Subscribe to Gizbot

ಐಫೋನ್ 6 ಸ್ಫೋಟ: ಭಾರತದಲ್ಲಿ ಪ್ರಪ್ರಥಮ ಪ್ರಕರಣ

Posted By:

ಕರೆಯ ಸಂದರ್ಭದಲ್ಲಿ ಹೊಸ ಐಫೋನ್ ಹ್ಯಾಂಡ್‌ಸೆಟ್ ಸ್ಫೋಟಗೊಂಡಿರುವುದಾಗಿ ಗುರ್‌ಗಾವ್‌ನ ಬಳಕೆದಾರರೊಬ್ಬರು ಆಪಾದಿಸಿದ್ದಾರೆ. ಹ್ಯಾಂಡ್ಸ್ ಫ್ರಿ ಮೋಡ್ ಅನ್ನು ಇವರು ಬಳಸುತ್ತಿದ್ದ ಕಾರಣ ಯಾವುದೇ ಗಾಯಗಳಿಲ್ಲದೆ ಬಳಕೆದಾರರು ತಪ್ಪಿಸಿಕೊಂಡಿದ್ದಾರೆ.

ಓದಿರಿ: ಇನ್ನು ವಾಟ್ಸಾಪ್ ಭದ್ರಕೋಟೆಯನ್ನು ಮುರಿಯಲು ಎಂಟೆದೆ ಬೇಕು

ಐಫೋನ್ 6 ಸ್ಫೋಟ: ಭಾರತದಲ್ಲಿ ಪ್ರಪ್ರಥಮ ಪ್ರಕರಣ

ಭಾರತದಲ್ಲಿ ನಡೆದಿರುವ ಪ್ರಪ್ರಥಮ ಐಫೋನ್ ಸ್ಫೋಟ ಪ್ರಕರಣ ಇದಾಗಿದ್ದು ಕಂಪೆನಿಯು ದೋಷಕ್ಕೆ ಕಾರಣವೇನು ಎಂಬುದನ್ನು ಪರಿಶೀಲಿಸುತ್ತಿದ್ದು ಭಾರತದಲ್ಲಿ ಈ ರೀತಿಯ ಆಪಾದನೆಯನ್ನು ಕಂಪೆನಿ ಪ್ರಥಮ ಬಾರಿಗೆ ಪಡೆದುಕೊಳ್ಳುತ್ತಿದೆ ಎಂದು ಹೇಳಿದೆ. ಇನ್ನು ಅಮೇರಿಕಾದಲ್ಲೂ ಐಫೋನ್ ಸ್ಫೋಟದಂತಹ ಘಟನೆಗಳು ನಡೆದಿದ್ದು ವ್ಯಕ್ತಿಯೊಬ್ಬ ತನ್ನ ಪ್ಯಾಂಟ್ ಪಾಕೆಟ್‌ನಲ್ಲಿಯೇ ಫೋನ್ ಸ್ಫೋಟಗೊಂಡಿರುವುದರ ಬಗ್ಗೆ ದೂರನ್ನು ನೀಡಿದ್ದಾನೆ.

ಓದಿರಿ: ಹೆಚ್ಚು ನಿರೀಕ್ಷಿತ ಐಓಎಸ್ 9 ನಲ್ಲಿ ಏನೆಲ್ಲಾ ಇದೆ ಗೊತ್ತೇ?

ಐಫೋನ್ 6 ಸ್ಫೋಟ: ಭಾರತದಲ್ಲಿ ಪ್ರಪ್ರಥಮ ಪ್ರಕರಣ

ಜೂನ್ 20 ರಂದೇ ಗುರ್‌ಗಾವ್ ಪ್ರಕರಣ ದಾಖಲಾಗಿದ್ದು ಇದೀಗ ತಾನೇ ಬೆಳಕಿಗೆ ಬಂದಿದೆ. ಕಿಶಾನ್ ಯಾದವ್ ಎಂಬ ಹೋಟೆಲ್ ಉದ್ಯಮಿಯ ಐಫೋನ್ ಸ್ಫೋಟಗೊಂಡಿದ್ದು ಎಫ್ಐಆರ್ ಅನ್ನು ನೋಂದಾಯಿಸಿದ್ದಾರೆ. ಜೂನ್ 18 ರಂದು 64 ಜಿಬಿ ಆವೃತ್ತಿಯ ಹೊಸ ಐಫೋನ್ 6 ಅನ್ನು ರೂ 60,000 ನೀಡಿ ಇವರು ಖರೀದಿಸಿದ್ದಾರೆ. ಬರೇ ಎರಡು ದಿನದಲ್ಲಿ ಇದು ತನ್ನ ಅಸಲೀಯತ್ತನ್ನು ತೋರಿಸಿದ್ದು ಐಫೋನ್ ಖರೀದಿ ಮಾಡುವಾಗ ಮತುವರ್ಜಿ ವಹಿಸುವಂತೆ ಮಾಡಿದೆ.

English summary
An iPhone 6 user in Gurgaon has alleged that his two-day old handset heated up and exploded during a call. But he escaped without injuries since he was using the hands-free mode.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot