ದೀರ್ಘ ಬ್ಯಾಟರಿಯುಳ್ಳ ಕ್ವಾಡ್ ಎಚ್‌ಡಿ ಟಾಪ್ ಫೋನ್ಸ್

By Shwetha

  ಎಲ್‌ಜಿ ಜಿ3 ಸ್ಮಾರ್ಟ್‌ಫೋನ್ 1440 x 2560 ಪಿಕ್ಸೆಲ್ ಹೊಂದಿರುವ ಫೋನ್ ಆಗಿದ್ದು, ಕ್ವಾಡ್ ಎಚ್‌ಡಿ ರೆಸಲ್ಯೂಶನ್ ಫೋನ್ ಎಂಬ ಹೆಗ್ಗಳಿಕೆ ಕೂಡ ಇದಕ್ಕಿದೆ. ತಂತ್ರಜ್ಞಾನ ಮುಂದುವರಿಯುತ್ತಿರುವಂತೆ ಫೋನ್ ಕ್ಷೇತ್ರದಲ್ಲಿ ಹೊಸ ಹೊಸ ಬದಲಾವಣೆಗಳು ಉಂಟಾಗುತ್ತಿದ್ದು ಹಂತಹಂತವಾಗಿ ಬಳಕೆದಾರರಿಗೆ ಸೂಕ್ತ ಎಂದೆನಿಸುವ ಕೆಲವೊಂದು ಮಾರ್ಪಾಡುಗಳ ಮೂಲಕ ಟೆಕ್ ಲೋಕ ನಮ್ಮಲ್ಲಿ ಮೋಡಿಯನ್ನುಂಟು ಮಾಡುತ್ತಿದೆ.

  ಓದಿರಿ: ಜೀವದ ಹಂಗುತೊರೆದು ಫೋಟೋ ಕ್ಲಿಕ್ಕಿಸುವವರಿಗೆ ನಮ್ಮ ಸಲಾಮ್

  ಕ್ವಾಡ್ ಎಚ್‌ಡಿ ಫೋನ್‌ಗಳು ಇದೀಗ ಮಾರುಕಟ್ಟೆಯಲ್ಲಿ ಹಾಟ್ ಕೇಕ್‌ಗಳು ಎಂದೆನಿಸಿದ್ದು ದೊಡ್ಡದಾದ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುತ್ತಿವೆ. ಮುಖ್ಯ ಕೆಲಸಗಳನ್ನು ಮಾಡಲು ಈ ಫೋನ್‌ಗಳು ಹೇಳಿಮಾಡಿಸಿರುವಂತವುಗಳಾಗಿವೆ. ಇಂದಿನ ಲೇಖನದಲ್ಲಿ ಇಂತಹುದೇ ಕ್ವಾಡ್ ಎಚ್‌ಡಿ ಡಿವೈಸ್‌ಗಳ ಪಟ್ಟಿಯೊಂದಿಗೆ ನಾವು ಬಂದಿದ್ದು ನಿಮ್ಮಲ್ಲಿ ಖರೀದಿಯ ಉಮೇದನ್ನು ಇದು ಮಾಡುವಂತಿವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಲೆನೆವೊ ವೈಬ್ ಜೆಡ್2 ಪ್ರೊ

  ಲೆನೆವೊ ವೈಬ್ ಜೆಡ್2 ಪ್ರೊ ಕ್ವಾಡ್ ಎಚ್‌ಡಿ ಸ್ಕ್ರೀನ್ ಅನ್ನು ಪಡೆದುಕೊಂಡಿದ್ದು 6 ಇಂಚುಗಳ ಅಳತೆಯನ್ನು ಪಡೆದುಕೊಂಡಿದೆ, 7.7 ಎಮ್‌ಎಮ್ ತೆಳು ಮೆಟಲ್ ಬಾಡಿ ಇದಕ್ಕಿದ್ದು, ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್, 16 ಎಮ್‌ಪಿ ಕ್ಯಾಮೆರಾ ಇದರಲ್ಲಿದೆ.

  ಮೋಟೋರೋಲಾ ಡ್ರಾಯ್ಡ್ ಟರ್ಬೊ

  5.2 ಇಂಚಿನ ಕ್ವಾಡ್ ಎಚ್‌ಡಿ ಡಿಸ್‌ಪ್ಲೇ, 2.7 GHZ ಸ್ನ್ಯಾಪ್‌ಡ್ರಾಗನ್ 805, 3ಜಿಬಿ RAM, 21 ಎಮ್‌ಪಿ ರಿಯರ್ ಕ್ಯಾಮೆರಾ ಇದರಲ್ಲಿದೆ.

  ಮೇಜು ಎಮ್ಎಕ್ಸ್4 ಪ್ರೊ

  ಮೇಜು ಎಮ್ಎಕ್ಸ್4 ಪ್ರೊ, 5.5 ಇಂಚಿನ ಸ್ಕ್ರೀನ್‌ನೊಂದಿಗೆ 2560x1536 ಪಿಕ್ಸೆಲ್‌ಗಳನ್ನು ಹೊಂದಿದ್ದು 20.7 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಡಿವೈಸ್‌ನಲ್ಲಿದೆ. ಮುಂಭಾಗದಲ್ಲಿ 5 ಎಮ್‌ಪಿ ಇದೆ. 5430 ಓಕ್ಟಾ ಕೋರ್ ಚಿಪ್ ಇದೆ.

  ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4

  ನೋಟ್ ಫ್ಯಾಬ್ಲೆಟ್ ಶ್ರೇಣಿಯಲ್ಲೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ನಾಲ್ಕೆನೆಯ ಅವತರಣಿಕೆಯಾಗಿದೆ. ಹೆಚ್ಚು ಶಾರ್ಪರ್ 5.7 ಇಂಚಿನ 1440x 2560 ಪಿಕ್ಸೆಲ್ ಕ್ವಾಡ್ ಎಚ್‌ಡಿ ಡಿಸ್‌ಪ್ಲೇ ಇದರಲ್ಲಿದ್ದು, 3 ಜಿಬಿ RAM ಫೋನ್ ಹೊಂದಿದೆ. 32 ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯ ಡಿವೈಸ್‌ಗಿದೆ.

  ಗೂಗಲ್ ನೆಕ್ಸಸ್ 6

  ಸ್ನ್ಯಾಪ್‌ಡ್ರಾಗನ್ 805 ಸಿಸ್ಟಮ್ ಚಿಪ್ ಇದರಲ್ಲಿದ್ದು, ಕ್ವಾಲ್‌ಕಾಮ್ 32 ಬಿಟ್ ಡಿವೈಸ್ ಹೊಂದಿದೆ. 3 ಜಿಬಿ RAM ಡಿವೈಸ್ ಹೊಂದಿದ್ದು, ಅಡ್ರೆನೊ 420 ಗ್ರಾಫಿಕ್ಸ್ ಇದರಲ್ಲಿದೆ. 5.96" ಅಮೋಲೆಡ್ ಸ್ಕ್ರೀನ್ ಅನ್ನು ಫೋನ್ ಹೊಂದಿದ್ದು 1440x2560 ಪಿಕ್ಸೆಲ್ ರೆಸಲ್ಯೂಶನ್ ಇದಕ್ಕಿದೆ. 13 ಮೆಗಾಪಿಕ್ಸೆಲ್ 4 ಕೆ ವೀಡಿಯೊ ಶೂಟರ್ ಅನ್ನು ಫೋನ್ ಒಳಗೊಂಡಿದೆ.

  ಒಪ್ಪೊ ಫೈಂಡ್ 7

  5.5 ಇಂಚಿನ 1440x2560 ಪಿಕ್ಸೆಲ್ ರೆಸಲ್ಯೂಶನ್ ಡಿಸ್‌ಪ್ಲೇ, ಇದರಲ್ಲಿದೆ.

  ಎಲ್‌ಜಿ ಜಿ3

  ಎಲ್‌ಜಿ ಜಿ3. 5.5 ಇಂಚಿನ ಕ್ವಾಡ್ ಎಚ್‌ಡಿ ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಹೊಂದಿದ್ದು ಅದ್ಭುತ ಫೋನ್ ಎಂದೆನಿಸಿದೆ.

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ಎಲ್‌ಟಿಇ ದಕ್ಷಿಣ ಕೊರಿಯಾದ ಬ್ರ್ಯಾಂಡ್ ಆಗಿದ್ದರೂ ಕ್ವಾಡ್ ಎಚ್‌ಡಿ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ.

  ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

  5.6 ಇಂಚಿನ ಮುಖ್ಯ ಸೂಪರ್ ಅಮೋಲೆಡ್ ಪ್ಯಾನೆಲ್ ಅನ್ನು ಇದು ಹೊಂದಿದ್ದು 1440x2560 ಪಿಕ್ಸೆಲ್ ಡೆನ್ಸಿಟಿ ಈ ಡಿವೈಸ್‌ಗಿದೆ.

  ವಿವೊ ಎಕ್ಸ್‌ಪ್ಲೇ 3ಎಸ್

  ಚೀನಾದ ವಿವೊ 6 ಇಂಚಿನ 1440x2560 ಪಿಕ್ಸೆಲ್ ಡೆನ್ಸಿಟಿಯ ಫೋನ್ ಅನ್ನು ಹೊರತಂದಿದ್ದು ವಿವೊ ಎಕ್ಸ್‌ಪ್ಲೇ ನಿಜಕ್ಕೂ ಅತ್ಯದ್ಭುತವಾಗಿದೆ. ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 800, 3 ಜಿಬಿ RAM, ಫಿಂಗರ್ ಪ್ರಿಂಟ್ ಸೆನ್ಸಾರ್, 13 ಎಮ್‌ಪಿ ಕ್ಯಾಮೆರಾ ಮತ್ತು 4ಜಿ ಎಲ್‌ಟಿಇ ಕನೆಕ್ಟಿವಿಟಿ ಇಲ್ಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The LG G3 was the first among the big boys to feature a display with 1440 x 2560 pixels, or the so-called Quad HD (QHD) resolution, breaking the 500ppi pixel density barrier in the process. Here we are listing out same quad hd phones which are having big battery capacity.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more