ಇನ್ನು ಮೊಬೈಲ್‌ನಲ್ಲೇ ಇಂಗ್ಲೀಷ್ ಕಲಿಕೆ

Written By:

ನನಗೆ ಇಂಗ್ಲೀಷ್‌ ಬರುವುದಿಲ್ಲವೆಂದು ಅಲವತ್ತುಕೊಳ್ಳುತ್ತಿದ್ದೀರಾ? ಚಿಂತೆ ಬಿಡಿ ನಿಮಗೆ ಸುಲಭವಾಗಿ ಇಂಗ್ಲೀಷ್ ಕಲಿಯಲು ನೆರವಾಗುವಂತಹ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು ನಿಮ್ಮ ಮೊಬೈಲ್‌ನಲ್ಲೇ ಇದನ್ನು ಅಳವಡಿಸಿ ಚಿಂತೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಇನ್ನು ಮೊಬೈಲ್‌ನಲ್ಲೇ ಇಂಗ್ಲೀಷ್ ಕಲಿಕೆ

ಕೇವಲ ಮೊಬೈಲ್ ಬಟನ್‌ಗಳನ್ನು ಬಳಸಿಕೊಂಡು ಭಾಷಾ ಜ್ಞಾನವನ್ನು ನಿಮಗೆ ಅಭಿವೃದ್ಧಿಪಡಿಸಲಿದೆ. ಈಗಾಗಲೇ ಈ ಅಪ್ಲಿಕೇಶನ್ 2.2 ಮಿಲಿಯನ್ ಡೌನ್‌ಲೋಡ್ ಅನ್ನು ಪಡೆದುಕೊಂಡಿದೆ. ಪ್ರಸ್ತುತ ಕಂಪೆನಿಯ ವಿಷಯ ಮುಕ್ತವಾಗಿದ್ದು ಜಾಹೀರಾತುಗಳಿಂದ ತನ್ನ ಆದಾಯವನ್ನು ಗಳಿಸಿಕೊಳ್ಳುತ್ತಿದೆ.

ಓದಿರಿ: ಆಂಡ್ರಾಯ್ಡ್ ಎಮ್ ಓಎಸ್ ಬಳಕೆದಾರ ಸ್ನೇಹಿ ಹೇಗೆ?

ಒಟ್ಟು ಜನಸಂಖ್ಯೆಯಲ್ಲಿ ಕೇವಲ 15% ಜನರು ಚೆನ್ನಾಗಿ ಇಂಗ್ಲೀಷ್ ಅನ್ನು ಮಾತನಾಡುತ್ತಾರೆ. ಇಂತಹ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಕಲ್ಚರ್ ಆಲಿ ಸಂಸ್ಥೆಯ ಪ್ರಂಶು ಪಟ್ನಿ ತಿಳಿಸಿದ್ದಾರೆ. ಮ್ಯಾಕ್ಸ್ ಇಂಗ್ಲೀಷ್ ಕೂಡ ಯುವಕರಿಗೆ ಮತ್ತು ದೊಡ್ಡವರಿಗೆ ಇಂಗ್ಲೀಷ್ ಮಾತನಾಡುವ ಅಪ್ಲಿಕೇಶನ್ ಅನ್ನು ಲಾಂಚ್ ಮಾಡುವ ಪ್ರಕ್ರಿಯೆಯಲ್ಲಿದ್ದು 15 ನಿಮಿಷಕ್ಕಾಗಿ ಈ ಅಪ್ಲಿಕೇಶನ್‌ನ ಉಚಿತ ಬಳಕೆಯನ್ನು ಬಳಕೆದಾರರು ಪಡೆದುಕೊಳ್ಳಲಿದ್ದು ಇದು ಪಾವತಿ ಮಾಡುವ ಸೇವೆಯಾಗಿದೆ ಎಂದು ಮ್ಯಾಕ್ಸ್ ಇಂಗ್ಲೀಷ್‌ನ ಮುಖ್ಯ ಕಾರ್ಯನಿರ್ವಾಹಕರಾದ ರಾಣು ಕವ್ತಾರಾ ತಿಳಿಸಿದ್ದಾರೆ.

ಓದಿರಿ: ನಿಮ್ಮ ಮೆಚ್ಚಿನ ಬಜೆಟ್ ಫೋನ್‌ಗಳು ರೂ 10,000 ಕ್ಕೆ

ಎಂಟು ತಿಂಗಳ ಹಿಂದೆಯೇ ಈ ಅಪ್ಲಿಕೇಶನ್ ಉಗಮವಾಗಿದ್ದು, ಇನ್ನಷ್ಟು ಅಭಿವೃದ್ಧಿಗಳನ್ನು ಈ ಅಪ್ಲಿಕೇಶನ್‌ನಲ್ಲಿ ಮಾಡಲಾಗುತ್ತಿದೆ. ಹೆಚ್ಚಿನ ಬಳಕೆದಾರರು ಮೊಬೈಲ್ ಫೋನ್‌ನಲ್ಲೇ ಇಂಗ್ಲೀಷ್ ತರಬೇತಿ ಕೋರ್ಸ್‌ಗಳನ್ನು ಕಲಿಯುತ್ತಿದ್ದಾರೆ. ಈ ರೀತಿಯ ಕಲಿಕೆ ವೃತ್ತಿಯಲ್ಲಿ ಮುಂದುವರಿಯಲು ಅವರಿಗೆ ಸಹಕರಿಯಾಗುವುದು ಖಂಡಿತ.

English summary
If you are a small town housewife constantly rebuked by your husband or daughter for lack of English speaking skills, its time to get on to the app world.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot