Subscribe to Gizbot

ಕನ್ನಡದಲ್ಲೇ ಇಂಗ್ಲೀಷ್ ಕಲಿಸುವ ಆಪ್: ಹಲೋ ಹೇಳಿ ಇಂಗ್ಲೀಷ್‌ಗೆ..!

Written By:

ಇಂದು ಸ್ಮಾರ್ಟ್‌ಫೋನ್ ಅನ್ನು ಎಲ್ಲರ ಕೈನಲ್ಲಿಯೂ ನೋಡಬಹುದಾಗಿದೆ. ಇದೇ ಸ್ಮಾರ್ಟ್‌ಫೋನ್‌ ನಮಗೆ ಸಾಕಷ್ಟು ಸಹಾಯವನ್ನು ಮಾಡಲಿದೆ. ಇದೆ ಮಾದರಿಯಲ್ಲಿ ಇಂಗ್ಲೀಷ್ ಪಾಠ ಕಲಿಸುವ ಮೇಷ್ಟ್ರ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ಪ್ಲೇ ಸ್ಟೋರಿನಲ್ಲಿ ಹಲೋ ಇಂಗ್ಲೀಷ್ ಎನ್ನುವ ಆಪ್ ವೊಂದನ್ನು ಕಾಣಬಹುದಾಗಿದೆ.

ಕನ್ನಡದಲ್ಲೇ ಇಂಗ್ಲೀಷ್ ಕಲಿಸುವ ಆಪ್: ಹಲೋ ಹೇಳಿ ಇಂಗ್ಲೀಷ್‌ಗೆ..!

ಹಲೋ ಇಂಗ್ಲೀಷ್ ಆಪ್‌ನಲ್ಲಿ ನೀವು ಕನ್ನಡಲ್ಲಿಯೇ ಇಂಗ್ಲೀಷ್ ಕಲಿಯಬಹುದಾಗಿದೆ. ಅದುವೇ ಸರಳವಾಗಿ ಮತ್ತು ವೇಗವಾಗಿ. ಇಲ್ಲಿ ಆಟದೊಂದಿಗೆ ಪಾಠವನ್ನು ಕಲಿಯಬಹುದಾಗಿದೆ. ಬಳಕೆದಾರರಿಗೆ ವಿಶಿಷ್ಠವಾಗಿ ಕನ್ನಡವನ್ನು ಕಲಿಸುವ ಆಪ್ ಇದಾಗಿದ್ದು, ಇದರಲ್ಲಿ ಬಳಕೆದಾರರಿಗೆ ಕನ್ನಡದಲ್ಲಿಯೇ ಇಂಗ್ಲೀಷ್ ಭಾಷೆಯ ಪರಿಚಯವಾಗಲಿದೆ.

ಇಂಗ್ಲೀಷ್ ಕಲಿಯುವ ಆಸಕ್ತಿ ಇರುವವರಿಗೆ ಇದೊಂದು ಬೊಂಬಾಟ್ ಆಪ್ ಆಗಿದ್ದು, ಇದರಲ್ಲಿ ಬಳಕೆದಾರರಿಗೆ ಕಲಿಕೆಗೆ ಉತ್ತೇಜನ ನೀಡುವ ಸಲುವಾಗಿ ಪಠ್ಯದ ಆಟಗಳನ್ನು ಕಾಣಬಹುದಾಗಿದ್ದು, ಇದರಲ್ಲಿ ಅಂಕವನ್ನು ಪಡೆಯಬಹುದಾಗಿದೆ. ಹೆಚ್ಚು ಅಂಕವನ್ನು ಪಡೆದವರಿಗೆ ಗೌರವವನ್ನು ನೀಡುವುದನ್ನು ಇಲ್ಲಿ ನಾವು ಕಾಣಬಹುದಾಗಿದೆ.

ಕನ್ನಡದಲ್ಲೇ ಇಂಗ್ಲೀಷ್ ಕಲಿಸುವ ಆಪ್: ಹಲೋ ಹೇಳಿ ಇಂಗ್ಲೀಷ್‌ಗೆ..!

ಇದಲ್ಲದೇ ನೀವು ಈ ಆಪ್ ಅನ್ನು ಹಾಕಿಕೊಂಡ ನಂತರದಲ್ಲಿ ಎಷ್ಟು ಪ್ರಮಾಣದಲ್ಲಿ ಇಂಗ್ಲೀ‍ಷ್ ಅನ್ನು ಕಲಿತುಕೊಂಡಿರಿ ಎನ್ನುವುದನ್ನು ತಿಳಿಯಬಹುದಾಗಿದ್ದು, ಇದಕ್ಕಾಗಿ ಶ್ರೇಯಾಂಕವನ್ನು ನೀಡುವ ಪದ್ದತಿಯೂ ಇದರಲ್ಲಿದೆ. ಇದರಿಂದಾಗಿ ನೀವು ನಿತ್ಯ ಎಷ್ಟು ಪ್ರಗತಿಯನ್ನು ಸಾಧಿಸಿದ್ದೀರಿ ಎಂಬುದನ್ನು ಅಳತೆ ಮಾಡಬಹುದಾಗಿದೆ. ಇದರಿಂದಾಗಿ ವೇಗವಾಗಿ ನೀವು ಇಂಗ್ಲೀ‍ಷ್ ಕಲಿಯಬಹುದಾಗಿದೆ.

How to Check Your Voter ID Card Status (KANNADA)

ಇದಲ್ಲದೇ ನೀವು ಇಂಗ್ಲೀಷ್ ಕಲಿಯಲು ಯಾವುದೇ ಹಣವನ್ನು ಪಾವತಿ ಮಾಡುವ ಅಗತ್ಯ ಇರುವುದಿಲ್ಲ. ಬದಲಾಗಿ ಸುಲಭವಾಗಿ ನೀವೆ ಕಲಿಯಬಹುದಾಗಿದೆ. ಇದಕ್ಕಾಗಿ ಯಾರ ಸಹಾಯವನ್ನು ಪಡೆಯುವ ಅವಶ್ಯವಿಲ್ಲ. ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

English summary
Hello English: Learn English app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot