Subscribe to Gizbot

ಸದ್ಯದಲ್ಲೇ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ದೇಶೀಯ ಮಾರುಕಟ್ಟೆಗೆ ಬಿಡುಗಡೆ

Posted By:

ನೋಕಿಯಾ ಕಂಪೆನಿಯ ಪ್ರಥಮ ಆಂಡ್ರಾಯ್ಡ್‌ ಓಪನ್‌ ಸೋರ್ಸ್‌‌ ಪ್ರೊಜೆಕ್ಟ್‌ನಲ್ಲಿ ಕಾರ್ಯ‌ನಿರ್ವ‌ಹಿಸುವ ಸ್ಮಾರ್ಟ್‌‌ಫೋನ್‌ ಸದ್ಯದಲ್ಲೇ ಭಾರತದ ಮಾರುಕಟ್ಟೆ ಬಿಡುಗಡೆಯಾಗಲಿದೆ. ಈಗಾಗಲೇ ಈ ಸ್ಮಾರ್ಟ್‌ಫೋನ್‌ ಬರುವ ಬಗ್ಗೆ ಆನ್‌‌ಲೈನ್‌ ಶಾಪಿಂಗ್‌ ತಾಣದಲ್ಲಿ ಮಾಹಿತಿ ಪ್ರಕಟಗೊಂಡಿದ್ದು, ದಿ ಮೊಬೈಲ್‌ ಸ್ಟೋರ್‌ 8,500 ರೂಪಾಯಿ ಬೆಲೆಯಲ್ಲಿ  ಮಾರ್ಚ್‌ 15 ರಂದು ಮಾರುಕಟ್ಟೆಗೆ ನೋಕಿಯಾ ಎಕ್ಸ್‌ ಸ್ಮಾರ್ಟ್‌‌ಫೋನ್‌ ಬಿಡುಗಡೆಯಾಗಲಿದೆ ಎಂದು ಪ್ರಕಟಿಸಿದೆ.

ನೋಕಿಯಾ ತನ್ನ ಪ್ರಥಮ ಆಂಡ್ರಾಯ್ಡ್‌ ಓಪನ್‌ ಸೋರ್ಸ್‌ ಪ್ರೊಜೆಕ್ಟ್‌ನಲ್ಲಿ ಕಾರ್ಯ‌ನಿರ್ವ‌ಹಿಸುವ ಮೂರು ಸ್ಮಾರ್ಟ್‌ಫೋನ್‌‌ಗಳನ್ನು ಸ್ಪೈನ್‌ನಲ್ಲಿ ನಡೆದ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌‌ನಲ್ಲಿ ಸಮ್ಮೇಳನದಲ್ಲಿ ಬಿಡುಗಡೆ ಮಾಡಿತ್ತು.

ಈ ಮೂರು ಸ್ಮಾರ್ಟ್‌‌ಫೋನ್‌ಗಳು ಕಸ್ಟಮೈಸ್ಡ್‌ ಆಂಡ್ರಾಯ್ಡ್‌ 'ನೋಕಿಯಾ ಎಕ್ಸ್‌'‌ ಹೆಸರಿನ ಹೊಸ ಆಪರೇಟಿಂಗ್‌ ಸಿಸ್ಟಂ ಒಳಗೊಂಡಿದೆ. ಆಂಡ್ರಾಯ್ಡ್‌‌,ವಿಂಡೋಸ್‌ ಓಎಸ್‌ ಮಿಶ್ರಣಗೊಂಡಿರುವ ಹೊಸ ಯೂಸರ್‌‌ ಇಂಟರ್‌ಫೇಸ್‌ನ್ನು ನೋಕಿಯಾ ಈ ಫೋನಿಗೆ ನೀಡಿದೆ.

ಈ ಸ್ಮಾರ್ಟ್‌‌ಫೋನಲ್ಲಿ ನೇರವಾಗಿ ಗೂಗಲ್‌ ಪ್ಲೇ ಸ್ಟೋರ್‌ನಿಂದ ಆಂಡ್ರಾಯ್ಡ್‌ ಆಪ್‌ ಡೌನ್‌ಲೋಡ್‌ ಮಾಡಲು ಸಾಧ್ಯವಿಲ್ಲ.ಬದಲಾಗಿ ಥರ್ಡ್‌ ಪಾರ್ಟಿ ಮೂಲದಿಂದ‌ ಆಂಡ್ರಾಯ್ಡ್‌‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.
‌‌

 ಸದ್ಯದಲ್ಲೇ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ದೇಶೀಯ ಮಾರುಕಟ್ಟೆಗೆ ಬಿಡುಗಡೆ

ನೋಕಿಯಾ ಎಕ್ಸ್‌
ವಿಶೇಷತೆ:
ಡ್ಯುಯಲ್‌ ಸಿಮ್‌
4 ಇಂಚಿನ WVGA ಸ್ಕ್ರೀನ್‌(480x800 ಪಿಕ್ಸೆಲ್‌)
ನೋಕಿಯಾ ಎಕ್ಸ್‌ ಓಎಸ್‌‌
1GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌
4ಜಿಬಿ ಆಂತರಿಕ ಮೆಮೊರಿ
512 ಎಂಬಿ ರ್‍ಯಾಮ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ವಿಶೇಷತೆಯಿಲ್ಲ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್‌,ಜಿಪಿಎಸ್‌‌,ವೈಫೈ
1500mAh ಬ್ಯಾಟರಿ

<center><iframe width="100%" height="360" src="//www.youtube.com/embed/oUCEN-XvC7g?feature=player_embedded" frameborder="0" allowfullscreen></iframe></center>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot