ಗಗನಯಾತ್ರಿಗಳಿಗೆ ನೀರಿನ ತಳಭಾಗದಲ್ಲಿ ತರಬೇತಿ ನೀಡುತ್ತಿರುವ ನಾಸಾ

By Suneel
|

ನಾಸಾ, ಗಗನಯಾತ್ರಿಗಳ ತಂಡವೊಂದನ್ನು ಅಂಟ್ಲಾಂಟಿಕ್ ಸಮುದ್ರದ ತಳಭಾಗಕ್ಕೆ 16 ದಿನಗಳ ಕಾಲ ಸ್ಪೇಸ್‌ ಮಿಷನ್‌ ಮೂಲಕ ಕಳಿಸಿದೆ. ಭವಿಷ್ಯದಲ್ಲಿ ಅಗಾಧ ಅಂತರಿಕ್ಷ ಯೋಜನೆಗಳ ಮೂಲಕ ಮಂಗಳ ಗ್ರಹಕ್ಕೆ ಪ್ರಯಾಣ ಬೆಳೆಸಲು ಈ ತೀರ್ಮಾನ ಕೈಗೊಂಡಿದೆ.

ಗಗನಯಾತ್ರಿಗಳಿಗೆ ನೀರಿನ ತಳಭಾಗದಲ್ಲಿ ತರಬೇತಿ ನೀಡುತ್ತಿರುವ ನಾಸಾ

ಅಂದಹಾಗೆ ನಾಸಾ ನೀರಿನಲ್ಲಿ ಈಜುವ ಆಕ್ವಾನಾಟ್ಸ್‌ಗಳನ್ನು ಅವರಿಗೆ ತರಬೇತಿ ನೀಡಲು ಕಳುಹಿಸಿದೆ. ಕಾರಣ ನೀಲಿ ಸಮುದ್ರದ ತಳಭಾಗದಲ್ಲಿರುವ ಮೇಲ್ಮೈ ವಾತಾವರಣವು ಮಂಗಳ ಗ್ರಹದ ಮೇಲ್ಮೈನಲ್ಲಿನ ವಾತಾವರಣದ ರೀತಿಯಲ್ಲೇ ಇರುತ್ತದೆ ಎನ್ನಲಾಗಿದೆ.

ನಾಸಾದಿಂದ ಮಂಗಳ ಗ್ರಹದಲ್ಲಿ ನಗರ ಪತ್ತೆ!

16 ದಿನಗಳ ನಾಸಾ (Nasa Extreme Environment Mission Operations -NEEMO) ಮಿಷನ್‌ ಕಾರ್ಯಾಚರಣೆಯಲ್ಲಿ ಕೃತಕ ಬಾಹ್ಯಾಕಾಶ ಪರಿಸ್ಥಿತಿಗಳಲ್ಲಿ ವಾಸಿಸಿದ ಸಿಬ್ಬಂದಿಗಳು ಅತರರಾಷ್ಟ್ರೀಯ ಬಾಹ್ಯಾಕಾಶ ಪರಿಶೋಧನೆಗೆ ತಂತ್ರಗಳನ್ನು ಮತ್ತು ಟೂಲ್‌ಗಳನ್ನು ಅಭಿವೃದ್ದಿಪಡಿಸಲು ಸಹಾಯಕವಾಗಲಿದೆ ಎಂದು ಅಮೆರಿಕ ಸ್ಪೇಸ್‌ ಏಜೆನ್ಸಿ ಹೇಳಿದೆ. ಗಗನ ಯಾತ್ರಿಗಳನ್ನು ಆಕ್ವೇರಿಯಸ್‌ನಲ್ಲಿ ಸಾಗರ ತಳಕ್ಕೆ ಕಳುಹಿಸಿರುವ ಪ್ರದೇಶವು ಅಟ್ಲಾಂಟಿಕ್‌ ಸಮುದ್ರದ ಫ್ಲೊರಿಡಾ ರಾಷ್ಟ್ಟೀಯ ಸಮುದ್ರ ಅಭಯಾರಣ್ಯದಲ್ಲಿದೆ.

ಗಗನಯಾತ್ರಿಗಳಿಗೆ ನೀರಿನ ತಳಭಾಗದಲ್ಲಿ ತರಬೇತಿ ನೀಡುತ್ತಿರುವ ನಾಸಾ

ಸಮುದ್ರ ತಳದಲ್ಲಿ ಗಗನ ಯಾತ್ರಿಗಳು ಮೈಕ್ರೋ ಗುರುತ್ವ ಶಕ್ತಿಯಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕೆಲಸ ನಿರ್ವಹಿಸುವ ಮತ್ತು ಜೀವಿಸುವ ಶೈಲಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಸಮುದ್ರದ ತಳಭಾಗದಲ್ಲಿ ಪರೀಕ್ಷೆಗೆ ಕಳುಹಿಸಲಾಗಿರುವ ಸ್ಪೇಸ್‌ಕ್ರಾಫ್ಟ್‌ ಭವಿಷ್ಯದಲ್ಲಿ ಕ್ಷುದ್ರಗ್ರಹಕ್ಕೆ ಹೋಗಲಿದೆ ಎಂದು ನಾಸಾ ಹೇಳಿದೆ.
ಚಿತ್ರ ಕೃಪೆ: ನಾಸಾ

ದೈತ್ಯ ಕ್ಷುದ್ರಗ್ರಹ ಅಪ್ಪಳಿಸುವಿಕೆಯಿಂದ ಭೂಮಿ ನಾಶ; ನಾಸಾ ಪರಿಶೋಧನೆ

Best Mobiles in India

Read more about:
English summary
Nasa Training Astronauts Underwater to Mimic Mars Mission Conditions. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X