ಆರೋಗ್ಯ ವರ್ಧಿಸುವ ಬೈಕ್ ವಾಶಿಂಗ್ ಮೆಶೀನ್
ಚೀನಾದ ದಾಲಿಯನ್ ನ್ಯಾಶನಾಲಿಟೀಸ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಬೈಕ್ ವಾಶಿಂಗ್ ಮೆಶೀನ್ ಅನ್ನು ಕಂಡುಹಿಡಿದಿದ್ದು ನೀವು ಪೆಡಲಿಂಗ್ ಮಾಡುತ್ತಿರುವಾಗ ಇದು ನಿಮ್ಮ ಬಟ್ಟೆಗಳನ್ನು ತೊಳೆಯುತ್ತದೆ. ಈ ಅನ್ವೇಷಣೆಯನ್ನು "ಬೈಕ್ ವಾಶಿಂಗ್ ಮೆಶೀನ್" ಎಂದು ಕರೆದಿದ್ದು, ನಿಮ್ಮ ಜೀವನಕ್ಕೆ ಆರೋಗ್ಯ ಎಚ್ಚರಿಕೆಯನ್ನು ತರುವ ಪ್ರಯತ್ನವನ್ನು ಈ ಸಂಶೋಧನೆ ಮಾಡುತ್ತಿದೆ.
ಓದಿರಿ: ದೇಹದ ಬೆವರು ಬಳಸಿ ಫೋನ್ ಚಾರ್ಜ್ ಮಾಡಿ

ಈ ಬೈಕ್ ಅನ್ನು ವಿನ್ಯಾಪಡಿಸಿರುವ ವಿದ್ಯಾರ್ಥಿಗಳ ಪ್ರಕಾರ, ಇದು ಬಹು ಸುಲಭವಾಗಿ ಕೆಲಸ ಮಾಡುತ್ತದೆ. ಈ ಬೈಕ್ ಅನ್ನು ನೀವು ತುಳಿಯುತ್ತಿರುವಾಗ, ಇದರಲ್ಲಿರುವ ಪೆಡಲಿಂಗ್ ಪ್ರಕ್ರಿಯೆ ವಾಶಿಂಗ್ ಮೆಶೀನ್ ತಿರುಗುವಂತೆ ಮಾಡುತ್ತದೆ. ಇದೇ ಸಮಯದಲ್ಲಿ ವಿದ್ಯುತ್ ಕೂಡ ಉತ್ಪಾದನೆಯಾಗುತ್ತದೆ.
ಓದಿರಿ: ದೀರ್ಘ ಬ್ಯಾಟರಿಯುಳ್ಳ ಕ್ವಾಡ್ ಎಚ್‌ಡಿ ಟಾಪ್ ಫೋನ್ಸ್
ಇನ್ನು ವಾಶಿಂಗ್ ಮೆಶೀನ್ ಸಣ್ಣದಾಗಿರುವುದರಿಂದಾಗಿ, ನೀವು ಇದರ ಪಡೆಲ್‌ಗಳನ್ನು ಹೆಚ್ಚು ಹೆಚ್ಚು ತುಳಿಯುವುದು ಅನಿವಾರ್ಯವಾಗಿದೆ. ಇಂತಹ ಕಾನ್ಸೆಪ್ಟ್‌ಗಳು ಈ ಮೊದಲು ಕೂಡ ಬಂದಿದ್ದು, ಇದು ಯಶಸ್ವಿಯಾದಲ್ಲಿ ಮಾರುಕಟ್ಟೆಗೆ ತರುವ ನಿರ್ಧಾರದಲ್ಲಿ ವಿದ್ಯಾರ್ಥಿಗಳಿದ್ದಾರೆ.


Click it and Unblock the Notifications