Subscribe to Gizbot

ಆಂಡ್ರಾಯ್ಡ್‌ನಲ್ಲಿಯೇ ಆಕ್ಸಿಜನ್ OS ಬೆಸ್ಟ್‌ ಯಾಕೆ..? ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಹಿಂದಿರುವ ಶಕ್ತಿ..!

Written By:

ಈಗಾಗಲೇ ಮಾರುಕಟ್ಟೆಯಲ್ಲಿ ತನ್ನದೇ ಹವಾ ಕ್ರಿಯೆಟ್ ಮಾಡಿರುವ ಚೀನಾದ ಒನ್‌ಪ್ಲಸ್ ಕಂಪನಿ, ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿದೆ. ಬಳಕೆದಾರರಿಗೆ ಬೆಸ್ಟ್ ಆಂಡ್ರಾಯ್ಡ್ ಅನುಭವನ್ನು ನೀಡುತ್ತಿರುವ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನವಾಗಿ ಕಾಣಿಸಿಕೊಂಡಿದೆ. ಆಂಡ್ರಾಯ್ಡ್ ನೊಂದಿಗೆ ಆಕ್ಸಿಜನ್ OS ಅಳವಡಿಸಿರುವುದು ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಅನ್ನು ಇನ್ನಷ್ಟು ಸರಳ ಮತ್ತು ವೇಗವಾಗಿಸಿದೆ.

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಹಿಂದಿರುವ ಶಕ್ತಿ..!

ಉತ್ತಮ ಸಾಫ್ಟ್‌ವೇರ್‌ಗಳಲ್ಲಿ ಒಂದಾದ ಆಕ್ಸಿಜನ್ OS ಹೊಂದಿರುವ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್, ಜಾಗತೀಕ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬೆಸ್ಟ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಆಂಡ್ರಾಯ್ಡ್ ಬಳಕೆಯ ಅನುಭವನ್ನು ಇನ್ನಷ್ಟು ಉತ್ತಮ ಪಡಿಸಲಿರುವ ಆಕ್ಸಿಜನ್ OS ನಲ್ಲಿರುವ ಬೆಸ್ಟ್ ಆಯ್ಕೆಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುವ ಪ್ರಯತ್ನವು ಇದಾಗಿದೆ. ಹೇಗೆ ಇತರೆ ಸ್ಟಾಕ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗಿಂತ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಭಿನ್ನವಾಗಿದೆ ಎಂಬುದನ್ನು ನೀವು ಇಲ್ಲಿ ತಿಳಿಯಬಹುದಾಗಿದೆ.

Star Wars ಸಿನಿಮಾ ಪ್ರಿಯರಿಗೆ Oneplus 5T Star Wars Edition ಸ್ಮಾರ್ಟ್‌ಫೋನ್ ಖರೀದಿಸುವ ಸುವರ್ಣಾವಕಾಶ!!

ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಬೆಸ್ಟ್ UI ಗಳಲ್ಲಿ ಆಕ್ಸಿಜನ್ OS ಎನ್ನಲಾಗಿದ್ದು, ಇದು ಆಂಡ್ರಾಯ್ಡ್ ಬಳಕೆಯ ವಿಧಾನವನ್ನು ಇನಷ್ಟು ಸುಲಭಗೊಳಿಸಲಿದೆ. ಮಾರುಕಟ್ಟೆಯಲ್ಲಿ ಟಾಪ್ ಕಂಪನಿಗಳು ಹೊಂದಿರುವ OSಗೆ ಇದು ಸ್ಪರ್ಧೆಯನ್ನು ನೀಡಲಿದೆ. ಈ ಹಿನ್ನಲೆಯಲ್ಲಿ ಆಕ್ಸಿಜನ್ OSನಲ್ಲಿರುವ ಟಾಪ್ ಫೀಚರ್ ಗಳ ಬಗ್ಗೆ ಮಾಹಿತಿಯೂ ಮುಂದಿನಂತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಅನ್‌ಲಾಕ್:

ಫೇಸ್‌ಅನ್‌ಲಾಕ್:

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಸಹ ನೂತನ ಆಕ್ಸಿಜನ್ OS ಆವೃತ್ತಿಯ ಆಪ್‌ಡೇಟ್ ಅನ್ನು ಪಡೆದುಕೊಂಡಿದ್ದು, ಬಳಕೆದಾರರಿಗೆ ಫೇಸ್‌ಅನ್‌ಲಾಕ್ ಆಯ್ಕೆಯನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ. ಇದು ಐಫೋನ್ Xಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿದೆ. ಇದು ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿಯೇ ಮೊದಲಿಗೆ ಫೇಸ್‌ಅನ್‌ಲಾಕ್ ಆಯ್ಕೆಯನ್ನು ಹೊಂದಿದ OS ಆಗಿದೆ.

