Subscribe to Gizbot

ಟ್ವಿಟ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮೂರನೇ ಸ್ಥಾನ

Written By:

ಟ್ವಿಟ್ಟರ್‌ನಲ್ಲಿ ಹೆಚ್ಚು ಫಾಲೋವರ್ ಅನ್ನು ಹೊಂದಿರುವ ವಿಶ್ವದ ಮೂರನೇ ನಾಯಕರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಾಗಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೆಚ್ಚು ಫಾಲೋವರ್ಸ್ ಹೊಂದಿರುವ ವಿದೇಶಿ ಮಂತ್ರಿಯಾಗಿದ್ದಾರೆ ಎಂದು ಅಧ್ಯಯನವು ತಿಳಿಸಿದೆ.

ಓದಿರಿ: ಫೋನ್ ಫೋಟೋಗ್ರಫಿಯ ಅದ್ಭುತ ಕೈಚಳಕ

ಟ್ವಿಟ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮೂರನೇ ಸ್ಥಾನ

ಸುಷ್ಮಾ ಸ್ವರಾಜ್ 2,438,228 ಫಾಲೋವರ್ಸ್ ಅನ್ನು ಹೊಂದಿರುವ ವಿದೇಶಾಂಗ ಸಚಿವೆಯಾದ್ದು, ಇವರು ಯುಎಇಯ ಅಬ್ದುಲ್ಲಾ ಬಿನ್ ಜಯೇದ್ (1,608,831) ಮತ್ತು ಟರ್ಕಿಯ ಮೆವ್ಲಟ್ ಕವೋಸ್ಗ್ಲು (376,429) ರನ್ನು ಹಿಂದಿಕ್ಕಿದ್ದಾರೆ.

ಓದಿರಿ: ಫೋನ್ ಬ್ಯಾಟರಿಯನ್ನು ಫ್ರಿಜ್‌ನಲ್ಲಿರಿಸಿದರೆ ಬಾಳಿಕೆ ಹೆಚ್ಚಂತೆ!!!

ಟ್ವಿಟ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮೂರನೇ ಸ್ಥಾನ

ಮಾರ್ಚ್ 24 ರವರೆಗಿನ ಮಾಹಿತಿಯನ್ನು ಈ ಸಮೀಕ್ಷೆಯು ಒಳಗೊಂಡಿದ್ದು, ಟ್ವಿಟ್ಟರ್‌ನಲ್ಲಿರುವ ಜಾಗತಿಕ ನಾಯಕರುಗಳ ವಾರ್ಷಿಕ ಜಾಗತಿಕ ಸರ್ವೇಯನ್ನು ಇದು ಒಳಗೊಂಡಿದೆ. ಯಾವ ವಿಶ್ವ ನಾಯಕರಗಳು ಸೈಟ್ ಅನ್ನು ಬಳಸುತ್ತಾರೆ ಮತ್ತು ಸಾಮಾಜಿಕ ತಾಣದೊಂದಿಗೆ ಅವರು ಹೇಗೆ ಸಂಪರ್ಕವನ್ನು ಹೊಂದಿದ್ದಾರೆ ಎಂಬ ಮಾಹಿತಿಗಾಗಿ ಇದು ಸಮೀಕ್ಷೆಯನ್ನು ನಡೆಸಿತ್ತು.

ಓದಿರಿ: ಟ್ವಿಟ್ಟರ್‌ನಲ್ಲಿ ಹ್ಯಾಶ್‌ಟ್ಯಾಗೇ ಬಳಸದ ಖಾನ್ ಬಗ್ಗೆ ತಿಳಿಯಬೇಕೇ?

ಟ್ವಿಟ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮೂರನೇ ಸ್ಥಾನ

ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ 56,933,515 ಫಾಲೋವರ್ಸ್, ಪೋಪ್ ಫ್ರಾನ್ಸಿಸ್ (@Pontifex) 19,580,910 ಫಾಲೋವರ್ಸ್ ಹಾಗೂ ಮೋದಿ 10,902,510 ಫಾಲೋವರ್ಸ್ ಎಂಬ ಗಣತಿಯನ್ನು ಸಮೀಕ್ಷೆ ಬಹಿರಂಗಪಡಿಸಿದೆ.

ಟ್ವಿಟ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮೂರನೇ ಸ್ಥಾನ

ಮೇ 2014 ರ ಚುನಾವಣೆಯ ನಂತರ ಮೋದಿಯವರ ಟ್ವಿಟ್ಟರ್ ಖಾತೆಯು ವಿಶ್ವ ನಾಯಕರುಗಳ ಪಟ್ಟಿಯಲ್ಲಿ ಬಂದಿದ್ದು, ಮೋದಿಯವರು ಪ್ರತೀ ಟ್ವೀಟ್‌ಗೆ ಮರು ಟ್ವೀಟ್ ಮಾಡುವ ಮೂಲಕ ಸಾಮಾಜಿಕ ತಾಣದಲ್ಲಿ ಹೆಚ್ಚು ವ್ಯಸ್ತರಾಗಿರುತ್ತಾರೆ. ಸಾಮಾಜಿಕ ಮಾಧ್ಯಮದ ಉತ್ತಮ ಬೆಂಬಲದಿಂದಲೇ ಮೋದಿಯವರು 2014 ರ ಚುನಾವಣೆಯಲ್ಲಿ ವಿಜಯಿಯಾಗಿದ್ದಾರೆ.

English summary
Indian Prime Minister Narendra Modi remains the third most followed world leader on the micro-blogging site Twitter while External Affairs Minister Sushma Swaraj is the most followed foreign minister, according to a latest study. Sushma Swaraj is the most followed foreign minister with 2,438,228 followers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot