ಕಾಂಗ್ರೆಸ್‌ ಟಿಕೆಟ್‌ ನೀಡಿದ್ರೆ ಸ್ಪರ್ಧಿಸಲು ನಾನು ರೆಡಿ: ನಿಲೇಕಣಿ

Written By:

ಆಧಾರ್‌ ಮುಖ್ಯಸ್ಥ ನಂದನ್‌ ನಿಲೇಕಣಿ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ ಎಂದಿದ್ದ ಊಹೆ ಈಗ ನಿಜವಾಗಿದೆ. ಕಾಂಗ್ರೆಸ್‌ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿ‌ಸಲು ಟಿಕೆಟ್‌ ನೀಡಿದರೆ ತಾನು ಸ್ಪರ್ಧಿ‌ಸುವುದಾಗಿ ನಂದನ್‌ ನಿಲೇಕಣಿ ಬೆಂಗಳೂರಿನಲ್ಲಿ ಹೇಳಿದ್ದಾರೆ.

ಕ್ರೈಸ್ಟ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯ‌ಕ್ರಮದಲ್ಲಿ ತಮ್ಮ ಭವಿಷ್ಯದ ಯೋಜನೆಗಳು ಪ್ರಕಟಸಿದ ನಿಲೇಕಣಿ ಸಮಾಜದಲ್ಲಿ ಬದಲಾವಣೆ ತರಲು ರಾಜಕೀಯ ಧುಮುಕಿದ್ದೇನೆ ಎಂದು ಹೇಳಿದ್ದಾರೆ.

ಕಳೆದ ಐದು ವರ್ಷಗಳಿಂದ ಆಧಾರ್‌ ಕಾರ್ಡ್‌ ಯೋಜನೆ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುತ್ತಿದ್ದು,ಕಾಂಗ್ರೆಸ್‌ ಈ ಯೋಜನೆ ಯಶಸ್ವಿಗೊಳಿಸಲು ಪೂರ್ಣವಾದ ಸಹಕಾರ ನೀಡುತ್ತಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷ ಚುನಾವಣೆಗೆ ಸ್ಪರ್ಧಿಸಲು ಸೂಚಿಸಿದರೆ ಸ್ಪರ್ಧಿಸುಲು ನಾನು ಸಿದ್ದ ಎಂದು ನಿಲೇಕಣಿ ಹೇಳಿದ್ದಾರೆ

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನಿಲೇಕಣಿಯವರನ್ನು ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್‌ ಯೋಚಿಸಿದೆ ಎಂದು ಹೇಳಲಾಗುತ್ತಿದೆ.

 ಕಾಂಗ್ರೆಸ್‌ ಟಿಕೆಟ್‌ ನೀಡಿದ್ರೆ ಸ್ಪರ್ಧಿಸಲು ನಾನು ರೆಡಿ: ನಿಲೇಕಣಿ

ಮುಂದಿನ ಲೋಕಸಭಾ ಚುನಾವಣೆಗೆ ಕಾವು ಮತ್ತಷ್ಟು ಹೆಚ್ಚಾಗುತ್ತಿದೆ. ಈಗಾಗಲೇ ಲಾಲ್‌ ಬಹುದ್ದೂರ್‌ ಶಾಸ್ತ್ರಿ ಮೊಮ್ಮಗ ಆದರ್ಶ ಶಾಸ್ತ್ರಿ ಆಪಲ್‌ ಕಂಪೆನಿಯ ಒಂದು ಕೋಟಿ ರೂಪಾಯಿ ಸಂಬಳದ ನೌಕರಿಗೆ ರಾಜೀನಾಮೆ ನೀಡಿ ಆರವಿಂದ ಕೇಜ್ರಿವಾಲ್‌ರ ಆಮ್‌ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ. ಮುಂದಿನ ದಿನದಲ್ಲಿ ಮತ್ತಷ್ಟು ಕಾರ್ಪೊರೆಟ್‌ ಕ್ಷೇತ್ರದ ಪ್ರಭಾವಿ ವ್ಯಕ್ತಿಗಳು ರಾಜಕೀಯ ಕ್ಷೇತ್ರಕ್ಕೆ ಧುಮಕುವ ಸಾಧ್ಯತೆ ಇದೆ.

ಇದನ್ನೂ ಓದಿ: ಗೂಗಲ್ ಒಪ್ಪಂದದಿಂದ ಹಿಂದೆ ಸರಿದ ಚುನಾವಣಾ ಆಯೋಗ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot