 ಪ್ರೊಸೆಸರ್ ಜೊತೆಗೆ 2 ಜಿಬಿ RAM ಅನ್ನು ಫೋನ್ ಪಡೆದುಕೊಂಡಿದೆ. 13 ಎಮ್‌ಪಿ ರಿಯರ್ ಕ್ಯಾಮೆರಾ ಹಾಗೂ 5 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಪಡೆದುಕೊಂಡಿದೆ. ಆಂಡ್ರಾಯ್ಡ್ ಓಎಸ್ 5.0.2 ಲಾಲಿಪಪ್ ಇದರಲ್ಲಿದ್ದು, ಬ್ಲ್ಯಟೂತ್, ವೈಫೈ ಇದರಲ್ಲಿದೆ. ಫೋನ್ ನಾನ್ ರಿಮೂವೇಬಲ್ Li-Ion 2200mAh ಬ್ಯಾಟರಿಯನ್ನು ಒಳಗೊಂಡಿದ್ದು ಇದರ ಅಧಿಕೃತ ಬೆಲೆಯ ಬಗ್ಗೆ ಇನ್ನು ತಿಳಿದು ಬಂದಿಲ್ಲ.

ಹುವಾಯಿ ಬಿ2 ಟಾಕ್ ಬ್ಯಾಂಡ್

ಹುವಾಯಿ ಬಿ2 ಟಾಕ್ ಬ್ಯಾಂಡ್

ಚೀನಾದ ಹ್ಯಾಂಡ್‌ಸೆಟ್ ತಯಾರಕ ಕಂಪೆನು ಹುವಾಯಿ ಟಾಕ್ ಬ್ಯಾಂಡ್ 2 ಅನ್ನು ಲಾಂಚ್ ಮಾಡಿದ್ದು, ಇದನ್ನು ಫಿಟ್‌ನೆಸ್ ಬ್ಯಾಂಡ್ ಆಗಿ ಕೂಡ ಬಳಸಬಹುದಾಗಿದೆ. ಡಿಸ್‌ಪ್ಲೇ ಸ್ಕ್ರೀನ್, ಸ್ಟಾಪ್ ವಾಚ್, ಟ್ರಾಕರ್, ಪೆಡೋಮೀಟರ್, ಕ್ಯಾಲೊರಿ ಮಾನಿಟರಿಂಗ್ ಮೊದಲಾದ ವೈಶಿಷ್ಟ್ಯತೆಗಳೊಂದಿಗೆ ಬಂದಿದೆ. ಟಾಕ್ ಬ್ಯಾಂಡ್ 0.73 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಅನ್ನು ಹೊಂದಿದ್ದು ಬ್ಲ್ಯೂಟೂತ್ ಹೆಡ್‌ಸೆಟ್‌ಗೆ ಇದು ಬೆಂಬಲವನ್ನೊದಗಿಸುತ್ತದೆ. ಈ ಫಿಟ್‌ನೆಸ್ ಬ್ಲ್ಯೂಟೂತ್ 4.1 ಅನ್ನು ಬಳಸುತ್ತಿದ್ದು ಐಓಎಸ್ ಮತ್ತು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಳಿಗೆ ಬೆಂಬಲವನ್ನು ನೀಡುತ್ತದೆ.

ಹುವಾಯಿ ಎಕ್ಸ್2 ಟ್ಯಾಬ್ಲೆಟ್

ಹುವಾಯಿ ಎಕ್ಸ್2 ಟ್ಯಾಬ್ಲೆಟ್

ತನ್ನ ಟ್ಯಾಬ್ಲೆಟ್ ಸಾಲಿಗೆ ಹೊಸ ಡಿವೈಸ್ ಅನ್ನು ಹುವಾಯಿ ಲಾಂಚ್ ಮಾಡಿದ್ದು ಎಕ್ಸ್2 ಟ್ಯಾಬ್ಲೆಟ್ ಎಂಬ ಹೆಸರನ್ನು ಈ ಡಿವೈಸ್ ಹೊಂದಿದೆ. 7 ಇಂಚಿನ 1920x1200 ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯನ್ನು ಟ್ಯಾಬ್ಲೆಟ್ ಪಡೆದುಕೊಂಡಿದ್ದು 10 ಪಾಯಿಂಟ್ ಕ್ಯಾಪಸಿಟೀವ್ ಟಚ್ ಅನ್ನು ಇದು ಪಡೆದುಕೊಂಡಿದೆ. 64 ಬಿಟ್ ಓಕ್ಟಾ ಕೋರ್ ಕಿರಿನ್ 930 ಸಾಕ್ ಡಿವೈಸ್‌ನಲ್ಲಿದ್ದು 2ಜಿಬಿ/3ಜಿಬಿ RAM ಅನ್ನು ಡಿವೈಸ್ ಹೊಂದಿದೆ. ಆಂಡ್ರಾಯ್ಡ್ 5.0 ಲಾಲಿಪಪ್ ಇದರಲ್ಲಿದ್ದು ಎಮೋತಿನ್ UI 3.0 ಇದರಲ್ಲಿದೆ. 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಅನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್ 5.0 ಇದರಲ್ಲಿದೆ. ಬ್ಯಾಟರಿ 5000 mAh ಡಿವೈಸ್‌ನಲ್ಲಿದೆ.

AP007 ಪವರ್ ಬ್ಯಾಂಕ್

AP007 ಪವರ್ ಬ್ಯಾಂಕ್

ಇನ್ನು ಬ್ಯಾಂಕಾಕ್ ಈವೆಂಟ್‌ನಲ್ಲಿ ಹುವಾಯಿ ಪವರ್ ಬ್ಯಾಂಕ್ ಅನ್ನು ಲಾಂಚ್ ಮಾಡುತ್ತಿದ್ದು ಇದು 13000 mAh ಬ್ಯಾಟರಿಯನ್ನು ಪಡೆದುಕೊಂಡಿದೆ. ನಿಮ್ಮ ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ. ಪವರ್ ಬ್ಯಾಂಕ್ ಎರಡು ಯುಎಸ್‌ಬಿ ಸ್ಲಾಟ್ ಅನ್ನು ಪಡೆದುಕೊಂಡಿದ್ದು ಎರಡು ಡಿವೈಸ್‌ಗಳನ್ನು ಒಂದೇ ಸಮಯದಲ್ಲಿ ಇದು ಚಾರ್ಜ್ ಮಾಡಬಲ್ಲುದು. ಈ ಪವರ್ ಬ್ಯಾಂಕ್ ಬೆಲೆ ರೂ 1,399 ಆಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಪವರ್ ಬ್ಯಾಂಕ್ ಲಭ್ಯವಿದೆ.

Best Mobiles in India

English summary
Chinese smartphone maker, Huawei today unveiled its latest P8 series in a premium SEA event at Bangkok. Dubbed as Ascend P8 and P8Max, it comes with premium design matching the current industrial design language with all-aluminum uni-body design, making the new handset rock solid.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X