Subscribe to Gizbot

ಸ್ಯಾಮ್‌ಸಂಗ್ ಫೋನ್‌ ಸುಟ್ಟು ಹೋಗಿದ್ದಕ್ಕೆ ನೋಕಿಯಾದಿಂದ ಫೋನ್‌!

Posted By:

ಸ್ಯಾಮ್‌ಸಂಗ್‌ನ ಕೆಟ್ಟ ಗ್ರಾಹಕ ಸೇವೆಗೆ ಸಿಟ್ಟಾಗಿ ಸುಟ್ಟು ಹೋದ ಗೆಲಾಕ್ಸಿ ಎಸ್‌4 ವಿಡಿಯೋವನ್ನು ಯೂ ಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಗ್ರಾಹಕನಿಗೆ ಹೊಸ ಸ್ಮಾರ್ಟ್‌ಫೋನ್‌ ಸದ್ಯದಲ್ಲೇ ಸಿಗಲಿದೆ. ವಿಶೇಷ ಏನೆಂದರೆ ಸ್ಯಾಮ್‌ಸಂಗ್‌ ಸ್ಮಾರ್ಟ್‌‌‌ಫೋನ್‌ ನೀಡದೇ ನೋಕಿಯಾ ಕಂಪೆನಿ ಲೂಮಿಯಾ ಫೋನ್‌ ನೀಡುವುದಾಗಿ ಹೇಳಿದೆ.

ಅಮೆರಿಕದಲ್ಲಿ ನೋಕಿಯಾ ಕಂಪೆನಿ ಗ್ರಾಹಕ ಗೊಸ್ಟ್ಲಿರಿಚ್‌(ghostlyrich) ಟ್ವೀಟ್‌ ಮಾಡಿ ನಿಮಗೆ ನಾವು ಸಹಾಯ ಮಾಡುತ್ತಿದ್ದು ಲೂಮಿಯಾ ಫೋನನ್ನು ಕಳುಹಿಸುತ್ತಿದ್ದೇವೆ. ನಮ್ಮ ಗ್ರಾಹಕ ಸೇವೆ ಸಿಬ್ಬಂದಿಗಳು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ನೀವೇ ನೋಡಬಹುದು ಎಂದು ಹೇಳಿದೆ. ನೋಕಿಯಾದ ಈ ಟ್ವೀಟ್‌ಗೆ ಸ್ಯಾಮ್‌ಸಂಗ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ವಿಡಿಯೋವನ್ನು ಯೂ ಟ್ಯೂಬ್‌ನಿಂದ ತೆಗೆದರೆ ಮಾತ್ರ ಹೊಸ ಗೆಲಾಕ್ಸಿ ಎಸ್‌4 ನೀಡುವ ತಮ್ಮ ನಿರ್ಧಾರವನ್ನು ಸ್ಯಾಮ್‌ಸಂಗ್‌ ಇನ್ನು ಬದಲಿಸಿಲ್ಲ.

<blockquote class="twitter-tweet blockquote" lang="en"><p>.<a href="https://twitter.com/ghostlyrich">@ghostlyrich</a> we want to help you out. Let me send you a Nokia Lumia so you can experience how customer service should *really* work. -Jason</p>— Nokia USA (@NokiaUS) <a href="https://twitter.com/NokiaUS/statuses/410186378337452033">December 9, 2013</a></blockquote> <script async src="//platform.twitter.com/widgets.js" charset="utf-8"></script>

