ಭಾರತದಲ್ಲಿ 5G ನೆಟ್‌ವರ್ಕ್ ಅಭಿವೃದ್ಧಿಪಡಿಸಲು ಜೊತೆಯಾದ ನೋಕಿಯಾ-ಬಿಎಸ್‌ಎನ್‌ಎಲ್‌

ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌, ಸ್ಮಾರ್ಟ್‌ಪೋನ್ ತಯಾರಕ ನೋಕಿಯಾ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದೆ.

|

ಸದ್ಯ ದೇಶದಲ್ಲಿ 4G ಡೇಟಾ ಕ್ರಾಂತಿ ನಡೆಯುತ್ತಿದ್ದು, ಆಗಲೇ 5G ಸೇವೆ ಆರಂಭವಾಗುವ ಲಕ್ಷಣಗಳು ಕಾಣುತ್ತಿದೆ. ಭಾರತದಲ್ಲಿ 5G ನೆಟ್‌ವರ್ಕ್ ಅಭಿವೃದ್ಧಿಪಡಿಸಲು ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌, ಸ್ಮಾರ್ಟ್‌ಪೋನ್ ತಯಾರಕ ನೋಕಿಯಾ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದೆ.

ಇದನ್ನು ಓದಿರಿ: ಇಂದಿನಿಂದ ಜಿಯೋ ಪ್ರೈಮ್ ಮೆಂಬರ್‌ಶಿಪ್ ಆರಂಭ: ನೀವು ತಿಳಿಯಬೇಕಾದ ವಿಷಯಗಳು.!!!

ಭಾರತದಲ್ಲಿ 5G ನೆಟ್‌ವರ್ಕ್ ಅಭಿವೃದ್ಧಿಪಡಿಸಲು ಜೊತೆಯಾದ ನೋಕಿಯಾ-ಬಿಎಸ್‌ಎನ್‌ಎಲ್‌

5G ಇಕೋ ಸಿಸ್ಟಮ್ ಅಭಿವೃದ್ಧಿಪಡಿಸಲು ಬಿಎಸ್‌ಎನ್‌ಎಲ್ ಮತ್ತು ನೋಕಿಯಾ ಪಾಲುದಾರರಾಗಿದ್ದು, ನೋಕಿಯಾ 5G ಎಂಡ್‌ ಟೂ ಎಂಡ್ ಮಾದರಿಯನ್ನು ಬಿಎಸ್‌ಎನ್‌ಎಲ್‌ನೊಂದಿಗೆ ಅಭಿವೃದ್ಧಿಪಡಿಸಲಿದೆ.

ಕಡಿಮೆ ವೆಚ್ಚದಲ್ಲಿ ಅತೀ ವೇಗದ ಇಂಟರ್‌ನೆಟ್ ಅಭಿವೃದ್ಧಿಪಡಿಸಲು ಈ ಒಪ್ಪಂದ ನಡೆದಿದೆ. ದೇಶದಲ್ಲಿ ಈಗಲೇ ಡೇಟಾ ಹಸಿವು ಜಾಸ್ತಿಯಾಗಿದ್ದು, ಇದು ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ. ಇದನ್ನು ಪೂರ್ಣಗೊಳಿಸಲು ನೋಕಿಯಾದೊಂದಿಗೆ ಬಿಎಸ್‌ಎನ್‌ಎಲ್ ಒಂದಾಗಿವೆ.

ಈಗಾಗಲೇ 5G ಸೆಕ್ಟ್ರಮ್ ಅಭಿವೃದ್ಧಿಗಾಗಿ ಸಾಕಷ್ಟು ಕಂಪನಿಗಳು ಒಂದಾಗಿದ್ದು, ಸ್ಯಾಮ್‌ಸಂಗ್ ಜಿಯೋದೊಂದಿಗೆ ನೆಟ್‌ವರ್ಕ್ ಅಭಿವೃದ್ಧಿ ಪಡಿಸಲು ಮುಂದಾಗಿವೆ, ಇದೇ ಮಾದರಿಯಲ್ಲಿ ನೋಕಿಯಾ ಮತ್ತು ಬಿಎಸ್‌ಎನ್‌ಎಲ್ ಜೊತೆಗೆ ಸೇರಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಲಿವೆ ಎನ್ನಲಾಗಿದೆ.

ಭಾರತದಲ್ಲಿ 5G ನೆಟ್‌ವರ್ಕ್ ಅಭಿವೃದ್ಧಿಪಡಿಸಲು ಜೊತೆಯಾದ ನೋಕಿಯಾ-ಬಿಎಸ್‌ಎನ್‌ಎಲ್‌

ಇದನ್ನು ಓದಿರಿ: ಇಂದು ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ಈಗಾಗಲೇ ಜಾಗತಿಕವಾಗಿ 5G ನೆಟ್‌ವರ್ಕ್ ಅಭಿವೃದ್ಧಿಗಾಗಿ ನೋಕಿಯಾ ಶ್ರಮವಹಿಸುತ್ತಿದ್ದು, ಭಾರತದಲ್ಲಿ ಬಿಎಸ್‌ಎನ್‌ಎಲ್ 5G ನೆಟ್‌ವರ್ಕ್ ಅಭಿವೃದ್ಧಿ ಪಡಿಸಲು ನೋಕಿಯಾ ನೆರವಾಗಲಿದೆ ಎಂದು ನೋಕಿಯಾ ತಿಳಿಸಿದೆ.

Best Mobiles in India

Read more about:
English summary
Nokia and state-run telco Bharat Sanchar Nigam Limited (BSNL) will team up to accelerate the development of a 5G ecosystem in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X