ದೈತ್ಯ ಕ್ಷುದ್ರಗ್ರಹ ಅಪ್ಪಳಿಸುವಿಕೆಯಿಂದ ಭೂಮಿ ನಾಶ; ನಾಸಾ ಪರಿಶೋಧನೆ

By Suneel
|

ಮುಂದಿನ ದಿನಗಳಲ್ಲಿ ಭೂಮಿಗೆ ಆಗಬಹುದಾದ ದುರಂತ ತಪ್ಪಿಸಲು ನಾಸಾ 'ಕ್ಷುದ್ರಗ್ರಹ'ದ ಪರಿಶೋಧನೆಗಾಗಿ ಬಾಹ್ಯಾಕಾಶ ನೌಕೆಯನ್ನು ಲಾಂಚ್‌ ಮಾಡುತ್ತಿದೆ. ಕಾರಣ ಕ್ಷುದ್ರಗ್ರಹ ಮುಂದಿನ ದಿನಗಳಲ್ಲಿ ಭೂಮಿಗೆ ಅಪ್ಪಳಿಸಿದಲ್ಲಿ ಭೂಮಿಯ ಮೇಲೆ ದೊಡ್ಡ ದುರಂತವೇ ಸಂಭವಿಸಲಿದೆಯಂತೆ.

ಅಂದಹಾಗೆ ಭವಿಷ್ಯದ ದಿನಗಳಲ್ಲಿ ಭೂಮಿಗೆ ಅಪ್ಪಳಿಸಲಿರುವ ಕ್ಷುದ್ರಗ್ರಹದ ಹೆಸರು 'ಬೆನ್ನು'. ಬೆನ್ನು, ಭೂಮಿಗೆ ಅಪ್ಪಳಿಸುವ ಸಂಭವವಿದ್ದು ಇಡಿ ಭೂಮಿಯನ್ನೇ ನಾಶಪಡಿಸಲಿದೆಯಂತೆ. ಕಾರಣ ಬೆನ್ನು ಕ್ಷುದ್ರಗ್ರಹವು ಅಪಾರ ಸಾಮರ್ಥ್ಯದ ಗುರುತ್ವಾಕರ್ಷಣೆಯಿಂದ 2,700 ಪಟ್ಟು ಸಾಮರ್ಥ್ಯದಿಂದ ಭೂಮಿಗೆ ಅಪ್ಪಳಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

"ಮನೆಯ ಮುಂದಿನ 18 ಸಸ್ಯಗಳು ಗಾಳಿಯನ್ನು ಫಿಲ್ಟರ್‌ ಮಾಡುತ್ತವೆ" ನಾಸಾ

ಬೆನ್ನು

ಬೆನ್ನು

ಅಂದಹಾಗೆ ಬೆನ್ನು ಕ್ಷುದ್ರಗ್ರಹವು ಭೂಮಿಯ ಕಕ್ಷೆಯನ್ನು 6 ವರ್ಷಗಳಿಗೊಮ್ಮೆ ದಾಟಲಿದೆ. 1999 ರಲ್ಲಿ ಪತ್ತೆ ಮಾಡಲಾದ ಬೆನ್ನು ಭೂಮಿಗೆ ತುಂಬಾ ಹತ್ತಿರವಾಗುತ್ತಿದೆ. 2135 ನೇ ವರ್ಷಕ್ಕೇ ಇದು ಚಂದ್ರ ಮತ್ತು ಭೂಮಿಯ ನಡುವೆ ಹಾದು ಹೋಗಲಿದೆ.

ಬೆನ್ನು ಪರಿಶೋಧನೆಗೆ ನಾಸಾ ಬಾಹ್ಯಾಕಾಶ ನೌಕೆ

ಬೆನ್ನು ಪರಿಶೋಧನೆಗೆ ನಾಸಾ ಬಾಹ್ಯಾಕಾಶ ನೌಕೆ

ನಾಸಾ ಮತ್ತು ಅರಿಜೋನಾ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಮಾನವ ರಹಿತ 'OSIRIS-REx' ಬಾಹ್ಯಾಕಾಶ ನೌಕೆಯನ್ನು 'ಬೆನ್ನು' ಪರಿಶೋಧನೆಗೆ ಸೆಪ್ಟೆಂಬರ್‌ 8 ರಂದು ಲಾಂಚ್‌ ಮಾಡಲಾಗುತ್ತಿದೆ. ಈ ನೌಕೆಯು 'ಬೆನ್ನು' ಕ್ಷುದ್ರಗ್ರಹವನ್ನು 2018 ರ ಆಗಸ್ಟ್‌ನಲ್ಲಿ ತಲುಪಲಿದೆಯಂತೆ.

OSIRIS-REx

OSIRIS-REx

'OSIRIS-REx' ಅನ್ನು 34 ದಿನಗಳ ಲಾಂಚ್‌ ಅವಧಿಯಲ್ಲಿ ಸೆಪ್ಟೆಂಬರ್‌ 8 ರಂದು ಫ್ಲೋರಿಡಾದ ಕೇಪ್‌ ಕನವರೆಲ್‌'ನಿಂದ 'ಅಟ್ಲಾಸ್ ವಿ 411' ರಾಕೆಟ್‌ನಲ್ಲಿ ಹಾರಿಸಲಾಗುತ್ತದೆಯಂತೆ.

ಬೆನ್ನು ಇನ್ಸುರೆನ್ಸ್‌

ಬೆನ್ನು ಇನ್ಸುರೆನ್ಸ್‌

"ಬೆನ್ನು ಕ್ಷುದ್ರಗ್ರಹದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಬೆನ್ನು ಇನ್ಸುರೆನ್ಸ್‌ ತೆಗೆದುಕೊಳ್ಳಬೇಕಾಗುತ್ತದೆ" ಎಂದು ಅರಿಜೋನಾ ವಿಶ್ವವಿದ್ಯಾಲಯದ ಗ್ರಹಗಳ ವಿಜ್ಞಾನ ಪ್ರೊಫೆಸರ್‌ 'ಡಾಂಟೆ ಲಾರೆಟ್ಟಾ' ಹೇಳಿದ್ದಾರೆ.

OSIRIS-REx

OSIRIS-REx

ಮೊದಲಿಗೆ ಒಂದು ವರ್ಷಗಳ ಕಾಲ OSIRIS-REx ಸೂರ್ಯನನ್ನು ಪರಿಭ್ರಮಿಸಲಿದೆ. ನಂತರ ಭೂಮಿಯ ಗುರುತ್ವಾಕರ್ಷಣಾ ಕ್ಷೇತ್ರವನನು ಉಪಯೋಗಿಸಿಕೊಂಡು ಬೆನ್ನು ಮಾರ್ಗಕ್ಕೆ ಹೋಗಲಿದೆ. ಆಗಸ್ಟ್‌ 2018 ರಲ್ಲಿ OSIRIS-REx ಗಗನ ನೌಕೆಯು ಬೆನ್ನು ಪರಿಶೋಧನೆ ವಿಧಾನ ಪ್ರಾರಂಭಿಸಲಿದೆ.

ಬೆನ್ನು ಪರಿಶೋಧನೆ

ಬೆನ್ನು ಪರಿಶೋಧನೆ

OSIRIS-REx ರಾಕೆಟ್‌ ಬೆನ್ನು ಕ್ಷುದ್ರಗ್ರಹವನ್ನು ಸಂದಿಸುವ ವೇಗವನ್ನು ಬಳಸಿಕೊಂಡು ಸಂಪೂರ್ಣ ಸಮೀಕ್ಷೆ ನಡೆಸಲಿದೆ. ಎರಡು ತಿಂಗಳ ಸಮೀಕ್ಷೆ ನಂತರ ನಿಧಾನವಾಗಿ ಸ್ಪೇಸ್‌ಕ್ರಾಫ್ಟ್ ಬೆನ್ನು ಅನ್ನು ನಶಿಸಲಿದೆ.

ಬೆನ್ನು ಮೇಲ್ಮೈ ಸ್ಪರ್ಶ

ಬೆನ್ನು ಮೇಲ್ಮೈ ಸ್ಪರ್ಶ

ಸಂಪೂರ್ಣ ಸೈಟ್‌ ಆಯ್ಕೆಯ ನಂತರ ಸ್ಪೇಸ್‌ಕ್ರಾಫ್ಟ್ ಸಂಕ್ಷಿಪ್ತವಾಗಿ ಬೆನ್ನು ಮೇಲ್ಮೈ ಅನ್ನು ಸ್ಪರ್ಶಿಸಲಿದೆ. ಕಾರಣ ಮಾದರಿಯನ್ನು ಪಡೆಯಲು.

 ಸ್ಪೇಸ್‌ಕ್ರಾಫ್ಟ್

ಸ್ಪೇಸ್‌ಕ್ರಾಫ್ಟ್

ಸ್ಪೇಸ್‌ಕ್ರಾಫ್ಟ್‌ 'ಬೆನ್ನು' ಮೇಲೆ 5 ಸೆಕೆಂಡ್‌ಗಳ ಕಾಲ ಮೇಲ್ಮೈ ಸ್ಪರ್ಶವನ್ನು ಮಾಡಲಿದೆ. ಇದೇ ಸಂದರ್ಭದಲ್ಲಿ ಸ್ಪೇಸ್‌ಕ್ರಾಫ್ಟ್ ಛೇದಿಸುವ ಸಾರಜನಕ ಅನಿಲವನ್ನು ಬಿಡುಗಡೆ ಮಾಡುತ್ತದೆ. ಈ ಪ್ರಕ್ರಿಯೆಯಿಂದ ಬಂಡೆಗಳು ಮತ್ತು ಮೇಲ್ಮೈ ವಸ್ತುಗಳ ಪ್ರಚೋದಿಸುವಿಕೆ ಮಾದರಿಯನ್ನು ಪಡೆಯಲು ಸಹಾಯಕವಾಗಿದೆ.

ಮಾರ್ಚ್‌ 2021 ಕ್ಕೆ  OSIRIS-REx ಭೂಮಿಗೆ ವಾಪಸ್ಸು

ಮಾರ್ಚ್‌ 2021 ಕ್ಕೆ OSIRIS-REx ಭೂಮಿಗೆ ವಾಪಸ್ಸು

OSIRIS-REx ಸ್ಪೇಸ್‌ಕ್ರಾಫ್ಟ್‌ ಮಾರ್ಚ್‌ 2021 ಕ್ಕೆ ಕ್ಷುದ್ರಗ್ರಹದಿಂದ ವಾಪಸ್ಸು ಬರುವ ವಿಂಡೋ ಓಪನ್‌ ಆಗುತ್ತದೆ. ನಂತರ OSIRIS-REx ಭೂಮಿಗೆ ಹಿಂದಿರುಗಿ ಬರುವ ಪ್ರಕ್ರಿಯೆ ಆರಂಭಿಸಿ ಎರಡುವರೆ ವರ್ಷಗಳ ನಂತರ 2023 ರಲ್ಲಿ ಬರುತ್ತದೆ ಎಂದು ಸೈಟ್‌ನಲ್ಲಿ ಹೇಳಲಾಗಿದೆ.

ವೈಜ್ಞಾನಿಕ ಗುರಿ

ವೈಜ್ಞಾನಿಕ ಗುರಿ

OSIRIS-REx ಅನ್ನು ಬೇರ್ಪಡಿಸಿ ಮಾದರಿಯನ್ನು ಪಡೆದು ವಿಜ್ಞಾನಿಗಳು ತಮ್ಮ ವೈಜ್ಞಾನಿಕ ಗುರಿ ಮುಟ್ಟಲು ಸಮೀಕ್ಷೆಯನ್ನು ಕೈಗೊಳ್ಳುತ್ತಾರೆ. ಮಾದರಿಯಲ್ಲಿ ಶೇಕಡ 75 ರಷ್ಟನ್ನು ನಾಸಾ ಸಂರಕ್ಷಿಸುತ್ತದೆ ಎನ್ನಲಾಗಿದೆ.

Most Read Articles
Best Mobiles in India

Read more about:
English summary
NASA's spacecraft set to explore giant asteroid that could destroy Earth. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more