ಕೆನಡಾದ ಗ್ರಾಹಕ ಗೊಸ್ಟ್ಲಿರಿಚ್ ಹೊಸ ಗೆಲಾಕ್ಸಿ ಎಸ್‌4 ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಬೆಂಕಿ ಹೊತ್ತಿಕೊಂಡು ಚಾರ್ಜರ್‌ ಪಾಯಿಂಟ್‌ ಮತ್ತು ಚಾರ್ಜರ್‌ ಸುಟ್ಟು ಹೋಗಿತ್ತು. ವಾರಂಟಿ ಇರುವ ಸ್ಮಾರ್ಟ್‌ಫೋನ್‌ ಸುಟ್ಟುಹೋಗಿದ್ದರೂ ಗ್ರಾಹಕ ಸೇವೆ ಸಿಬ್ಬಂದಿಗಳು ಹೊಸ ಫೋನ್‌ ನೀಡದೇ ಗೊಸ್ಟ್ಲಿರಿಚ್‌ದ್ದೇ ತಪ್ಪು ಎಂದು ಹೇಳಿದ್ದರು. ಇದಕ್ಕೆ ಸಿಟ್ಟಾದ ಗ್ರಾಹಕ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಹೇಗೆ ಸುಟ್ಟು ಹೋಯಿತು ಎಂಬುದನ್ನು ವಿವರಿಸಿದ ವಿಡಿಯೋವನ್ನು ಯೂ ಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ.

ವಿಡಿಯೋ ಯೂಟ್ಯೂಬ್‌‌ಗೆ ಅಪ್‌ಲೋಡ್‌ ಅಗಿದ್ದು ಡಿಸೆಂಬರ್‌ 2ರಂದು. ಅಪ್‌ಲೋಡ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಶೇರ್‌ ಅಗುತ್ತಿದ್ದಂತೆ ಸ್ಯಾಮ್‌ಸಂಗ್‌‌ ಬಳಕೆದಾರನಿಗೆ ಒಂದು ಪತ್ರ ಬರೆದು ಅಪ್‌ಲೋಡ್‌ ಮಾಡಿರುವ ವಿಡಿಯೋವನ್ನು ತೆಗೆದಲ್ಲಿ ಹೊಸ ಎಸ್‌4 ಸ್ಮಾರ್ಟ್‌ಫೋನ್‌ ನೀಡುವುದಾಗಿ ಹೇಳಿತ್ತು.

ಆದರೆ ಗೊಸ್ಟ್ಲಿರಿಚ್‌ ಸ್ಯಾಮ್‌ಸಂಗ್‌ನ ಷರತ್ತಿಗೆ ಬಗ್ಗದೇ ಆ ಪತ್ರದಲ್ಲಿ ಏನಿದೆ ಎಂಬುದನ್ನು ಮತ್ತೊಂದು ವಿಡಿಯೋ ಮಾಡಿ ಯೂ ಟ್ಯೂಬ್‌ನಲ್ಲಿ ವಿವರಿಸಿದ್ದಾನೆ. ಅಷ್ಟೇ ಅಲ್ಲದೇ ಸ್ಯಾಮ್‌ಸಂಗ್‌‌ನ ಹೊಸ ಷರತ್ತಿನ ಪತ್ರವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾನೆ. ಈಗಾಗಲೇ ಈ ಎರಡು ವಿಡಿಯೋಗಳು ಯೂ ಟ್ಯೂಬ್‌ನಲ್ಲಿ ವೈರಲ್‌ ಆಗಿದ್ದು ಮೊದಲ ವಿಡಿಯೋವನ್ನು ಮೂರು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದರೆ, ಸ್ಯಾಮ್‌ಸಂಗ್‌ ಪತ್ರದ ವಿಡಿಯೋವನ್ನು ಆರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಸ್ಯಾಮ್‌ಸಂಗ್‌ ಮೈಲಿಗಲ್ಲು:1ಕೋಟಿ ಗೆಲಾಕ್ಸಿ ನೋಟ್‌ 3 ಮಾರಾಟ

ಈ ಸುದ್ದಿಗೆ ನಿಮ್ಮ ಅಭಿಪ್ರಾಯವೇನು?ಕಾಮೆಂಟ್‌ ಬಾಕ್ಸ್‌ನಲ್ಲಿ  ಅಭಿಪ್ರಾಯ ತಿಳಿಸಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot