Home
ಸುದ್ದಿಜಾಲ

ಶಾಕಿಂಗ್ ನ್ಯೂಸ್: ಜಿಯೋ DTH ಸೇವೆ ರದ್ದು..! ಕಾರಣ..!

By Srinidhi

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಮಾಡಿದ ಕ್ರಾಂತಿಯಿಂದಾಗಿ ಟೆಲಿಕಾಂ ವಲಯದಲ್ಲಿ ಭಾರೀ ಬಿರುಗಾಳಿಯೇ ಎದ್ದಿತ್ತು. ಇದೇ ಮಾದರಿಯಲ್ಲಿ ಜಿಯೋ DTH ಸೇವೆಯನ್ನು ಆರಂಭಿಸಲಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯನ್ನು ತರಲಿದೆ ಎಂಬ ನಿರೀಕ್ಷೆಯೂ ಬಳಕೆದಾರರಲ್ಲಿ ಮೂಡಿತ್ತು. ಆದರೆ ಇದು ಹುಸಿಯಾಗುತ್ತಿದೆ. ಕಾರಣ ಜಿಯೋ DTH ಸೇವೆಯನ್ನು ಆರಂಭಿಸುವುದಿಲ್ಲ ಎನ್ನಲಾಗಿದೆ.

ಶಾಕಿಂಗ್ ನ್ಯೂಸ್: ಜಿಯೋ DTH ಸೇವೆ ರದ್ದು..! ಕಾರಣ..!

ಓದಿರಿ: ಕನ್ನಡದಲ್ಲೇ ಇಂಗ್ಲೀಷ್ ಕಲಿಸುವ ಆಪ್: ಹಲೋ ಹೇಳಿ ಇಂಗ್ಲೀಷ್‌ಗೆ..!

ಈ ಕುರಿತು ಜಿಯೋ ಮೂಲಗಳು ಮಾಹಿತಿಯನ್ನು ನೀಡಿದ್ದು, ಜಿಯೋ ಮಾರುಕಟ್ಟೆಗೆ DTH ಸೇವೆಯನ್ನು ಪರಿಚಯಿಸಲಾಗುವುದಿಲ್ಲ ಎನ್ನಲಾಗಿದೆ. ಇದರ ಬದಲಾಗಿ ಮಾರುಕಟ್ಟೆಯಲ್ಲಿ ಹೊಸದೊಂದು ಪ್ರಯತ್ನಕ್ಕೆ ಜಿಯೋ ಮುಂದಾಗಲಿದೆ ಎಂದು ತಿಳಿದುಬಂದಿದೆ. ಹೊಸ ಸೇವೆಯನ್ನು ನೀಡುವ ಮೂಲಕ ಆನ್‌ಲೈನ್‌ ಮಾರುಕಟ್ಟೆಗೆ ಎಂಟ್ರಿಯನ್ನು ಪಡೆಯಲಿದೆ. TV ನೋಡುವ ವಿಧಾನವನ್ನು ಇದು ಬದಲಾಯಿಸಲಿದೆ ಎನ್ನಲಾಗಿದೆ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?

ಮುಂದಿನ ತಲೆಮಾರಿನ ಸೇವೆ:

ಮುಂದಿನ ತಲೆಮಾರಿನ ಸೇವೆ:

ಜಿಯೋ DTH ಸೇವೆಯನ್ನು ನೀಡುವ ಬದಲಾಗಿ ಅಮೆಜಾನ್ ಫೈರ್ ಸ್ಟಿಕ್ ಮತ್ತು ಆಪಲ್ ಟಿವಿ ಮಾದರಿಯಲ್ಲಿ ಸೇವೆಯನ್ನು ನೀಡಲಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಇದಕ್ಕೆ ಯಾವುದೇ ಕೇಬಲ್ ಅವಶ್ಯಕತೆಯೂ ಇರುವುದಿಲ್ಲ ಇದರ ಬದಲಾಗಿದೆ. ಇಂಟರ್ನೆಟ್ ಬೇಕಾಗಿದೆ. ಗೂಗಲ್ ಕ್ರೋಮ್ ಕಾಸ್ಟ್ ಮಾದರಿಯಲ್ಲಿ ಸೇವೆಯನ್ನು ನೀಡಲಿದೆ. ಬಳಕೆದಾರರಿಗೆ ಇದು ಹೊಸ ಅನುಭವನ್ನು ನೀಡಲಿದೆ.

ಆಂಡ್ರಾಯ್ಡ್:

ಆಂಡ್ರಾಯ್ಡ್:

ಜಿಯೋ ಸೆಟಪ್ ಬಾಕ್ಸ್ ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರಲ್ಲಿ ಗೂಗಲ್ ಆಪ್‌ಗಳು ಸೇರಿದಂತೆ ಪ್ಲೇ ಸ್ಟೋರ್ ಇರಲಿದೆ. ಅಲ್ಲದೇ ಯಾವುದೇ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಇದರಲ್ಲಿ 16GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. 2TB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ.

ಆಡ್ವನ್ಸ್ ರಿಮೋಟ್:

ಆಡ್ವನ್ಸ್ ರಿಮೋಟ್:

ಜಿಯೊ ಸೆಟಪ್ ಬಾಕ್ಸ್ ನೊಂದಿಗೆ ಆಡ್ವನ್ಸ್ ರಿಮೋಟ್ ಅನ್ನು ನೀಡಲಾಗಿದೆ. ಇದು ವಾಯ್ಸ್ ಕಮಾಂಡಿಗ್ ಆಯ್ಕೆಯನ್ನುಅನ್ನು ಹೊಂದಿರಲಿದ್ದು, ನೀವು ರಿಮೋಟ್ ಬಳಸುವ ವಿಧಾನವನ್ನು ಇದು ಬದಲಾವಣೆಯನ್ನು ಮಾಡಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ.

DTH ಇಲ್ಲ:

DTH ಇಲ್ಲ:

ಜಿಯೋ ಸುಮ್ಮನೆ DTH ಸೇವೆಯ ಮೇಲೆ ಹಣವನ್ನು ಹೂಡಿಕೆ ಮಾಡುವುದಿಲ್ಲ ಎನ್ನಲಾಗಿದ್ದು, ತನ್ನ ಫೈಬರ್ ಟು ಕೆನೆಕ್ಟ್ ಸೇವೆಯೊಂದಿಗೆ TV ಸೇವೆಯನ್ನು ನೀಡಲಾಗಿದೆ. ಇದಕ್ಕಾಗಿ ಜಿಯೋ ಆಪ್ ಅನ್ನು ಹೆಚ್ಚು ಅಭಿವೃದ್ದಿ ಮಾಡುತ್ತಿದೆ ಎನ್ನಲಾಗಿದೆ.

ಓದಿರಿ: ಆಂಡ್ರಾಯ್ಡ್‌ನಲ್ಲಿಯೇ ಆಕ್ಸಿಜನ್ OS ಬೆಸ್ಟ್‌ ಯಾಕೆ..? ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಹಿಂದಿರುವ ಶಕ್ತಿ..!

Best Mobiles in India

English summary
No! Reliance Jio DTH isn’t in plans. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+