ಫೋನ್ ಬ್ಯಾಟರಿಯನ್ನು ಫ್ರಿಜ್‌ನಲ್ಲಿರಿಸಿದರೆ ಬಾಳಿಕೆ ಹೆಚ್ಚಂತೆ!!!

By Shwetha
|

ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಸಮಸ್ಯೆ ಹೊಸ ಸಮಸ್ಯೆಯೇನಲ್ಲ. ನೀವು ಎಷ್ಟೇ ದುಬಾರಿ ಫೋನ್ ಕೊಂಡರೂ ಬ್ಯಾಟರಿ ಸಮಸ್ಯೆ ತಲೆ ತಿನ್ನುತ್ತಲೇ ಇರುತ್ತದೆ. ಇನ್ನು ಬ್ಯಾಟರಿ ಬೇಗ ಖರ್ಚಾಗಲು ಬಳಕೆದಾರರು ತಮ್ಮದೇ ಯೋಚನೆಗಳನ್ನು ಮುಂದಿಡುತ್ತಾರೆ. ಈ ಯೋಚನೆಗಳು ಅಷ್ಟೊಂದು ಸ್ವಾರಸ್ಯಕರವಾಗಿಲ್ಲದಿದ್ದರೂ ಕೆಲವೊಂದು ಮೂರ್ಖತನವನ್ನು ಹೊಂದಿರುತ್ತದೆ.

ಓದಿರಿ: ಫೋನ್‌ನ ಬ್ಯಾಟರಿ ಬಾಳ್ವಿಕೆ ಉಳಿಸಲು ಟಾಪ್ ಸಲಹೆಗಳು

ಇಂದಿನ ಲೇಖನದಲ್ಲಿ ಅಂತಹ ಮೂರ್ಖತನವನ್ನು ಬಿಂಬಿಸುವ ಕೆಲವೊಂದು ಉದಾಹರಣೆಗಳನ್ನು ನಾವು ನಿಮಗೆ ನೀಡುತ್ತಿದ್ದೇವೆ. ಬಳಕೆದಾರರು ತಮ್ಮ ಫೋನ್ ಚಾರ್ಜ್ ಮುಗಿಯುತ್ತಿರುವುದಕ್ಕೆ ತಮ್ಮದೇ ಆದ ಕಾರಣಗಳನ್ನು ನೀಡುತ್ತಿದ್ದು ನಿಜವಾಗಿಯೂ ಇದು ಗೊಡ್ಡುವಾದ ಎಂದು ನಮಗನಿಸುತ್ತದೆ.

ಬ್ಯಾಟರಿಗಳಲ್ಲಿ ಮೆಮೊರಿ ಇದೆ

ಬ್ಯಾಟರಿಗಳಲ್ಲಿ ಮೆಮೊರಿ ಇದೆ

ಬ್ಯಾಟರಿಗಳಲ್ಲಿ ಮೆಮೊರಿ ಇದ್ದು ಇದರಿಂದಾಗಿ ಅದು ಅನಾವಶ್ಯಕ ಚಾರ್ಜ್ ಅನ್ನು ನುಂಗುತ್ತದೆ ಎಂಬ ವಾದವನ್ನು ಮಂಡಿಸುವವರಿದ್ದಾರೆ. ಕೆಲವರು 50% ಚಾರ್ಜ್ ಆಗುವ ಮುನ್ನವೇ ಚಾರ್ಜರ್‌ನಿಂದ ಫೋನ್ ಅನ್ನು ತೆಗೆಯುತ್ತಾರೆ.

ಬ್ರ್ಯಾಂಡೆಡ್ ಚಾರ್ಜರ್ ಅಲ್ಲದಿದ್ದರೆ

ಬ್ರ್ಯಾಂಡೆಡ್ ಚಾರ್ಜರ್ ಅಲ್ಲದಿದ್ದರೆ

ನಿಮ್ಮ ಡಿವೈಸ್‌ಗೆ ಸೂಕ್ತವಾಗಿರುವ ಚಾರ್ಜರ್ ಅನ್ನು ಖರೀದಿಸಿ. ನಿಮ್ಮ ಚಾರ್ಜರ್ ಬ್ರ್ಯಾಂಡೆಡ್ ಅಲ್ಲದಿದ್ದರೂ ಡಿವೈಸ್‌ಗೆ ಸರಿಯಾಗಿ ಹೊಂದುವಂತಿರಬೇಕು.

ರಾತ್ರಿ ಪೂರ್ತಿ ಚಾರ್ಜ್ ಮಾಡುವುದರಿಂದ ಫೋನ್‌ಗೆ ಅಪಾಯ

ರಾತ್ರಿ ಪೂರ್ತಿ ಚಾರ್ಜ್ ಮಾಡುವುದರಿಂದ ಫೋನ್‌ಗೆ ಅಪಾಯ

ಇನ್ನು ರಾತ್ರಿ ಪೂರ್ತಿ ಚಾರ್ಜ್ ಮಾಡುವುದರಿಂದ ಫೋನ್‌ಗೆ ಹಾನಿಯುಂಟಾಗುತ್ತದೆ ಎಂಬುದು ಸುಳ್ಳಾಗಿದೆ. ರಾತ್ರಿ ಪೂರ್ತಿ ನಿಮ್ಮ ಫೋನ್ ಅನ್ನು ಚಾರ್ಜ್‌ಗೆ ಇರಿಸುವುದರ ಬದಲಿಗೆ 40% ಮತ್ತು 80% ನಡುವೆ ಚಾರ್ಜ್‌ಗೆ ಇರಿಸಿ.

ಚಾರ್ಜ್‌ನಲ್ಲಿರುವಾಗ ಫೋನ್ ಬಳಸದಿರಿ

ಚಾರ್ಜ್‌ನಲ್ಲಿರುವಾಗ ಫೋನ್ ಬಳಸದಿರಿ

ನಿಮ್ಮ ಫೋನ್ ಚಾರ್ಜ್‌ನಲ್ಲಿರುವಾಗ ಅದನ್ನು ಬಳಸುವುದು ಚಾರ್ಜ್ ಸಾಮರ್ಥ್ಯವನ್ನು ಕುಗ್ಗಿಸಬಹುದು ಎಂದು ಜನರು ಆಲೋಚಿಸುತ್ತಾರೆ. ನೀವು ಕಡಿಮೆ ಗುಣಮಟ್ಟದ ಚಾರ್ಜರ್ ಬಳಸುತ್ತಿದ್ದರೆ ಮಾತ್ರ ಇದು ಅನ್ವಯವಾಗುತ್ತದೆ.

ಫೋನ್ ಆಫ್ ಮಾಡುವುದು ಬ್ಯಾಟರಿಗೆ ಹಾನಿ

ಫೋನ್ ಆಫ್ ಮಾಡುವುದು ಬ್ಯಾಟರಿಗೆ ಹಾನಿ

ನೀವು ದೀರ್ಘ ಸಮಯದವರೆಗೆ ಫೋನ್ ಸ್ವಿಚ್ ಆಫ್ ಮಾಡಿಡುವುದು ಬ್ಯಾಟರಿಯನ್ನು ಡ್ರೈನ್ ಮಾಡುತ್ತದೆ. ಇನ್ನು ಸ್ವಲ್ಪ ಸಮಯ ಫೋನ್ ಅನ್ನು ಆಫ್ ಮಾಡುವುದರಿಂದ ಬ್ಯಾಟರಿಗೆ ಯಾವುದೇ ಹಾನಿಯುಂಟಾಗುವುದಿಲ್ಲ.

ಫೋನ್ ಬಳಸುವ ಮುನ್ನ ಫೋನ್‌ ಅನ್ನು ಪೂರ್ಣವಾಗಿ ಚಾರ್ಜ್ ಮಾಡಬೇಕು

ಫೋನ್ ಬಳಸುವ ಮುನ್ನ ಫೋನ್‌ ಅನ್ನು ಪೂರ್ಣವಾಗಿ ಚಾರ್ಜ್ ಮಾಡಬೇಕು

ಹೆಚ್ಚಿನ ಜನರು ಆಲೋಚಿಸುವುದು ಏನೆಂದರೆ ಹೊಸ ಫೋನ್ ಅನ್ನು ಸಂಪೂರ್ಣ ಚಾರ್ಜ್ ಮಾಡಿಯೇ ಬಳಸಬೇಕು ಎಂದಾಗಿದೆ. ಇದು ಸುಳ್ಳ ಎಲ್ಲಾ ಸ್ಮಾರ್ಟ್‌ಫೋನ್ ಬ್ಯಾಟರಿಗಳು 40% ದಿಂದ 80% ಮಾತ್ರ ಕಾರ್ಯನಿರ್ವಹಿಸುತ್ತದೆ.

ಬ್ಯಾಟರಿಯನ್ನು ಫ್ರೀಜರ್‌ನಲ್ಲಿರಿಸುವುದರಿಂದ ದೀರ್ಘತೆ

ಬ್ಯಾಟರಿಯನ್ನು ಫ್ರೀಜರ್‌ನಲ್ಲಿರಿಸುವುದರಿಂದ ದೀರ್ಘತೆ

ಇನ್ನು ಕೆಲವರ ನಂಬಿಕೆಯಾಗಿದೆ ಏನೆಂದರೆ ಬ್ಯಾಟರಿಯನ್ನು ಫ್ರೀಜರ್‌ನಲ್ಲಿರಿಸುವುದು ಬ್ಯಾಟರಿಯ ದೀರ್ಘತೆಯನ್ನು ಉಳಿಸುತ್ತದೆ ಎಂದು ನಂಬುವವರು ಇದ್ದಾರೆ.

ಇಂಟರ್ನೆಟ್ ಬಳಕೆಯಿಂದ ಬ್ಯಾಟರಿ ಖಾಲಿಯಾಗುತ್ತದೆ

ಇಂಟರ್ನೆಟ್ ಬಳಕೆಯಿಂದ ಬ್ಯಾಟರಿ ಖಾಲಿಯಾಗುತ್ತದೆ

ಇಂಟರ್ನೆಟ್ ಬಳಕೆಗಿಂತಲೂ ನೀವು ಮೊಬೈಲ್‌ ಫೋನ್‌ನಲ್ಲಿ ಗೇಮ್ಸ್ ಆಡಿದಾಗ ಬ್ಯಾಟರಿ ನಷ್ಟಗೊಳ್ಳುವುದು ಬೇಗ.

ವೈಫೈ, ಬ್ಲ್ಯೂಟೂತ್ ಮತ್ತು ಜಿಪಿಎಸ್ ಆಫ್ ಮಾಡುವುದು

ವೈಫೈ, ಬ್ಲ್ಯೂಟೂತ್ ಮತ್ತು ಜಿಪಿಎಸ್ ಆಫ್ ಮಾಡುವುದು

ಮೇಲೆ ತಿಳಿಸಿರುವ ಮೂರು ಕೂಡ ನಿಮ್ಮ ಫೋನ್‌ನಲ್ಲಿ ಆನ್ ಆಗಿದ್ದಾಗ ಬ್ಯಾಟರಿ ಆದಷ್ಟು ಬೇಗನೇ ಖರ್ಚಾಗುತ್ತದೆ. ನೀವು ಇಡೀ ದಿನ ವೈಫೈ, ಬ್ಲ್ಯೂಟೂತ್ ಇಲ್ಲವೇ ಜಿಪಿಎಸ್ ಆನ್ ಮಾಡುವುದು ಫೋನ್‌ನ ಸಂಪೂರ್ಣ ಬ್ಯಾಟರಿಯನ್ನು ಮುಗಿಸಬಹುದು.

ಟಾಸ್ಕ್ ಮ್ಯಾನೇಜರ್ ಸಹಾಯ

ಟಾಸ್ಕ್ ಮ್ಯಾನೇಜರ್ ಸಹಾಯ

ಬಿಲ್ಟ್ ಇನ್ ಬ್ಯಾಟರಿ ಸಮಸಸ್ಯೆಗಳನ್ನು ಥರ್ಡ್ ಪಾರ್ಟಿ ಟಾಸ್ಕ್ ಮ್ಯಾನೇಜರ್‌ಗೆ ಸರಿಪಡಿಸಲು ಆಗುವುದಿಲ್ಲ ಎಂಬುದು ನೆನಪಿರಲಿ.

Most Read Articles
Best Mobiles in India

English summary
Have you run into a few old-school users with antiquated ideas about how to treat smartphone batteries? Here are several myths worth debunking. Users go to some strange measures to keep their batteries going and going and going. Yet much of what we hear about mobile batteries is simply not true.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more