ಒನ್‌ಪ್ಲಸ್ ಸ್ಪೀಚ್:

ಒನ್‌ಪ್ಲಸ್ ಸ್ಪೀಚ್:

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ನಲ್ಲಿರುವ ನೂತನ ಆಕ್ಸಿಜನ್ OS ಆವೃತ್ತಿಯೂ ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿದ್ದು, ಇದರಲ್ಲಿ ಪ್ರಮುಖವಾಗಿರುವುದು ಒನ್‌ಪ್ಲನ್ ಸ್ಪಿಚ್. ಇದು ಬಳಕೆದಾರರಿಗೆ ನೂತನ ಫೋನ್‌ ಖರೀದಿಸಿದ ಸಂದರ್ಭದಲ್ಲಿ ಹಳೇ ಪೋನಿನಲ್ಲಿರುವ ಮಾಹಿತಿಗಳನ್ನು ವರ್ಗಾವಣೆಯನ್ನು ಮಾಡಿಕೊಳ್ಳಲು ಸಹಾಯ ಮಾಡಲಿದೆ. ಇದಲ್ಲದೇ ಆಕಸ್ಮಿಕವಾಗಿ ಡೀಲಿಟ್ ಆದ ಡಾಕ್ಯೂಮೆಂಟ್, ಕಾಂಟೆಕ್ಟ್, ಪಿಚ್ಚರ್ ಗಳನ್ನು ರಿಕವರಿ ಮಾಡಿಕೊಳ್ಳಲು ಇದು ನೆರವು ನೀಡಲಿದೆ.

ಒಪನ್ ಬಿಟಾ:

ಒಪನ್ ಬಿಟಾ:

ಇದಲ್ಲದೇ ನೂತನ ಆಕ್ಸಿಜನ್ OS ಆವೃತ್ತಿಯಲ್ಲಿ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಬಳಕೆದಾರರು ಒಪನ್ ಬಿಟಾ ಆಯ್ಕೆಯನ್ನು ಪಡೆದುಕೊಳ್ಳಬಹುದಾಗಿದ್ದು, ಇದರಲ್ಲಿ ಆಕ್ಸಿಜನ್ OS ಕುರಿತ ಅಭಿಪ್ರಾಯಗಳನ್ನು ದಾಖಲಿಸಲು, ಬಗ್‌ ಬಗ್ಗೆ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಅಲ್ಲದೇ ಪರೀಕ್ಷೆಯ ಹಂತದಲ್ಲಿರುವ ಸಾಫ್ಟ್‌ವೇರ್‌ಗಳನ್ನು ಬಳಕೆ ಮಾಡಿಕೊಳ್ಳಲು ಅವಕಾಶ ಪಡೆಯಬಹುದಾಗಿದೆ.

ಗೇಮಿಂಗ್ DND:

ಗೇಮಿಂಗ್ DND:

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಗೇಮ್ ಆಡಲು ಹೇಳಿ ಮಾಡಿಸಿದಂತಿದ್ದು, ಈ ಹಿನ್ನಲೆಯಲ್ಲಿ ಬಳಕೆದಾರರು ಗೇಮ್ ಆಡುವ ಸಂದರ್ಭದಲ್ಲಿ ಯಾವುದೇ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ನೂತನ ಆಕ್ಸಿಜನ್ OS ಆವೃತ್ತಿಯಲ್ಲಿ ಗೇಮಿಂಗ್ 'ಡು ನಾಟ್ ಡಿಸ್ಟರ್ಬ್' ಆಯ್ಕೆಯನ್ನು ನೀಡಲಾಗಿದೆ. ಇದನ್ನು ಬೇರೆ ಯಾವುದೇ OSನಲ್ಲಿ ನೋಡಲು ಸಾಧ್ಯವಿಲ್ಲ.

ಉತ್ತಮ ಆಂಡ್ರಾಯ್ಡ್ OS:

ಉತ್ತಮ ಆಂಡ್ರಾಯ್ಡ್ OS:

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ನೂತನ ಆಕ್ಸಿಜನ್ OS ಆವೃತ್ತಿ ಬಳಕೆದಾರರಿಗೆ ಹೆಚ್ಚಿನ ಆಯ್ಕೆಯನ್ನು ನೀಡುತ್ತಿದ್ದು, ಸ್ಮಾರ್ಟ್‌ಫೋನ್ ಬಳಕೆ ಮಾಡುವ ವಿಧಾನವನ್ನು ಉತ್ತಮವಾಗಿಸಲಿದೆ.

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಒಟ್ಟು ಎರಡು ಆವೃತ್ತಿಯಲ್ಲಿ ದೊರೆಯಲಿದ್ದು, 6GB RAM ಹೊಂದಿರುವ ಆವೃತ್ತಿಯೂ ರೂ.32,999ಕ್ಕೆ ಲಭ್ಯವಿದೆ. ಇದೇ ಮಾದರಿಯಲ್ಲಿ 8GB RAM ಆವೃತ್ತಿಯೂ ರೂ.37,999ಕ್ಕೆ ದೊರೆಯುತ್ತಿದೆ ಇದಲ್ಲದೇ ICICI ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ ಕ್ಯಾಷ್ ಬ್ಯಾಕ್ ಆಫರ್ ಸಹ ಇದೆ. ಈ ಸ್ಮಾರ್ಟ್‌ಫೋನ್ ಅಮೆಜಾನ್ ಮತ್ತು ಒನ್‌ಪ್ಲಸ್ ಸ್ಟೋರ್ ಗಳಲ್ಲಿ ಲಭ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
5 OxygenOS features that make OnePlus 5T an irresistible choice. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot